SIT ಪ್ರಶ್ನೆಗೆ ಸಿಡಿ ಲೇಡಿ ಕೊಟ್ಟ ಶಾಕಿಂಗ್ ಉತ್ತರ ಏನು ಗೊತ್ತಾ..?

April 03, 2021

 


ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಸೂಕ್ತ ತನಿಖೆ ನಡೆಸುತ್ತಿದೆ. ಸದ್ಯ ಸಂತ್ರಸ್ತ ಯುವತಿ ಒಂದು ಹೇಳಿಕೆ ಕೊಟ್ರೆ ಅವರ ಪೊಷಕರೇ ಒಂದು ಉತ್ತರ ನೀಡುತ್ತಿದ್ದಾರೆ. ಇದರ ಮಧ್ಯೆ ಮೊದಲನೇ ದಿನದಿಂದ ಉತ್ತರ ಬದಲಿಸದೇ ಅವನು ನಾನಲ್ಲ ಎನ್ನುವ ರಮೇಶ್.

ಇದೆಲ್ಲದರ ಮಧ್ಯೆ ಸಂತ್ರಸ್ತ ಯುವತಿಯ ವಿಚಾರಣೆ ಒಂದು ಹಂತದ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಸತತ ನಾಲ್ಕು ದಿನ ಎಸ್ ಐ ಟಿ ಮುಂದೆ ಉತ್ತರಿಸಿದ ಸಿಡಿಲೇಡಿ ಶಾಕಿಂಗ್ ಉತ್ತರ ನೀಡಿದ್ದಾರೆ. ಇಂದು ಅಂತಿಮ ವಿಚಾರಣೆ ನಡೆಯಲಿದೆ. ಯುವತಿಗೆ ಎಸ್ ಐಟಿ ಪ್ರಶ್ನೆ ರಮೇಶ್ ಜಾರಕಿಹೊಳಿ ಪರಿಚಯ, ಆನಂತರದ ಸಂಭಾಷಣೆ, ಜಾರಕಿಹೊಳಿ ಪ್ಲಾಟ್ ಗೆ ಹೋಗಿ ಭೇಟಿ ಮಾಡಿದ ಎಲ್ಲಾ ಘಟನಾವಳಿಗಳ ಬಗ್ಗೆ ಸಿಡಿಲೇಡಿ ವಿವರ ನೀಡಿದ್ದಾಳೆ.

ಕೆಲಸದ ಅಮಿಷೆ ಒಡ್ಡಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡರು ಎಂಬ ಉತ್ತರವನ್ನು ನೀಡಿದ್ದಾಳೆ. ಆದರೆ ಸಿಡಿ ಬಿಡುಗಡೆ ಹಿಂದಿನ ರಹಸ್ಯ ವನ್ನು ಬಾಯಿ ಬಿಡಿಸುವ ಕಾರ್ಯ ಮುಂದುವರೆದಿದೆ. ಸಿಡಿ ಬಿಡುಗಡೆ ಮಾಡಿದ ವ್ಯಕ್ತಿಗಳ ಕುರಿತಾಗಿ ಇಂದು ಪ್ರಶ್ನಿಸಲಿದ್ದಾರೆ. ಸಿಡಿ ಬಿಡುಗಡೆ ಮಾಡಿದ್ದು ಯಾರು ? ಮೊದಲು ಸಿಡಿಯನ್ನು ಯಾರಿಗೆ ಕೊಡಿಸಿದಿರಿ ? ದಿನೇಶ್ ಕಲ್ಲಹಳ್ಳಿಗೆ ಸಿಡಿ ಹೇಗೆ ತಲುಪಿತು. ದಿನೇಶ್ ಕಲ್ಲಹಳ್ಳಿಯನ್ನು ನೀವು ಸಂಪರ್ಕಿಸಿದ್ದರೆ ? ಸಿಡಿ ಗ್ಯಾಂಗ್ ನಿಮಗೆ ಹೇಗೆ ಪರಿಚಯ ? ಸಿಡಿ ಬಿಡುಗಡೆಗೆ ಸ್ವತಃ ನೀವೇ ಹೇಳಿದ್ದರೇ ? ಹೀಗೆ ನಾನಾ ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದಕ್ಕೆ ಅಸ್ಪಷ್ಟ ಉತ್ತರ ನೀಡಿರುವ ಸಿಡಿ ಯುವತಿ, ತಲೆ ಮರೆಸಿಕೊಂಡಿರುವ ಶಂಕಿತರು ಪರಿಚಯವಿದ್ದು, ಅವರಿಗೆ ಸಿಡಿಯನ್ನು ನಾನೇ ನೀಡಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗಿದೆ.


Related Articles

Advertisement
Previous
Next Post »