ಈಕೆಯ ಬರ್ತ್​ಡೇಯನ್ನು ಪೊಲೀಸರೂ ಸೆಲೆಬ್ರೇಟ್​ ಮಾಡಿದರು!; ಅಷ್ಟಕ್ಕೂ ಈ ಯುವತಿ ಮಾಡಿದ್ದಾದರೂ ಏನು?

April 24, 2021
Saturday, April 24, 2021

 


ಮುಂಬೈ: ಈ ಯುವತಿಯ ಜನ್ಮದಿನಾಚರಣೆಗೆ ಈ ಸಲ ಖಾಕಿ ಖದರ್​ ಬಂದಿತ್ತು. ಕಾರಣ, ಈಕೆಯ ಬರ್ತ್​ಡೇಯನ್ನು ಪೊಲೀಸರೂ ಸೆಲೆಬ್ರೇಟ್​ ಮಾಡಿದ್ದಾರೆ. ಅಲ್ಲದೆ ಇವರ ಮನೆಗೇ ಕೇಕ್​ ಕೂಡ ಕಳುಹಿಸಿಕೊಟ್ಟಿರುವ ಪೊಲೀಸರು ಜನ್ಮದಿನದ ಶುಭಾಶಯ ಕೋರಿದ್ದಾರೆ. ಮಾತ್ರವಲ್ಲ ಈಕೆಗೆ 'ಜವಾಬ್ದಾರಿಯುತ ನಾಗರಿಕ' ಎಂಬ ಬಿರುದನ್ನೂ ನೀಡಿದ್ದಾರೆ.

ಹೀಗೆ ಪೊಲೀಸರಿಂದಲೂ ಬರ್ತ್​ಡೇ ಶುಭಾಶಯ ಪಡೆದುಕೊಂಡು ಕೇಕ್​ ಕೂಡ ಪಡೆದ ಯುವತಿಯ ಹೆಸರು ಸಮತಾ ಪಾಟೀಲ್​. ಈಕೆಯನ್ನು ಟ್ವಿಟರ್​​ನಲ್ಲಿ ಡಿಎಂ ಮಾಡಿ ಸಂಪರ್ಕಿಸಿದ ಪೊಲೀಸರು, ಮೊಬೈಲ್​ಫೋನ್​ ನಂಬರ್ ಪಡೆದು, ಅದನ್ನು ಸ್ಥಳೀಯ ಪೊಲೀಸರಿಗೆ ರವಾನಿಸಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರು ಈಕೆಯ ಮನೆಗೆ ಕೇಕ್​ ತಲುಪಿಸಿ, ಜನ್ಮದಿನದ ಶುಭಾಶಯ ಕೋರಿದ್ದಾರೆ.

ಅಷ್ಟಕ್ಕೂ ಈಕೆ ಗೆಳೆಯರಿಗೆ ಬರ್ತ್​ಡೇ ಟ್ರೀಟ್​ ನೀಡಲು ನಿರಾಕರಿಸಿದ್ದಕ್ಕೆ ಈಕೆಗೆ ಪೊಲೀಸರಿಂದ ಟ್ರೀಟ್​ ಸಿಕ್ಕಿದೆ.

ಹೊರಗೆ ಬಾ, ಬರ್ತ್​ಡೇ ಟ್ರೀಟ್​ ಕೊಡು ಎಂದು ಫ್ರೆಂಡ್ಸ್​ ಕೇಳಿದ್ದಕ್ಕೆ, ಈಕೆ ಲಾಕ್​ಡೌನ್​ ಇದೆ, ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಪ್ರತಿಕ್ರಿಯಿಸಿದ್ದಾರೆ. 'ಯಾರು ತಮ್ಮ ಸ್ನೇಹಿತರನ್ನು ಮನೆಯಲ್ಲೇ ಇರಲು ಬಯಸಿದ್ದೀರಿ' ಎಂದು ಟ್ವೀಟ್​ ಮಾಡಿ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಮತಾ, ಗೆಳೆಯರು ಟ್ರೀಟ್​ ಕೇಳಿದರೂ ನಾನು ಮನೆಯಿಂದ ಹೊರಗೆ ಹೋಗಿಲ್ಲ. ಅವರನ್ನು ಮನೆಯಲ್ಲೇ ಸುರಕ್ಷಿತವಾಗಿ ಇರಲು ಹೇಳಿದ್ದೆ ಎಂದಿದ್ದರು. ಈ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿದಕ್ಕೆ ಖುಷಿಯಾದ ಮುಂಬೈ ಪೊಲೀಸರು, 'ರೆಸ್ಪಾನ್ಸಿಬಲ್​ ಸಿಟಿಜನ್' ಎಂದು ಬರೆಸಿದ್ದ ಕೇಕ್​ ಸಮತಾಗೆ ಕಳುಹಿಸಿ ಜನ್ಮದಿನದ ಶುಭಾಶಯ ಕೋರಿದ್ದಾರೆ. (ಏಜೆನ್ಸೀಸ್​)


Thanks for reading ಈಕೆಯ ಬರ್ತ್​ಡೇಯನ್ನು ಪೊಲೀಸರೂ ಸೆಲೆಬ್ರೇಟ್​ ಮಾಡಿದರು!; ಅಷ್ಟಕ್ಕೂ ಈ ಯುವತಿ ಮಾಡಿದ್ದಾದರೂ ಏನು? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಈಕೆಯ ಬರ್ತ್​ಡೇಯನ್ನು ಪೊಲೀಸರೂ ಸೆಲೆಬ್ರೇಟ್​ ಮಾಡಿದರು!; ಅಷ್ಟಕ್ಕೂ ಈ ಯುವತಿ ಮಾಡಿದ್ದಾದರೂ ಏನು?

Post a Comment