ಏಕಕಾಲದಲ್ಲಿ 10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ ಮಹಿಳೆ

June 09, 2021
Wednesday, June 9, 2021ದ. ಆಫ್ರಿಕಾ, ಜೂನ್ 9: ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ಏಕಕಾಲದಲ್ಲಿ ಹತ್ತು ಮಕ್ಕಳಿಗೆ ಜನ್ಮ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲ, ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ದಕ್ಷಿಣ ಆಫ್ರಿಕಾದ ಗೌಟೆಂಗ್ ನಿವಾಸಿ ಗೋಸಿಯಾಮ್ ತಾಮರಾ ಸಿತೋಲ್ ಎಂಬ 37 ವರ್ಷದ ಮಹಿಳೆ ಸೋಮವಾರ ಹತ್ತು ಮಕ್ಕಳಿಗೆ ಜನ್ಮ ನೀಡಿರುವುದಾಗಿ ವರದಿಯಾಗಿದೆ. ಎಲ್ಲಾ ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿರುವುದಾಗಿ ತಿಳಿದುಬಂದಿದೆ.

ತಮಗೆ ಎಂಟು ಮಕ್ಕಳಾಗುತ್ತವೆ ಎಂದು ತಿಳಿದುಕೊಂಡಿದ್ದೆವು.

ಆದರೆ ಸೋಮವಾರ ಹತ್ತು ಮಕ್ಕಳಿಗೆ ಗೋಸಿಯಾಮ್ ಜನ್ಮ ನೀಡಿದ್ದಾರೆ. ಏಳು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳು ಜನಿಸಿವೆ. ಗೋಸಿಯಾಮ್‌ಗೆ ಏಳು ತಿಂಗಳು, ಏಳು ದಿನಗಳಾಗಿದ್ದವು ಎಂದು ಮಹಿಳೆ ಪತಿ ಟೆಬೊಹೊ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಗೋಸಿಯಾಮ್ ಅವರಿಗೆ ಈ ಮುನ್ನವೇ ಅವಳಿ ಮಕ್ಕಳಿದ್ದು, ಆ ಮಕ್ಕಳಿಗೆ 6 ವರ್ಷ. ಇದೀಗ ಹತ್ತು ಮಕ್ಕಳು ಜನಿಸಿದ್ದು, ಒಟ್ಟು 12 ಮಕ್ಕಳ ತಾಯಿಯಾಗಿದ್ದಾರೆ ಗೋಸಿಯಾಮ್.

"ನಾವು ಅವಳಿ ಅಥವಾ ತ್ರಿವಳಿ ಮಕ್ಕಳಾಗಬಹುದು ಎಂದುಕೊಂಡಿದ್ದೆವು. ಆದರೆ ವೈದ್ಯರು ಇಷ್ಟು ಮಕ್ಕಳು ಎಂದು ಹೇಳಿದಾಗ ಆಶ್ಚರ್ಯವಾಯಿತು. ಯಾವುದೇ ತೊಂದರೆಯಿಲ್ಲದೇ ಮಕ್ಕಳು ಜನಿಸಿದವು. ಮಕ್ಕಳು ಆರೋಗ್ಯಕರವಾಗಿವೆ" ಎಂದು ತಿಳಿಸಿದ್ದಾರೆ.

ಮೊರೊಕ್ಕಾದ ಮಲಿಯಾನ್ ಹಲೀಮಾ ಎಂಬ ಮಹಿಳೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಆ ದಾಖಲೆಯನ್ನು ಗೋಸಿಯಾಮ್ ಮುರಿದಿದ್ದಾರೆ.


ಗರ್ಭಪಾತವಾದ ಕಾರಣಕ್ಕೆ 30 ವರ್ಷ ಜೈಲು ಶಿಕ್ಷಿಗೆ ಗುರಿಯಾಗಿದ್ದ ಮಹಿಳೆ ಬಿಡುಗಡೆಗರ್ಭಪಾತವಾದ ಕಾರಣಕ್ಕೆ 30 ವರ್ಷ ಜೈಲು ಶಿಕ್ಷಿಗೆ ಗುರಿಯಾಗಿದ್ದ ಮಹಿಳೆ ಬಿಡುಗಡೆ

ಎಲ್ ಸಲ್ವಡೋರ್‌ : ಗರ್ಭಪಾತ ಮಾಡಿಸಿಕೊಂಡ ಕಾರಣಕ್ಕೆ 30 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಹಿಳೆ 10 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸಾರಾ ರೋಗೆಲ್ ಹಸರಿನ ಈ ಮಹಿಳೆ, ಮನೆಗೆಲಸ ಮಾಡುತ್ತಿದ್ದ ವೇಳೆ ರಕ್ತಸ್ರಾವದ ಸಮಸ್ಯೆಯಿಂದಾಗಿ ಅಕಸ್ಮಾತ್‌ ಆಗಿ ಆದ ಗರ್ಭಪಾತದ ಕಾರಣ ಅಕ್ಟೋಬರ್‌ 2012ರಲ್ಲಿ ಅವರನ್ನ ಬಂಧಿಸಲಾಗಿತ್ತು. ಇನ್ನೂ ಹುಟ್ಟದೇ ಇರುವ ಮಗುವನ್ನು ಕೊಂದಿರುವ ಆರೋಪದ ಮೇಲೆ 30 ವರ್ಷಗಳ ಕಾಲ ಶಿಲು ಶಿಕ್ಷೆಗೂ ಗುರಿಯಾಗಿದ್ದರು..

ಈ ಪ್ರಕರಣವನ್ನ ವಿರೋಧಿಸಿ ಜನರು ಬೀದಿಗಿಳಿದು ಉಗ್ರ ಹೋರಾಟಗಳನ್ನೂ ಸಹ ನಡೆಸಿದ್ದರು. ಸಾರಾ ಜೈಲಿಗೆ ಹೋಗುವ ತಪ್ಪು ಮಾಡಿಲ್ಲ. ತನ್ನ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದ ಆಕೆ ತನ್ನ ಕುಟುಂಬದೊಂದಿಗೆ ಇರಬೇಕಿತ್ತು.

ಆದರೆ ಆಕೆಯನ್ನು ಅನ್ಯಾಯವಾಗಿ 9 ವರ್ಷಗಳ ಕಾಲ ಸೆರೆವಾಸದಲ್ಲಿಡಲಾಯಿತು ಎಂದು ಮಹಿಳಾಪರ ಹೋರಾಟಗಾತಿ ಮೊರೆನಾ ತಿಳಿಸಿದ್ದಾರೆ. ಗರ್ಭಪಾತದ ವಿರುದ್ಧ ಅತ್ಯಂತ ಕಠಿಣ ಕಾನೂನುಗಳನ್ನು ಹೊಂದಿರುವ ಎಲ್‌ ಸಲ್ವಡಾರ್‌ ನಲ್ಲಿ ಅತ್ಯಾಚಾರದ ಪ್ರಕರಣಗಳಲ್ಲೂ ಸಹ ಗರ್ಭಪಾತಕ್ಕೆ ಅವಕಾಶ ಕೊಡಲಾಗಿಲ್ಲ. ಅಷ್ಟೇ ಅಲ್ಲ ತಾಯಂದಿರ ಜೀವಕ್ಕೇ ಹೋಗುತ್ತೆ ಅನ್ನೋ ಪರಿಸ್ಥಿತಿ ಇದ್ರೂ ಸಹ ಗರ್ಭಪಾತ ಮಾಡಿಸಿಕೊಂಡ್ರೆ 40 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.


Thanks for reading ಏಕಕಾಲದಲ್ಲಿ 10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ ಮಹಿಳೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಏಕಕಾಲದಲ್ಲಿ 10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ ಮಹಿಳೆ

Post a Comment