'ಬಸವಕಲ್ಯಾಣ'ದ ಉಪ ಚುನಾವಣೆಯಲ್ಲಿ 'ಹಣ ಹಂಚಲು' ಬಂದ ವ್ಯಕ್ತಿಗೆ 'ಚಪ್ಪಲಿ ಏಟು'

April 16, 2021
Friday, April 16, 2021


 ಬೀದರ್ : ಇಂದು ರಾಜ್ಯದ ಎರಡು ವಿಧಾನಸಭಾ ಕ್ಷೇತ್ರ, ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆಗೆ ಮತದಾನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಿನ್ನೆಯ ರಾತ್ರಿ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಬಂದಂತ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪುರಾಂತ ಗ್ರಾಮದಲ್ಲಿ ಶುಕ್ರವಾರದಂದು ವ್ಯಕ್ತಿಯೊಬ್ಬ ಗ್ರಾಮಸ್ಥರಿಗೆ ಹಣ ಹಂಚಲು ಮುಂದಾಗಿದ್ದಾನೆ. ಇದನ್ನು ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದ್ದಲ್ಲದೇ, ಅಡ್ಡಿಯ ನಡುವೆಯೂ ಹಣ ಹಂಚೋದಕ್ಕೆ ಹೊರಟ ವ್ಯಕ್ತಿಯೊಬ್ಬನನ್ನು ಚಪ್ಪಲಿಯಿಂದ ಹೊಡೆದು, ತಳಿಸಿದ್ದಾರೆ.

ಚುನಾವಣಾ ವೀಕ್ಷಕರು ಹಾಗೂ ಪ್ಲೈಯಿಂಗ್ ಸ್ಕ್ವಾಡ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು, ವ್ಯಕ್ತಿಯನ್ನು ಅವರ ವಶಕ್ಕೆ ನೀಡಿದ್ದಾರೆ.

ಈ ಬಳಿಕ ರಾಜಕೀಯ ಪಕ್ಷಗಳೇ ಮತದಾರರನನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ. ನಮ್ಮಲ್ಲಿ ಹಣ ಇಲ್ಲವೇ.? ನಿಮ್ಮ ಹಣ ನಮಗೆ ಏಕೆ ಕೊಡ್ತೀರಿ ಎಂಬುದಾಗಿ ಕಿಡಿಕಾರಿದ್ದಾರೆ.

Thanks for reading 'ಬಸವಕಲ್ಯಾಣ'ದ ಉಪ ಚುನಾವಣೆಯಲ್ಲಿ 'ಹಣ ಹಂಚಲು' ಬಂದ ವ್ಯಕ್ತಿಗೆ 'ಚಪ್ಪಲಿ ಏಟು' | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 'ಬಸವಕಲ್ಯಾಣ'ದ ಉಪ ಚುನಾವಣೆಯಲ್ಲಿ 'ಹಣ ಹಂಚಲು' ಬಂದ ವ್ಯಕ್ತಿಗೆ 'ಚಪ್ಪಲಿ ಏಟು'

Post a Comment