ಭೀಕರ ಅಪಘಾತ, ಕಾರು ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು.

April 02, 2021
Friday, April 2, 2021ಬಾಗಲಕೋಟೆ: ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿ ಕಾರು ಪಲ್ಟಿಯಾಗಿದ್ದು, ಅದು ಮಗುಚಿ ಬಿದ್ದ ತೀವ್ರತೆಗೆ ಕಾರು ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಚಿಕ್ಕನಾಳ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದ್ದು, ಚಾಲಕ ದಾವಲಸಾಬ ಪಿಂಜಾರ್ (36) ಮೃತಪಟ್ಟರು.

ಹುನಗುಂದ ಪಟ್ಟಣದಿಂದ ಪಟ್ಟದಕಲ್ಲು ಗ್ರಾಮದ ಕಡೆಗೆ ಹೊರಟಿದ್ದ ಮಾರುತಿ ಸ್ವಿಫ್ಟ್​ ಕಾರು ಸಿಗುತ್ತಿದ್ದು, ಮಾರ್ಗಮಧ್ಯೆ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ಈ ಸಂದರ್ಭ ರಸುಲ್ ಸಾಬ್ ಮಕಾಂದರ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತಪಟ್ಟ ಚಾಲಕ ಹಾಗೂ ಗಾಯಗೊಂಡಿರುವ ವ್ಯಕ್ತಿ ಇಬ್ಬರೂ ಹುನಗುಂದದವರು. ಗಾಯಾಳುವನ್ನು ಹುನಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


Thanks for reading ಭೀಕರ ಅಪಘಾತ, ಕಾರು ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು. | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಭೀಕರ ಅಪಘಾತ, ಕಾರು ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು.

Post a Comment