ಊಟ ಆದ ನಂತರ ಒಂದು ಸಣ್ಣ ತುಂಡು ಬೆಲ್ಲ ತಿನ್ನೋದ್ರಿಂದ ಎಷ್ಟೊಂದು ಲಾಭವಿದೆ ಗೊತ್ತಾ..?

April 22, 2021
Thursday, April 22, 2021

 


ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಿಹಿ ತಿಂಡಿಗಳಲ್ಲಿಯೂ ಸಕ್ಕರೆ ಬಳಕೆ ಹೆಚ್ಚಾಗಿದೇ ಅದರಲ್ಲೂ ಕಾಫಿ ಟೀ ಗಳಲ್ಲೂ ಸಹ ಸಕ್ಕರೆಯ ಬಳಕೆ ಹೆಚ್ಚಾಗಿದೆ. ಆದರೆ ಸಕ್ಕರೆಯ ಮೂಲವಾಗಿ ನಮ್ಮ ಆರೋಗ್ಯಕ್ಕೆ ಸಿಗುವ ಲಾಭ ನಮಗೆ ಏನೂ ಇಲ್ಲ. ಸಕ್ಕರೆಯನ್ನು ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ, ಸಕ್ಕರೆಯನ್ನ ಬಿಳಿಯ ದೆವ್ವ ಅಂತ ಹೇಳ್ತಾರೆ.

ಹಾಗಾಗಿ ನಮ್ಮ ಆರೋಗ್ಯದ ದೃಷ್ಟಿಯಿಂದ ಸಕ್ಕರೆಗಿಂತಲೂ ಬೆಲ್ಲ ಉತ್ತಮ ಹಾಗೂ ಒಳ್ಳೆಯದು ಎನ್ನಬಹುದು. ದಿನ ನಿತ್ಯಕ್ಕಿಂತಲೂ ಯಾವುದೋ ಹಬ್ಬ ಹರಿದಿನಗಳಲ್ಲಿ ಬೆಲ್ಲವನ್ನು ಬಳಕೆ ಮಾಡ್ತೀವಿ ಆದರೆ ದಿನದಿಂದ ದಿನಕ್ಕೆ ಇದರ ಬಳಕೆ ಕಡಿಮೆ ಆಗುತ್ತಲೇ ಬರುತ್ತಿದೆ. ಏನಿದು ಬರೀ ಬೆಲ್ಲ ಅಂತ ಇದನ್ನ ಅಲ್ಲಗಳೆಯುವಂತಿಲ್ಲ. ಬೆಲ್ಲದಿಂದಲೂ ಕೂಡಾ ನಮ್ಮ ದೇಹಕ್ಕೆ ಹಲವಾರು ಅರೋಗ್ಯಕಾರಿ ಅಂಶಗಳು ಇವೆ.

ಊಟ ಆದ ನಂತರ ನೀವು ಇದನ್ನು ತಿಂದರೆ ನಿಮಗೆ ಆರೋಗ್ಯ ಸುಪರ್ ಆಗಿರುತ್ತೆ ಅಂತೆ.

ಸಾಕಷ್ಟು ವೈಜ್ಞಾನಿಕ ಸಂಶೋಧನೆಯಿಂದ ಈ ಮಾಹಿತಿ ಹೊರ ಬಿದಿದ್ದೆ. ನಮ್ಮಲ್ಲಿ ಈಗಲೂ ಸಾಕಷ್ಟು ಜನಕ್ಕೆ ಯಾವ ಸಮಯಕ್ಕೆ ಯಾವ ಆಹಾರ ತಿನ್ನಬೇಕು ಮತ್ತು ಏನು ತಿನ್ನಬೇಕು ಎಂಬುದು ಗೊತ್ತಿಲ್ಲ. ನಮ್ಮ ದೈನಂದಿನ ಉಟ ಉಪಚಾರ ಎಲ್ಲವು ಸಹ ನಿಯಮಿತವಾಗಿ ಮಾಡಿದ್ರೆ ಮತ್ತು ಯಾವ ಖಾಯಿಲೆಗೆ ಯಾವ ಆಹಾರ ತಿನ್ನಬೇಕು ಎಂದು ನಾವು ತಿಳಿದಿದ್ದರೆ ಮನುಷ್ಯ ಯಾವುದೇ ಸಮಸ್ಯೆಗೆ ಒಳಗಾಗುವುದಿಲ್ಲ.

ನಾವು ಪ್ರತಿ ನಿತ್ಯ ಊಟದ ನಂತರ ಒಂದು ಸಣ್ಣ ತುಂಡು ಬೆಲ್ಲ ತಿಂದರೆ ನಮಗೆ ಸಾಕಷ್ಟು ರೀತಿಯ ಅರೋಗ್ಯ ಲಾಭ ಸಿಗಲಿದೆ. ಈ ಬೆಲ್ಲದ ತುಂಡಿನ ಸೇವನೆ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಮಾಡಿಸುತ್ತದೆ. ಶೀತ ಕೆಮ್ಮು ನೆಗಡಿ ಅಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ಬರದಂತೆ ತಡೆಯುತ್ತದೆ. ಒಂದು ಸಣ್ಣ ಬೆಲ್ಲದ ಪೀಸ್ ನಲ್ಲಿ ಹೇರಳವಾದ ಕಬ್ಬಿಣ ಕ್ಯಾಲ್ಸಿಯಂ ಪೊಟಾಷಿಯಂ ಅಂಶ ಹೆಚ್ಚಿದೆ. ಇದು ನಮ್ಮ ದೇಹಕ್ಕೆ ಬೇಕಾದ ಎಲ್ಲ ರೀತಿಯ ಶಕ್ತಿ ನೀಡುತ್ತದೆ. ಅದರಲ್ಲೂ ಊಟದ ನಂತರ ಬೆಲ್ಲ ತಿನ್ನುವುದು ತುಂಬಾ ಒಳ್ಳೆಯದು ಆದರೆ ಯಾವುದೇ ಕಾರಣಕ್ಕೂ ಅದು ಅತೀ ಆಗಬಾರದು ಅಷ್ಟೇ.

ಹೀಗೆ ಬೆಲ್ಲದಿಂದ ಇನ್ನು ಅನೇಕ ರೀತಿಯ ಪ್ರಯೋಜನ ನಾವು ಪಡೆಯಬಹುದು. ನಮ್ಮಲ್ಲಿ ಸಾಕಷ್ಟು ಜನರು ಕೆಮ್ಮು ಬಂತು ಅಂದ್ರೆ ಸಾಕು ಮೆಡಿಕಲ್ ನಿಂದ ಯಾವುದೇ ಕೆಮ್ಮಿನ ಮಾತ್ರೆ ತಂದು ನುಂಗಿ ವಾಸಿ ಆದರೆ ಸಾಕಪ್ಪ ಅನ್ನುತ್ತಾರೆ. ಆದರೆ ನೀವು ಹೀಗೆ ಮಾಡಿದ್ರೆ ನಿಮ್ಮ ಜೀವಕ್ಕೂ ಅಪಾಯ ಆಗಬಹುದು. ವೈದ್ಯರ ಸೂಚನೆ ಇಲ್ಲದೆ ನೀವು ಮಾಡುವ ಇಂದಿನ ತಪ್ಪುಗಳು ನಾಳೆ ದಿನ ದೊಡ್ಡ ಮಟ್ಟದಲ್ಲಿ ಕಾಡಿಸುತ್ತದೆ. ಆದರೆ ನಿಮಗೆ ಚಿಂತೆ ಬೇಡ. ಮನೆ ಮದ್ದು ಮಾಡಿದ್ರೆ ಯಾವುದೇ ರೀತಿಯ ಅರೋಗ್ಯಕ್ಕೆ ತೊಂದ್ರೆ ಆಗುವುದಿಲ್ಲ.

ಮನೆ ಮದ್ದು ಸ್ವಲ್ಪ ನಿಧಾನವಾಗಿ ಕೆಲಸ ಮಾಡಿದ್ರು ಅದರಿಂದ ಸಮಸ್ಯೆಗಳು ಬರೋದಿಲ್ಲ. ಕೆಮ್ಮು ಬಂತು ಅಂದ್ರೆ ಬೆಲ್ಲದ ಪಾನಕಕ್ಕೆ ತುಳಸಿ ಎಲೆ ಹಾಕಿ ಕುಡಿಯಿರಿ. ಇದನ್ನು ಬೆಳ್ಳಗೆ ಮದ್ಯಾನ ಎರಡು ಸಮಯ ತೆಗೆದುಕೊಂಡರು ಸಾಕು ನಿಮ್ಮ ಕೆಮ್ಮಿಗೆ ಶಾಶ್ವತ ಪರಿಹಾರ ಮಾಡಬಹುದು. ತಪ್ಪದೇ ಈ ಮಾಹಿತಿ ಎಲ್ಲರೊಂದಿಗೆ ಶೇರ್ ಮಾಡಿರಿ ನಮ್ಮ ಬಳಿ ಇರುವ ಮನೆಮದ್ದಾಗಿ ಪರಿವರ್ತನೆ ಮಾಡಿಕೊಂಡರೆ ಖಂಡಿತ ಹಾಲು ರೀತಿಯ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ಹೇಳಬಹುದು.

ಬೆಲ್ಲದಲ್ಲಿರುವ ಮ್ಯಾಗ್ನಿಶಿಯಂ ಅಂಶವು ದೇಹದಲ್ಲಿ ಕ್ಯಾನ್ಸರ್ ಬರದಂತೆ ಆ ಅಂಶವನ್ನು ತಡೆಯುತ್ತದೆ. ಇದರಿಂದಾಗಿ ಕ್ಯಾನ್ಸರ್ ಬರದಂತೆಯೇ ತಡೆಯುತ್ತದೆ. ಆದರೆ, ಡಯಾಬಿಟಿಸ್ ಇರುವವರು ನಿಯಮಿತ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸಿದರೆ ಒಳ್ಳೆಯದು. ಹೀಗೆಲ್ಲ ಮಾಡುವುದರಿಂದ ಬೆಲ್ಲವನ್ನು ಸೇವಿಸುವ ಮೂಲಕ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ, ದಿನನಿತ್ಯದ ಅಡುಗೆಯಲ್ಲಿ ಆಹಾರದಲ್ಲಿ ಬೆಲ್ಲವನ್ನೇ ಬಳಸಿ.

Thanks for reading ಊಟ ಆದ ನಂತರ ಒಂದು ಸಣ್ಣ ತುಂಡು ಬೆಲ್ಲ ತಿನ್ನೋದ್ರಿಂದ ಎಷ್ಟೊಂದು ಲಾಭವಿದೆ ಗೊತ್ತಾ..? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಊಟ ಆದ ನಂತರ ಒಂದು ಸಣ್ಣ ತುಂಡು ಬೆಲ್ಲ ತಿನ್ನೋದ್ರಿಂದ ಎಷ್ಟೊಂದು ಲಾಭವಿದೆ ಗೊತ್ತಾ..?

Post a Comment