CBSE Board Exam 2021: ಶಾಲೆಗಳಿಗೆ ಈ ಮಾಹಿತಿ ನೀಡಲು ಇಂದೇ ಕೊನೆಯ ದಿನ, ಇಲ್ದಿದ್ರೆ ನಿಂತ್ಹೋಗುತ್ತೆ Result

April 10, 2021
Saturday, April 10, 2021

 


ನವದೆಹಲಿ: CBSE ಮಂಡಳಿಯಿಂದ ಮಾನ್ಯತೆ ಪಡೆದ ಎಲ್ಲಾ ಶಾಲೆಗಳಿಗೆ ಶಿಕ್ಷಕರ ಮಾಹಿತಿ ಅಪ್ಡೇಟ್ ಮಾಡಲು ಸೂಚಿಸಲಾಗಿತ್ತು. CBSE Board Exam 2021 ಮೇ 4, 2021ಕ್ಕೆ ಆರಂಭವಾಗುತ್ತಿವೆ ಹಾಗೂ ಪ್ರಸ್ತುತ ಶಾಲೆಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳು (CBSE Practical Exam 2021) ನಡೆಯುತ್ತಿವೆ . ಇದರ ಹೊರತಾಗಿಯೂ ಕೂಡ ಶಾಲೆಗಳು ಇದುವರೆಗೆ ತಮ್ಮ ಶಾಲೆಗಳಲ್ಲಿನ ಶಿಕ್ಷಕರ ವಿವರಗಳನ್ನೂ ಮಂಡಳಿಗೆ ತಲುಪಿಸಿಲ್ಲ. ಹೀಗಾಗಿ ಮಂಡಳಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಶಾಲೆಗಳಿಗೆ ಬೀಳಲಿದೆ ಭಾರಿ ದಂಡ
ಸಿಬಿಎಸ್‌ಇ ಬೋರ್ಡ್, ತನ್ನಿಂದ ಮಾನ್ಯತೆ ಪಡೆದ ಎಲ್ಲ ಶಾಲೆಗಳಿಗೆ ಶಿಕ್ಷಕರ ಸಂಪೂರ್ಣ ಮಾಹಿತಿಯನ್ನು ಸಿಬಿಎಸ್‌ಇ ಅಫಿಲೇಟೆಡ್ ಸ್ಕೂಲ್ ಇನ್ಫಾರ್ಮಶನ್ ಸಿಸ್ಟಮ್ (OASIS)ನಲ್ಲಿ ಅಪ್ಡೇಟ್ ಮಾಡಲು ಸೂಚಿಸಿದೆ.

ಇದಕ್ಕಾಗಿ ಶಾಲೆಗಳಿಗೆ ಏಪ್ರಿಲ್ 10, 2021 ರವರೆಗೆ ಕಾಲಾವಕಾಶ ನೀಡಲಾಗಿದೆ. ಇಂದು ಸಂಪೂರ್ಣ ದಿನ ಒಂದು ವೇಳೆ ಶಾಲೆಗಳು ತಮ್ಮ ಶಿಕ್ಷಕರ ಮಾಹಿತಿ ನೀಡದೆ ಇದ್ದ ಸಂದರ್ಬದಲ್ಲಿ, ಅಂತಹ ಶಾಲೆಗಳಿಗೆ ಬೋರ್ಡ್ 50 ಸಾವಿರ ದಂಡ ವಿಧಿಸಲಿದೆ.

ಫಲಿತಾಂಶದ ಮೇಲೂ ಕೂಡ ಪ್ರಭಾವ ಬೀರಲಿದೆ
ಶಿಕ್ಷಕರ ಮಾಹಿತಿ ನೀಡದೆ ಇರುವ ಶಾಲೆಗಳ ಮೇಲೆ ಕೇವಲ ದಂಡ ಮಾತ್ರ ವಿಧಿಸದೆ, ಅಂತಹ ಶಾಲೆಗಳ ಪರೀಕ್ಷಾ ಫಲಿತಾಂಶ ಕೂಡ ತಡೆ ಹಿಡಿಯಲಾಗುವುದು ಎಂದು ಮಂಡಳಿ ಸೂಚಿಸಿದೆ. ಸಿಬಿಎಸ್‌ಇ ಮಂಡಳಿಯ ಎಕ್ಸಾನ್ ಕಂಟ್ರೋಲರ್ ಡಾ. ಸೈಯಮ್ ಭಾರದ್ವಾಜ್ ಈ ಕುರಿತು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ನಿಯಮಗಳನ್ನು ಪಾಲಿಸದೆ ಇರುವ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಮತ್ತು ಶಾಲೆಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಕೂಡ ರದ್ದುಗೊಳಿಸಲಾಗುವುದು. ಇದಲ್ಲದೆ ಶಾಲೆಯ ಪ್ರಾಂಶುಪಾಲರನ್ನೇ ಇದಕ್ಕೆ ಹೊಣೆ ಮಾಡಲಾಗುವುದು.

ಕೊವಿಡ್-19 ಹಿನ್ನೆಲೆ ನೌಕರಿ ಕಳೆದುಕೊಂಡ ಶಿಕ್ಷಕರು
ಕೊವಿಡ್-19
 ಮಹಾಮಾರಿಯ ಹಿನ್ನೆಲೆ ಹಲವು ಶಾಲೆಗಳು ತನ್ನ ಕೆಲವು ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳ ಸಿದ್ಧತೆಯಲ್ಲಿ ಕೊರತೆ ಎದುರಾಗಿದೆ. ಯಾವ ಶಿಕ್ಷಕರನ್ನು ಮಂಡಳಿ ಪರೀಕ್ಷಾ ಸಿದ್ಧತೆಗಳ ಡ್ಯೂಟಿಗೆ ನಿಯೋಜಿಸಿದೆಯೋ, ಆ ಶಿಕ್ಷಕರು ಇದೀಗ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿಲ್ಲ. ಹೀಗಿರುವಾಗ ಶಾಲೆಗಳು ಹೊರ ಶಿಕ್ಷಕರ ನೆರವಿನಿಂದ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಥಿಯರಿ ಪರೀಕ್ಷೆಗಳಲ್ಲಿ ಈ ರೀತಿಯ ಸಮಸ್ಯೆಗಳು ಉದ್ಭವಿಸಬಾರದು ಎಂಬುದೇ ಬೋರ್ಡ್ ನ ಈ ನಿರ್ಣಯದ ಹಿಂದಿನ ಉದ್ದೇಶವಾಗಿದೆ.

Thanks for reading CBSE Board Exam 2021: ಶಾಲೆಗಳಿಗೆ ಈ ಮಾಹಿತಿ ನೀಡಲು ಇಂದೇ ಕೊನೆಯ ದಿನ, ಇಲ್ದಿದ್ರೆ ನಿಂತ್ಹೋಗುತ್ತೆ Result | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on CBSE Board Exam 2021: ಶಾಲೆಗಳಿಗೆ ಈ ಮಾಹಿತಿ ನೀಡಲು ಇಂದೇ ಕೊನೆಯ ದಿನ, ಇಲ್ದಿದ್ರೆ ನಿಂತ್ಹೋಗುತ್ತೆ Result

Post a Comment