ವಿಶಾಖಪಟ್ಟಣಂನಲ್ಲಿ ಎನ್ಕೌಂಟರ್: ಡಿಸಿಎಂ ಕಮಾಂಡರ್ ಸೇರಿ 6 ನಕ್ಸಲರ ಹತ್ಯೆ

June 16, 2021
Wednesday, June 16, 2021

 


ವಿಶಾಖಪಟ್ಟಣಂ: ನಕ್ಸರು ಮತ್ತು ನಕ್ಸಲ್ ನಿಗ್ರಹ ಪಡೆ ನಡುವಿನ ಎನ್ಕೌಂಟರ್ ವೇಳೆ ಆರು ಮಂದಿ ನಕ್ಸಲರು ಹತರಾಗಿದ್ದಾರೆ.

ವಿಶಾಖಪಟ್ಟಣಂದ ಕೊಯ್ಯೂರ್ ಮಂಡಳ್ ಅರಣ್ಯ ಪ್ರದೇಶದಲ್ಲಿ ನಡೆದ ಎನ್ಕೌಂಟರ್ ಆರು ಮಂದಿ ನಕ್ಸಲರು ಮೃತಪಟ್ಟಿದ್ದಾರೆ. ಹತ್ಯೆಗೀಡಾದ ಮಾವೋವಾದಿಗಳಲ್ಲಿ ಓರ್ವ ತೆಲಂಗಾಣ ಮೂಲದ ಡಿಸಿಎಂ ಕಮಾಂಡರ್ ಎಂದು ಗುರುತಿಸಲಾಗಿದೆ ಎಂದು ಹೇಳಲಾಗಿದೆ.

ಮುಖಾಮುಖಿ ಗುಂಡಿನ ದಾಳಿ ಆರು ಮಾವೋವಾದಿಗಳು ಸಾವನ್ನಪ್ಪಿದ್ದರೆ. ಇನ್ನೂ ಕೆಲವರು ದಟ್ಟ ಅರಣ್ಯದೊಳಗೆ ಓಡಿಹೋದರು ಎಂದು ವರದಿಯಾಗಿದೆ.

ಪೊಲೀಸರು ಸ್ಥಳದಿಂದ ಎಕೆ 47, ಕೆಲವು ರಿವಾಲ್ವರ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನಾ ಪ್ರದೇಶದಲ್ಲಿ ಕೋಂಬಿಂಗ್ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲು ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ದೌಡಾಯಿಸಿದ್ದಾರೆ.

ದಟ್ಟವಾದ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ಚಲನವಲನವನ್ನು ಪತ್ತೆಹಚ್ಚಲು ಪೊಲೀಸರು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Thanks for reading ವಿಶಾಖಪಟ್ಟಣಂನಲ್ಲಿ ಎನ್ಕೌಂಟರ್: ಡಿಸಿಎಂ ಕಮಾಂಡರ್ ಸೇರಿ 6 ನಕ್ಸಲರ ಹತ್ಯೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ವಿಶಾಖಪಟ್ಟಣಂನಲ್ಲಿ ಎನ್ಕೌಂಟರ್: ಡಿಸಿಎಂ ಕಮಾಂಡರ್ ಸೇರಿ 6 ನಕ್ಸಲರ ಹತ್ಯೆ

Post a Comment