ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು: ವಿಷಯ ತಿಳಿದು ಕೊನೆಯುಸಿರೆಳೆದ ಅಜ್ಜಿ!

April 09, 2021
Friday, April 9, 2021


 ಮಡಿಕೇರಿ: ನಾಪತ್ತೆಯಾಗಿದ್ದ ಮೊಮ್ಮಗ ಶವವಾಗಿ ದೊರೆತಿದ್ದನ್ನು ಕಂಡು ಆತನ ಅಜ್ಜಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ತನ್ನ ಸ್ನೇಹಿತರೊಂದಿಗೆ ಆಟವಾಡಲೆಂದು ತೆರಳಿದ್ದ ವಿದ್ಯಾರ್ಥಿ ಮುಬಾಶೀರ್ (18) ಗುರುವಾರ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಸ್ನೇಹಿತರೊಂದಿಗೆ ಪ್ರಶ್ನಿಸಿದಾಗ ಸುಂಟಿಕೊಪ್ಪ ಸಮೀಪ ಹೊಸತೋಟದ ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕೆಂದು ನೀರಿಗಿಳಿದ ಮುಬಾಶೀರ್ ಮತ್ತೆ ಮೇಲೆ ಬಾರದೆ ಇರುವುದನ್ನು ತಿಳಿಸಿದ್ದಾರೆ.

ಮೊಮ್ಮಗ ನೀರು ಪಾಲಾದ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅಜ್ಜಿ ರುಕಿಯಾ (62 ವ) ಕುಸಿದು ಬಿದ್ದು ಮೃತಪಟ್ಟರು.

ರಾತ್ರಿ ವೇಳೆ ಹಾರಂಗಿ ಹಿನ್ನೀರಿನಲ್ಲಿ ಮುಬಾಶೀರ್ ಮೃತದೇಹ ಹುಡುಕಾಡಲು ಸಾಧ್ಯವಾಗದ ಕಾರಣ ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಮೃತದೇಹ ದೊರೆತ್ತಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Thanks for reading ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು: ವಿಷಯ ತಿಳಿದು ಕೊನೆಯುಸಿರೆಳೆದ ಅಜ್ಜಿ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು: ವಿಷಯ ತಿಳಿದು ಕೊನೆಯುಸಿರೆಳೆದ ಅಜ್ಜಿ!

Post a Comment