ಉಡುಪಿ : ಕರ್ತವ್ಯ ಲೋಪ ಪ್ರಕರಣ : ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅಮಾನತು

April 09, 2021

 


ಉಡುಪಿ: ಕರ್ತವ್ಯ ಲೋಪ ಪ್ರಕರಣದಲ್ಲಿ ಉಡುಪಿ ಬಿಇಒ ಮಂಜುಳಾ ಕೆ. ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.ಇವರ ವಿರುದ್ದ ಹಲವಾರು ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮವನ್ನು ಇಲಾಖೆ ಕೈಗೊಂಡಿದೆ.

ಪ್ರಸ್ತುತ ಮಂಜುಳಾ ಕೆ ಇವರನ್ನು ಡಯಟ್ ಮಂಗಳೂರು ಇಲ್ಲಿಗೆ ವರ್ಗ ಮಾಡಲಾಗಿದೆ.ಇವರ ಕಚೇರಿಯ ಕರ್ತವ್ಯ ನಿರ್ವಹಣೆ ಅತಿಥಿ ಶಿಕ್ಷಕರ ನಿಯೋಜನೆ ಮತ್ತು ಅಕ್ಷರ ದಾಸೋಹ ಕಾರ್ಯಕ್ರಮ ಸರಿಯಾಗಿ ನಿರ್ವಹಿಸದೇ ಇರುವ ಬಗ್ಗೆ ತನಿಖಾ ಸಮಿತಿ ರಚನೆ ಮಾಡಿ ಸದರಿ ಸಮಿತಿ ಸಲ್ಲಿಸಿರುವ ವರದಿ ಅನ್ವಯ ಕ್ರಮ ಕೈಗೊಳ್ಳಲಾಗಿದೆ.

ಉಡುಪಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮೂಲ ಶಾಲೆಯಿಂದ ಅಗತ್ಯವಿರುವ ಶಾಲೆಗಳಿಗೆ ನಿಯೋಜನೆ ಮಾಡಿ ಆ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನಿಯಮಗಳಿಗೆ ವಿರುದ್ಧವಾಗಿ ನೇಮಕಾತಿ ಮಾಡಿರುವುದು ಸೇರಿದಂತೆ ಇನ್ನಿತರ ಆರೊಪಗಳು ಇವರ ವಿರುದ್ದ ಕೇಳಿ ಬಂದಿದ್ದವು.

Related Articles

Advertisement
Previous
Next Post »