ಕೆಲಸ ಖಾಲಿ ಇದೆ: ರಾಜ್ಯಾದ್ಯಂತ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

April 23, 2021

 


ಬೆಂಗಳೂರು: ಮಿತಿಮೀರಿರುವ ಕರೊನಾ ಹಾವಳಿಯ ಈ ಸಂದರ್ಭದಲ್ಲಿ ಹಲವರು ಕೆಲಸ ಕಳೆದುಕೊಳ್ಳುತ್ತಿದ್ದು, ಇನ್ನು ಕೆಲವರು ನಿರುದ್ಯೋಗಿಗಳಾಗುವ ಆತಂಕ ಎದುರಿಸುತ್ತಿದ್ದಾರೆ. ಅದಾಗ್ಯೂ ಈ ನಡುವೆ ರಾಜ್ಯಾದ್ಯಂತ ಉದ್ಯೋಗಾವಕಾಶಗಳಿವೆ. ಯುನೈಟೆಡ್​ ನೇಷನ್ಸ್ ಡೆವಲಪ್​ಮೆಂಟ್​ ಪ್ರೋಗ್ರಾಮ್​ (ಯುಎನ್​ಡಿಪಿ) ಇಂಥದ್ದೊಂದು ಅವಕಾಶವನ್ನು ಮುಂದಿಟ್ಟಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ತುಮಕೂರು, ಗದಗ, ಉತ್ತರಕನ್ನಡ, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ವಿಜಯಪುರಗಳಲ್ಲಿ ಐವತ್ತಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಅರ್ಹರಿಂದ ಯುಎನ್​ಡಿಪಿ ಅರ್ಜಿ ಆಹ್ವಾನಿಸಿದೆ. ಗ್ರಾಮೀಣಾಭಿವೃದ್ಧಿ, ಜೀವನೋಪಾಯ ಸಂವರ್ಧನೆ, ಉದ್ಯಮಶೀಲತೆ ಅಭಿವೃದ್ಧಿ, ಕೃಷಿಯೇತರ ಕ್ಷೇತ್ರ, ಕೃಷಿ ಕ್ಷೇತ್ರದಲ್ಲಿ ಅನುಭವ ಉಳ್ಳವರು ಅರ್ಜಿ ಸಲ್ಲಿಸಬಹುದು.

ಉದ್ಯೋಗಾಕಾಂಕ್ಷಿಗಳು ಮೇ 3ರ ಒಳಗೆ ಅರ್ಜಿ ಸಲ್ಲಿಸಬೇಕು. ಖಾಲಿ ಇರುವ ಹುದ್ದೆ, ಸ್ಥಳ ಹಾಗೂ ಅರ್ಜಿ ನಮೂನೆ ಇತ್ಯಾದಿ ವಿವರಗಳನ್ನು ಯುಎನ್​ಡಿಪಿ ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್​ ಕ್ಲಿಕ್ಕಿಸಿದರೆ ವಿವರ ಲಭ್ಯ ಇರುತ್ತದೆ.

https://www.in.undp.org/content/india/en/home/jobs.html

Related Articles

Advertisement
Previous
Next Post »