ಕೊರೋನಾ ಹಿನ್ನೆಲೆ ಶಾಲೆಗಳು ಬಂದ್ : ಭಾರೀ ಅಸಮಾಧಾನ

April 02, 2021


 ಬೆಂಗಳೂರು (ಏ.02): ಕೊರೋನಾ ಹಿನ್ನೆಲೆ ಶಾಲೆಗಳನ್ನು ಬಂದ್ ಮಾಡಿದ್ದರಿಂದ ಖಾಸಗಿ ಶಾಲೆಗಳ ಒಕ್ಕೂಟ ಅಸಮಾಧಾನ ಹೊರಹಾಕಿದೆ.

ಶಿಕ್ಷಣ ಸಚಿವರ ಏಕಾ ಏಕಿ ನಿರ್ಧಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಸಿಡಿದೆದ್ದಿದೆ. ಶಾಲೆಯಲ್ಲಿ ಮಕ್ಕಳು ಅತ್ಯಂತ ಸುರಕ್ಷಿತರಾಗಿದ್ದರೆ. ಶಾಲೆಗಳಿಂದ ಮಕ್ಕಳಿಗೆ ಎಲ್ಲೂ ಸೋಂಕು ಹರಡಿಲ್ಲ. ಪರೀಕ್ಷೆ ನಡೆಸಲು ಕೂಡ ಅವಕಾಶ ಕೊಟ್ಟಿಲ್ಲ ಎಂದಿವೆ.

ಕಳೆದ ವರ್ಷವೂ ಪರೀಕ್ಷೆ ನಡೆದಿಲ್ಲ , ಈ ವರ್ಷವೂ ನಡೆಯುತ್ತಿಲ್ಲ. ಕೆಲವು ಶಾಲೆಗಳಲ್ಲಿ ಪರೀಕ್ಷೆ ನಡೆಸಲು ತಯಾರಿ ನಡೆಯುತ್ತಿದೆ. ಕನಿಷ್ಟ ಪರೀಕ್ಷೆ ಮುಗಿಸಲು ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ್ದೆವು. ಮನವಿಯನ್ನು ಪರಿಗಣಿಸದೇ ಏಕಾ ಏಕಿ ಮುಚ್ಚಿರುವುದು ಸರಿಯಲ್ಲ ಎಂದು ಖಾಸಗಿ ಶಾಲೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಕೊರೊನಾ 2 ನೇ ಅಲೆ: ಪರೀಕ್ಷಾ ಪದ್ಧತಿ ಪರಿಷ್ಕರಣೆಗೆ ಶಿಕ್ಷಣ ಇಲಾಖೆ ಚಿಂತನೆ ...

ಮುಖ್ಯ ಮಂತ್ರಿಗಳೊಂದಿಗೆ ಇನ್ನೊಮ್ಮೆ ಚರ್ಚಸಿ ಪರೀಕ್ಷೆ ನಡೆಸಲು ಅವಕಾಶಕ್ಕೆ ಆಗ್ರಹಿಸಲಾಗುತ್ತಿದೆ. ಶಾಲೆಗಳಲ್ಲಿ ಕಡ್ಡಾಯವಾಗಿ ನೀತಿ ನಿಯಮಗಳ ಪಾಲನೆ ಆಗುತ್ತಿದೆ. ಕಲಿತ ಮಕ್ಕಳಿಗೆ ತಾರತಮ್ಯ ಆಗುವುದಿಲ್ಲ ಎಂದು ರುಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು.


Related Articles

Advertisement
Previous
Next Post »