ಕಿವಿ ಹಣ್ಣು ಸೇವಿಸಿ ಈ ಮಾರಕ ಖಾಯಿಲೆಯಿಂದ ದೂರವಿರಿ

April 11, 2021

 


ಥೇಟ್​ ಸಪೋಟಾ ಹಣ್ಣಿನಂತೆ ಕಾಣುವ ಕಿವಿ ಹಣ್ಣು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಾಮಿನ್​ ಸಿ, ಇ , ಪೊಟ್ಯಾಷಿಯಂ, ಕ್ಯಾಲ್ಸಿಯಂ, ಫೈಬರ್​​, ಆಂಟಿ ಆಕ್ಸಿಡಂಟ್​ ಅಗಾಧ ಪ್ರಮಾಣದಲ್ಲಿದೆ. ಮಧ್ಯಮ ಗಾತ್ರದ ಕಿವಿ ಹಣ್ಣನ್ನ ಸೇವನೆ ಮಾಡೋದ್ರಿಂದ ದೇಹಕ್ಕೆ ಅಗಾಧ ಪ್ರಮಾಣದ ಪೋಷಕಾಂಶ ಸಿಗಲಿದೆ.

ಕಿವಿ ಹಣ್ಣುಗಳಿಗೆ ದೇಹದಲ್ಲಿ ಬಿಳಿ ರಕ್ತಕಣಗಳನ್ನ ಹೆಚ್ಚು ಮಾಡುವ ಶಕ್ತಿ ಇದೆ. ಕಿವಿ ಹಣ್ಣು ಡೆಂಗ್ಯೂನಿಂದ ಬಳಲುತ್ತಿರುವವರಿಗೆ ನೀಡಬೇಕು. ಉದರದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಕಿವಿ ಹಣ್ಣಿನಲ್ಲಿರುವ ಫೈಬರ್​ ಅಂಶದಿಂದಾಗಿ ರಿಲೀಫ್​ ಸಿಗಲಿದೆ.

ಕಿವಿ ಹಣ್ಣಿನಲ್ಲಿ ಕ್ಯಾಲರಿ ಪ್ರಮಾಣ ತುಂಬಾನೇ ಕಡಿಮೆ ಇರೋದ್ರಿಂದ ತೂಕ ಇಳಿಕೆ ಮಾಡುವವರು ನಿಮ್ಮ ಆಹಾರ ಕ್ರಮದಲ್ಲಿ ಈ ಹಣ್ಣನ್ನ ಎರಡನೇ ಯೋಚನೆ ಮಾಡದೇ ಸೇರಿಸಿಕೊಳ್ಳಬಹುದು.

ದಿನನಿತ್ಯ ಕಿವಿ ಹಣ್ಣನ್ನು ಸೇವನೆ ಮಾಡೋದ್ರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಲಿದೆ.

ಕಿವಿ ಹಣ್ಣಿನ ಸೇವನೆಯಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿ ಇರುತ್ತೆ ಅಂತಾ ಅಧ್ಯಯನವೊಂದು ಹೇಳಿದೆ. ಈ ಹಣ್ಣಿನಲ್ಲಿರುವ ಮೆಗ್ನೀಷಿಯಂ ಹಾಗೂ ಪೊಟ್ಯಾಷಿಯಂ ಅಂಶ ರಕ್ತದೊತ್ತಡವನ್ನ ಸರಿದೂಗಿಸುವ ಕಾರ್ಯವನ್ನ ಮಾಡುತ್ತೆ. ಹೃದಯ ಸಂಬಂಧಿ ಕಾಯಿಲೆ ಇರುವವರೂ ಕೂಡ ಈ ಹಣ್ಣನ್ನ ಸೇವಿಸಿದ್ರೆ ಒಳ್ಳೆಯದು.

Related Articles

Advertisement
Previous
Next Post »