ವಿದ್ಯಾರ್ಥಿ ವೇತನ: ಡಿಜಿಟಲ್‌ ಭಾರತಿ ಕೋವಿಡ್‌ ಸ್ಕಾಲರ್‌ಶಿಪ್‌ 2021-22

June 13, 2021
Sunday, June 13, 2021


 ಡಿಜಿಟಲ್‌ ಭಾರತಿ ಕೋವಿಡ್‌ ಸ್ಕಾಲರ್‌ಶಿಪ್‌ 2021-22

ಕೋವಿಡ್‌ ಕಾರಣದಿಂದ ಕುಟುಂಬವು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಮುಂದಿನ ಶಿಕ್ಷಣ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೋವಿಡ್‌ ಕಾರಣದಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹತೆ: ಒಂದನೇ ತರಗತಿಯಿಂದ ಪಿಯುಸಿವರೆಗೆ ಓದುತ್ತಿರುವವರಿಗೆ ಈ ವಿದ್ಯಾರ್ಥಿ ವೇತನ ಅನ್ವಯವಾಗುತ್ತದೆ.

ಆರ್ಥಿಕ ಸಹಾಯ: ಕಾಲೇಜುಗಳಿಗೆ ಪ್ರವೇಶಾತಿ, ಲ್ಯಾಪ್‌ಟಾಪ್‌

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ

ಹೆಚ್ಚಿನ ಮಾಹಿತಿಗೆ: www.b4s.in/praja/DBCS1

**
ವಿಎನ್‌ಐಟಿ ನಾಗ್ಪುರ ಡಿಪಾರ್ಟ್‌ಮೆಂಟ್‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ 2021

ಕರ್ನಾಟಕದಲ್ಲೂ SSLC ಪರೀಕ್ಷೆ ರದ್ದು..? ಮಾಡುವಂತೆ ಪೋಷಕರ ಸಮಿತಿ ಸರ್ಕಾರ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ 2 ದಿನ ಗಡವು ನೀಡಿದೆ

ಎಂ.ಟೆಕ್‌ ಅಥವಾ ಎಂ.ಇ ಪದವಿ ಪಡೆದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆ : ತಮ್ಮ ಸ್ನಾತಕೋತ್ತರ ಶಿಕ್ಷಣದಲ್ಲಿ ಪವರ್‌ ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್‌ ಡ್ರೈವ್ಸ್‌, ಪವರ್‌ ಸಿಸ್ಟಮ್‌, ಕಂಟ್ರೋಲ್‌ ಸಿಸ್ಟಮ್‌ ಅಥವಾ ಇದಕ್ಕೆ ಸಮಾನಾಂತರವಾದ ವಿಷಯಗಳನ್ನು ಕಲಿತಿರಬೇಕು.

ಗೇಟ್‌ ಪರೀಕ್ಷೆಯನ್ನು ಪೂರೈಸಿರಬೇಕು.

ಆರ್ಥಿಕ ಸಹಾಯ: ಎಚ್‌ಆರ್‌ಎ ಯೊಂದಿಗೆ ತಿಂಗಳಿಗೆ ₹ 35 ಸಾವಿರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಜೂನ್‌, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅಥವಾ ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸಬಹುದು

ಹೆಚ್ಚಿನ ಮಾಹಿತಿಗೆ: www.b4s.in/praja/NJF7

**
ಡಿಎಕ್ಸ್‌ಸಿ ಪ್ರೊಗ್ರೆಸ್ಸಿಂಗ್‌ ಮೈಂಡ್ಸ್‌ ಸ್ಕಾಲರ್‌ಶಿಪ್‌ 2021

ಸಿಎಸ್‌, ಐಟಿ, ಇಇ, ಇಎಸ್‌ ವಿಭಾಗಗಳಲ್ಲಿ ಬಿ.ಇ/ ಬಿ.ಟೆಕ್‌ ಓದುತ್ತಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆ: ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು ₹ 4 ಲಕ್ಷ ಮೀರಿರಬಾರದು. ವಿದ್ಯಾರ್ಥಿಗಳು ₹ 6 ಸಾವಿರ ಅಥವಾ ಅದಕ್ಕೂ ಹೆಚ್ಚಿನ ಯಾವುದೇ ವಿದ್ಯಾರ್ಥಿ ವೇತನವನ್ನು ಈಗಾಗಲೇ ಪಡೆಯುತ್ತಿರಬಾರದು.

ಆರ್ಥಿಕ ಸಹಾಯ: ಒಟ್ಟು ಶುಲ್ಕದ ಶೇ 50 ರಷ್ಟು ಅಥವಾ ವರ್ಷಕ್ಕೆ ₹ 40 ಸಾವಿರ (ಯಾವುದು ಕಡಿಮೆ ಇರುತ್ತದೊ ಅದು).

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಜೂನ್‌, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ

ಹೆಚ್ಚಿನ ಮಾಹಿತಿಗೆ: www.b4s.in/praja/DXC1

ಕೃಪೆ: buddy4study.com


Thanks for reading ವಿದ್ಯಾರ್ಥಿ ವೇತನ: ಡಿಜಿಟಲ್‌ ಭಾರತಿ ಕೋವಿಡ್‌ ಸ್ಕಾಲರ್‌ಶಿಪ್‌ 2021-22 | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ವಿದ್ಯಾರ್ಥಿ ವೇತನ: ಡಿಜಿಟಲ್‌ ಭಾರತಿ ಕೋವಿಡ್‌ ಸ್ಕಾಲರ್‌ಶಿಪ್‌ 2021-22

Post a Comment