ಚಾಣಕ್ಯ ನೀತಿಯ ಪ್ರಕಾರ ಈ 4 ರಹಸ್ಯಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬಾರದಂತೆ..!!?

June 12, 2021
Saturday, June 12, 2021ಚಾಣಕ್ಯನನ್ನು ಶ್ರೇಷ್ಠ ಶಿಕ್ಷಣ ತಜ್ಞ ಮತ್ತು ಅರ್ಥಶಾಸ್ತ್ರಜ್ಞ ಎಂದು ಪರಿಗಣಿಸಲಾಗಿದೆ. ಚಾಣಕ್ಯ ಅವರು ನೀತಿ ಶಾಸ್ತ್ರದಲ್ಲಿ ಆಹ್ಲಾದಕರ ಮತ್ತು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ ಆಚಾರ್ಯ ಚಾಣಕ್ಯರು ಹೇಳಲಾಗಿರುವ ಯಾವ ಮಾತೂ ಸಹ ಇಂದಿಗೂ ಹುಸಿಯಾಗುವುದಿಲ್ಲ.. ಯಾಕಂದ್ರೆ ಚಾಣಕ್ಯ ಹೇಳಿರುವ ಮಾತುಗಳೇ ಹಾಗಿವೆ. ಹಾಗೆಯೇ ಗಂಡಸರು ಯಾವ ಯಾವ ವಿಷಯಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬಾರದು ಎಂದು ಆಚಾರ್ಯ ಚಾಣಕ್ಯ ಇಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ..

ಮೊದಲೆಯನದಾಗಿ ತಮ್ಮಲ್ಲಿ ಯಾವುದೇ ಆರ್ಥಿಕ ಸಮಸ್ಯೆಗಳು ಇದ್ದಲಿ ಹಣವನ್ನು ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಲ್ಲಿ ನೀವು ಅದರಿಂದ ದುಃಖಿತರಾಗಿದ್ದಲ್ಲಿ ಅದನ್ನು ಯಾರೊಂದಿಗೂ ಹಂಚಿಕೊಳ್ಳುವುದು ಸೂಕ್ತವಲ್ಲ ಯಾಕಂದ್ರೆ ನೀವು ಈ ವಿಷಯವನ್ನು ಹೇಳುವುದರಿಂದ ಕೇಳುವವರು ನಿಮ್ಮ ಮುಂದೆ ದುಃಖ ಪಡುತ್ತಿರುವ ಹಾಗೆ ನಟಿಸಿದರೂ ಮನಸ್ಸಿನಲ್ಲಿ ಹಣವಿಲ್ಲದ ಇಂತಹ ವ್ಯಕ್ತಿಗಳಿಂದ ದೂರವಿರುವುದು ಸೂಕ್ತವೆಂದು ಅವರು ನಿರ್ಧರಿಸುವ ಸಾಧ್ಯತೆಗಳಿರುತ್ತವೆ, ಅಷ್ಟೇ ಅಲ್ಲದೆ ಇಂತಹ ವಿಷಯಗಳು ಎಲ್ಲರಿಗೂ ತಿಳಿಯುವುದರಿಂದ ನೀವು ಯಾರಿಂದಲೂ ಹಣದ ಸಹಾಯವನ್ನು ಬಯಸಿದಂತಾಗುತ್ತದೆ. ಈ ಸಮಾಜದಲ್ಲಿ ಬಡವನಿಗೆ ಧನಸಹಾಯ ಅಷ್ಟು ಸುಲಭವಾಗಿ ದೊರೆಯುವುದಿಲ್ಲವೆಂದು ಚಾಣಕ್ಯ ಇಲ್ಲಿ ಸ್ಪಷ್ಟಪಡಿಸಿದ್ದಾರೆ

ಎರಡನೆಯದಾಗಿ ನಿಮ್ಮಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆಗಳು ಅಥವಾ ಮತ್ತ್ಯಾವುದೋ ಸಮಸ್ಯೆಗಳನ್ನು ನಿಮ್ಮ ಹತ್ತಿರದವರ ಬಳಿಯೂ ಕೂಡ ಹೇಳಿಕೊಳ್ಳಬಾರದು ಇದನ್ನು ಹೇಳುವುದರಿಂದ ಭವಿಷ್ಯತ್ತಿನಲ್ಲಿ ನಿಮ್ಮ ಸಮಸ್ಯೆಗಳನ್ನು ಅವರು ಎಲ್ಲರ ಮುಂದೆ ತೋರಿಸುತ್ತಾ ನಿಮ್ಮನ್ನು ಸಮಾಜದ ಮುಂದೆ ಅಪಹಾಸ್ಯ ಮಾಡಲು ಮುಂದಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಇದರಿಂದ ಸಂಘ ಪರಿವಾರಗಳಲ್ಲಿ ನಿಮ್ಮ ಗೌರವ ಕಡಿಮೆಯಾಗುತ್ತದೆ ಎಂದು ಚಾಣಕ್ಯ ಅಭಿಪ್ರಾಯ ಪಟ್ಟಿದ್ದಾರೆ

ಮೂರನೆಯದು ಯಾವ ಪುರುಷನು ಕೂಡ ತನ್ನ ಮಡದಿಯ ವಿಚಾರದಲ್ಲಿನ ಜಗಳಗಳಾಗಲಿ ಅವಳ ನಡವಳಿಕೆಯ ಬಗ್ಗೆ ತನಗೆ ಇರುವ ಅಭಿಪ್ರಾಯವಾಗಲಿ ಯಾವ ಪರಿಸ್ಥಿತಿಯಲ್ಲೂ ಕೂಡ ಬೇರೆಯವರೊಂದಿಗೆ ಹೇಳಿಕೊಳ್ಳುವುದು ಸೂಕ್ತವಲ್ಲ ಹೀಗೆ ಮಾಡುವುದರಿಂದ ಆ ವ್ಯಕ್ತಿಯನ್ನು ಮತ್ತು ಆತನ ಹೆಂಡತಿಯನ್ನು ಅವರು ಹಗುರವಾಗಿ ನೋಡುತ್ತಾರೆಂದು ಚಾಣಕ್ಯ ಇಲ್ಲಿ ಸ್ಪಷ್ಟಪಡಿಸಿದ್ದಾರೆ

ಇನ್ನೂ ನಾಲ್ಕನೆಯದು ತಮಗೆ ಉದ್ಯೋಗ ಸ್ಥಳಗಳಲ್ಲಾಗಲಿ ಅಥವಾ ಬೇರೆಡೆಯಲ್ಲಾಗಲಿ ಆದ ಅವಮಾನ ನಿಂದನೆಗಳನ್ನು ಎಂದಿಗೂ ಯಾರಲ್ಲಿಯೂ ಹಂಚಿಕೊಳ್ಳುವುದು ಸರಿಯಲ್ಲ ಇದರಿಂದ ಸಮಾಜದಲ್ಲಿ ನಿಮ್ಮ ಗೌರವಕ್ಕೆ ಮತ್ತು ಪ್ರತಿಷ್ಠೆ ಗೆ ಧಕ್ಕೆ ಬರುವುದೆಂದು ಇಲ್ಲಿ ಹೇಳಲಾಗಿದೆ..

Thanks for reading ಚಾಣಕ್ಯ ನೀತಿಯ ಪ್ರಕಾರ ಈ 4 ರಹಸ್ಯಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬಾರದಂತೆ..!!? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಚಾಣಕ್ಯ ನೀತಿಯ ಪ್ರಕಾರ ಈ 4 ರಹಸ್ಯಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬಾರದಂತೆ..!!?

Post a Comment