ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

April 28, 2021

 


ಡಿಜಿಟಲ್ ಡೆಸ್ಕ್ : ಉದ್ಯೊಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 28,2021 ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಆನ್ ಲೈನ್ https://www.dkmul.com/index.html ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅಲ್ಲಿ ಕೋರಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಮೇ 28,2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ಅರ್ಜಿ ಪ್ರಾರಂಭ: 28-04-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-05-2021

ವಿದ್ಯಾರ್ಹತೆ

ಬಿವಿಎಸ್ಸಿ, ಎಎಚ್, ಬಿಎಸ್ಸಿ, B.Tech, ಎಂಎಸ್ಸಿ,ಬಿ.ಇ, ಪದವಿ, ಎಂಜಿನಿಯರಿಂಗ್ ಡಿಪ್ಲೊಮಾ, ಬಿಕಾಂ, ಬಿಬಿಎಂ, ಎಂಬಿಎ, ಎಸ್ ಎಸ್ ಎಲ್ ಸಿ ಮತ್ತು ಐಟಿಐ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ

ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 5 ವರ್ಷಗಳ ವಯಸ್ಸಿನ ಮಿತಿಯನ್ನು ಎಸ್ಸಿ / ಎಸ್ಟಿ / ಪ್ರವರ್ಗ - 1 ರ ಅಭ್ಯರ್ಥಿಗಳಿಗೆ, 2ಎ, 2ಬಿ, 3ಎ, 3ಬಿ ವರ್ಗಕ್ಕೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ

ಅರ್ಜಿದಾರರು ಅರ್ಜಿ ಶುಲ್ಕವನ್ನು ರೂ.800 / -, ಎಸ್ಸಿ / ಎಸ್ಟಿ / ವರ್ಗ - 1 ಅಭ್ಯರ್ಥಿಗಳು ರೂ.500 / -ಮೇ 29, 2021 ರಂದು ಸಂಜೆ 5:30 ರೊಳಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹುದ್ದೆಗಳ ವಿವರಗಳು

ಸಹಾಯಕ ವ್ಯವಸ್ಥಾಪಕರು- 07

ತಾಂತ್ರಿಕ ಅಧಿಕಾರಿ - 04

ತಾಂತ್ರಿಕ ಅಧಿಕಾರಿ - 01

ತಾಂತ್ರಿಕ ಅಧಿಕಾರಿ (ಎಂಜಿನಿಯರಿಂಗ್) - 01

ವಿಸ್ತರಣಾಧಿಕಾರಿ ಗ್ರೇಡ್ -3- 4 + 4 (ಇತರ ಅಭ್ಯರ್ಥಿಗಳು)

ಡೈರಿ ಸೂಪರ್ ವೈಸರ್ ಗ್ರೇಡ್-2 - 05 ಪೋಸ್ಟ್ಗಳು

ಆಡಳಿತ ಸಹಾಯಕರು ಗ್ರೇಡ್-2 - 10 ಹುದ್ದೆಗಳು

ಕೆಮಿಸ್ಟ್ ಗ್ರೇಡ್ -2 - 12 ಹುದ್ದೆಗಳ

ಲೆಕ್ಕಾಚಾರ ಸಹಾಯಕರು ಗ್ರೇಡ್-2- 02 ಹುದ್ದೆಗಳು

ಕಿರಿಯ ತಂತ್ರಜ್ಞರು - 30 ಹುದ್ದೆಗಳು

ಒಟ್ಟು 80 ಹುದ್ದೆಗಳು

ವೇತನ: ತಿಂಗಳಿಗೆ ರೂ.21,400/- ರಿಂದ ರೂ.97,100 /-

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕರೂ.800 / -, ಎಸ್ಸಿ / ಎಸ್ಟಿ / ವರ್ಗ- 1 ಅಭ್ಯರ್ಥಿಗಳು ರೂ.500 / -ಮೇ 29, 2021 ರಂದು ಸಂಜೆ 5:30 ರೊಳಗೆ ಪಾವತಿಸಬೇಕು.

Related Articles

Advertisement
Previous
Next Post »