ಎಲೆಕೋಸನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆ ಗೊತ್ತಾ..?

April 23, 2021

 


ಈ ಎಲೆಕೋಸಿನಿಂದ ಜ್ಯುಸ್ ಅನ್ನು ಕೂಡ ಮಾಡಿಕೊಂಡು ಕುಡಿಯಬಹುದು ಇದು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಜ್ಯುಸ್ ಮಾಡುವುದು ಹೇಗೆಂದರೆ ಮೊದಲು ಎಲೆಕೋಸನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಕತ್ತರಿಸಿಕೊಳ್ಳಬೇಕು ಅದಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಸಣ್ಣದಾಗಿ ಜಜ್ಜಿದ ಶುಂಠಿ ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಂಡು ಪ್ರತೀ ದಿನ ಬೆಳಿಗ್ಗೆ ಕುಡಿಯುತ್ತಾ ಬಂದರೆ ಆರೋಗ್ಯ ಉತ್ತಮವಾಗಿ ಇರುತ್ತದೆ.

ಎಲೆಕೋಸಿನಲ್ಲಿ ಬೀಟಾ-ಕ್ಯಾರೋಟಿನ್ ಎಂಬ ಅಂಶ ಇದ್ದು ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹಾಗೂ ಕಣ್ಣಿನ ಪೊರೆಯ ಸಮಸ್ಯೆ ದೂರ ಆಗುತ್ತದೆ. ನಿತ್ಯ ಒಂದು ಗ್ಲಾಸ್ ಎಲೆಕೋಸಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ಎಲೆಕೋಸಿನ ನೀರನ್ನು ನಿತ್ಯ ಸೇವಿಸುವುದರಿಂದ ಚರ್ಮದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಎಲೆಕೋಸು ಫೈಟೊನ್ಯೂಟ್ರಿಯಂಟ್ ಗಳಲ್ಲಿ ಸಮೃದ್ಧವಾಗಿದೆ.ಹಾಗಾಗಿ ನಿತ್ಯ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿಯುತ್ತ ಬಂದರೆ ನಮ್ಮ ದೇಹದಲ್ಲಿ ಇರುವ ರಕ್ತ ಶುದ್ಧಿಯಾಗುತ್ತದೆ. ಕೆಂಪು ಎಲೆಕೋಸನ್ನು ಸೇವನೆ ಮಾಡುವುದರಿಂದ ಕಿಡ್ನಿ ಸಮಸ್ಯೆ ದೂರ ಆಗುತ್ತಾದೆ. ವಾರದಲ್ಲಿ ಎರಡು ಬಾರಿ ಎಲೆಕೋಸಿನ ಸೂಪ್ ಮಾಡಿಕೊಂಡು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಎಲೆಕೋಸಿನಲ್ಲಿರುವ ಟಾರ್‌ಟ್ರೋನಿಕ್‌ ಆಸಿಡ್‌ ಎಂಬ ಅಂಶವು ಆಹಾರದ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್‌ ಅಂಶವನ್ನು ಕೊಬ್ಬಾಗಿ ಪರಿವರ್ತನೆಗೊಳ್ಳುವುದನ್ನು ತಡೆಯುತ್ತದೆ. ಈ ಅಂಶವು ತೂಕ ಇಳಿಸಿಕೊಳ್ಳುವವರಿಗೆ ಉತ್ತಮ.

ಇದರಲ್ಲಿರುವ ಸಮೃದ್ಧ ವಿಟಮಿನ್ ಸಿಯು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಫ್ರೀ ರಾಡಿಕಲ್ ಗಳನ್ನು ಸಹ ಇದು ಹದ್ದು ಬಸ್ತಿನಲ್ಲಿಟ್ಟಿರುತ್ತದೆ.ಎಲೆಕೋಸಿನಲ್ಲಿರುವ ಬೀಟಾ ಕೆರೊಟಿನ್ ಕಣ್ಣಿನ ರಕ್ಷಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಇದು ಮ್ಯಾಕುಲರ್ ಡಿಜನರೇಷನ್ ಉಂಟಾಗದಂತೆ ಕಾಪಾಡುತ್ತದೆ. ಆಗಾಗಿ ಕಣ್ಣಿನ ಪೊರೆ ಉಂಟಾಗುವುದಿಲ್ಲ. ಮಲಬದ್ಧತೆ. ಹೊಟ್ಟೆಯುಬ್ಬರದ ಸಮಸ್ಯೆಯನ್ನು ಈ ಎಲೆಕೋಸಿನ ಸಮಸ್ಯೆಯಿಂದ ದೂರ ಮಾಡಿಕೊಳ್ಳಬಹುದು.

ಎಲೆಕೋಸಿನಲ್ಲಿ ಇರುವ ಕಬ್ಬಿಣಾಂಶದಿಂದ ದೇಹಕ್ಕೆ ಶಕ್ತಿ ಬರುತ್ತದೆ ಮೂಳೆಗಳು ಗಟ್ಟಿ ಆಗುತ್ತವೆ. ನರಗಳ ಸಮಸ್ಯೆ ದೂರ ಆಗುತ್ತದೆ. ಎಲೆಕೋಸಿನ್ನು ಸೇವಿಸುವುದರಿಂದ ದೇಹಕ್ಕೆ ರಕ್ತ ಸಂಚಾರ ಸುಗಮವಾಗಿ ಹರಿಯುತ್ತದೆ. ಎಲೆಕೋಸಿನಲ್ಲಿ ವಿಟಮಿನ್ ಸಿ ಅಂಶವು ಹೇರಳವಾಗಿದ್ದು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲೆಕೋಸಿನಲ್ಲಿ ವಿಟಮಿನ್ ಕೆ ಅಂಶ ಇದ್ದು ಇದು ನಮ್ಮ ಮರೆವಿನ ಸಮಸ್ಯೆಯನ್ನು ದೂರ ಮಾಡುತ್ತದೆ.

ಸಾಮಾನ್ಯವಾಗಿ ಎಲೆಕೋಸುಗಳಿಂದ ಪಲ್ಯ, ಪಕೋಡಾ ಮಾಡುತ್ತಾರೆ. ಅದು ಕೂಡ ಅಪರೂಪವಾಗಿ. ಇನ್ನು ದೊಡ್ಡ ರೆಸ್ಟೊರೇಂಟ್​ಗಳಲ್ಲಿ ಸಲಾಡ್​ಗಳ ರೂಪದಲ್ಲಿ ಕ್ಯಾಬೇಜ್​ನ್ನು ನೀಡಲಾಗುತ್ತದೆ. ಇದರ ಹೊರತಾಗಿ ಪ್ರತಿನಿತ್ಯ ಎಲೆಕೋಸು ತಿನ್ನುವವರು ತುಂಬಾ ವಿರಳ.ಆದರೆ ಪ್ರತಿನಿತ್ಯ ಅಥವಾ ವಾರಕ್ಕೆ ಎರಡು ಮೂರು ಬಾರಿ ಎಲೆಕೋಸು ಆಹಾರಗಳನ್ನು ಸೇವಿಸುವುದರಿಂದ ನಾನಾ ರೀತಿಯ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹದು. ಏಕೆಂದರೆ ಈ ತರಕಾರಿಯಲ್ಲಿ ನಾರಿನಾಂಶ ಹೇರಳವಾಗಿರುತ್ತದೆ.

Related Articles

Advertisement
Previous
Next Post »