BREAKING : ದೇಶದಲ್ಲಿ ಕೊರೋನಾ ಅಬ್ಬರ : ಒಂದೇ ದಿನದಲ್ಲಿ 1,52,879 ಪ್ರಕರಣ ದಾಖಲು

April 10, 2021

 


ನವದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ ಜೋರಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 1,52,879 ಕೊರೋನಾ ಪ್ರಕರಣ ವರದಿಯಾಗಿದೆ.

ಇನ್ನು ಒಂದೇ ಬರೋಬ್ಬರಿ 839 ಮಂದಿ ಬಲಿಯಾಗಿದು, ಇದರೊಂದಿಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 1,69,275ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 11,08,087ಕ್ಕೆ ಏರಿಕೆಯಾಗಿದೆ.

ಒಂದೇ ದಿನ 1,52,879 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,33,58,805ಕ್ಕೆ ತಲುಪಿದೆ. ಈವರೆಗೂ ಚೇತರಿಸಿಕೊಂಡವರ 1,20,81,443ಕ್ಕೆ ತಲುಪಿದೆ.

ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 10,15,95,147ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Related Articles

Advertisement
Previous
Next Post »