Health Tips: ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಈ 6 ಕಷಾಯಗಳನ್ನು ಮಾಡಿ ಕುಡಿಯಿರಿ

June 22, 2021ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರೂ, ಕಾಲೋಚಿತವಾಗಿ ಬರುವ ಕಾಯಿಲೆಗಳ ಬಗ್ಗೆ ನಾವು ಗಮನಹರಿಸಿವುದು ಸೂಕ್ತ. ಅದರಲ್ಲೂ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಮಳೆಗೆ ಹೆಚ್ಚಿನ ಜನರು ಶೀತ ಮತ್ತು ಕೆಮ್ಮು ಹಾಗೂ ಇನ್ನಿತರ ಸೋಂಕುಗಳಿಗೆ ಗುರಿಯಾಗುತ್ತಾರೆ. ಆಸ್ಪತ್ರೆಗೆ ಈಗ ಹೋಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಪ್ರಾಚೀನ ಕಾಲದಿಂದ ಮುಂದುವರಿದುಕೊಂಡು ಬಂದ ಕಷಾಯವನ್ನು ಮಾಡಿ ಕುಡಿಯಿರಿ. ಈ ಕಷಾಯವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇವುಗಳು ಮುಖ್ಯ ಪಾತ್ರ ವಹಿಸುತ್ತದೆ. ಕಷಾಯಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುತ್ತದೆ. ಹಾಗಿದ್ದರೆ ಯಾವೆಲ್ಲಾ ಪದಾರ್ಥಗಳಿಂದ ಕಷಾಯ ತಯಾರಿಸಬೇಕು ಎಂಬ ಗೊಂದಲವಿದ್ದರೆ ಇಲ್ಲಿದೆ ಅದಕ್ಕೆ ಉತ್ತರ.

ಅಶ್ವಗಂಧ
ಅಶ್ವಗಂಧ ವಿವಿಧ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೆ ಇದನ್ನು ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ಇದು ಪೆಪ್ಟೈಡ್ಸ್, ಅಮೈನೋ ಆಮ್ಲಗಳು, ಲಿಪಿಡ್​ಳಂತಹ ಗುಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಒತ್ತಡ, ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.

ಬ್ರಾಹ್ಮಿ
ಬ್ರಾಹ್ಮಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆತಂಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. ಬ್ರಾಹ್ಮಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮಧುಮೇಹ ಮತ್ತು ಕ್ಯಾನ್ಸರ್ ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ತುಳಸಿ ಬೀಜಗಳು
ತುಳಸಿ ಬೀಜಗಳಿಂದ ತಯಾರಿಸುವ ಕಷಾಯ ಕೆಮ್ಮು ಮತ್ತು ಶೀತದಿಂದ ಮುಕ್ತಿ ನೀಡುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಳಸಿ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಎ, ಬಿ, ಇ, ಕೆ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣವಿದೆ. ಈ ಬೀಜಗಳಲ್ಲಿ ಫ್ಲೇವನಾಯ್ಡ್​ಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಸೋಂಪು ಬೀಜಗಳು
ಸೋಂಪು ಟ್ರಾನ್ಸ್ ಅನಾಥೋಲ್ ಅನ್ನು ಹೊಂದಿರುತ್ತದೆ. ಇದು ಅನೇಕ ರೀತಿಯ ಸೋಂಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೋಂಪಿನಿಂದ ತಯಾರಿಸಿದ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಉರಿಯೂತ ಕಡಿಮೆಯಾಗುತ್ತದೆ. ಶ್ವಾಸನಾಳವನ್ನು ಸ್ವಚ್ಛಗೊಳಿಸುವಲ್ಲಿಯೂ ಸೋಂಪು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ.

ಗಸಗಸೆ
ಗಸಗಸೆ ದೇಹವನ್ನು ಹೈಡ್ರೀಕರಿಸುವುದಕ್ಕೆ ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಉಪಯುಕ್ತವಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ಸತು ಸಮೃದ್ಧವಾಗಿದೆ. ಗಸಗಸೆ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಶಾಲೆ ಸದ್ಯಕ್ಕಿಲ್ಲ, ಕಾಲೇಜು ಶೀಘ್ರದಲ್ಲೇ ಪುನಾರಂಭ?

June 22, 2021

 


ಬೆಂಗಳೂರು(ಜೂ.23): ಕೂಡಲೇ ಶಾಲೆ-ಕಾಲೇಜು ಆರಂಭಿಸುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದ್ದರೂ ರಾಜ್ಯ ಸರ್ಕಾರ ಮೊದಲಿಗೆ ಕಾಲೇಜುಗಳನ್ನು ಮಾತ್ರ ಆರಂಭಿಸುವ ಚಿಂತನೆ ಹೊಂದಿದೆ. ಅಂದರೆ, ಸದ್ಯಕ್ಕೆ 1ರಿಂದ 10ನೇ ತರಗತಿವರೆಗಿನ ಶಾಲೆ ಆರಂಭಕ್ಕೆ ಕೈ ಹಾಕುವ ಸಾಧ್ಯತೆಯಿಲ್ಲ.

ಡಾ| ದೇವಿಶೆಟ್ಟಿನೇತೃತ್ವದ ತಜ್ಞರ ಸಮಿತಿ ಶೀಘ್ರ ಶಾಲೆ-ಕಾಲೇಜು ಆರಂಭಕ್ಕೆ ಸಲಹೆ ನೀಡಿದೆ. ಆದರೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಮೊದಲ ಹಂತವಾಗಿ ಪದವಿ, ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಮಾತ್ರ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅವಕಾಶವಿದೆ. ಹಾಗಾಗಿ ಪದವಿ ಮತ್ತು ಮೇಲ್ಪಟ್ಟಮಕ್ಕಳೆಲ್ಲರೂ 18 ವರ್ಷ ದಾಟಿದವರಾಗಿದ್ದಾರೆ.

ಅವರಿಗೆ ಕಾಲೇಜು ಹಂತದಲ್ಲೇ ಲಸಿಕೆ ನೀಡುವ ಅಭಿಯಾನ ಆರಂಭಿಸಿ ಭೌತಿಕ ತರಗತಿಗಳನ್ನೂ ಆರಂಭಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿದೆ ಎಂದು ತಿಳಿದು ಬಂದಿದೆ.

ಈ ಕಾಲೇಜುಗಳ ಆರಂಭದ ಬಳಿಕ ಕೋವಿಡ್‌ ಮತ್ತಷ್ಟುತಹಬಂದಿಗೆ ಬಂದರೆ ಮಾತ್ರ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವ ಆಲೋಚನೆ ಸರ್ಕಾರದ್ದಾಗಿದೆ. ಆದರೆ, 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಶಾಲೆ ಆರಂಭಿಸುವ ಆತುರದ ನಿರ್ಧಾರ ತೆಗೆದುಕೊಳ್ಳದಿರಲು ತೀರ್ಮಾನಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ವಿದೇಶಗಳಂತೆ ಭಾರತದಲ್ಲೂ 12 ವರ್ಷ ಮೇಲ್ಪಟ್ಟಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರದಿಂದ ಅನುಮತಿ ದೊರೆತರೆ ಆ ಮಕ್ಕಳಿಗೂ ಲಸಿಕೆ ನೀಡಿಕೆ ಆರಂಭಿಸಿ ಹಂತ ಹಂತವಾಗಿ ಬರುವ ದಿನಗಳಲ್ಲಿ ಶಾಲೆ ಆರಂಭಿಸುವ ಕುರಿತು ಸರ್ಕಾರದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಆದರೆ, ಅಲ್ಲಿಯವರೆಗಂತೂ ಸಣ್ಣ ಮಕ್ಕಳಿಗೆ ಭೌತಿಕವಾಗಿ ಶಾಲೆ ಆರಂಭಿಸಬಾರದೆಂಬ ಆಲೋಚನೆ ಸರ್ಕಾರದ್ದಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಚಿಂತನೆ ಏನು?

- 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅವಕಾಶವಿದೆ

- ಕಾಲೇಜಿಗೆ ಹೋಗುವವರೆಲ್ಲ 18 ವರ್ಷ ಮೇಲ್ಪಟ್ಟವರು

- ಅವರಿಗೆ ಕಾಲೇಜಿನಲ್ಲೇ ಲಸಿಕೆ ನೀಡಿ ತರಗತಿ ಆರಂಭಿಸಬಹುದು

- ನಂತರ ಕೋವಿಡ್‌ ಕಮ್ಮಿಯಾದರೆ ಪಿಯುಸಿ ಆರಂಭಿಸಬಹುದು

- 12 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಬಂದರೆ ಹೈಸ್ಕೂಲ್‌ ಆರಂಭ

ಹಂತ ಹಂತವಾಗಿ ಆರಂಭಕ್ಕೆ ಚಿಂತನೆ

ಡಾ| ದೇವಿಶೆಟ್ಟಿಅವರ ನೇತೃತ್ವದ ಸಮಿತಿಯು 3ನೇ ಅಲೆ ತಡೆಗೆ ಹಲವು ಶಿಫಾರಸುಗಳ ಮಧ್ಯಂತರ ವರದಿ ಸಲ್ಲಿಸಿದೆ. ಶಾಲಾ- ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲು ಕೂಡ ಸಲಹೆ ನೀಡಿದೆ. 18 ವಯಸ್ಸಿನ ಮೇಲಿನ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿ ಹಂತ ಹಂತವಾಗಿ ಶಾಲೆ-ಕಾಲೇಜುಗಳನ್ನು ಪ್ರಾರಂಭಿಸುವ ಚಿಂತನೆ ನಡೆಸಲಾಗಿದೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ಚಿಕಿತ್ಸೆಗಾಗಿ 6 ತಿಂಗಳ ವಿಶೇಷ ಸಾಂದರ್ಭಿಕ ರಜೆ

June 22, 2021

 


ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯ ಮೇರೆಗೆ, ರಾಜ್ಯ ಸರ್ಕಾರವು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವಂತ ನೌಕರರಿಗೆ, ಆರು ತಿಂಗಳವರೆಗೆ ಚಿಕಿತ್ಸೆಗಾಗಿ ವಿಶೇಷ ಸಾಂದರ್ಭಿಕ ರಜೆಯನ್ನು ನೀಡಿ ಆದೇಶಿಸಿದೆ.

ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರ ಉಪ ಕಾರ್ಯದರ್ಶಿ ಬಿ ಎಸ್ ಸುವರ್ಣ ಅವರು ನಡವಳಿಗಳನ್ನು ಹೊರಡಿಸಿದ್ದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಸರ್ಕಾರಿ ನೌಕರರು ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರ ಸಹಲೆಯ ಮೇರೆಗೆ ಕಿಮೋ, ರೇಡಿಯೋ ಥೆರಪಿಯಂತಹ ಚಿಕಿತ್ಸೆಗೆ ಒಳಪಡಬೇಕಿದ್ದು, ಆ ನಿಮಿತ್ತವಾಗಿ ಕಡ್ಡಾಯವಾಗಿ ವಿಶ್ರಾಂತಿಯನ್ನು ಪಡೆಯಬೇಕಿರುವ ಅವಶ್ಯಕತೆಯಿರುವುದರ ಮೇರೆಗೆ, ಕಚೇರಿಗೆ ಹಾಜರಾಗುವುದು ಕಷ್ಟವಾಗುತ್ತದೆ.

ಇದರಿಂದಾಗಿ ವೈದ್ಯಕೀಯ ಪ್ರಮಾಣ ಪತ್ರದ ಆಧಾರ ಮೇಲೆ ವಿಶೇಷ ಸಾಂದರ್ಭಿಕ ರಜೆಯನ್ನು ಪರಿಗಣಿಸುವಂತೆ ಸರ್ಕಾರಿ ನೌಕರರ ಸಂಘವು ಕೋರಿರುತ್ತದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನುಬಂಧ-ಬಿ ರಲ್ಲಿನ ನಿಯಮ 11(ಐ)ರ ನಂತ್ರದಲ್ಲಿ ಈ ಆದೇಶವನ್ನು ಹೊರಡಿಸಿದ ದಿನಾಂಕದಿಂದ ಜಾರಿಗೊಳ್ಳುವಂತೆ ನಿಯಮ 11(ಜೆ) ಎಂಬ ಹೊಸ ನಿಯಮವನ್ನು ಸೇರ್ಪಡೆಗೊಳಿಸಿದೆ.

ದಿನಕ್ಕೆ 10,000 ಹೆಜ್ಜೆ ನಡೆದರೆ ಸಾಕೇ? ನಿಮಗೆ ಯಾವುದು ಸರಿ ಎಂದು ತಿಳಿಯಿರಿ

ನಿಯಮ 11(ಜೆ)ರಂತೆ, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸಾ ತಜ್ಞರು ರೂಪಿಸುವ ಯೋಜನೆಯನುಸಾರ ಪಡೆಯುವ ಕಿಮೋ, ರೇಡಿಯೋ ಥೆರಪಿ ಚಿಕಿತ್ಸೆ ಮತ್ತು ಸಂಬಂಧದಲ್ಲಿ ಅಗತ್ಯವಾಗುವ ವಿಶ್ರಾಂತಿಯ ಅವಧಿಯ ದಿನಗಳಿಗೆ, ಸಕ್ಷಮ ವೈದ್ಯಕೀಯ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಪಡೆದು, ಒದಗಿಸುವ ಷರತ್ತಿಗೊಳಪಟ್ಟು, ಈ ಚಿಕಿತ್ಸೆಯ ಅವಧಿಯಲ್ಲಿ ಮಾತ್ರ ಗರಿಷ್ಠ ಆರು ತಿಂಗಳುಗಳ ಮಿತಿಗೊಳಪಟ್ಟು, ವಿಶೇಷ ಸಾಂದರ್ಭಿಕ ರಜೆಯನ್ನು ಅನುಮತಿಸತಕ್ಕದ್ದು ಎಂದಿದ್ದಾರೆ.

ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಭರ್ಜರಿ ಸಿಹಿಸುದ್ದಿ : 6 ತಿಂಗಳು ಶಿಶುಪಾಲನಾ ರಜೆ ಮಂಜೂರು

June 22, 2021

 


ಬೆಂಗಳೂರು : ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ, ಕೆಲ ಷರತ್ತುಗಳ ಮೇರೆಗೆ ಇಡೀ ಸೇವಾವಧಿಯಲ್ಲಿ ಗರಿಷ್ಠ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಿ, ಸರ್ಕಾರ ಆದೇಶಿಸಿದೆ. ಅಲ್ಲದೇ ಮಹಿಳಾ ಸರ್ಕಾರಿ ನೌಕರಳು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೇ, ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಮಾತ್ರ ಶಿಶುಪಾಲನಾ ರಜೆಯನ್ನು ನೀಡುವಂತೆ ಸೂಚಿಸಿದೆ. ಜೊತೆಗೆ ಬುದ್ದಿಮಾಂದ್ಯ, ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿರುವ 730 ದಿನಗಳ ಶಿಶುಪಾಲನಾ ರಜೆ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂಬುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

`ಕೊರೊನಾ ಮೂರನೇ ಅಲೆ' ಕುರಿತಂತೆ ಶಾಕಿಂಗ್ ಮಾಹಿತಿ' ಬಿಚ್ಚಿಟ್ಟ ತಜ್ಞರು

ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಬಿ ಎಸ್ ಸುವರ್ಣ ಅವರು, ನಡವಳಿಗಳನ್ನು ಹೊರಡಿಸಿದ್ದು, ಬುದ್ದಿಮಾಂದ್ಯ, ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು, ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರದ ಆಧಾರದ ಮೇಲೆ, ಕೆಲವು ಷರತ್ತುಗೊಳಪಟ್ಟು, ಒಂದು ವರ್ಷದಲ್ಲಿ ಮೂರು ಕಂತುಗಳಿಗೆ ಮೀರದಂತೆ ಹಾಗೂ 15 ದಿನಗಳಿಗೆ ಕಡಿಮೆ ಇಲ್ಲದಂತೆ, ಇಡೀ ಸೇವಾವಧಿಯಲ್ಲಿ 2 ವರ್ಷಗಳ ಅವಧಿಗೆ ಅಂದರೆ 730 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲಾಗಿದೆ.

ಪ್ರಸಕ್ತ ಸರ್ಕಾರವು 2021-22ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆ 37ರಲ್ಲಿ ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಘೋಷಿಸಿದ್ದು, ಈ ಕುರಿತಂತೆ ರಾಜ್ಯ ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ರಾಮನ ಬಳಿಕ, ಯೋಗ ಭಾರತದಲ್ಲ, ನೇಪಾಳದಲ್ಲಿ ಹುಟ್ಟಿಕೊಂಡದ್ದು ಎಂದ ನೇಪಾಳ ಪ್ರಧಾನಿ

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಈ ಕೆಳಕಂಡ ಷರತ್ತುಗಳ ಮೇರೆಗೆ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವು ಮಂಜೂರು ಮಾಡತಕ್ಕದ್ದು.

 • ಮಹಿಳಾ ಸರ್ಕಾರಿ ನೌಕರಳು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೇ ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಮಾತ್ರ ಈ ರಜೆಯ ಸೌಲಭ್ಯಕ್ಕೆ ಅರ್ಹರಾಗತಕ್ಕದ್ದು.
 • ಈ ರಜೆಯ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟ ಪೂರ್ವದಲ್ಲಿ ಪಡೆಯಲು ಅರ್ಹವಿರುವ ಸಂಪೂರ್ಣ ವೇತನಕ್ಕೆ ಸಮನಾದ ರಜೆ ಸಂಬಳಕ್ಕೆ ಅರ್ಹರಾಗತಕ್ಕದ್ದು.
 • ಪ್ರತಿ ಬಾರಿಯ ಈ ರಜೆ ಮಂಜೂರಾತಿಯು ಕನಿಷ್ಠ 15 ದಿನಗಳಿಗಿಂತ ಕಡಿಮೆ ಇರಬಾರದು.
 • ಮಹಿಳಾ ಸರ್ಕಾರಿ ನೌಕರಳು ಈ ರಜೆಯನ್ನು ಸಾಂದರ್ಭಿಕ ರಜೆಯ ಹೊರತಾಗಿ, ನಿಯಮಾನುಸಾರ ಪಡೆಯಲು ಅರ್ಹವಿರುವ ಅಸಾಧಾರಣ ರಜೆಯೂ ಒಳಗೊಂಡಂತೆ ಇತರೆ ರಜೆಯೊಂದಿಗೆ ಸಂಯೋಜಿಸಿ, ಪಡೆಯಬಹುದು.
 • ಈ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯತಕ್ಕದ್ದಲ್ಲ. ಉಪಯೋಗಿಸಿಕೊಳ್ಳದ ಈ ಸೌಲಭ್ಯದ ಸಂಬಂಧದಲ್ಲಿನ ರಜೆಯನ್ನು ಗಳಿಕೆ ರಜೆ ಲೆಕ್ಕಕ್ಕೆ ಜಮೆಗೊಳಿಸಲು, ನಗದೀಕರಿಸಲು ಅವಕಾಶವಿರುವುದಿಲ್ಲ.
 • ಬುದ್ದಿಮಾಂದ್ಯ, ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿರುವ 730 ದಿನಗಳ ಶಿಶುಪಾಲನಾ ರಜೆ ಸೌಲಭ್ಯಕ್ಕೆ ಅರ್ಹರಾದ ಯಾವುದೇ ನೌಕರಳು ಆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು. ಅದರೊಂದಿಗೆ ಈ ಯೋಜನೆಯಡಿಯಲ್ಲಿನ ಸೌಲಭ್ಯಕ್ಕೂ ಅರ್ಹರಾಗತಕ್ಕದ್ದಲ್ಲ.
 • ಶಿಶುಪಾಲನಾ ರಜೆಯ ಮಂಜೂರಾತಿಗಾಗಿ ಯಾವುದೇ ಪೂರಕ ದಾಖಲೆಗಳನ್ನು ಪಡೆಯುವ ಅವಶ್ಯಕತೆಯಿರುವುದಿಲ್ಲ. ಸೇವಾ ಪುಸ್ತಕದಲ್ಲಿ ನಮೂದಿಸಿರುವ ಮಕ್ಕಳ ವಿವರಗಳ ಆಧಾರದ ಮೇಲೆ ಮಂಜೂರು ಮಾಡತಕ್ಕದ್ದು.

ಹೀಗೆ ಈ ರಜೆಯನ್ನು ಮಂಜೂರು ಮಾಡುವ ಸಕ್ಷಮವಾದ ಪ್ರಾಧಿಕಾರವು, ಶಿಶುಪಾಲನಾ ರಜೆಯ ಮಂಜೂರಾತಿಯನ್ನು ಸೇವಾ ಪುಸ್ತಕದಲ್ಲಿ ದಾಖಲು ಮಾಡುವುದು ಮತ್ತು ನಿಗಧಿತ ನಮೂನೆಯಲ್ಲಿ ಲೆಕ್ಕವಿಡಬೇಕು. ಈ ಬಗ್ಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಿಗೆ ಪ್ರತ್ಯೇಕವಾಗಿ ಸೂಕ್ತ ತಿದ್ದುಪಡಿ ತರಗಾಗುವುದು ಎಂಬುದಾಗಿ ತಿಳಿಸಿದ್ದಾರೆ.

ಮಳೆಗಾಲದಲ್ಲಿ ತಿನ್ನಲೇ ಬೇಕು ಈ ಎರಡು ಚಟ್ನಿ..! ರುಚಿಗೂ ಹೌದು, ಇಮ್ಯೂನಿಟಿಗೂ ಹೌದು..!

June 22, 2021

 


ನವದೆಹಲಿ : ನಮ್ಮ ಅಡುಗೆಮನೆಯಲ್ಲಿ ಚಟ್ನಿಗೊಂದು (Chutney) ವಿಶೇಷ ಸ್ಥಾನ ಇರುತ್ತದೆ. ಇದೀಗ ಮಳೆಗಾಲ (Rainy season) ಬೇರೆ ಶುರುವಾಗಿದೆ. ಈ ಹೊತ್ತಿನಲ್ಲಿ ಬಿಸಿಬಿಸಿ ಊಟದ ಜೊತೆಗೆ ನಂಜಿಕೊಳ್ಳಲು ಚಟ್ನಿ ಇದ್ದರೆ ಅದರಷ್ಟು ಸ್ವಾದಿಷ್ಟ ಊಟ ಇನ್ನೊಂದಿಲ್ಲ. ಚಟಪಟ ಚಟ್ನಿ ಕೇವಲ ನಾಲಗೆ ರುಚಿಗಷ್ಟೇ ಅಲ್ಲ. ದೇಹದ ಇಮ್ಯೂನಿಟಿಗೂ (immunity) ಸಾಕಷ್ಟು ಮುಖ್ಯ. ಇವತ್ತು ನಾವು ನಿಮಗೆ ಮಳೆಗಾಲದಲ್ಲಿ ತಿನ್ನಲೇಬೇಕಾದ ಎರಡು ಚಟ್ನಿಯ ಬಗ್ಗೆ ಹೇಳುತ್ತೇವೆ. ಒಂದು ಟೊಮ್ಯಾಟೋ ಚಟ್ನಿ, ಎರಡನೆಯದ್ದು ಬೆಳ್ಳುಳ್ಳಿ ಚಟ್ನಿ. ಅದರ ರೆಸಿಪಿ ಬಗ್ಗೆ ಹೇಳುತ್ತೇವೆ.

೧. ಟೊಮ್ಯಾಟೋ ಚಟ್ನಿ
ಟೊಮ್ಯಾಟೋದಲ್ಲಿ (Tomato) ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತದೆ.

ಇದರಲ್ಲಿ ಕೊಲೆಸ್ಟರಾಲ್ ಕೂಡಾ ಕಡಿಮೆ ಇರುತ್ತದೆ. ಬೊಜ್ಜು ಕರಗಿಸುವ ಇರಾದೆ ಉಳ್ಳವರಿಗೆ ಟೊಮ್ಯಾಟೋ ಚಟ್ನಿ ತಿನ್ನಲೇ ಬೇಕು.

ಇದನ್ನೂ ಓದಿ : Food Avoid With Egg: ಮೊಟ್ಟೆ ಜೊತೆಗೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ

ಟೊಮ್ಯಾಟೋ ಚಟ್ನಿ ಮಾಡುವ ವಿಧಾನ :
೧. ಒಂದು ಪಾನ್ ನಲ್ಲಿ ಸ್ವಲ್ಪ ಎಣ್ಣೆ (oil) ಹಾಕಿ. ಸಿಮ್ ನಲ್ಲಿಟ್ಟು ಬಿಸಿ ಮಾಡಿ. ನಂತರ ಅದರಲ್ಲಿ ಸಾಸಿವೆ, ಬೇವಿನ ಸೊಪ್ಪು, ಬೆಳ್ಳುಳ್ಳಿ ಮತ್ತು ಕತ್ತರಿಸಿದ ಶುಂಠಿ ಹಾಕಿ fry ಮಾಡಿ. ಅದಕ್ಕೆ ಕತ್ತರಿಸಿದ ಟೊಮ್ಯಾಟೋ ಹಾಕಿ, ದಪ್ಪ ಪೇಸ್ಟ್ ತರಹ ಮಾಡಿ. ಅದಕ್ಕೆ ರುಚಿಗೆ ಬೇಕಾದಷ್ಟು ಮೆಣಸು, ಕರಿಮೆಣಸು, ಉಪ್ಪು, ಹಳದಿ (turmeric) ಹಾಕಿ. ಬೇಕಾದರೆ ಸ್ವಲ್ಪ ಸಕ್ಕರೆ ಸೇರಿಸಿ. . ದಪ್ಪ ಪೇಸ್ಟ್ ರೀತಿ ಆಗುವ ತನಕ fry ಮಾಡಿ. ಇದೀಗ ನಿಮ್ಮ ಟೊಮ್ಯೋಟೋ ಚಟ್ನಿ (Tomato chutney) ರೆಡಿ.

೨. ಬೆಳ್ಳುಳ್ಳಿ ಚಟ್ನಿ
ಬೆಳ್ಳುಳ್ಳಿಯಲ್ಲಿ (Garlic) ಆಂಟಿಬಯೋಟಿಕ್, ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣ ಸಮೃದ್ಧವಾಗಿರುತ್ತದೆ. ಇದು ನಿಮ್ಮ ದೇಹಾರೋಗ್ಯಕ್ಕೆ ಸಾಕಷ್ಟು (benefits of garlic) ಹಿತಕಾರಕ. ಮಳೆಗಾಲದಲ್ಲಿ ಇದನ್ನು ತಿನ್ನಲೇ ಬೇಕು.

ಮಾಡುವ ವಿಧಾನ:
ಒಂದು grinderಗೆ ೧೫ - ೨೦ ಕೆಂಪು ಮೆಣಸು, ೧೮೦ ಗ್ರಾಂ ಟೊಮ್ಯಾಟೋ, ೩೫ ಗ್ರಾಂ ಬೆಳ್ಳುಳ್ಳಿ, ರುಚಿಗೆ ಬೇಕಾಗುವಷ್ಟು ಉಪ್ಪು, ಒಂದು ಚಮಚ ಎಣ್ಣೆ, ಎರಡು ದೊಡ್ಡ ಚಮಚ ನೀರು ಸೇರಿಸಿ ಚೆನ್ನಾಗಿ grind ಮಾಡಿ. ನಿಮ್ಮ ಬೆಳ್ಳುಳ್ಳಿ ಚಟ್ನಿ ಸವಿಯಲು ತಯಾರ್.

ಸದ್ಯಕ್ಕೆ ಶಾಲೆ ಆರಂಭ ಮಾಡುವುದು ಬೇಡ : ಪ್ರತಾಪ್ ಸಿಂಹ

June 22, 2021

 


ಸದ್ಯಕ್ಕೆ ಶಾಲೆ ಆರಂಭ ಮಾಡುವುದು ಬೇಡ : ಪ್ರತಾಪ್ ಸಿಂಹ

ಮಡಿಕೇರಿ ; ಕೊರೊನಾ ಸೋಂಕು ಹಿನ್ನೆಲ್ಲೆ ಸದ್ಯಕ್ಕೆ ರಾಜ್ಯದಲ್ಲಿ ಶಾಲೆ ಆರಂಭಿಸೋದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

ಶಾಲೆ ಪ್ರಾರಂಭ ಸದ್ಯಕ್ಕಿಲ್ಲ, ಮೊದಲ ಹಂತದಲ್ಲಿ ಕಾಲೇಜು ಪ್ರಾರಂಭಕ್ಕೆ ಚಿಂತನೆ – ಸಿ ಎಂ ಯಡಿಯೂರಪ್ಪ

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಾಲಾ-ಕಾಲೇಜು ಆರಂಭಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಈಗಾಗಲೇ 500 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಆಗಿದೆ.

ಆದರೆ ಮಕ್ಕಳ ಪ್ರಾಣಕ್ಕೆ ತೊಂದರೆ ಅಗಿಲ್ಲ. ಕಳೆದ ತಿಂಗಳು ಮೂವರು ಮಕ್ಕಳು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಹೊರತು ಕೋವಿಡ್ ನಿಂದ ಯಾವುದೇ ಸಮಸ್ಯೆ ಆಗಿಲ್ಲ.

ಆದರೂ 3ನೇ ಅಲೆ ದೃಷ್ಟಿಯಲ್ಲಿಟ್ಟುಕೊಂಡು ಸದ್ಯ ಶಾಲೆಗಳನ್ನು ಅರಂಭ ಮಾಡುವುದು ಬೇಡ ಎಂದಿದ್ದಾರೆ.

ಅಲ್ಲದೆ ಮೊದಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿ ನಂತರ ಶಾಲೆಗಳನ್ನು ಅರಂಭ ಮಾಡುವುದು ಉತ್ತಮ. ಪೋಷಕರಿಂದ ಮಕ್ಕಳಿಗೂ ಸೋಂಕು ಹರಡುತ್ತಿದೆ.

ಹೀಗಿರುವಾಗ ವ್ಯಾಕ್ಸಿನ್ ಆಗದ ಹೊರತು ಶಾಲೆ ಆರಂಭ ಬೇಡ. 18 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ಮೊದಲು ವ್ಯಾಕ್ಸಿನ್ ಆಗಲಿ.

ವ್ಯಾಕ್ಸಿನ್ ವಿತರಣೆ ಬಳಿಕ ಶಾಲೆ ಆರಂಭಿಸುವುದು ಒಳಿತು. ಒಂದು ವೇಳೆ ವ್ಯಾಕ್ಸಿನ್ ಕೊಡದೆ ಶಾಲೆ ಅರಂಭ ಮಾಡಿದರೆ ಸಮಸ್ಯೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.

ಚಿನ್ನದ ಬೆಲೆ ಏರಿಕೆ: ಆದರೂ ಈ ತಿಂಗಳು 2,500 ರೂ. ಕುಸಿತ

June 22, 2021

 


ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವಾರ ಚಿನ್ನದ ಬೆಲೆ ಇಳಿಕೆಗೊಂಡ ಬೆನ್ನಲ್ಲೇ ಮಂಗಳವಾರ ಹಳದಿ ಲೋಹದ ಬೆಲೆ ಏರಿಕೆಗೊಂಡಿದೆ. ಹಿಂದಿನ ವಾರ ದರಗಳಲ್ಲಿ ತೀವ್ರ ಕುಸಿತದ ನಂತರ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಾಗಿದೆ.

ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.24ರಷ್ಟು ಹೆಚ್ಚಳಗೊಂಡು 47,185 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.05ರಷ್ಟು ಕಡಿಮೆಯಾಗಿ 67,730 ರೂಪಾಯಿಗೆ ತಲುಪಿದೆ.

ಭಾರತದಲ್ಲಿ ಚಿನ್ನದ ಬೆಲೆಯು 49,500 ಮಟ್ಟದಿಂದ ಕುಸಿದಿದೆ, ಎಂಸಿಎಕ್ಸ್ನಲ್ಲಿ ಚಿನ್ನವು 46800 ರಿಂದ 46600 ಮಟ್ಟದಲ್ಲಿ ಬೆಂಬಲವನ್ನು ಹೊಂದಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ವಾರ ಚಿನ್ನದ ಬೆಲೆಗಳು ಶೇಕಡಾ 6ರಷ್ಟು ಕುಸಿದಿದ್ದು, ಕಳೆದ 15 ತಿಂಗಳಲ್ಲಿ ವಾರಕ್ಕೊಮ್ಮೆ ಕುಸಿದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಇಂದು ಸ್ಥಿರವಾಗಿದ್ದು, ಸ್ಪಾಟ್ ಚಿನ್ನವು ಔನ್ಸ್‌ಗೆ 1,784.14 ಡಾಲರ್‌ಗೆ ಹೆಚ್ಚಳಗೊಂಡಿದೆ.

ದಣಿದ ದೇಹಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ ಮೊಸರು ಬಜ್ಜಿ

June 22, 2021


 ನವದೆಹಲಿ : ಗಟ್ಟಿ ಮೊಸರು (Curd), ಸೌತೆಕಾಯಿ ಮತ್ತು ಈರಳ್ಳಿ ಹಚ್ಚಿ ಮಾಡಿದ ರಾಯಿತ ದೇಹಾರೋಗ್ಯಕ್ಕೆ ಸಾಕಷ್ಟು ಹಿತಕಾರಿ (health benefits of raita). ಮೊಸರಿನಲ್ಲಿ ವಿಟಮಿನ್ ಬಿ ೫, ವಿಟಮಿನ್ ಬಿ ೧೨, ಪೊಟ್ಯಾಶಿಯಂ, ಅಯೋಡಿನ್, ಜಿಂಕ್, ಪಾಸ್ಪರಸ್ ಮುಂತಾದ ಹಲವು ಪೋಷಕಾಂಶಗಳಿರುತ್ತವೆ. ಇವು ಹಲವು ರೋಗಗಳಿಂದ ನಮ್ಮನ್ನು ಕಾಪಾಡುತ್ತವೆ. ಈರುಳ್ಳಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಅಲ್ಲದೆ ಪಾಲಿಕ್ ಆಸಿಡ್, ಕ್ಯಾಲ್ಸಿಯಂ, ಮೆಗ್ನೇಶಿಯಂ, ಕಬ್ಬಿಣದಾಂಶ ಮತ್ತು ಫೈಬರ್ ಮೊದಲಾದ ಪೋಷಕಾಂಶಗಳು ಬೇಕಾದಷ್ಟಿರುತ್ತದೆ. ಇವೆರಡೂ ಆಹಾರಗಳು ಒಟ್ಟು ಸೇರಿದಾಗ ಸಿಗುವ ಪೌಷ್ಟಿಕಾಂಶಗಳೂ ಎರಡು ಪಟ್ಟು ಹೆಚ್ಚಾಗುತ್ತದೆ. ಇವತ್ತು ರಾಯಿತ ತಿಂದರೆ ಆಗುವ ಲಾಭದ ಬಗ್ಗೆ ಹೇಳುತ್ತೇವೆ.

ಮೊಸರು ಬಜ್ಜಿ ತಿಂದರೆ ಆಗುವ ಲಾಭ.

೧. ದೇಹ ಹೈಡ್ರೇಟ್ ಆಗಿರುತ್ತದೆ.
ದೇಹದಲ್ಲಿ ಯಾವುದೇ ಕಾರಣಕ್ಕೂ ನೀರಿನ (water) ಅಂಶ ಕಡಿಮೆ ಆಗದಂತೆ ನೋಡಿಕೊಳ್ಳುತ್ತದೆ ರಾಯಿತ. ಹಾಗಾಗಿ ರಾಯಿತ ತಿಂದರೆ ಡಿಹೈಡ್ರೇಶನ್ ಆಗುವುದಿಲ್ಲ

೨. ಇಮ್ಯೂನಿಟಿ:
ವಿಟಮಿನ್ ಸಿ, ಇದರ ಅತ್ಯುತ್ತಮ ಮೂಲ ಮೊಸರು (Curd). ಈರುಳ್ಳಿಯಲ್ಲೂ ವಿಟಮಿನ್ ಸಿ ಸಿಗುತ್ತದೆ. ಮೊಸರು ಮತ್ತು ಈರುಳ್ಳಿಯಲ್ಲಿ (Onion) ಸಿಗುವ ವಿಟಮಿನ್ ಸಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ.

೩. ಜೀರ್ಣಕ್ರಿಯೆ :
ಗ್ಯಾಸ್, ಅಜೀರ್ಣ, ಮಲಬದ್ದತೆ (Constipation) ಮುಂತಾದ ಸಮಸ್ಯೆ ಇದ್ದರೆ ರಾಯಿತ ನಿಮಗೆ ತುಂಬಾ ಲಾಭದಾಯಕ. ಮೊಸರಿನಲ್ಲಿ ಫೈಬರ್ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹಾಗಾಗಿ, ಮೊಸರು ತಿಂದರೆ ಜೀರ್ಣ ಕ್ರಿಯೆ (Curd for digestion) ಸರಾಗವಾಗಿ ನಡೆಯುತ್ತದೆ.

೪. ದೇಹಕ್ಕೆ ಶಕ್ತಿ
ಈರುಳ್ಳಿ ಮತ್ತು ಮೊಸರು ಹೊಂದಿರುವ ರಾಯಿತ ತಿಂದರೆ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ಈರುಳ್ಳಿ ಮತ್ತು ಮೊಸರಿನಲ್ಲಿ ಸಾಕಷ್ಟು ಪ್ರೊಟೀನ್, ವಿಟಮಿನ್, ಮಿನರಲ್ಸ್ ಲಭ್ಯ ವಿರುತ್ತದೆ. ಇವು ವಿಕ್ನೆಸ್ ದೂರ ಮಾಡುತ್ತದೆ.

BIG NEWS: ಶಾಲೆಗಳ ಪುನಾರಂಭದ ಕುರಿತು ಸಚಿವ ಕೆ. ಸುಧಾಕರ್​ ಮಹತ್ವದ ಹೇಳಿಕೆ

June 22, 2021

 


ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯ ಕ್ರಮೇಣವಾಗಿ ಇಳಿಕೆಯಾಗುತ್ತಿದೆ. ಆದರೆ ಇದರ ನಡುವೆಯೇ ಮೂರನೇ ಅಲೆಯ ಭಯ ಕೂಡ ಹುಟ್ಟಿಕೊಂಡಿದೆ. ಕೊರೊನಾ ಮೂರನೆ ಅಲೆಯಲ್ಲಿ ಮಕ್ಕಳಿಗೆ ಡೇಂಜರ್​ ಕಾದಿದೆ ಎಂಬ ಆತಂಕದ ನಡುವೆಯೂ ಶಾಲೆಗಳ ಪುನಾರಂಭಕ್ಕೆ ಡಾ.ದೇವಿ ಶೆಟ್ಟಿ ಸಮಿತಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ರಾಜ್ಯ ಸರ್ಕಾರಕ್ಕೆ ಡಾ. ದೇವಿ ಶೆಟ್ಟಿ ಸಮಿತಿ ನೀಡಿರುವ ಸಲಹೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್​ ಶಾಲೆ ಆರಂಭ ಮಾಡೋದು ಅನ್ನೋದು ತುಂಬಾನೇ ಸೂಕ್ಷ್ಮದ ವಿಚಾರ. ಒಮ್ಮೆ ಶಾಲೆಯನ್ನ ಆರಂಭ ಮಾಡಿಬಿಟ್ಟರೆ ಮತ್ತೆ ನಿಲ್ಲಿಸೋದು ಅಷ್ಟು ಸುಲಭವಲ್ಲ. ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಡಾ. ದೇವಿ ಶೆಟ್ಟಿ ಸಮಿತಿ ನೀಡಿರುವ ಸಲಹೆಯ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ತೇವೆ ಎಂದು ಹೇಳಿದ್ರು.

ರಾಜ್ಯದಲ್ಲಿ ಕೊರೊನಾ ಕಾರಣದಿಂದಾಗಿ ಬಂದ್​ ಆಗಿರುವ ಶಾಲೆ ಹಾಗೂ ಕಾಲೇಜುಗಳನ್ನ ಪುನಾರಂಭಿಸಲು ಡಾ. ದೇವಿಶೆಟ್ಟಿ ಸಮಿತಿ ಸಲಹೆ ನೀಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಹಂತಹಂತವಾಗಿ ಶಾಲಾ - ಕಾಲೇಜುಗಳನ್ನ ಆರಂಭಿಸಬಹುದು. ಮೊದಲ ಹಂತದಲ್ಲಿ ಕಾಲೇಜು, ಎರಡನೇ ಹಂತದಲ್ಲಿ ಪ್ರೌಢಶಾಲೆ ಹಾಗೂ ಮೂರನೇ ಹಂತದಲ್ಲಿ 3 ರಿಂದ 7ನೇ ತರಗತಿ ಇದೇ ರೀತಿ ಮುಂದುವರಿಸುತ್ತಾ ಹೋಗಬಹುದು.

ಪ್ರತಿ ದಿನ ಶಾಲೆ ಹಾಗೂ ಕಾಲೇಜುಗಳನ್ನ ತೆರೆಯಲು ಸಾಧ್ಯವಾಗದೇ ಇದ್ದಲ್ಲಿ ದಿನ ಬಿಟ್ಟು ದಿನ ಇಲ್ಲವೇ ಪಾಳಿ ಪ್ರಕಾರ ತರಗತಿಗಳನ್ನ ನಡೆಸಬಹುದಾಗಿದೆ. ಶಾಲೆಗಳನ್ನ ತೆರೆಯಬೇಕೋ ಬೇಡವೋ ಎಂಬ ವಿಚಾರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನ ಸ್ಥಳೀಯ ಅಧಿಕಾರಿಗಳಿಗೆ ನೀಡಿ. ಸ್ಕೂಲ್​ ಬಸ್​​ನ ಚಾಲಕರಿಗೂ ಕೊರೊನಾ ಲಸಿಕೆಯನ್ನ ನೀಡಿ. ಶಾಲೆಗಳನ್ನ ಆರಂಭಿಸೋದ್ರಿಂದ ಲಾಭ ಹಾಗೂ ನಷ್ಟ ಎರಡೂ ಕಾದಿದೆ. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಿ. ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಮಾಡಿ ಎಂಬಿತ್ಯಾದಿ ಸಲಹೆಗಳನ್ನ ಡಾ. ದೇವಿ ಶೆಟ್ಟಿ ಸಮಿತಿ ಸರ್ಕಾರಕ್ಕೆ ನೀಡಿದೆ.

ಮಹಿಳೆಯನ್ನು ಅಪಹರಿಸಿದ ಏಲಿಯನ್ಸ್ : ತನಗೆ ಅನ್ಯಗ್ರಹ ಜೀವಿಯೊಂದಿಗೆ ಲವ್ ಆಗಿದೆ ಎಂದ ಬ್ರಿಟಿಷ್ ಮಹಿಳೆ

June 21, 2021

 


ನ್ಯೂಸ್ ಡೆಸ್ಕ್ : ಅಬ್ಬಿ ಬೆಲಾ ಎಂಬ ಬ್ರಿಟಿಷ್ ಮಹಿಳೆ ಅಪರಿಚಿತ ಹಾರುವ ವಸ್ತುವಿನಲ್ಲಿ (ಯುಎಫ್ ಒ) ಅನ್ಯಲೋಕದ ಎಲಿಯನ್ಸ್ ಗುಂಪು ತನ್ನನ್ನು ಅಪಹರಿಸಿದೆ ಎಂದು ವಿಚಿತ್ರ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಗೊಂದಲಮಯ ಹೇಳಿಕೆ ನೀಡಿದ್ದು, ಮಹಿಳೆ ಆಂಡ್ರೋಮಿಡಾ ಗ್ಯಾಲಕ್ಸಿ ಮೂಲದ ಸುಧಾರಿತ ಏಲಿಯನ್ ನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿದರು.

ಅನ್ಯಗ್ರಹಜೀವಿಯನ್ನು ಪ್ರೀತಿಸುತ್ತಿರುವ ಮಹಿಳೆ

ಅಬ್ಬಿ ಬೆಲಾ ಈ ತಿಂಗಳು ತನ್ನ ಮಲಗುವ ಕೋಣೆಯ ಕಿಟಕಿಯ ಮೂಲಕ ಬಂದ ಎಲಿಯನ್ಸ್ ಗುಂಪು ತನ್ನನ್ನು ಅಪಹರಿಸಿದೆ ಎಂದು ಬಹಿರಂಗಪಡಿಸಿದಳು. ನಟಿಯೂ ಆಗಿರುವ ಮಹಿಳೆ ತನ್ನ ಅನ್ಯಲೋಕದ ಪ್ರೇಮಿ ಭೂಮಿಯ ಮೇಲಿನ ಯಾವುದೇ ಪುರುಷನಿಗಿಂತ ಉತ್ತಮ ಎಂದು ಹೇಳಿದ್ದಾರೆ. ಅನ್ಯಲೋಕದ ಪ್ರೇಮಿಯೊಂದಿಗೆ ತನ್ನ ಮುಂದಿನ ಡೇಟ್ ಗಾಗಿ ಕಾಯುತ್ತಿದ್ದೇನೆ ಎಂದು ಅಬ್ಬಿ ಹೇಳಿದರು

'ಭೂಮಿಯ ಮೇಲಿನ ಮನುಷ್ಯರ ಬಗ್ಗೆ ನನಗೆ ಬೇಸರವಾಗಿದೆ.

ಅನ್ಯಗ್ರಹಜೀವಿ ನನ್ನನ್ನು ಅಪಹರಿಸಬೇಕೆಂದು ಬಯಸುವ ಬಗ್ಗೆ ನಾನು ಆನ್ ಲೈನ್ ನಲ್ಲಿ ತಮಾಷೆ ಮಾಡುತ್ತಿದ್ದೆ. ನಂತರ ನಾನು ಪ್ರತಿ ರಾತ್ರಿ ಬಿಳಿ ಬೆಳಕಿನ ಕನಸು ಕಾಣಲು ಪ್ರಾರಂಭಿಸಿದೆ. ಒಂದು ರಾತ್ರಿ, ನನ್ನ ಕನಸಿನಲ್ಲಿ ಒಂದು ಧ್ವನಿ ಹೇಳಿತು, 'ಸಾಮಾನ್ಯ ಸ್ಥಳದಲ್ಲಿ ಕಾಯಿರಿ'. ಮರುದಿನ ಸಂಜೆ, ನಾನು ನನ್ನ ತೆರೆದ ಕಿಟಕಿಯ ಪಕ್ಕದಲ್ಲಿ ಕುಳಿತೆ. ನಾನು ನಿದ್ರೆಗೆ ಜಾರುತ್ತಿದ್ದಂತೆ, ಹೊರಗೆ ಹಾರುವ ತಟ್ಟೆ ಕಾಣಿಸಿಕೊಂಡಿತು. ಪ್ರಕಾಶಮಾನವಾದ ಹಸಿರು ಕಿರಣವಿತ್ತು, ಅದು ನನ್ನನ್ನು ಯುಎಫ್ ಒಗೆ ಸಾಗಿಸಿತು, 'ಎಂದು ಅಬ್ಬಿ ಹೇಳಿದರು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.

ತಾನು ಭೇಟಿಯಾದ ಅನ್ಯಗ್ರಹಜೀವಿಗಳು ಮಾನವರಿಗೆ ಹೋಲುತ್ತವೆ, ಆದರೆ ಅವರು ತುಂಬಾ ಎತ್ತರ ಮತ್ತು ತೆಳ್ಳಗಿದ್ದರು ಎಂದು ಅಬ್ಬಿ ಹೇಳಿಕೊಂಡರು. ಅನ್ಯಗ್ರಹಜೀವಿಗಳೊಂದಿಗಿನ ತನ್ನ ಮೊದಲ ಮುಖಾಮುಖಿ ಕೇವಲ ೨೦ ನಿಮಿಷಗಳವರೆಗೆ ಮಾತ್ರ ನಡೆಯಿತು ಮತ್ತು ಅವಳನ್ನು ಸುರಕ್ಷಿತವಾಗಿ ತನ್ನ ಮನೆಗೆ ಹಿಂತಿರುಗಿಸಲಾಯಿತು ಎಂದು ಅವಳು ಸ್ಪಷ್ಟಪಡಿಸಿದಳು. ಬ್ರಿಟಿಷ್ ಮಹಿಳೆ ಈಗ ಅನ್ಯಗ್ರಹಜೀವಿಗಳ ಮುಂದಿನ ಭೇಟಿಗಾಗಿ ಕಾಯುತ್ತಿದ್ದಾಳೆ, ಏಕೆಂದರೆ ಅವಳು ಅವರೊಂದಿಗೆ ಆಂಡ್ರೋಮಿಡಾ ಗ್ಯಾಲಕ್ಸಿಗೆ ಭೇಟಿ ನೀಡಲು ಯೋಜಿಸುತ್ತಿದ್ದಾಳೆ.

ಮತ್ತೊಂದು ಸೆನ್ಸೇಷನಲ್ ಅನ್ಯಲೋಕದ ಅಪಹರಣ ಕಥೆ
ಕೆಲವು ವಾರಗಳ ಹಿಂದೆ, ಇನ್ನೊಬ್ಬ ಬ್ರಿಟಿಷ್ ಮಹಿಳೆ ಪೌಲಾ ಸ್ಮಿತ್ ಕೂಡ ಇದೇ ರೀತಿಯ ಅನ್ಯಲೋಕದ ಅಪಹರಣದ ಕಥೆಯನ್ನು ಹಂಚಿಕೊಂಡಿದ್ದರು. ಪೌಲಾ ತನ್ನ ಬಾಲ್ಯದಲ್ಲಿ ಅನ್ಯಗ್ರಹಜೀವಿಗಳಿಂದ ಅಪಹರಿಸಲ್ಪಟ್ಟಿದ್ದಾಳೆ ಎಂದು ಹೇಳಿಕೊಂಡಳು, ಮತ್ತು ಅಂದಿನಿಂದ ಅದು ಮುಂದುವರೆದಿದೆ.

ಪೌಲಾ ಪ್ರಕಾರ, ಅನ್ಯಗ್ರಹಜೀವಿಗಳು ಅವಳನ್ನು ೫೦ ಕ್ಕೂ ಹೆಚ್ಚು ಬಾರಿ ಅಪಹರಿಸಿದರು ಮತ್ತು ಯುಎಫ್ ಒ ಅದರ ಅಂಚುಗಳಲ್ಲಿ ದೀಪಗಳನ್ನು ಹೊಂದಿರುವ ಬೂಮರಾಂಗ್ ಆಕಾರವನ್ನು ಹೊಂದಿದೆ ಎಂದು ಬಹಿರಂಗಪಡಿಸಿದರು.

ನನ್ನ ಕುಟುಂಬದ ಪ್ರಕಾರ, ನಾನು ನಾಲ್ಕು ಗಂಟೆಗಳ ಕಾಲ ಕಾಣೆಯಾಗಿದ್ದೆ, ಆದರೆ ನಿಜವಾಗಿ ಏನು ನಡೆಯಿತು ಎಂಬುದರ ಬಗ್ಗೆ ನನಗೆ ನೆನಪಿಲ್ಲ. ಅಂದಿನಿಂದ, ಅನುಭವಗಳು ನಿಂತಿಲ್ಲ. ನನ್ನ ಮಲಗುವ ಕೋಣೆಯ ಕಿಟಕಿ ಮತ್ತು ಹಾಸಿಗೆಯಿಂದ ನನ್ನನ್ನು ಕರೆದೊಯ್ಯಲಾಗಿದೆ' ಎಂದು ಸ್ಮಿತ್ ಹೇಳಿದರು.

ರಾತ್ರಿ ಊಟ ಮಾಡಿದ ಬಳಿಕ ಸ್ನಾನ ಮಾಡುವ ಅಭ್ಯಾಸ ಇದೆಯೇ? ಹಾಗಿದ್ದರೆ ಅದರಿಂದ ಉಂಟಾಗುವ ಸಮಸ್ಯೆ ಬಗ್ಗೆ ಗಮನಿಸಿ

June 21, 2021

 


ಕೆಲಸದ ಒತ್ತಡ, ಆರ್ಥಿಕ ಹೊರೆ, ಇನ್ನಿತರ ಸಮಸ್ಯೆಗಳಿಂದ ಪ್ರತಿದಿನ ಹಲವರು ಮಿಷನ್​ನಂತೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹೆಚ್ಚು ಸೂಕ್ತವಾಗಿದೆ. ಕಾರಣ ಮನಸ್ಸು ಮತ್ತು ದೇಹದ ಸಮತೋಲವನ್ನು ಕಾಯ್ದುಕೊಳ್ಳಲು ಯಾವಾಗಲೂ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಬೇಕು. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ. ಆದರೆ ಆಹಾರ ಸೇವಿಸುವ ಸಮಯದ ಬಗ್ಗೆ ಹಲವರಲ್ಲಿ ಗೊಂದಲಗಳಿದೆ. ಅದರಲ್ಲೂ ರಾತ್ರಿ ಊಟ ಮಾಡುವಾಗ ವಿಶೇಷ ಕಾಳಜಿ ಅಗತ್ಯ. ಕೆಲವರು ಸ್ನಾನ ಮಾಡಿ ಊಟ ಮಾಡುತ್ತಾರೆ. ಮತ್ತೆ ಕೆಲವರಿಗೆ ಊಟ ಮಾಡಿದ ಕೂಡಲೆ ಮಲಗುವ ಅಭ್ಯಾಸವಿದೆ. ಹೀಗೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಸೂಚಿಸುತ್ತಾರೆ. ಹಾಗಿದ್ದರೆ ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಹೀಗಿದೆ.

ರಾತ್ರಿ ಊಟ ಮಾಡಿದ ಕೂಡಲೇ ಸ್ನಾನ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಹೊಟ್ಟೆ ನೋವು ಮತ್ತು ಸೆಳೆತದಂತಹ ಸಮಸ್ಯೆಗಳ ಸಾಧ್ಯತೆಯಿದೆ.

ಊಟ ಮಾಡಿದ ನಂತರ ಸ್ನಾನ ಮಾಡುವುದು ಒಳ್ಳೆಯದೋ? ಅಥವಾ ಕೆಟ್ಟದ್ದೋ?
ರಾತ್ರಿ ಊಟ ಮಾಡಿದ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇದರ ಪರಿಣಾಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಉಂಟಾಗುತ್ತದೆ. ಇದರಿಂದಾಗಿ ವಾಂತಿ, ಹುಣ್ಣು, ಆಮ್ಲೀಯತೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ನಾಡಿ ದರವೂ ಹೆಚ್ಚಾಗುತ್ತದೆ. ಇದು ಮೂಳೆ ಸೆಳೆತ ಮತ್ತು ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಊಟದ ನಂತರ ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಬಹುದೇ?
ಆಹಾರ ಸೇವಿಸಿದ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವ ಬದಲು ನೀವು ತಣ್ಣಗಿನ ನೀರಿನಿಂದ ಸ್ನಾನ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ತಣ್ಣಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದ ಉಷ್ಣಾಂಶದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸಾಮಾನ್ಯವಾಗಿರುತ್ತದೆ. ಸೇವಿಸುವ ಆಹಾರದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸಲು ಸಹ ಇದು ಸಹಾಯ ಮಾಡುತ್ತದೆ. ಆದಾಗ್ಯೂ, ಊಟ ಮಾಡಿ ಸುಮಾರು 20 ನಿಮಿಷಗಳ ನಂತರ ಸ್ನಾನ ಮಾಡುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ. ರಾತ್ರಿ ಊಟದ ನಂತರ ನೀವು 30 ನಿಮಿಷಗಳ ಕಾಲ ಬೇರೆ ಕೆಲಸದಲ್ಲಿ ನಿರತರಾಗಬಹುದು, ಬ್ರಷ್ ಮಾಡಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹರಳೆಣ್ಣೆಯಲ್ಲಿ ಇರುವಂತಹ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ

June 21, 2021

 


ಹರಳೆಣ್ಣೆಯಲ್ಲಿ ಇರುವಂತಹ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಯಾಕೆಂದರೆ ಇದರ ಬಳಕೆ ಮಾಡುವ ಜನರು ತುಂಬಾ ಕಡಿಮೆ. ಆದರೆ ಹರಳೆಣ್ಣೆಯು ನಮ್ಮ ಆರೋಗ್ಯ ಹಾಗೂ ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ತೂಕ ಇಳಿಸಲು ಬಯಸುವಂತಹ ಜನರಿಗೆ ತುಂಬಾ ನೆರವಿಗೆ ಬರಲಿದೆ. ಹೌದು, ಹರಳೆಣ್ಣೆ ಬಳಸಿಕೊಂಡು ಹೊಟ್ಟೆಯಲ್ಲಿರುವ ಕೊಬ್ಬನ್ನು ಕರಗಿಸಬಹುದು. ಹೆಚ್ಚಿನವರು ಎಣ್ಣೆಯು ತೂಕ ಇಳಿಸುವವರಿಗೆ ಒಳ್ಳೆಯದಲ್ಲ ಎನ್ನುವ ಭಾವನೆ ಹೊಂದಿರುವರು. ಆದರೆ ಕೊಬ್ಬು ನಮ್ಮ ದೇಹಕ್ಕೆ ಅವಶ್ಯಕವಾಗಿ ಬೇಕು. ಆದರೆ ಅದು ಅತಿಯಾದ ವೇಳೆ ಸಮಸ್ಯೆಗಳು ಕಾಡಲು ಆರಂಭಿಸುವುದು. ಇದರಿಂದ ಕೊಬ್ಬು ದೇಹದಲ್ಲಿ ಹಿತಮಿತವಾಗಿ ಇರಬೇಕು. ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಕೂಡ ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು.

1.ಸಂಪೂರ್ಣವಾಗಿ ಕೊಬ್ಬು ಕಡೆಗಣಿಸಬೇಡಿ

ಕೊಬ್ಬು ನಮ್ಮ ದೇಹಕ್ಕೆ ಬೇಕಾಗಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ ಮತ್ತು ಇದರಿಂದ ನೀವು ಎಣ್ಣೆಗೆ ಸಂಪೂರ್ಣವಾಗಿ ಇಲ್ಲವೆಂದು ಹೇಳಲು ಆಗಲ್ಲ.

ನಮ್ಮ ಆಹಾರ ಹಾಗೂ ಜೀವನದಲ್ಲಿ ಯಾವ ಎಣ್ಣೆಯು ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎಂದು ತಿಳಿದು ಅದರಲ್ಲಿ ನಾವು ಜಾಣ ಆಯ್ಕೆ ಮಾಡಿಕೊಳ್ಳಬೇಕು. ಕೆಲವೊಂದು ಎಣ್ಣೆ ಸೇವಿಸಿದರೆ ಅದರಿಂದ ತೂಕ ಕಳೆದುಕೊಳ್ಳಲು ನೆರವಾಗುವುದು. ಇದರಲ್ಲಿ ಒಂದು ಎಣ್ಣೆ ಹರಳೆಣ್ಣೆ.

2.ಹರಳೆಣ್ಣೆಯು ಹೇಗೆ ತೂಕ ಕಳೆದುಕೊಳ್ಳಲು ನೆರವಾಗುವುದು?

ಹರಳೆಣ್ಣೆಯಲ್ಲಿ ವಿವಿಧ ರೀತಿಯ ಲಾಭಗಳು ಇರುವ ಪರಿಣಾಮವಾಗಿ ಇದನ್ನು ಹಲವು ವಿಧದಿಂದ ಬಳಸಲಾಗುತ್ತದೆ. ಇದು ಮಲಬದ್ಧತೆ ನಿವಾರಣೆ ಮಾಡುವುದರಿಂದ ಹಿಡಿದು ಕೂದಲಿ ಬೆಳವಣಿಗೆಗೆ ಕೂಡ ನೆರವಾಗುವುದು. ಈ ಎಣ್ಣೆಯಲ್ಲಿ ಇರುವಂತಹ ತುಂಬಾ ಲಾಭಕಾರಿ ಅಂಶವೆಂದರೆ ಇದರಲ್ಲಿನ ರಾಸಾಯನಿಕ ಸಂಯೋಜನೆಯು ಸುಲಭವಾಗಿ ತೂಕ ಕಳೆದುಕೊಳ್ಳುವಂತೆ ಮಾಡುವುದು. ಈ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ರಿಕಿನೋಲಿಕ್ ಆಮ್ಲವಿದ್ದು, ಇದು ಒಳ್ಳೆಯ ಟ್ರೈಗ್ಲಿಸರೈಡ್ ಕೊಬ್ಬಿನಾಮ್ಲ ವಾಗಿದ್ದು, ಸಾಮಾನ್ಯವಾಗಿ ಇದು ಯಾವುದರಲ್ಲೂ ಕಂಡುಬರುವುದಿಲ್ಲ.

3.ಮನೆಯಲ್ಲಿ ಹರಳೆಣ್ಣೆ ಇದ್ದರೆ ಇಷ್ಟೇ ಸಾಕು, 'ಮಲಬದ್ಧತೆ' ನಿವಾರಿಸಬಹುದು!

ಇದೊಂದು ಬೊಜ್ಜು ವಿರೋಧಿ ಅಂಶವಾಗಿದೆ ಮತ್ತು ವಿರೇಚಕವಾಗಿ ಕೆಲಸ ಮಾಡುವ ಕಾರಣದಿಂದಾಗಿ ತೂಕ ಕಳೆದುಕೊಳ್ಳಲು ಸಹಕಾರಿ ಮತ್ತು ಬೇಕಾದಂತೆ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು. ನಿಯಮಿತವಾಗಿ ಆಹಾರ ಕ್ರಮದಲ್ಲಿ ಹರಳೆಣ್ಣೆ ಸೇವನೆ ಮಾಡಿದರೆ ಅದರಿಂದ ಚಯಾಪಚಯ ಕ್ರಿಯೆಯು ಹೆಚ್ಚಾಗುವುದು. ಇದರ ಪರಿಣಾಮವಾಗಿ ಬೇಗನೆ ತೂಕ ಇಳಿಸಲು ಸಹಕಾರಿ. ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಹೆಚ್ಚಿಸುತ್ತದೆ.

4.ಚಯಾಪಚಯ ಕ್ರಿಯೆ ಸುಧಾರಿಸುವುದು

ದೇಹದಲ್ಲಿ ನೀರಿನಾಂಶ ನಿಲ್ಲುವುದು ತೂಕ ಹೆಚ್ಚಳವಾಗಲು ಮತ್ತೊಂದು ಕಾರಣವಾಗಿದೆ. ಆದರೆ ಹರಳೆಣ್ಣೆಯು ಈ ಸಮಸ್ಯೆ ನಿವಾರಣೆ ಮಾಡಲು ನೆರವಾಗುವುದು. ಹರಳೆಣ್ಣೆ ಹಚ್ಚಿಕೊಳ್ಳುವುದರಿಂದ ಅಥವಾ ಸೇವನೆ ಮಾಡಿದರೆ ಅದು ಹೊಟ್ಟೆ ಮತ್ತು ಕರುಳನ್ನು ಶುದ್ಧೀಕರಿಸುವುದು ಮತ್ತು ಚಯಾಪಚಯ ಕ್ರಿಯೆ ಸುಧಾರಣೆ ಮಾಡಲು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಶುದ್ಧೀಕರಿಸುವುದು ಮತ್ತು ದೇಹವು ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುವುದು.

ಇದನ್ನು ಹೇಗೆ ಸೇವಿಸಬೇಕು

ಬೇರೆಲ್ಲಾ ಎಣ್ಣೆಗಳಂತೆ ಹರಳೆಣ್ಣೆಯು ಒಳ್ಳೆಯ ರುಚಿ ಹೊಂದಿಲ್ಲ ಮತ್ತು ಇದು ಒಂದು ಕಟು ಪರಿಮಳ ಹೊಂದಿದೆ. ಸ್ವಲ್ಪ ಪ್ರಮಾಣದಲ್ಲಿ ಇದನ್ನು ಸೇವಿಸಿದರೆ ಆಗ ನಿಮಗೆ ತೂಕ ಕಳೆದುಕೊಳ್ಳಲು ನೆರವಾಗಲಿದೆ ಮತ್ತು ಆರೋಗ್ಯವು ಸುಧಾರಣೆ ಆಗುವುದು. ವಯಸ್ಸು, ಸಹಿಷ್ಣುತೆ ಮತ್ತು ಉದ್ದೇಶವನ್ನು ನೋಡಿಕೊಂಡು ನಿಮ್ಮ ಅಗತ್ಯಕ್ಕೆ ಹರಳೆಣ್ಣೆ ಬಳಸಿಕೊಳ್ಳಿ.

5.ಚರ್ಮದ ಕಾಂತಿ-ಆರೋಗ್ಯವೃದ್ಧಿಗೆ ಒಂದೆರಡು ಚಮಚ ಹರಳೆಣ್ಣೆ ಸಾಕು!

ತೂಕ ಕಳೆದುಕೊಳ್ಳಲು ಬಯಸುತ್ತಿದ್ದರೆ, ಆಗ ನೀವು ದಿನಕ್ಕೆ ಒಂದು ಚಮಚ ಎಣ್ಣೆಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ನಿಮಗೆ ಇದರ ರುಚಿ ಹಿಡಿಸದೆ ಇದ್ದರೆ ಆಗ ನೀವು ಜ್ಯೂಸ್ ಅಥವಾ ಶುಂಠಿ ರಸಕ್ಕೆ ಇದನ್ನು ಹಾಕಿಕೊಂಡು ಕುಡಿಯಬೇಕು. ಇದರಿಂದ ತೂಕ ಇಳಿಸುವ ನಿಮ್ಮ ಗುರಿಯನ್ನು ಬೇಗನೆ ಸಾಧಿಸಲು ಸಾಧ್ಯವಾಗಲಿದೆ. ಇದರ ಹೊರತಾಗಿ ಹರಳೆಣ್ಣೆಯನ್ನು ನೀವು ಮೈಗೆ ಹಚ್ಚಿಕೊಂಡರೂ ಅದು ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಹೊಟ್ಟೆಯ ಭಾಗಕ್ಕೆ ಬಿಸಿ ಮಾಡಿಕೊಂಡ ಹರಳೆಣ್ಣೆ ಹಚ್ಚಿಕೊಂಡರೆ ಆಗ ಖಂಡಿತವಾಗಿಯೂ ಅದು ನೆರವಾಗುವುದು.

6.ಎಚ್ಚರಿಕೆ

ಹರಳೆಣ್ಣೆಯು ನಿಮಗೆ ತುಂಬಾ ಆರೋಗ್ಯಕಾರಿ ಮತ್ತು ಇದು ತೂಕ ಇಳಿಸಲು ನಿಮಗೆ ನೆರವಾಗಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನೀವು ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಕೂಡ ಮಾಡಿಕೊಂಡು ಹೋಗಬೇಕು. ಇದರಲ್ಲಿ ಒಳ್ಳೆಯ ವಿರೇಚಕ ಗುಣವಿರುವ ಕಾರಣದಿಂದಾಗಿ ಇದನ್ನು ಎಚ್ಚರಿಕೆಯಿಂದ ಕುಡಿಯಬೇಕು ಮತ್ತು ಕೆಲವೊಂದು ಸಂದರ್ಭದಲ್ಲಿ ಅತಿಸಾರದಂತಹ ಪರಿಸ್ಥಿತಿ ನಿರ್ಮಾಣ ಮಾಡಬಹುದು. ಹರಳೆಣ್ಣೆ ಸೇವನೆ ಜತೆಗೆ ನೀವು ತೂಕ ಇಳಿಸಲು ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು. ಇದರಲ್ಲಿ ಮುಖ್ಯವಾಗಿ ಆರೋಗ್ಯಕಾರಿ ಆಹಾರ, ಸಮತೋಲಿನ ಆಹಾರ ಕ್ರಮ ಮತ್ತು ನಿಯಮಿತ ವ್ಯಾಯಾಮವು ಅಗತ್ಯವಾಗಿರುವುದು.

7.ಹರಳೆಣ್ಣೆಯನ್ನು ಕಣ್ಣಿಗೆ ಹಾಕುವುದರಿಂದ ಕಣ್ಣು ನೋವು ದೂರವಾಗುತ್ತದೆ .

8.ಹರಳೆಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆನೋವು , ಕಣ್ಣು ಉರಿ , ಕಣ್ಣು ಕೆಂಪಗಾಗುವುದು ಮತ್ತು ದೇಹದ ಉಷ್ಣತೆ ಕಡಿಮೆಯಾಗುತ್ತದೆ .

9.ಹರಳೆಣ್ಣೆಯಲ್ಲಿ ಅಭ್ಯಂಗ ಸ್ನಾನ ಮಾಡಿದರೆ ವಾಯು ಕಾಯಿಲೆಗಳು ಗುಣವಾಗುತ್ತದೆ . ದೇಹದ ಆರೋಗ್ಯ ಸುಧಾರಿಸುತ್ತದೆ.

10.ಬಿಸಿ ಹಾಲು ಅಥವಾ ಕಾಫಿಯೊಂದಿಗೆ ಅಥವಾ ಶುಂಠಿಯ ರಸದೊಂದಿಗೆ ಹರಳೆಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಮಲಬದ್ಧತೆ ದೂರವಾಗುತ್ತದೆ . ಮಲಬದ್ಧತೆಗೆ ಇದು ಒಂದು ಉತ್ತಮ ಔಷಧ

11.ಒಂದು ಚಮಚ ಹರಳೆಣ್ಣೆಗೆ 1 ಚಮಚ ಶುಂಠಿ ರಸ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಸೈಂಧವ ಲವಣ ಬೆರೆಸಿ ತೆಗೆದುಕೊಂಡರೆ ಮಂಡಿ ಮತ್ತು ಕೀಲುಗಳಲ್ಲಿ ಉರಿ ಕಡಿಮೆಯಾಗುತ್ತದೆ

12.ಚಿಕ್ಕ ಮಕ್ಕಳಿಗೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಲಾಗದೆ ರಚ್ಚೆ ಹಿಡಿದು ಅಳುತ್ತಾರೆ, ಅಂತಹ ಸಮಯದಲ್ಲಿ, ಹರಳೆಣ್ಣೆ ಉಗರು ಬೆಚ್ಚಗೆ ಮಾಡಿ ಹೊಕ್ಕಳು, ತಲೆಗೆ, ಗುಪ್ತಾಂಗಕ್ಕೆ ಲೇಪಿಸಿದರೆ ಶೀಘ್ರ ಉಪಶಮನವಾಗಿ ರಚ್ಚೆ ನಿಲ್ಲಿಸುತ್ತಾರೆ. ಹರಳೆಣ್ಣೆಯಲ್ಲಿ ಹಿರಿಯರು ಸಹ ಇದೇರೀತಿ ಮಾಡುವುದರಿಂದ ಮೂತ್ರದಲ್ಲುರಿ, ಕಿಬ್ಬೊಟೆನೋವು, ಕಣ್ಣುಗಳ ಉರಿ ಮಾಯವಾಗುತ್ತೆ.

13. ಚಿಕ್ಕ ಮಕ್ಕಳಿಗೆ, ತಾಯಿಹಾಲು ಅಥವಾ ಹಸುವಿನ ಹಾಲಿನಲ್ಲಿ 4-5 ಹನಿ ಕಾಯಿಸಿದ ಹರಳೆಣ್ಣೆ ಕಲಸಿ ಕುಡಿಸುವುದರಿಂದ, ಸುಖಬೇಧಿಯಾಗಿ, ಹೊಟ್ಟೆ ಶುಭ್ರವಾಗುತ್ತೆ, ಹೊಟ್ಟೆನೋವು, ಅಗ್ನಿಮಾಂದ್ಯ ನಿವಾರಣೆಯಾಗಿ, ಹಸಿವು ಹೆಚ್ಚುತ್ತೆ.

14. ಹರಳೆಣ್ಣೆ ಉಗರು ಬೆಚ್ಚಗೆ ಮಾಡಿ ಚಿಕ್ಕ ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ 1-2 ಚಮಚ ಕುಡಿಸುವುದರಿಂದ, ಸುಖಭೇದಿಯಾಗಿ ಹೊಟ್ಟೆಯಲ್ಲಿನ ಕಲ್ಮಶಗಳೆಲ್ಲ ಮಲಮೂತ್ರದಲ್ಲಿ ಹೊರಬಂದು, ಹೊಟ್ಟೆ ಶುಭ್ರವಾಗಿ, ಹಸಿವು ಹೆಚ್ಚಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುತ್ತವೆ. ಹಿರಿಯರು ಸಹ ಇದೇ ರೀತಿಯಾಗಿ ಮಾಡಬಹುದು.

15. ದೃಷ್ಟಿ ಉತ್ತಮಗೊಳ್ಳುತ್ತೆ, ಮೂಗು, ಕೈಕಾಲು ನೋವು ಉರಿ ಮಾಯವಾಗಿ ದೇಹವು ಹಗುರವಾಗುತ್ತೆ. ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತೆ.

16. ಹರಳು ಎಲೆಗೆ, ಹರಳೆಣ್ಣೆ ಲೇಪಿಸಿ, ಬೆಂಕಿ ಕೆಂಡದಮೇಲೆ ಹಾಕಿ, ಉಗರು ಬೆಚ್ಚಗೆ ಮಾಡಿ, ರಕ್ತ ಕುರುವಿನ ಮೇಲೆ ಹಾಕಿ ಕಟ್ಟಿದರೆ, ಕುರು ಹೊಡೆದು, ಕಿವು ಹೊರಬಂದು, ಗಾಯ ಶೀಘ್ರ ವಾಸಿಯಾಗುತ್ತೆ. 17.ಹರಳೆಣ್ಣೆ ಹಾಗು ಕೊಬ್ಬರಿ ಎಣ್ಣೆಯನ್ನು ಸಮನಾಗಿ ಕಲಸಿ,ರಾತ್ರಿವೇಳೆ ಹೊಟ್ಟೆಗೆ ಲೇಪಿಸಬೇಕು, ಈಗೆ 2-3 ದಿನ ಮಾಡುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳುಗಳು ಸತ್ತು ಮಲದಲ್ಲಿ ಹೊರ ಬರುತ್ತವೆ. ದೇಹಕ್ಕೆಲ್ಲ ಮಸಾಜ್ ಮಾಡಿಕೊಂಡು 2 ಗಂಟೆಯ ನಂತರ ಸೀಗೆಕಾಯಿ ಬಳಸಿ ಬಿಸಿನೀರಲ್ಲಿ ಸ್ನಾನ ಮಾಡುವುದರಿಂದ ರಾತ್ರಿ ಸಮಯದಲ್ಲಿ ಸುಖನಿದ್ರೆ ಬರುತ್ತೆ. ದೇಹದಲ್ಲಿನ ಚರ್ಮದ ಆರೋಗ್ಯ ಕಾಪಾಡಿ, ಚರ್ಮದಲ್ಲಿ ನೆರಿಗೆಗಳು ಬರದಂತೆ ತಡೆಯೊಡ್ಡಿ, ವಯಸ್ಸಾದವರು ಸಹ ಯುವಕರಂತೆ ಕಾಣಲು ಸಹಕರಿಸುತ್ತೆ.

18.ಅಂಗೈ, ಅಂಗಾಲು, ಹಿಮ್ಮುಡಿ, ತುಟಿ ಹೊಡೆದು ರಕ್ತ ಸುರಿಯುತ್ತಿರುತ್ತೆ,ಅಂತಹ ಸಮಯದಲ್ಲಿ ಹರಳೆಣ್ಣೆ ಉಗರು ಬೆಚ್ಚಗೆ ಮಾಡಿ ಚೆನ್ನಾಗಿ ಮಸಾಜ್ ಮಾಡ್ಬೇಕು, ಈಗೆ 8-10 ದಿನ ಮಾಡಿದರೆ, ಒರಟು ಚರ್ಮವು ಮೃದುವಾಗಿ, ಸಮಸ್ಯೆ ದೂರವಾಗುತ್ತೆ.

19.ಮಲಬದ್ಧತೆಗೆ ಹರಳೆಣ್ಣೆ ಬಿಸಿಮಾಡಿ, ವಯಸ್ಸಿಗೆ ತಕ್ಕಂತೆ ಕುಡಿದರೆ, ಮಲವಿಸರ್ಜನೆ ಸುಗುಮವಾಗಿ, ಹೊಟ್ಟೆಯಲ್ಲಿನ ಕಲ್ಮಶಗಳೆಲ್ಲ ಹೊರಬಂದು, ಹೊಟ್ಟೆ ಶುಭ್ರವಾಗುತ್ತೆ.

20.ಹರಳೆಣ್ಣೆ ಉಗರು ಬೆಚ್ಚಗೆ ಮಾಡಿ ತಲೆಗೆ ಮಸಾಜ್ ಮಾಡಿಕೊಳ್ಳುವುದರಿಂದ, ಕೂದಲು ಉದರುವುದು ನಿಲ್ಲುತ್ತೆ, ತಲೆಯಲ್ಲಿನ ಸಿಬ್ಬು, ಹೊಟ್ಟು ನಿವಾರಣೆಯಾಗಿ ಮೆದಳಿನಲ್ಲಿರುವ, ವಿಷ ಪದಾರ್ಥಗಳು, ಕಲ್ಮಶಗಳು ಹೊರಬಂದು, ಮೆದಳಿನ ಕಾರ್ಯಕ್ಷಮತೆ ಹೆಚ್ಜಿ, ಸುಗುಮವಾಗಿ ಕಾರ್ಯನಿರ್ವಹಿಸುತ್ತೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ.

21. ಕೀಲುನೋವು ಊತ ಇದ್ದಾಗ, ಹರಳು ಎಲೆಗಳಿಗೆ, ಹರಳೆಣ್ಣೆ ಲೇಪಿಸಿ, ಬೆಂಕಿಕೆಂಡದ ಮೇಲೆ ಹಾಕಿ ಬಿಸಿಮಾಡಿ, ಕೀಲಿನಮೇಲೆ ಹಾಕಿ ಕಟ್ಟುಕಟ್ಟಿದರೆ, ಶೀಘ್ರ ನೋವು, ಊತ ನಿವಾರಣೆಯಾಗುತ್ತೆ.

22.ಭೂನೆಲ್ಲಿ ಹಾಗು ಹರಳು ಎಲೆ ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ದಿನ ಕುಡಿಯುತ್ತಾ ಬಂದರೆ ಹಳದಿ ಕಾಮಾಲೆ (ಜಾಂಡಿಸ್) ಗುಣವಾಗುತ್ತೆ.

23.ದೇಹದಲ್ಲಿನ ಕಪ್ಪು ಮಚ್ಚೆಗಳಿಂದ ಬಾಧಿಸುತ್ತಿದ್ದರೆ, ಹರಳು ಬೀಜಗಳನ್ನು ಹೊಡೆದು, ಹೊಟ್ಟು ತೆಗೆದು ಬಿಸಾಡಿ, ಒಳಗಿನ ಬೇಳೆಯನ್ನು 100 ಗ್ರಾಂ ಹಾಗು ಶುಂಠಿ 15 ಗ್ರಾಂ ತೆಗೆದುಕೊಂಡು, ನುಣ್ಣಗೆ ಅರೆದು, ಬೆಳಿಗ್ಗೆ ಸಂಜೆ ಒಂದು ಗೋಲಿಗಾತ್ರ, ಉಗರು ಬೆಚ್ಚಗಿನ ನೀರಲ್ಲಿ 3-4 ತಿಂಗಳು ತೆಗೆದುಕೊಂಡರೆ, ದೇಹದಲ್ಲಿನ ಕಪ್ಪು ಮಚ್ಚೆಗಳ ಸಮಸ್ಯೆ ನಿವಾರಣೆಯಾಗುತ್ತೆ.

24.ದಿನ ರಾತ್ರಿವೇಳೆ ಹರಳು ಎಲೆಗಳನ್ನು ಜಜ್ಜಿ, ಉಗರು ಬೆಚ್ಚಗೆ ಕಾಯಿಸಿದ ಹರಳೆಣ್ಣೆಯಲ್ಲಿ ಕಲಸಿ, ಕಿಬ್ಬೊಟ್ಟೆಯ ಮೇಲೆ ಹಾಕಿ ಕಟ್ಟುಕಟ್ಟಿದರೆ, ಋತಸ್ರಾವ ಸಮಸ್ಯೆಗಳು ನಿವಾರಣೆಯಾಗುತ್ತೆ.

25.ಹೊಟ್ಟು ತೆಗೆದ ಬೀಜಗಳನ್ನು ರಾತ್ರಿಯಲ್ಲ ಮೊಸರಲ್ಲಿ ನೆನಸಿಟ್ಟು, ಬೆಳಿಗ್ಗೆ ನುಣ್ಣಗೆ ಅರೆದು ನವೆ, ದದ್ದುಗಳ ಮೇಲೆ ಲೇಪಿಸುವುದರಿಂದ ವಾಸಿಯಾಗುತ್ತೆ.

26.ಒಂದು ಚಮಚ ಹರಳೆಣ್ಣೆ, ಒಂದು ಚಮಚ ನಿಂಬೇರಸ, ಒಂದು ಚಮಚ ಜೇನುತುಪ್ಪ, ಮೂರನ್ನು ಚೆನ್ನಾಗಿ ಮಿಶ್ರಣಮಾಡಿ, ಮುಖಕ್ಕೆ ಲೇಪನ ಮಾಡಿ, ಒಂದು ಗಂಟೆಯ ನಂತರ, ಕಡಲೆಹಿಟ್ಟಿನಿಂದ, ಮುಖ ತೊಳೆಯುವುದರಿಂದ, ಮುಖದಲ್ಲಿನ ಕಪ್ಪು ಕಲೆಗಳು ಮಯವಾಗಿ, ಮೊಡವೆಯಿಂದಾದ ರಂಧ್ರಗಳು ಮುಚ್ಚಿಕೊಂಡು, ಚರ್ಮವು ಮೃದುವಾಗಿ, ಕಾಂತಿಯಿಂದ ಹೊಳೆಯುತ್ತೆ.

ಫೇಸ್​ಬುಕ್​ನಲ್ಲಿ ಯುವತಿ ಹೆಸರಲ್ಲಿ ಅಶ್ಲೀಲ ಚಾಟಿಂಗ್: ಸಿಕ್ಕಿಬಿದ್ದ ಯುವಕನಿಗೆ ಮಹಿಳೆಯಿಂದ ಥಳಿತ​

June 21, 2021

 


ಕೊಡಗು: ಯುವತಿಯ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮೆಸೇಜ್​ ಮಾಡು ಯುವಕನನ್ನು ಉಪಾಯವಾಗಿ ಕರೆಸಿಕೊಂಡು ಥಳಿಸಿ, ಪೊಲೀಸರ ವಶಕ್ಕೆ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ ಸಮೀಪದ ಹಾಕತ್ತೂರಿನ ಅಶ್ರಪ್ ಎಂಬ ಯುವಕ ಕಳೆದ 15 ದಿನಗಳಿಂದ ಯುವತಿಯ ಹೆಸರಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಚಾಟಿಂಗ್​ ಮಾಡುತ್ತಿದ್ದ. ತನ್ನ ಹೆಸರು ಅರುಣಾ ಎಂದು ಹೇಳಿಕೊಂಡಿದ್ದ ಉಪಾಯವಾಗಿ ಆತನನ್ನು ಮಡಿಕೇರಿಗೆ ಕರೆಸಿಕೊಳ್ಳಲಾಗಿತ್ತು.

ಬಸ್​ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಆತನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಸಿಕ್ಕಿಬಿದ್ದಾಗ ನನ್ನೊಟ್ಟಿಗೆ ಮತ್ತಿಬ್ಬರು ಇದ್ದಾರೆ ಎಂದು ಆರೋಪಿ ಮಾಹಿತಿ ನೀಡಿದ್ದು, ಇವನ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಮಡಿಕೇರಿ ಪೊಲಿಸರು ಪ್ರಕರಣದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರಾ ಎಂಬ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ನೋಡಿ:ಕ್ಲಿಕ್ ಮಾಡಿ

ವಿದ್ಯಾರ್ಥಿಗಳೇ ಗಮನಿಸಿ : ರಾಜ್ಯದಲ್ಲಿ ಜುಲೈ 1 ರಿಂದ ತರಗತಿಗಳು ಆರಂಭ : ಸಚಿವ ಸುರೇಶ್ ಕುಮಾರ್

June 21, 2021

 


ಚಾಮರಾಜನಗರ : ಜುಲೈ 1 ರಿಂದ ತರಗತಿಗಳು ಆರಂಭವಾಗಲಿದ್ದು, ಆನ್ ಲೈನ್ ಮತ್ತು ದೂರದರ್ಶನದಿಂದಷ್ಟೇ ಪಾಠ ನಡೆಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಜುಲೈ 1 ರಿಂದ ತರಗತಿಗಳು ಆರಂಭವಾಗಲಿದ್ದು, ನೇರ ತರಗತಿ ಆರಂಭವಿಲ್ಲ. ಆನ್ ಲೈನ್ ಹಾಗೂ ದೂರದರ್ಶನದ ಮೂಲಕ ಶಿಕ್ಷಣ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿ ಪಡೆದು ಶಾಲೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚು ಹೆಚ್ಚು ಮಕ್ಕಳು ಸೇರುತ್ತಿದ್ದಾರೆ.

ಕಳೆದ ವರ್ಷ ಒಂದೂವರೆ ಲಕ್ಷದಷ್ಟು ಮಕ್ಕಳು ಸರ್ಕಾರಿ ಶಾಲೆಗೆ ಸೇರಿದ್ದು, ಈ ಬಾರಿಯೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇಂದು ಅತಿ ದೀರ್ಘ ಹಗಲುಳ್ಳ ದಿನ; ಈ ಕುರಿತು ತಿಳಿಯಲೇಬೇಕಾದ ಕೆಲವೊಂದಿಷ್ಟು ಮಾಹಿತಿ ಇಲ್ಲಿದೆ

June 21, 2021


 ಇಂದು (ಜೂನ್​ 21, ಸೋಮವಾರ) ಈ ವರ್ಷದಲ್ಲಿ ದೀರ್ಘಕಾಲದ ಹಗಲನ್ನು ಹೊಂದಿರುತ್ತೇವೆ. ಆದ್ದರಿಂದ ಇದನ್ನು ಬೇಸಿಗೆಯಲ್ಲಿನ ಆಯನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಉತ್ತರ ಗೋಳಾರ್ಧದಲ್ಲಿ ಅತಿ ದೀರ್ಘ ಹಗಲುಳ್ಳ ದಿನ ಇದಾಗಿದೆ. ಸೂರ್ಯನು ಕಾಲ್ಪನಿಕ ಉಷ್ಣಾಂಶದ ಕರ್ಕಾಟಕ ವೃತ್ತ ಅಥವಾ 23.5 ಡಿಗ್ರಿ N ಅಕ್ಷಾಂಶದ ಮೇಲೆ ನೇರವಾಗಿ ಬೀಳುವಾಗ ಈ ಬೇಸಿಗೆಯಲ್ಲಿ ಆಯನ ಸಂಕ್ರಾಂತಿ ದಿನ ಸಂಭವಿಸುತ್ತದೆ. ಈ ದಿನದ ನಂತರದಲ್ಲಿ ಹಗಲು ಕಡಿಮೆಯಾಗಿ ರಾತ್ರಿಯ ಅವಧಿ ಹೆಚ್ಚಾಗಲು ಪ್ರಾರಂಭಿಸುತ್ತದೆ ಹಾಗೂ ಅತಿ ದೀರ್ಘ ಹಗಲು ಹೊಂದಿರುವ ದಿನವನ್ನು ಸೂಚಿಸುತ್ತದೆ.

ಆಯನ ಸಂಕ್ರಾಂತಿ ಎಂಬುದು ಲ್ಯಾಟೀನ್​ ಭಾಷೆಯಿಂದ ಬಂದಿದೆ. ವರ್ಷದಲ್ಲಿ ಎರಡು ಬಾರಿ ಪ್ರತಿ ಗೋಳಾರ್ಧದಲ್ಲಿ ಈ ಆಯನ ಸಂಕ್ರಾಂತಿ ದಿನ ಗೋಚರವಾಗುತ್ತದೆ. ಬೇಸಿಗೆಯ ಸಂದರ್ಭದಲ್ಲಿ ಜೂನ್​ ತಿಂಗಳಿನಲ್ಲಿ ಹಾಗೂ ಚಳಿಗಾಲದ ಸಂದರ್ಭದಲ್ಲಿ ಡಿಸೆಂಬರ್​ ತಿಂಗಳಿನಲ್ಲಿ ಇದು ಕಂಡು ಬರುತ್ತದೆ.

ಜೂನ್​ ತಿಂಗಳಿನಲ್ಲಿ ಉತ್ತರ ಗೋಳಾರ್ಧದಲ್ಲಿ ಬರುವ ಅಮೆರಿಕಾ, ರಷ್ಯಾ, ಕೆನಡಾ ಭಾರತ ಮತ್ತು ಚೀನಾದಲ್ಲಿ ದೀರ್ಘ ಹಗಲು ಸಂಭವಿಸುತ್ತದೆ. ಜತೆಗೆ ಆಸ್ಟ್ರೇಲಿಯಾ, ಅರ್ಜೆಂಟಿನಾ, ದಕ್ಷಿಣ ಆಫ್ರಿಕಾ ಭಾಗಗಳಲ್ಲಿ ಇದು ವರ್ಷದ ಕಡಿಮೆ ಹಗಲು ಇರುವ ದಿನವಾಗಿರುತ್ತದೆ.

ಈ ದಿನದಂದು ಸೂರ್ಯನ ಶಾಖ ದಿರ್ಘವಾಗಿರುತ್ತದೆ. ನಾಸಾದ ಪ್ರಕಾರ ಈ ದಿನ ಭೂಮಿಯು ಸೂರ್ಯನಿಂದ ಬರುವ ಶಕ್ತಿಯ ಪ್ರಮಾಣವು ಉತ್ತರ ಧ್ರುವದಲ್ಲಿ ಶೇ. 30ರಷ್ಟು ಹೆಚ್ಚಾಗಿರುತ್ತದೆ.

ಉತ್ತರ ಗೋಳಾರ್ಧದಲ್ಲಿ ಸೂರ್ಯನ ಬೆಳಕು ಸಾಮಾನ್ಯವಾಗಿ ಜೂನ್​ 20, 21 ಅಥವಾ 22 ರಂದು ಇರುತ್ತದೆ. ಇದೇ ಸಂದರ್ಭದಲ್ಲಿ ಉತ್ತರ ಗೋಳಾರ್ಧವು ಅತಿ ಹೆಚ್ಚು ರಾತ್ರಿಯನ್ನು ಹೊಂದುವಾಗ, ದಕ್ಷಿಣ ಗೋಳಾರ್ಧದಲ್ಲಿ ದೀರ್ಘಕಾಲದ ಹಗಲು ಕಂಡು ಬರುತ್ತದೆ.

ಇಂದು (ಸೋಮವಾರ) ನಾವು ಎಷ್ಟು ಗಂಟೆಯ ದೀರ್ಘ ಬೆಳಕನ್ನು ಪಡೆಯುತ್ತೇವೆ?

*ನವದೆಹಲಿಯಲ್ಲಿ ಬೆಳಿಗ್ಗೆ ಸೂರ್ಯೋದಯದ ಸಮಯ 5:23 ಮತ್ತು ಸೂರ್ಯಾಸ್ತದ ಸಮಯ 7:21. ದಿನದ ದೀರ್ಘ ಕಾಲ 13:58:01 (13 ಗಂಟೆ 58 ನಿಮಿಷ 01 ಸೆಕೆಂಡ್)
*ಮುಂಬೈನಲ್ಲಿ ಸೂರ್ಯೋದಯ ಸಮಯ 6:02 ಮತ್ತು ಸೂರ್ಯಾಸ್ತ ಸಮಯ 7:18. ದಿನದ ದೀರ್ಘ ಒಟ್ಟು ದೀರ್ಘ ಸಮಯ 13:16:20

*ಚೆನ್ನೈನಲ್ಲಿ ಸೂರ್ಯೋದಯ ಬೆಳಿಗ್ಗೆ 5:43 ಮತ್ತು ಸೂರ್ಯಾಸ್ತ ಸಮಯ 6:37

*ಪ್ರಮುಖ ನಗರಗಳಲ್ಲಿ ದಿನದ ದೀರ್ಘಾವಧಿ 12:53:48

ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

June 21, 2021

 


ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜನರಿಗೆ ಅಗತ್ಯ ಸಲಹೆಗಳನ್ನು ನೀಡಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಎಷ್ಟು ವಯಸ್ಸಿನಲ್ಲಿ ಜನರು ಎಷ್ಟು ವ್ಯಾಯಾಮ ಮಾಡಬೇಕೆಂದು ಸಲಹೆ ನೀಡಿದೆ.

ಮಕ್ಕಳಿಗೆ 5-17 ವರ್ಷವಾಗಿದ್ದರೆ ಪ್ರತಿದಿನ ಸುಮಾರು 60 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು ಎಂದು ಡಬ್ಲ್ಯುಎಚ್ ಒ ಹೇಳಿದೆ. ಪೋಷಕರು ಸಣ್ಣ ಮಕ್ಕಳಿಗೆ ಲಘು ವ್ಯಾಯಾಮ ನೀಡಬೇಕು. ಹದಿಹರೆಯದವರು ಸದೃಢವಾಗಿರಲು ಓಟವನ್ನು ಆಯ್ದುಕೊಳ್ಳಬಹುದೆಂದು ಡಬ್ಲ್ಯುಎಚ್‌ಒ ಹೇಳಿದೆ.

18-64 ವರ್ಷದ ಜನರು ವಾರಕ್ಕೆ ಸುಮಾರು 150-300 ನಿಮಿಷಗಳ ಮಧ್ಯಮ ತಾಲೀಮು ಮಾಡಬೇಕು.

ಬೆಳೆಯುತ್ತಿರುವ ವಯಸ್ಸಿನಲ್ಲಿ ಸದೃಢವಾಗಿರಲು ಇದು ಸಹಾಯ ಮಾಡುತ್ತದೆ. ವಯಸ್ಸಾದಂತೆ ಆಯಾಸ, ನಿದ್ರಾಹೀನತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಪ್ರತಿದಿನ ಸರಾಸರಿ 30-40 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಪ್ರಯೋಜನಕಾರಿ.

ವಯಸ್ಸು 65 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ವಾರಕ್ಕೆ 150 ನಿಮಿಷಗಳ ವ್ಯಾಯಾಮ ಸಾಕೆಂದು ಡಬ್ಲ್ಯುಎಚ್‌ಒ ಹೇಳಿದೆ. ದೇಹವು ಮೊದಲಿನಂತೆಯೇ ಚುರುಕುತನವನ್ನು ಹೊಂದಿರುವುದಿಲ್ಲ. ಕಷ್ಟದ ವ್ಯಾಯಾಮದಿಂದ ದೂರವಿರುವುದು ಒಳ್ಳೆಯದು ಎಂದು ಡಬ್ಲ್ಯುಎಚ್‌ಒ ಹೇಳಿದೆ.

ವಿದ್ಯಾರ್ಥಿ ವೇತನ ಕೈಪಿಡಿ

June 20, 2021

 


ಅಬ್ದುಲ್‌ ಕಲಾಂ ಟೆಕ್ನಾಲಜಿ ಇನೋವೇಷನ್‌ ನ್ಯಾಷನಲ್‌ ಫೆಲೋಶಿಪ್‌ 2021-22

ವಿವರ: ಇಂಡಿಯನ್‌ ನ್ಯಾಷನಲ್‌ ಅಕಾಡೆಮಿ ಆಫ್‌ ಎಂಜಿನಿಯರಿಂಗ್‌ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹತೆ: ಸರ್ಕಾರಿ ಸಂಸ್ಥೆಯಲ್ಲಿ ಎಂಜಿನಿಯರಿಂಗ್‌ ಮುಗಿಸಿರಬೇಕು. ಕನಿಷ್ಠ ಪದವಿ ಮುಗಿಸಿರಬೇಕು. ಕನಿಷ್ಠ 5 ವರ್ಷ ಕೆಲಸದಲ್ಲಿ ಸೇವೆ ಸಲ್ಲಿಸಿರಬೇಕು. ಇದುವರೆಗೆ ಯಾವುದೇ ಫೆಲೋಶಿಪ್‌ ಅನ್ನು ಪಡೆದಿರಬಾರದು.

ಆರ್ಥಿಕ ಸಹಾಯ: ತಿಂಗಳಿಗೆ ₹ 25 ಸಾವಿರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜೂನ್‌, 2021

ಅರ್ಜಿ ಸಲ್ಲಿಕೆ ವಿಧಾನ: ಅಂಚೆ ಮೂಲಕ ಮಾತ್ರ

ಹೆಚ್ಚಿನ ಮಾಹಿತಿಗೆ: www.b4s.in/praja/AKT6

***

ಕೀಪ್‌ ಇಂಡಿಯಾ ಸ್ಮೈಲಿಂಗ್‌ ಫೌಂಡೇಷನ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಂ

ವಿವರ: ಕೋಲ್ಗೇಟ್‌-ಪಾಮೋಲಿವ್‌ ಸಂಸ್ಥೆಯು ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹತೆ: 2020ರಲ್ಲಿ 10ನೇ ತರಗತಿಯಲ್ಲಿ ಕನಿಷ್ಠ ಶೇ 75 ಅಂಕಗಳು ಮತ್ತು ಪಿಯುಸಿಯಲ್ಲಿ ಶೇ 60ರಷ್ಟು ಅಂಕಗಳನ್ನು ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯವು ₹ 5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ಸಹಾಯ: ಮೂರು ವರ್ಷಗಳವರೆಗೆ ವರ್ಷಕ್ಕೆ ₹ 30 ಸಾವಿರ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 30 ಜೂನ್‌, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/KISSP01

ಉದ್ಯಮಿ ಮನೆಯಿಂದ ₹30 ಲಕ್ಷ ದೋಚಿದ್ದ ಸರ್ಕಾರಿ ಶಾಲೆ ಶಿಕ್ಷಕ ಬಂಧನ!

June 20, 2021

 


ಕೊಟ್ಟೂರು: ಇಲ್ಲಿನ ಬಸವೇಶ್ವರ ಬಡಾವಣೆಯ ಉದ್ಯಮಿ ಮಲ್ಲೇಶಪ್ಪ ಅವರ ಮನೆಯಲ್ಲಿನ ₹30 ಲಕ್ಷ ನಗದು ಕಳವು ಪ್ರಕರಣ ಸಂಬಂಧ ಸರ್ಕಾರಿ ಶಾಲೆಯ ಶಿಕ್ಷಕ ಸೇರಿದಂತೆ ಐವರು ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ತಾಲ್ಲೂಕಿನ ಕಾವಲಗುಂದಿ ಗ್ರಾಮದ ಜಿ.ಎಸ್.ಜೀವನ್, ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದ ಪಂಚಾಯಿತಿ ಮಾಜಿ ಸದಸ್ಯ ಪಿ.ಶ್ರೀನಿವಾಸ, ತಾಲ್ಲೂಕಿನ ಚಪ್ಪರದಹಳ್ಳಿಯ ನಿವಾಸಿ ಹಾಗೂ ಕೂಡ್ಲಿಗಿ ಸೊಲ್ಲಮ್ಮ ಸರ್ಕಾರ ಶಾಲೆ ಶಿಕ್ಷಕ ಕೆ.ಬಸವರಾಜ, ಕೊಟ್ಟೂರಿನ ಯಲ್ಲೋಜಿ ರಾವ್, ತಾಲ್ಲೂಕಿನ ರಾಂಪುರ ಗ್ರಾಮದ ಎ.ರಾಮಚಂದ್ರ ಬಂಧಿತರು.

ಇವರಿಂದ ₹12.47 ಲಕ್ಷ ನಗದು, ಇನ್ನೋವಾ, ಓಮ್ನಿ, ಇಂಡಿಕಾ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎಸ್‌ಪಿ ಹಾಲಮೂರ್ತಿರಾವ್ ಮಾಹಿತಿ ನೀಡಿದ್ದಾರೆ.

ಪಟ್ಟಣದ ಸೀಡ್ಸ್ ಕಂಪನಿ ಮಾಲೀಕ ಹುಲ್ಲುಮನಿ ಮಲ್ಲೇಶ ಮನೆಯಲ್ಲಿ ಏ.11ರಂದು ರಾತ್ರಿ ದರೋಡೆಕೋರರು ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಸಿ ₹30 ಲಕ್ಷ ದೋಚಿದ್ದರು.

ಪ್ರಕರಣದ ಬೆನ್ನುಹತ್ತಿದ್ದ ಪೊಲೀಸರು ಮೇ7ರಂದು 10 ಆರೋಪಿಗಳನ್ನು ಬಂಧಿಸಿದ್ದರು. ನಂತರ ಮತ್ತೊಬ್ಬ ಸಿಕ್ಕಿಬಿದ್ದಿದ್ದ.

ಪ್ರಮುಖ ಎಂದು ಹೇಳಲಾಗುತ್ತಿದ್ದ ಜಿ.ಎಸ್.ಜೀವನ್ ಪತ್ತೆಗಾಗಿ ನಿರಂತರ ಹುಡುಕಾಟ ನಡೆಸಿದ್ದರು. ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸ್ಥಳೀಯರೂ ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಬಹಿರಂಗ ಪಡಿಸಿದ್ದ.

ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಪಿಐ ಎಚ್.ದೊಡ್ಡಣ್ಣ, ಪಿಎಸ್‌ಐ ಎಚ್.ನಾಗಪ್ಪ, ಎಎಸ್‌ಐ ಗಂಗಾಧರನಾಯ್ಕ ತೊಡಗಿಕೊಂಡಿದ್ದರು.

ಆರೋಗ್ಯವೃದ್ಧಿಯಲ್ಲಿ ತುಳಸಿ ಹಾಗೂ ಅರಿಶಿಣದ ಮಹತ್ವಗಳೇನು ಗೊತ್ತಾ..?

June 20, 2021


ತುಳಸಿ ಹಾಗೂ ಅರಿಶಿಣದ ಮಹತ್ವ ಬಹುತೇಕರಿಗೆ ಗೊತ್ತಿರುತ್ತದೆ. ಮನೆಯಲ್ಲಿ ಲಭ್ಯವಿರಬಹುದಾದ ಮನೆ ಮದ್ದುಗಳಿವು. ಇವರೆಡೂ, ನಮ್ಮ ಆರೋಗ್ಯವೃದ್ಧಿಯಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಾ ಬಂದಿವೆ. ಅವುಗಳ ಲಾಭ ಪಡೆದುಕೊಳ್ಳುವತ್ತ ನಾವು ಮನಸ್ಸು ಮಾಡಬೇಕು.

ಮನೆ ಮದ್ದುಗಳ ಬಗ್ಗೆ ಹಿರೀಕರು ಹೇಳುತ್ತಲೇ ಬಂದಿದ್ದಾರೆ. ಅವರ ಮಾತುಗಳನ್ನು ಆಲಿಸಿ, ಪಾಲಿಸಿಕೊಂಡು ಬಂದವರು. ತಮ್ಮ ಆರೋಗ್ಯ ಸ್ಥಿತಿಯನ್ನು ಸದೃಢವಾಗಿಟ್ಟುಕೊಳ್ಳುವಲ್ಲಿ ಯಶಸ್ಸನ್ನು ಕಂಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಮಾರುಕಟ್ಟೆಯಲ್ಲಿ ಲಭ್ಯವಾಗುವ ದುಬಾರಿ ಔಷಧಗಳಿಗಿಂತ ಹೆಚ್ಚು ಶಕ್ತಿಶಾಲಿ ಔಷಧಗಳು ಮನೆಯಲ್ಲಿ ದೊರೆಯುವ ಮದ್ದುಗಳಾಗಿರುತ್ತದೆ. ಅಧಿಕ ಪೋಷಕಾಂಶ ಹಾಗೂ ಖನಿಜಾಂಶಗಳನ್ನು ಹೊಂದಿರುವ ಇಂತಹ ಮದ್ದುಗಳನ್ನು ಸಕಾಲಿಕವಾಗಿ ಬಳಸಿಕೊಳ್ಳುವುದರಲ್ಲಿ ಜಾಣತನವಿರುತ್ತದೆ.

ಉದಾಹರಣೆಗೆ, ತುಳಸಿ ಎಲೆಗಳು ಮತ್ತು ಅರಿಶಿಣ ಎರಡರಲ್ಲೂ ಆರೋಗ್ಯವೃದ್ಧಿ ಅಂಶಗಳು ಯಥೇಚ್ಚವಾಗಿ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅರಿಶಿಣ ಮತ್ತು ತುಳಸಿ ಎಲೆಗಳನ್ನು ಒಟ್ಟಿಗೆ ನೀರಿನಲ್ಲಿ ಕುದಿಸಿ, ಕುಡಿದರೆ ಹಲವು ಪ್ರಯೋಜನಗಳಾಗುತ್ತವೆ.

ಕೆಮ್ಮು ನಿವಾರಣೆ :
ಅರಿಶಿಣ ಮತ್ತು ತುಳಸಿ ಮಿಶ್ರಣದ ನೀರು ಕೆಮ್ಮು ನಿವಾರಿಸಲು ಅತ್ಯುತ್ತಮ ಔಷಧಿಯಾಗಿದೆ. ವಿಶೇಷವಾಗಿ ಗಂಟಲ್ಲಿನಲ್ಲಿನ ಉರಿಯೂತ ನಿವಾರಣೆ ಮಾಡಿ, ಕಫವನ್ನು ಸಡಿಲಗೊಳಿಸಿ, ಸುಲಭವಾಗಿ ವಿಸರ್ಜನೆಯಾಗಲು ಸಹಕರಿಸುತ್ತದೆ.ಇದೇ ನೀರಿನಲ್ಲಿ, ಅಸ್ತಮಾ ರೋಗ ಗುಣಪಡಿಸುವ ಸಾಮರ್ಥ್ಯವೂ ಇದೆ. ಸಂಕುಚಿತಗೊಂಡ ಶ್ವಾಸನಾಳಗಳನ್ನು ಸಡಿಲಗೊಳಿಸಿ, ಒಳ ವಿಸ್ತಾರವನ್ನು ಹೆಚ್ಚಿಸಲು ನೆರವಾಗುತ್ತದೆ. ಆ ಮೂಲಕ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ.

ಮಾತ್ರವಲ್ಲದೆ, ಈ ನೀರನ್ನು ಸೇವನೆ ಮಾಡುವುದರಿಂದ ಮೂತ್ರ ಪಿಂಡಗಳಲ್ಲಿನ ಕಲ್ಮಶಗಳನ್ನು ಹೊರಹಾಕುತ್ತದೆ. ಇದರಿಂದ ಮೂತ್ರಪಿಂಡಗಳು ಹೆಚ್ಚು ಕಾರ್ಯಕ್ಷಮತೆಯಿಂದ ಕೆಲಸ ಮಾಡಲು ಅನುವಾಗುತ್ತದೆ. ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವುದನ್ನು ತಡೆಯುತ್ತದೆ.ನೈಸರ್ಗಿಕವಾಗಿ ದೊರೆಯುವ ತುಳಸಿ ಮತ್ತು ಅರಿಶಿಣಗಳಿಂದ ತಯಾರಿಸಿದ ನೀರಿನ ಮಿಶ್ರಣವನ್ನು ನಿತ್ಯದ ಪ್ರಥಮ ಆಹಾರವಾಗಿ ಸೇವಿಸಿದರೆ, ಪೆಡುಸಾಗಿರುವ ನರಗಳು ಸಡಿಲಗೊಳ್ಳುತ್ತವೆ. ತನ್ಮೂಲಕ ರಕ್ತ ಸಂಚಾರ ಸುಗಮವಾಗಲು ಸಹಕಾರಿಯಾಗುತ್ತದೆ.

ಮತ್ತೊಂದು ವಿಶೇಷವೆಂದರೆ, ಮೆದುಳಿಗೆ ಹರಿಯುವ ರಕ್ತ ಪ್ರಮಾಣದಲ್ಲಿ ಹೆಚ್ಚಳವಾಗಿ, ನಿರಾಳತೆಯ ಭಾವ ಮೂಡುತ್ತದೆ. `ಟೆನ್ಷನ್` ಎಂಬುದಕ್ಕೆ ಪರಿಹಾರ ದೊರೆಯಲಿದೆ.ಈ ನೀರಿನಲ್ಲಿನ ಅಂಶಗಳಿಂದಾಗಿ ಮಲಬದ್ಧತೆ ನಿವಾರಣೆಯಾಗಲು ದಾರಿ ಮಾಡಿಕೊಡುತ್ತವೆ. ಕರುಳುಗಳಲ್ಲಿ ಜೀರ್ಣಗೊಂಡ ಆಹಾರದ ಚಲನೆಯನ್ನು ಸುಲಭವಾಗಿಸಿ, ತ್ಯಾಜ್ಯ ವಿಸರ್ಜನೆಗೆ ನೆರವಾಗುತ್ತದೆ. ಇದರ ಪರಿಣಾಮವಾಗಿ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಹೊಟ್ಟೆಯೂತ ನಿವಾರಿಸುವ ನಿಟ್ಟಿನಲ್ಲಿ ಈ ಪೇಯ (ಮಿಶ್ರಣ) ಸಹಾಯ ಮಾಡುತ್ತದೆ. ಇದೊಂದು ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು, ಜೀರ್ಣಾಂಗಗಳ ಒಳಭಾಗದಲ್ಲಿ ಆಮ್ಲೀಯತೆಯ ಪ್ರಭಾವವನ್ನು ಕುಗ್ಗಿಸುತ್ತದೆ.ಇದರ ಪರಿಣಾಮವಾಗಿ ಹೊಟ್ಟೆಯುರಿ, ಎದೆಯುರಿ, ಹುಳಿ ತೇಗು ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೀರ್ಣಶಕ್ತಿ ಹೆಚ್ಚುತ್ತದೆ. ತಲೆನೋವಿದ್ದರೆ ಅದನ್ನು ನಿವಾರಿಸುತ್ತದೆ.

ಪ್ರತಿನಿತ್ಯ ಈ ನೀರಿನ ಸೇವನೆಯಿಂದ ಸೈನಸ್ ಸಮಸ್ಯೆ ದೂರವಾಗಬಲ್ಲದು. ಅಲರ್ಜಿಗಳಿಂದ ರಕ್ಷಣೆ ದೊರೆಯಲಿದೆ. ಕೊಲೆಸ್ಟ್ರಾಲ್ ಕಡಿಮೆಯಾಗುತ್ತದಂತೆ. ಬಹುಪಯೋಗಿ ಈ ನೀರನ್ನು ತಯಾರಿಸಿಕೊಂಡು ಕುಡಿಯುವುದರಿಂದ ಎಲ್ಲರಲ್ಲೂ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ತನ್ಮೂಲಕ ಆರೋಗ್ಯದಲ್ಲೂ ಸುಧಾರಣೆಯಾಗುವುದಂತೂ ಖಚಿತ.

ಶಾಲೆ ಪುನರಾರಂಭ ಸೂಕ್ತ; ಸರ್ಕಾರಕ್ಕೆ ಕಾರ್ಯಪಡೆ ಸಲಹೆ

June 20, 2021

 


ಬೆಂಗಳೂರು: ಕರೊನಾ 2ನೇ ಅಲೆ ನಿಯಂತ್ರಣಕ್ಕೆ ಬಂದಿರುವ ನಡುವೆಯೇ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಆಯಾ ಪ್ರದೇಶಕ್ಕೆ ತಕ್ಕಂತೆ ಶಾಲೆ ಆರಂಭಿಸಬಹುದೆಂದು ಕೋವಿಡ್ ಮೂರನೇ ಅಲೆ ಸಂಬಂಧ ರಚಿಸಲಾಗಿರುವ ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ಕಾರ್ಯಪಡೆ ಸರ್ಕಾರಕ್ಕೆ ಸಲಹೆ ನೀಡಿದೆ.

ವಿವಿಧ ಆಯಾಮಗಳಲ್ಲಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ 91 ಪುಟಗಳ 17 ಅಂಶಗಳನ್ನೊಳಗೊಂಡ ಮಧ್ಯಂತರ ವರದಿಯನ್ನು ಕಾರ್ಯಪಡೆ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಆರೋಗ್ಯ ವ್ಯವಸ್ಥೆ ತಯಾರಿ ಮತ್ತು ಇತರ ವಿಚಾರಗಳನ್ನು ಪ್ರಸ್ತಾಪಮಾಡಲಾಗಿದೆ. ಮುಖ್ಯವಾಗಿ ಶಾಲೆ ಆರಂಭದ ಬಗ್ಗೆ ಗಮನ ಸೆಳೆಯಲಾಗಿದೆ.

ರಾಜ್ಯದಲ್ಲಿ ಎರಡನೇ ಅಲೆ ತಗ್ಗಿದೆ. ಇನ್ನು ಕೆಲವು ದಿನಗಳಲ್ಲಿ ಇನ್ನಷ್ಟು ಕಡಿಮೆ ಆಗಬಹುದು. ಈ ಸಂದರ್ಭದಲ್ಲಿ ಶಾಲೆ ಆರಂಭಿಸುವುದು ಸೂಕ್ತವಾದೀತು.

ಜತೆಗೆ ಪ್ರತಿ ಪ್ರದೇಶದ ಮೇಲೆ ಸೂಕ್ಷ್ಮ ಗಮನವಿಟ್ಟು, ಸೋಂಕಿನ ಪ್ರಮಾಣ ಹೆಚ್ಚುವ ಲಕ್ಷಣ ಕಾಣಿಸಿದರೆ ತಕ್ಷಣ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಬಹುದು ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಹೇಗಿದ್ದರೂ ವ್ಯಾಕ್ಸಿನ್ ಪ್ರಯೋಗ ನಡೆಯುತ್ತಿದೆ. ಒಮ್ಮೆ ಲಸಿಕೆ ಸಿದ್ಧವಾದ ಕೂಡಲೇ ದೊಡ್ಡ ಮಟ್ಟದಲ್ಲಿ ಲಸಿಕೆ ಉತ್ಪಾದಿಸಿ ಆದ್ಯತೆ ಮೇಲೆ ಮಕ್ಕಳಿಗೆ ನೀಡಬಹುದು. ಅಲ್ಲಿಯವರೆಗೆ ಮುಂಜಾಗ್ರತೆ ವಹಿಸಿ ಶಾಲೆ ನಡೆಸಲು ಕ್ರಮಕೈಗೊಳ್ಳಬಹುದಾಗಿದೆ ಎಂದಿದ್ದಾರೆ. ಸದ್ಯ ಎಲ್ಲಿ ಕರೊನಾ ಹೆಚ್ಚಿದೆಯೋ ಅಲ್ಲಿ ಶಾಲೆ ನಡೆಸುವುದು ಬೇಡ. ಸೋಂಕಿನ ಪ್ರಮಾಣ ಕಡಿಮೆ ಇರುವಲ್ಲಿ ಆರಂಭಿಸಬಹುದು. ಇದಕ್ಕಾಗಿ ಒಂದು ಕಾರ್ಯವಿಧಾನ ಪ್ರಕ್ರಿಯೆ ಮಾಡಿಕೊಂಡು ಆ ಪ್ರಕಾರ ಕ್ರಮಕೈಗೊಳ್ಳಬಹುದು. ದಿನ ಬಿಟ್ಟು ದಿನವೋ, ಅಥವಾ ಅರ್ಧದಿನ ಪಾಳಿಯಂತೆಯೋ ಒಟ್ಟಿನಲ್ಲಿ ತರಗತಿ ಆರಂಭಿಸುವುದಕ್ಕೆ ತಜ್ಞರು ಒತ್ತಾಸೆ ನೀಡಿದ್ದಾರೆ.

ಒಂದು ವರ್ಷ ಮಗು ಕಲಿಕೆಯಿಂದ ದೂರ ಉಳಿದರೆ ಶೈಕ್ಷಣಿಕವಾಗಿ ಕಷ್ಟ ಎದುರಿಸಬೇಕಾಗುತ್ತದೆ. ಭವಿಷ್ಯದಲ್ಲೂ ಸವಾಲು ಎದುರಿಸಬೇಕಾಗುತ್ತದೆ. ಅದರಲ್ಲೂ 2-3 ವರ್ಷ ಶಾಲೆಗೆ ಹೋಗದಿದ್ದರೆ ಬಹಳ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಕಾರಣಕ್ಕೆ ಮಗು ಶಾಲೆ ಸಂಪರ್ಕದಿಂದ ದೂರಾಗದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ತಜ್ಞರ ತಂಡ ಅಭಿಪ್ರಾಯ ತಿಳಿಸಿದೆ.ಡ

ಮಾಹಿತಿ ಸಂಗ್ರಹ: ಡಾ.ದೇವಿಶೆಟ್ಟಿ ನೇತೃತ್ವದ 13 ವೈದ್ಯರ ಸಮಿತಿಯಲ್ಲಿ ಮಕ್ಕಳ ತಜ್ಞರು, ಕ್ಯಾನ್ಸರ್ ತಜ್ಞರು, ಸಾಂಕ್ರಾಮಿಕ ರೋಗಗಳ ತಜ್ಞರು ಇದ್ದು, ಪ್ರತಿ ಕ್ಷೇತ್ರದಲ್ಲಿನ ಬೆಳವಣಿಗೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಸಮಗ್ರ ವರದಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಸ್ತುತ ಬೇರೆ ಬೇರೆ ದೇಶಗಳಲ್ಲಿ ಅಲೆಯಿಂದ ಅಲೆಗೆ ಆದ ಬೆಳವಣಿಗೆ, ಮಕ್ಕಳ ಮೇಲಿನ ಪರಿಣಾಮ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಪೀಡಿಯಾಟ್ರಿಕ್ ಐಸಿಯು, ಪೀಡಿಯಾಟ್ರಿಕ್ ವೆಂಟಿಲೆಟರ್, ಮಕ್ಕಳ ತಜ್ಞರು ಸಿಬ್ಬಂದಿಯ ತಯಾರಿ- ತರಬೇತಿ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಕೆಲವು ಎಚ್ಚರಿಕೆ ಮಾಹಿತಿಯನ್ನೂ ಪ್ರಸ್ತಾಪಿಸಲಾಗಿದೆ.

ಸಲಹೆಗೆ ಕಾರಣ: ದಕ್ಷಿಣ ಆಫ್ರಿಕಾದಲ್ಲಿ ಎಬೋಲಾ ಬಂದ ಸಂದರ್ಭದಲ್ಲಿ ಮಕ್ಕಳು ದೀರ್ಘ ಅವಧಿಯಲ್ಲಿ ಶಾಲೆಗೆ ಹೋಗಲಾಗಲಿಲ್ಲ. ಇದರಿಂದ ಶೈಕ್ಷಣಿಕವಾಗಿ ಸಮಸ್ಯೆ ಎದುರಿಸಿದರು. ಇಲ್ಲೂ ಆ ರೀತಿ ಆಗಬಾರದು. ಮುನ್ನೆಚ್ಚರಿಕೆ ತೆಗೆದುಕೊಂಡು ಶಾಲೆ ನಡೆಸುವುದು ಸೂಕ್ತ ಎಂದು ತಜ್ಞರು ಸರ್ಕಾರಕ್ಕೆ ತಿಳಿಹೇಳಿದ್ದಾರೆ.

ಅಪೌಷ್ಟಿಕತೆ ನಿವಾರಣೆಗೆ ಸಂಕೇಶ್ವರರ ಸಲಹೆ

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ಕರೊನಾ ಗಾಢ ಪರಿಣಾಮ ಬೀರಬಹುದೆಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಮುಂಜಾಗ್ರತೆ ವಹಿಸಬೇಕಿದ್ದ್ದು, ಸ್ಪಿರುಲಿನಾ ಮಾತ್ರೆಗಳನ್ನು ನೀಡುವ ಅಗತ್ಯ ಇದೆ ಎಂದು ವಿಆರ್​ಎಲ್ ಸಮೂಹದ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟಿದ್ದಾರೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಸ್ಪಿರುಲಿನಾ ಮಾತ್ರೆ ಅತ್ಯುತ್ತಮ ಪರಿಹಾರ ಎಂಬುದು ಅನೇಕ ಸಂದರ್ಭಗಳಲ್ಲಿ ಈಗಾಗಲೇ ಸಾಬೀತಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ದೇಶಾದ್ಯಂತ ಕನಿಷ್ಠ ಕೇಸ್: ಕರ್ನಾಟಕ ಸೇರಿದಂತೆ ದೇಶಾದ್ಯಂತ ಕರೊನಾ ಪ್ರಕರಣಗಳ ಸಂಖ್ಯೆ ಇನ್ನಷ್ಟು ಇಳಿಕೆಯಾಗಿದೆ. ಭಾರತದಲ್ಲಿ ಭಾನುವಾರ ಬೆಳಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ 58,419 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಇದೇ ಅವಧಿಯಲ್ಲಿ ರಾಜ್ಯದಲ್ಲಿ 4,517 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 120 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 993 ಮಂದಿಗೆ ಸೋಂಕು ದೃಢಪಟ್ಟಿದ್ದು, 12 ಮಂದಿ ಮೃತಪಟ್ಟಿದ್ದಾರೆ.

ವರದಿ ಪ್ರಮುಖಾಂಶ

 • 0-18 ವರ್ಷ ವಯೋಮಾನದವರು 2.38 ಕೋಟಿಯಷ್ಟಿರಬಹುದೆಂದು ಅಂದಾಜಿಸಲಾಗಿದೆ
 • ಸೋಂಕು ಗರಿಷ್ಠ ಪ್ರಮಾಣಕ್ಕೆ ಏರಿದಲ್ಲಿ 3.40 ಲಕ್ಷ ಮಂದಿಗೆ ಸೋಂಕು ತಗುಲುವ ಅಂದಾಜಿದೆ
 • ಈ ವರ್ಗಕ್ಕಾಗಿ 23,804 ಬೆಡ್ (ಆಸ್ಪತ್ರೆಗಳಲ್ಲಿ) ಬೇಕಾಗಬಹುದು, 6,801 ಐಸಿಯು ಬೆಡ್ ಮೀಸಲಿಟ್ಟುಕೊಳ್ಳಬೇಕಾಗಬಹುದು
 • ಕೋವಿಡ್ ಕೇರ್ ಸೆಂಟರ್​ಗಳಲ್ಲಿ 43 ಸಾವಿರ ಬೆಡ್ ಬೇಕಾಗಬಹುದು
 • 4 ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಕ್ಕರೆ ಗಂಭೀರ ಹಾನಿ ತಪ್ಪಿಸಬಹುದು

ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಆದರೆ ರಾಜ್ಯದಲ್ಲಿ 2ನೇ ಅಲೆ ನಿಯಂತ್ರಣಕ್ಕೆ ಬಂದಿದ್ದರೂ ಸೋಂಕು ಪ್ರಮಾಣ ದರ ಪೂರ್ಣ ಕಡಿಮೆಯಾಗಿಲ್ಲ. ಜತೆಗೆ ಮಕ್ಕಳಿಗೆ ಇನ್ನೂ ಲಸಿಕೆ ಲಭ್ಯವಾಗಿಲ್ಲ. ಈ ವೇಳೆ ಶಾಲೆ ಆರಂಭಿಸಿದರೆ ಮಕ್ಕಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ. ಇದರ ನಡುವೆ 3ನೇ ಅಲೆಯ ಬಗ್ಗೆ ತಜ್ಞರ ಎಚ್ಚರಿಕೆ ಇದೆ. ಹಾಗಾಗಿ ಆತುರ ಬೇಡ. ಈ ಎಲ್ಲ ಅಂಶ ಪರಿಗಣಿಸಿ ತೀರ್ವನಕ್ಕೆ ಬರುವುದು ಸೂಕ್ತ.

| ಡಾ. ನಿಜಗುಣ ಮಕ್ಕಳ ತಜ್ಞರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ

ಶಾಲೆ ಆರಂಭವಾಗದೆ ಇರುವುದರಿಂದ ಬಾಲಕಾರ್ವಿುಕ ಪದ್ಧತಿ ಜೀತ ಪದ್ಧತಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ಶಾಲೆ ಆರಂಭ ಸೂಕ್ತ. ಮಕ್ಕಳ ಹಿತದೃಷ್ಟಿಯಿಂದ ಎಲ್ಲ ಸುರಕ್ಷತಾ ಕ್ರಮ ಅನುಸರಿಸಿ ಶಾಲೆ ಆರಂಭಿಸುವುದು ಉತ್ತಮ.

BIG NEWS : ಕೊರೊನಾದಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಉಚಿತ ಶಿಕ್ಷಣ : ರುಪ್ಸಾ ಘೋಷಣೆ

June 20, 2021

 


ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಮರಣ ಹೊಂದಿದ ಪೋಷಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಘೋಷಣೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೇಶ್ ತಾಳಿಕಟ್ಟೆ, ಕೊರೊನಾ ಸೋಂಕಿನಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ನಮ್ಮ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಕೊರೊನಾದಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಭಾರತದಲ್ಲಿ ಕೊರೊನಾ ಎರಡನೇ ಅಲೆಗೆ ವಿವಿಧ ರಾಜ್ಯಗಳು ಸಲ್ಲಿಸಿದ ಮಾಹಿತಿಯ ಪ್ರಕಾರ 30,071 ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ, ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ವರಿದಯಾಗಿದೆ.

ಮನೆಯಲ್ಲಿ ಆಟವಾಡುವಾಗ ಇಲಿ ಪಾಷಾಣ ತಿಂದು ಹೆಣ್ಣು ಮಗು ದುರಂತ ಸಾವು

June 20, 2021

 


ಮಂಗಳೂರು: ಮಕ್ಕಳಿರುವ ಮನೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಏನಾಗಬಹುದು ಎಂಬುದಕ್ಕೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ನಡೆದ ಘಟನೆ ತಾಜಾ ಉದಾಹರಣೆಯಾಗಿದೆ.

ಇಲಿ ಪಾಷಾಣವನ್ನು ತಿಂದು ಮಗುವೊಂದು ದಾರುಣ ಸಾವಿಗೀಡಾಗಿದೆ. ಎರಡುವರೆ ವರ್ಷದ ಶ್ರೇಯಾ ಮೃತಪಟ್ಟ ಮಗು. ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ಘಟನೆ ನಡೆದಿದೆ. ಆಟವಾಡುತ್ತಾ ಮನೆಯಲ್ಲಿದ್ದ ಇಲಿ ಪಾಷಾಣಾವನ್ನು ಮಗು ತಿಂದಿತ್ತು.

ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ. ಶ್ರೇಯಾ, ನಿವೃತ್ತ ಸೈನಿಕ ಸೈಜು ಹಾಗೂ ದೀಪ್ತಿ ದಂಪತಿಯ ಪುತ್ರಿ. ಘಟನೆ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ಪಂದಿರ ದಿನವೇ ದುರಂತ: ಮಗಳ ಆತ್ಮಹತ್ಯೆ ಸುದ್ದಿ ಕೇಳಿ ತಂದೆ ಸಾವು, ಕಾರಣ ಮನಕಲಕುವಂತಿದೆ

June 20, 2021

 


ಮಂಡ್ಯ: ಮಗಳ ಆತ್ಮಹತ್ಯೆಯಿಂದ ಮನನೊಂದ ತಂದೆಯು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ. ಅಪ್ಪಂದಿರ ದಿನದಂದೇ ಈ ದುರಂತ ಸಂಭವಿಸಿರುವುದು ಮನಕಲಕುವಂತಿದೆ.

ಬಾಂಧವ್ಯ (17), ರಾಜು (65) ಸಾವಿಗೀಡಾದ ತಂದೆ-ಮಗಳು. ಪಿಯುಸಿ ಕಾಲೇಜು ಸೇರಿಸುವ ವಿಚಾರದಲ್ಲಿಯೂ ತಂದೆಯ ಜತೆ ಬಾಂದವ್ಯ ಮುನಿಸಿಕೊಂಡಿದ್ದಳು. ಅಲ್ಲದೆ, ಆನ್​ಲೈನ್​ ಕ್ಲಾಸ್​ಗಳಿಂದ ಬಾಂದವ್ಯ ಖಿನ್ನತೆಗೆ ಒಳಗಾಗಿದ್ದಳು. ವಿದ್ಯಾಭ್ಯಾಸ ಕುಂಠಿತವಾಗುವ ಆತಂಕ ಹೊಂದಿದ್ದಳು. ಕಳೆದ ವರ್ಷ ಎಸ್​ಎಸ್​ಎಲ್​ಸಿಯಲ್ಲಿ ಶೇ. 92 ಅಂಕ ಪಡೆದಿದ್ದಳು.

ಬನ್ನೂರು ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಂದವ್ಯ ಮಧ್ಯರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಮಗಳ ಸಾವಿನಿಂದ ಮನನೊಂದು ತಂದೆಯೂ ಮೃತಪಟ್ಟಿದ್ದಾರೆ.

ಲೋ ಬಿಪಿಯಿಂದಾಗಿ ತಂದೆ ರಾಜು ಸಾವಿಗೀಡಾಗಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಮಳವಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅತಿಥಿ ಬೋಧಕರ ಸೇವೆ ಕಾಯಂ ಮಾಡಿ: ಸಿಎಂಗೆ ಹೊರಟ್ಟಿ ಪತ್ರ

June 20, 2021

 


ಬೆಂಗಳೂರು(ಜೂ.20): ರಾಜ್ಯದ 415 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅರ್ಹ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವಂತೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಭಾಪತಿ, ಅತಿ ಕಡಿಮೆ ವೇತನ ಹಾಗೂ ಸೇವಾ ಭದ್ರತೆ ಇಲ್ಲದೆ ದುಡಿಯುತ್ತಿರುವ ಅವರೆಲ್ಲರೂ ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದ ಸಂಕಷ್ಟದಲ್ಲಿದ್ದಾರೆ. ಕೋವಿಡ್‌ನಿಂದಾಗಿ ಕಾಲೇಜುಗಳು ಪೂರ್ಣ ಆರಂಭವಾಗದ ಕಾರಣ ಅತಿಥಿ ಉಪನ್ಯಾಸಕರಿಗೆ ಪೂರ್ಣಾವಧಿ ಕಾರ್ಯಭಾರವೂ ಸಿಗದೆ ಸಿಗುತ್ತಿದ್ದ ಕಡಿಮೆ ವೇತನಕ್ಕೂ ಕತ್ತರಿ ಬಿದ್ದಿದೆ. ಹತ್ತಾರು ವರ್ಷ ಕೆಲಸ ಮಾಡಿದ ಹಲವರ ವಯೋಮಿತಿ ಮೀರುತ್ತಿರುವುದರಿಂದ ಅಭದ್ರತೆಯಲ್ಲಿ ಸಿಲುಕಿದ್ದಾರೆ.

ಇದೇ ನೋವಿನಿಂದ ಕೆಲ ಅತಿಥಿ ಶಿಕ್ಷಕರು ಆತ್ಮಹತ್ಯೆಗೂ ಶರಣಾದ ಪ್ರಕರಣಗಳಿವೆ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ನಿಯಮಾವಳಿ ಪ್ರಕಾರವೇ ಅತಿಥಿ ಉಪನ್ಯಾಸಕರು ವಿದ್ಯಾರ್ಹತೆ ಹೊಂದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅವರೆಲ್ಲರ ಸೇವೆಯನ್ನು ಸರ್ಕಾರ ಕಾಯಂಗೊಳಿಸಬೇಕೆಂದು ಕೋರಿದ್ದಾರೆ.

ಶಾಲೆ ಪುನಾರಂಭ ಯಾವಾಗ? ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ

ಅಲ್ಲದೆ, ಪದವಿ ಕಾಲೇಜುಗಳಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸಿದ ಸ್ಟಾಪ್‌ ಗ್ಯಾಪ್‌, ಗುತ್ತಿಗೆ ಆಧಾರಿತ, ಅರೆಕಾಲಿಕ ಉಪನ್ಯಾಸಕರುಗಳನ್ನೂ ಕೂಡ ಸರ್ಕಾರ ಮಾನವೀಯತೆಯ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ಸೇವೆ ಕಾಯಂಗೊಳಿಸಬೇಕು. ಅಂತಹವರನ್ನು 1982, 1992, 1996, 2003ರಲ್ಲಿ ಕಾಯಂ ಮಾಡಿರುವ ಉದಾಹರಣೆಗಳಿವೆ. ಅದೇ ಮಾದರಿಯನ್ನು ಅನುಸರಿಸಿ ಈಗಲೂ ಎಲ್ಲಾ ಅತಿಥಿ ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿಯನ್ನು ಕಾಯಂಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ತರಕಾರಿಗಳನ್ನು ಕಾಲಿನಲ್ಲಿ ಒದ್ದು, ಬೀದಿ ಬದಿ ವ್ಯಾಪಾರಿ ಮೇಲೆ PSI ದರ್ಪ

June 20, 2021

 


ರಾಯಚೂರು: ಬೀದಿ ಬದಿ ಮಾರಾಟ ಮಾಡುತ್ತಿದ್ದ ಸೊಪ್ಪು ತರಕಾರಿಯನ್ನು ಕಾಲಿನಿಂದ ಒದ್ದು ಸದರ್ ಬಜಾರ್ ಪಿಎಸ್‌ಐ ಅಜಂ ದರ್ಪ ಮೆರೆದಿದ್ದಾರೆ.

ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ಪೊಲೀಸ್​ ಅಧಿಕಾರಿ ವರ್ತನೆಯ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.

ಜಿಲ್ಲೆಯಲ್ಲಿ ವೀಕೆಂಡ್​ ಲಾಕ್​ಡೌನ್​ ಜಾರಿಯಲ್ಲಿದ್ದು, ಕೆಲ ಮಹಿಳೆಯರು ಚಂದ್ರಮೌಳೇಶ್ವರ ವೃತ್ತದ ಬಳಿ ಸೊಪ್ಪು ತರಕಾರಿ ಮಾರುತ್ತಿದ್ದರು. ಸ್ಥಳಕ್ಕೆ ಏಕಾಏಕಿ ಬಂದ ಪಿಎಸ್‌ಐ ಅಜಂ ತರಕಾರಿ ಹಾಗೂ ಸೊಪ್ಪನ್ನ ಕಾಲಿನಿಂದ ಒದ್ದು, ತರಕಾರಿಯನ್ನ ಚಲ್ಲಾಪಿಲ್ಲಿ ಎಸೆದು ದರ್ಪ ತೋರಿದ್ದಾರೆ.

ಆರ್​ಜಿವಿ - ಅರಿಯಾನಾ ಬೋಲ್ಡ್ ಮಾತುಗಳು; ವೈರಲ್ ಆಯ್ತು ವಿಡಿಯೋ

June 20, 2021

 


ರಾಮ್​ ಗೋಪಾಲ್​ ವರ್ಮಾ ಒಂದಲ್ಲಾ ಒಂದು ವಿವಾದ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಕೆಲಮೊಮ್ಮೆ ವಿಭಿನ್ನವಾಗಿ ಪ್ರಮೋಶನ್ ಕೂಡ ಮಾಡುತ್ತಾರೆ. ಅದಕ್ಕಾಗಿ ಹಿರೋಯಿನ್​ಗಳನ್ನು ಬಳಸಿಕೊಂಡು ಆರ್​ಜಿವಿ ಕಾಣಿಸಿಕೊಳ್ಳುತ್ತಾರೆ. ಇದೀಗ ಮುಂದಿನ ಸಿನಿಮಾಕ್ಕಾಗಿ ಬಿಗ್​ ಬಾಸ್​ ಮಾಜಿ ಸ್ಪರ್ಧಿಯೊಂದಿಗೆ ಆರ್​ಜಿವಿ ಕಾಣಿಸಿಕೊಂಡಿದ್ದಾರೆ. ಆಕೆಯನ್ನ ಸಂದರ್ಶನ ಮಾಡುವ ಮೂಲಕ ಬೋಲ್ಡ್ ಮಾತುಗಳನ್ನು ಹೊರಹಾಕಿಸಿದ್ದಾರೆ.


ಬಿಗ್​​ ಬಾಸ್​ ಮಾಜಿ ಸ್ಪರ್ಧಿ ಅರಿಯಾನಾ ಗ್ಲೋರಿ ಜತೆಗೆ ರಾಮ್​ ಗೋಪಾಲ್​ ವರ್ಮಾ ಜಿಮ್​ನಲ್ಲಿ ಮಾತನಾಡುತ್ತಾ ಸಂದರ್ಶನ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ಯ್ಯೂಟೂಬ್​ನಲ್ಲಿ ವೈರಲ್ ಆಗಿದೆ. ಅರಿಯಾನಾ ಇತ್ತೀಚೆಗೆ ಮೋಲ್ಡ್​ ಇಂಟರ್ವ್ಯೂವ್​ ವಿಥ್​ ಗ್ಲೋರಿ ಟೀಸರ್​ ಅನ್ನು ಬಿಡುಗಡೆ ಮಾಡಿದ್ದರು. ಆದರೀಗ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೋಲ್ಡ್​ ಮಾತುಗಳನ್ನಾಡಿದ ಅರಿಯಾನಾ ಮತ್ತು ಆರ್​ಜಿವಿ ವಿಡಿಯೋ ಹರಿದಾಡುತ್ತಿದೆ.
ಇನ್ನು ಸಂದರ್ಶನ ವಿಡಿಯೋದಲ್ಲಿ ದೇಹದ ಬಗ್ಗೆ, ಅಂಗಾಂಗ, ಸೆಕ್ಸ್, ರೊಮ್ಯಾನ್ಸ್​ ಮುಂತಾಧ ವಿಚಾರಗಳನ್ನು ಇವರಿಬ್ಬರು ಮುಕ್ತವಾಗಿ ಚರ್ಚಿಸಿದ್ದಾರೆ. ಅರಿಯಾನಾ ಜಿಮ್​ಗೆ ಪ್ರವೇಶಿಸುತ್ತಿದ್ದಂತೆ ಆಕೆ ಉಡುಗೆ ಬಗ್ಗೆ ಸಂದರ್ಶನ ಪ್ರಾರಂಭವಾಗುತ್ತದೆ.

ಅರಿಯಾನಾ ಕೂಡ ಆರ್​ಜಿವಿ ಪ್ರಶ್ನೆ ಕೇಳುತ್ತಾಳೆ. ನಾನು ಭಾಗವಹಿಸಿದ್ದ ಬಿಗ್ ಬಾಸ್​ ಶೋ ಅನ್ನು ಯಾಕೆ ವೀಕ್ಷಣೆ ಮಾಡಿದ್ರಿ ಎನ್ನುತ್ತಾಳೆ. ಅದಕ್ಕೆ ಉತ್ತರಿಸಿದ ರಾಮ್​ ಗೋಪಾಲ್ ವರ್ಮಾ ಸನ್ನಿ ಲಿಯೋನ್​ ಭಾಗಿಯಾಗಿದ್ದಾಗ ಮೊದಲ ಬಾರಿಗೆ ಬಿಗ್​ ಬಾಸ್​ ಶೋ ವೀಕ್ಷಿಸಿದೆ. ಹಾಗೆಯೇ ನೀನು ಮತ್ತು ನಿನ್ನ ಸೌಂದರ್ಯ ಇಷ್ಟವಾಯಿತು ಅದಕ್ಕೆ ನಾನು ಟ್ವೀಟ್​ ಮಾಡಿದೆ ಎನ್ನುತ್ತಾರೆ.

ಹೀಗೆ ಸೆಕ್ಸ್​, ಸಂಬಂಧ, ಮುಂತಾಧ ಕುರಿತು ಆರ್​ಜಿವಿ ಮತ್ತು ನಟಿ ಅರಿಯಾನಾ ವಿಡಿಯೋದಲ್ಲಿ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಆರ್​ಜಿವಿ ಅವರ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ.

ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ತಮಿಳುನಾಡಿನ ಮಾಜಿ ಸಚಿವ ಬೆಂಗಳೂರಿನಲ್ಲಿ ಅರೆಸ್ಟ್

June 20, 2021

 


ಬೆಂಗಳೂರು: ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವನ ಬಂಧನವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ, AIADMK ನಾಯಕ ಮಣಿಕಂಠನ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ನಾನು ಲಿವ್ ಇನ್ ಸಂಬಂಧದಲ್ಲಿದ್ದೆ, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನಿರಂತರ ಅತ್ಯಾಚಾರ ಮಾಡಿದ್ದಾರೆ.

ಇದರ ಫಲವಾಗಿ ಮೂರು ಬಾರಿ ಗರ್ಭಧರಿಸಿದ್ದೆ, ಬಲವಂತವಾಗಿ ಗರ್ಭಪಾತ ಮಾಡಿಸಿ ಈಗ ಮೋಸ ಮಾಡಿದ್ದಾರೆ ಎಂದು ಮಲೇಷ್ಯಾ ಮೂಲದ ಮಹಿಳೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಂತೆಯೇ ತಮ್ಮನ್ನು ಪೊಲೀಸರು ಬಂಧಿಸದಂತೆ ಕೋರಿ ಮಣಿಕಂದನ್‌ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಮದ್ರಾಸ್‌ ಹೈಕೋರ್ಟ್‌ ಅರ್ಜಿಯನ್ನು ವಜಾ ಮಾಡಿತ್ತು.

ಈ ಹಿನ್ನೆಲೆಯಲ್ಲಿ ತಮ್ಮನ್ನು ಪೊಲೀಸರು ಬಂಧಿಸಬಹುದು ಎಂದು ಮಣಿಕಂಠನ್ ಎಸ್ಕೇಪ್‌ ಆಗಿದ್ದರು.

ಇದೀಗ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿ ಮಣಿಕಂದನ್​ ಮಲೇಷ್ಯಾ ಮೂಲದ ನಟಿ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿ ಬಂದಿದೆ.. ಎಐಎಡಿಎಂಕೆ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ಮಣಿಕಂದನ್ ಅವರಿಗೆ ದಕ್ಷಿಣ ಏಷ್ಯಾದ ಪ್ರವಾಸಿ ರಾಯಭಾರಿಯಾಗಿದ್ದ ಯುವತಿಯ ಪರಿಚಯ 2017ರಲ್ಲಿ ಆಗಿತ್ತು. ಅವರಿಗೆ ಮಲೇಷ್ಯಾದಲ್ಲಿ ಹೂಡಿಕೆ ಸಂಬಂಧ ಮಾತುಕತೆ ಮಾಡಲು ಮಣಿಕಂಠನ್ ಕರೆಸಿಕೊಂಡಿದ್ದರು.

ಇದಾಗಲೇ ವಿವಾಹವಾಗಿದ್ದರೂ, ಯುವತಿ ಜತೆ ಲಿವ್ ಇನ್ ಸಂಬಂಧದಲ್ಲಿದ್ದರು. ಮದುವೆಯಾಗುವಂತೆ ಹೇಳಿದರೆ ಬೆದರಿಕೆ ಹಾಕುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಇವರು ಬೆಂಗಳೂರಿನಲ್ಲಿ ಜೆ.ಡಿ.ಎಸ್ ಮುಖಂಡ ತಮ್ಮನಾಯಕನಳ್ಳಿ ಶ್ರೀನಿವಾಸ್ ಅವರಿಗೆ ಸೇರಿದ ವಿಲ್ಲಾದಲ್ಲಿ ಅಡಗಿ ಕುಳಿತಿರುವುದು ತಿಳಿದ ಚೆನ್ನೈದ ಸಿಐಡಿ ಪೊಲೀಸರು, ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿದ್ದು, ಅರೆಸ್ಟ್‌ ಮಾಡಿದ್ದಾರೆ.

ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಲು ʼಜೂ.30ʼ ಕೊನೆಯ ದಿನ: ಮನೆಯಲ್ಲಿಯೇ ಕುಳಿತು ಈ ಸರಳ ಕ್ರಮ ಅನುಸರಿಸಿ,ಲಿಂಕ್‌ ಮಾಡಿ..!

June 20, 2021

 


ಡಿಜಿಟಲ್‌ ಡೆಸ್ಕ್‌ : ಕೊರೊನಾ ಸೋಂಕು 2ನೇ ಅಲೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನ ವಿಸ್ತರಿಸಿತ್ತು. ಈ ಮೊದಲು, ಮಾರ್ಚ್ 21ರ ಗಡುವನ್ನು ಇತ್ತು. ಆದ್ರೆ, ಕೊನೆಯ ದಿನಾಂಕವನ್ನ ಜೂನ್ 30ಕ್ಕೆ ವಿಸ್ತರಿಸಲಾಯಿತು. ಈ ನಿರ್ಧಾರವು ಜನರಿಗೆ ಸಮಾಧಾನವನ್ನುಂಟು ಮಾಡಿತು. ಆದಾಗ್ಯೂ, ವಿಸ್ತೃತ ಗಡುವು ಸಮೀಪಿಸುತ್ತಿದ್ದು, ಎರಡೂ ದಾಖಲೆಗಳನ್ನ ಲಿಂಕ್ ಮಾಡಲು ಕೇವಲ 10 ದಿನಗಳು ಬಾಕಿ ಉಳಿದಿವೆ.

ಬಳಕೆದಾರರು ಪ್ಯಾನ್‌ ಜೊತೆಗೆ ಆಧಾರ್‌ ಲಿಂಕ್‌ ಮಾಡಲು ರೂ1,000 ದಂಡವನ್ನ ವಿಧಿಸಲಾಗುತ್ತೆ ಮತ್ತು ಅವರ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.

ಅಂದ್ಹಾಗೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾದ ನಂತರ, ಹಣಕಾಸು ವಹಿವಾಟುಗಳನ್ನ ನಡೆಸಲು ಸಾಧ್ಯವಾಗುವುದಿಲ್ಲ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಗಳೆರಡನ್ನೂ ವಿವಿಧ ನಿರ್ಣಾಯಕ ಕೆಲಸಗಳಿಗೆ ಬಳಸಲಾಗುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್ ಸಂಖ್ಯೆಯನ್ನ ಬಳಸುವಲ್ಲಿ, ಎಲ್ ಪಿಜಿ ಸಬ್ಸಿಡಿ, ವಿದ್ಯಾರ್ಥಿ ವೇತನ ಮತ್ತು ಪಿಂಚಣಿಯಂತಹ ಸರ್ಕಾರಿ ಯೋಜನೆಗಳಿಂದ ವಿತ್ತೀಯ ಪ್ರಯೋಜನಗಳನ್ನ ತೆಗೆದುಕೊಳ್ಳಲು ಪ್ಯಾನ್ ಅನ್ನು ಬಳಸಲಾಗುತ್ತದೆ.

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಹಲವಾರು ಮಾರ್ಗಗಳಿವೆ. 567678 ಅಥವಾ 56161ಗೆ ಎಸ್ ಎಂಎಸ್ ಕಳುಹಿಸುವ ಮೂಲಕ ಇದನ್ನ ಮಾಡಬಹುದು. ಇ-ಫಿಲ್ಲಿಂಗ್ ವೆಬ್ ಸೈಟ್ ಅನ್ನು ಸಹ ಅದೇ ರೀತಿ ಮಾಡಲು ಬಳಸಬಹುದು. ಪ್ಯಾನ್ ಸೇವಾ ಕೇಂದ್ರದಲ್ಲಿ ನಿರ್ದಿಷ್ಟ ನಮೂನೆಯನ್ನು ಹಸ್ತಚಾಲಿತವಾಗಿ ಭರ್ತಿ ಮಾಡಬಹುದು.

ಪ್ಯಾನ್-ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಹಂತ 1: ಯಾವುದೇ ಇಂಟರ್ನೆಟ್ ಬ್ರೌಸರ್ ಅನ್ನು ತೆರೆಯಿರಿ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕೃತ ಸೈಟ್ www.incometax.gov.in ಹೋಗಿ.

ಹಂತ 2: ವೆಬ್ ಸೈಟ್ʼನ ಮುಖಪುಟದಲ್ಲಿ ಕ್ವಿಕ್ ಲಿಂಕ್ಸ್ ವಿಭಾಗದ ಅಡಿಯಲ್ಲಿ 'ಲಿಂಕ್ ಆಧಾರ್' ಎಂದು ಬರೆಯುವ ಆಯ್ಕೆಯನ್ನ ಪ್ರದರ್ಶಿಸಲಾಗುವುದು.

ಹಂತ 3: ಲಿಂಕ್ ಆಧಾರ್ ಮೇಲೆ 'ಲಿಂಕ್ ಆಧಾರ್' ಅಡಿಯಲ್ಲಿ 'ನಿಮ್ಮ ಆಧಾರ್ ಪ್ಯಾನ್ ಲಿಂಕ್ ಮಾಡುವ ಸ್ಥಿತಿ' ಆಯ್ಕೆಯ ಬಗ್ಗೆ ತಿಳಿದುಕೊಳ್ಳಿ.

ಹಂತ 4: ಇದು ನಿಮ್ಮನ್ನು ಹೊಸ ವಿಂಡೋಗೆ ಕರೆದೊಯ್ಯುತ್ತದೆ. ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿದ ಪೆಟ್ಟಿಗೆಯಲ್ಲಿ ನಮೂದಿಸಿ.

ಹಂತ 5: ಒಮ್ಮೆ ನೀವು ವಿವರಗಳನ್ನು ತುಂಬಿದ ನಂತರ, 'ಲಿಂಕ್ ಆಧಾರ್ ಸ್ಥಿತಿಯನ್ನು ವೀಕ್ಷಿಸಿ' .

ಹಂತ 5: ನಿಮ್ಮ ಆಧಾರ್-ಪ್ಯಾನ್ ನ ಸ್ಥಿತಿಯನ್ನು ವೆಬ್ ಸೈಟ್ ನಲ್ಲಿ ಪ್ರದರ್ಶಿಸಲಾಗುವುದು.

ಎಸ್‌ಎಂಎಸ್ ಮೂಲಕವೂ ಸ್ಥಿತಿಯನ್ನ ಪರಿಶೀಲಿಸಬಹುದು..!
ಹಂತ 1: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ, 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 10 ಅಂಕಿಗಳ ಪ್ಯಾನ್ ಸಂಖ್ಯೆಯನ್ನ ಟೈಪ್ ಮಾಡಿ.

ಹಂತ 2: ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ.

ಹಂತ 3: ಉತ್ತರವಾಗಿ ನಿಮಗೆ ಸ್ಥಾನಮಾನ ಸಿಗುತ್ತದೆ.

ಜೀರಿಗೆ ಸೇವನೆಯ ಆರೋಗ್ಯ ಪ್ರಯೋಜನ ತಿಳಿಯಿರಿ; ಜೀರಿಗೆ ನೀರು ಕುಡಿಯುವ ಅಭ್ಯಾಸ ರೂಢಿಯಲ್ಲಿರಲಿ

June 20, 2021

 


ಸಾಮಾನ್ಯವಾಗಿ ಜೀರಿಗೆಯನ್ನು ಎಲ್ಲಾ ಅಡುಗೆಯಲ್ಲಿಯೂ ಬಳಸುತ್ತೇವೆ. ಆದರೆ ಇದರಿಂದ ನಮ್ಮ ದೇಹಕ್ಕೆ ಆರೋಗ್ಯದ ಪ್ರಯೋಜನಗಳು ಎಷ್ಟಿವೆ ಎಂಬುದರ ಬಗ್ಗೆ ಗೊತ್ತೇ ಇರುವುದಿಲ್ಲ. ಹೀಗಿರುವಾಗ ಮನೆಯಲ್ಲಿ ದಿನನಿತ್ಯದ ಅಡುಗೆಯಲ್ಲಿ ಬಳಕೆಯಲ್ಲಿರುವ ಜೀರಿಗೆಯ ಪ್ರಯೋಜಗಳ ಕುರಿತಾಗಿ ತಿಳಿದುಕೊಳ್ಳಿ. ಅದೆಷ್ಟೋ ಸಮಸ್ಯೆಗಳಿಗೆ ಜೀರಿಗೆಯಿಂದ ಪರಿಹಾರವಿದೆ. ಜೀರಿಗೆ ನೀರು ಮಾಡಿ ಸೇವಿಸುವುದರ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಜೀರಿಗೆಯನ್ನು ಹಾಗೇ ಸೇವಿಸುವುದಕ್ಕಿಂತ ಜೀರಿಗೆ ನೀರು ಮಾಡಿ ಕುಡಿಯುವುದರ ಮೂಲಕ ಹೆಚ್ಚಿನ ಲಾಭವಿದೆ. ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ನೆನೆಸಿಡಿ. ಬಳಿಕ ಬೆಳಿಗ್ಗೆ ಆ ನೀರನ್ನು ಸೇವಿಸುವರಿಂದ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಗಳನ್ನು ಕಂಡುಕೊಳ್ಳಬಹುದಾಗಿದೆ.

ಅದೆಷ್ಟೋ ವರ್ಷಗಳ ಹಿಂದಿನಿಂದಲೂ ಸಹ ಇದನ್ನು ಔಷಧಿಯಾಗಿ ಬಳಸುತ್ತಿದ್ದಾರೆ.

ಜೀರಿಗೆಯಲ್ಲಿನ ಪೌಷ್ಟಿಕಾಂಶಗಳಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ರತಿದಿನ ಒಂದು ಲೋಟ ಜೀರಿಗೆ ನೀರು ಕುಡಿಯುವದರಿಂದ ಹೃದಯದ ಆರೋಗ್ಯ, ಚರ್ಮ ಹಾಗೂ ತಲೆಕೂದಲು ಬೆಳವಣಿಗೆಗೆ ಸಹಾಯಕವಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಜೀರಿಗೆಯಲ್ಲಿ ಪೊಟ್ಯಾಷಿಯಂ ಮತ್ತು ಕಬ್ಬಿಣ ಅಂಶಗಳಿಂದ ಸಮೃದ್ಧವಾಗಿದೆ. ಜತೆಗೆ ಉತ್ಕರ್ಷಣ ನಿರೋಧಕ ಶಕ್ತಿಗಳನ್ನು ಹೊಂದಿದೆ. ನಮ್ಮ ದೇಹದಲ್ಲಿರುವ ಬೇಡದ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುತ್ತದೆ. ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್​ ಎ, ಬಿ ಮತ್ತು ಸಿ ಇದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆ
ಜೀರಿಗೆ ನೀರು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಕಾರ್ಬೋಹೈಡ್ರೇಟ್​ಗಳು, ಗ್ಲುಕೋಸ್​ ಮತ್ತು ಕೊಬ್ಬನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಪಿತ್ತಜನಕಾಂಗದಲ್ಲಿ ಪಿತ್ತರಸ ಆಮ್ಲಗಳ ಉತ್ಪಾದನೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಅಜೀರ್ಣವನ್ನು ತಡೆಗಟ್ಟಲು ಸಹಾಯಕವಾಗಿದೆ.

ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು
ಜೀರಿಗೆ ನೀರು ಕುಡಿಯುವುದರಿಂದ ಹೊಟ್ಟೆ ಶುದ್ಧಗೊಳ್ಳುತ್ತದೆ. ಮುಟ್ಟಿನ ಚಕ್ರದ ಸಮಸ್ಯೆ ಕಾಡುತ್ತಿರುವವರ ಆರೋಗ್ಯವನ್ನು ಸುಧಾರಿಸುತ್ತದೆ. ಹಾಲುಣಿಸುವ ಮಹಿಳೆಯರಿಗೆ ಸ್ತನದಲ್ಲಿ ಹಾಲು ಉತ್ಪಾದನೆಗೊಳ್ಳಲು ಸಹಾಯಕವಾಗಿದೆ. ಜತೆಗೆ ಮಗುವಿಗೆ ಬೇಕಾದ ಪೋಷಕಾಂಶವನ್ನು ನೀಡುತ್ತದೆ.

ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು
ಜೀರಿಗೆ ನೀರಿನಲ್ಲಿ ಪೊಟ್ಯಾಷಿಯಂ, ಮ್ಯಾಂಗನೀಸ್​ ಮತ್ತು ಸೆಲೆನಿಯಮ್​ ಸಮೃದ್ಧವಾಗಿರುತ್ತದೆ. ಇದು ಚರ್ಮದ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ವಿಟಮಿನ್​ ಎ ಪೌಷ್ಟಿಕ ಅಂಶವನ್ನು ಹೊಂದಿರುವದರಿಂದ ಹಾಗೂ ಉತ್ಕರ್ಷಣ ನಿರೋಧಕ ಶಕ್ತಿಯಿಂದ ಸಮೃದ್ಧವಾಗಿರುವುದರಿಂದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೂ ಮುಖದಲ್ಲಿನ ಮೊಡವೆ ಸಮಸ್ಯೆ ಯುವತಿಯರಿಗೆ ಹೆಚ್ಚು ಕಾಡುತ್ತದೆ. ಜೀರಿಗೆಯಲ್ಲಿರುವ ಆಯಂಟಿಬ್ಯಾಕ್ಟೀರಿಯಾ ಗುಣಲಕ್ಷಣಗಳು ಮೊಡವೆಗಳು ಏಳಲು ಕಾರಣವಾಗುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ
ಜೀರಿಗೆ ನೀರು ಕುಡಿಯುವುದರಿಂದ ನೆತ್ತಿಯ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಇದು ಪ್ರೋಟೀನ್​ ಮತ್ತು ಕಾರ್ಬೋಹೈಡ್ರೇಟ್​ಗಳನ್ನು ಹೊಂದಿರುತ್ತದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜತೆಗೆ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ
ಹೃದಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಜೀರಿಗೆ ನೀರು ತುಂಬಾ ಉಪಯುಕ್ತಕಾರಿ. ಜೀರಿಗೆ ನೀರು ಸೇವನೆಯಿಂದ ಹೃದಯ ಸ್ನಾಯುಗಳು ಬಲಗೊಳ್ಳುತ್ತವೆ. ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯಾಘಾತ ಮತ್ತು ರಕ್ತದ ಒತ್ತಡದಂತಹ ಸಮಸ್ಯೆಗಳಿಂದ ಉಂಟಾಗುವ ಅಪಾಯವನ್ನು ತಡೆಯಲು ಸಹಾಯಕವಾಗಿದೆ.

ಇವಿಷ್ಟೇ ಅಲ್ಲದೇ ಮಧುಮೇಹ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜೀರಿಗೆ ನೀರು ಸಹಾಯ ಮಾಡುತ್ತದೆ. ಮನೆಯಲ್ಲಿ ಪ್ರತಿನಿತ್ಯ ಬಳಸುವ ಅದೆಷ್ಟೋ ಆಹಾರ ಪದಾರ್ಥಗಳಿಂದ ಪ್ರಯೋಜಗಳಿವೆ. ಅವುಗಳ ಬಳಕೆ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಹೀಗಿರುವಾಗ ಅವುಗಳನ್ನು ನಮ್ಮ ಜೀವನದಲ್ಲಿ ಪ್ರತಿನಿತ್ಯ ಬಳಸಿಕೊಳ್ಳುವುದು ಮುಖ್ಯವಾಗಿದೆ.