'ಕೆಟ್ಟ ದೃಷ್ಟಿ' ಎಂಬುದೊಂದು ನಿಜವಾಗಿಯೂ ಇದೆಯಾ..?

April 22, 2021

 


ನೀವೆಲ್ಲಾದರೂ ಹೊರಗೆ ಹೋಗಿ ಬಂದಾಗ ನಿಮ್ಮ ಮನೆಯಲ್ಲಿ ಅಜ್ಜಿ ಅಥವಾ ತಾಯಿ ದೃಷ್ಟಿ ತೆಗೆಯುತ್ತಾರೆ. ನಿಮ್ಮ ಜೀವನದ ಶುಭ ಸುದ್ದಿಗಳನ್ನು ನಿರ್ದಿಷ್ಟ ಜನರ ಬಳಿ ಹೇಳಬಾರದು.

ಅವರ ಅಸೂಯೆಯು ನಿಮ್ಮ ಬೆಳವಣಿಗೆಗೆ ತೊಡಕಾಗಬಹುದು ಎಂದು ಹಿರಿಯರು ಹೇಳುವುದು ಕೇಳಿರುತ್ತೀರಿ. ಜನರು ಯಾವಾಗಲೂ ಕೆಟ್ಟ ದೃಷ್ಟಿಯ ಬಗ್ಗೆ ಭಯ ಹೊಂದಿರುತ್ತಾರೆ. ಹಾಗಾದರೆ, ಕೆಟ್ಟ ದೃಷ್ಟಿ ಎಂದರೇನು? ಅದನ್ನು ನಿವಾರಿಸಬೇಕಾದ ಅಗತ್ಯವಿದೆಯೇ?

ಈ ಕೆಟ್ಟ ದೃಷ್ಟಿ ಎಂಬುದು ಮಾನವ ಕಾಂತಿಗೆ ಸಂಬಂಧಿಸಿದ್ದಾಗಿದೆ. ಈ ಕಾಂತಿಯನ್ನು ಪ್ರತಿಯೊಬ್ಬ ಮನುಷ್ಯನ ಸುತ್ತ ಇರುವ ಶಕ್ತಿಯ ರಕ್ಷಾಕವಚ ಎಂದು ಪರಿಗಣಿಸಲಾಗುತ್ತದೆ. ಈ ಕಾಂತಿಯೇ ವ್ಯಕ್ತಿ ಅಥವಾ ಸ್ಥಳದ ಶಕ್ತಿಯನ್ನು ಮೊದಲು ಗ್ರಹಿಸುವ ಸಂಗತಿಯಾಗಿದೆ.

ನಿರ್ದಿಷ್ಟ ವ್ಯಕ್ತಿಗಳು ಹಾಗೂ ನಿರ್ದಿಷ್ಟ ಸ್ಥಳಗಳಲ್ಲಿ ಖುಷಿ ಹಾಗೂ ಶಕ್ತಿ ತುಂಬಿರುವುದನ್ನು ನೀವು ಗಮನಿಸಿದ್ದೀರಾ?

ಹಾಗೆಯೇ ಕೆಲವರ ಬಳಿ ಶಕ್ತಿ ಪೂರ್ತಿ ಖಾಲಿಯಾದ ಹಾಗೂ ಋಣಾತ್ಮಕ ಕಾಂತಿಯೂ ಇರುತ್ತದೆ. ಈ ಋಣಾತ್ಮಕ ಪರಿಣಾಮ ನಿಮ್ಮ ಮೇಲೂ ಬೀರುತ್ತದೆ.

ಧನಾತ್ಮಕ ಕಾಂತಿಯುತ ವ್ಯಕ್ತಿಗಳ ಬಳಿ ಹೋದರೆ ಅವರಿಂದ ಧನಾತ್ಮಕ ಕಾಂತಿಯು ನಮ್ಮತ್ತ ಸೆಳೆಯಲ್ಪಡುತ್ತದೆ. ಹಾಗೆಯೇ ಋಣಾತ್ಮಕ ಕಾಂತಿಯ ವ್ಯಕ್ತಿಗಳ ಬಳಿ ಹೋದರೆ ಋಣಾತ್ಮಕ ಕಾಂತಿ ನಮ್ಮನ್ನೂ ಆವರಿಸುತ್ತದೆ. ಇದನ್ನೇ ಗ್ರಾಮ್ಯ ಭಾಷೆಯಲ್ಲಿ 'ಕೆಟ್ಟ ದೃಷ್ಟಿ' ಎಂದು ಕರೆಯುತ್ತಾರೆ.


Related Articles

Advertisement
Previous
Next Post »