ಎಸ್.ಎಸ್.ಎಲ್.ಸಿ. - ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

April 16, 2021
Friday, April 16, 2021

 


ಚಾಮರಾಜನಗರ: ಸಿ ಬಿ ಎಸ್ ಸಿ 10ನೇ ತರಗತಿ ಪರೀಕ್ಷೆ ರದ್ದು ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಗಳು ರದ್ದಾಗಲಿವೆ ಎಂಬ ಬಗ್ಗೆ ಸುದ್ದಿಗಳು ಹರಡುತ್ತಿವೆ ಈ ಬಗ್ಗೆ ಇಂದು ಸ್ವತ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಸುರೇಶ್ ಕುಮಾರ್, ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯು ಪರೀಕ್ಷೆಗಳು ನಡೆಯಲಿವೆ. ಈ ಬಗ್ಗೆ ಗೊಂದಲ ಬೇಡ. ಎಸ್.ಎಸ್.ಎಲ್.ಸಿ. ಪರೀಕ್ಷೆ ನಿಗದಿಯಾಗಿರುವುದು ಜೂನ್ 21ರಿಂದ ಕಳೆದ ವರ್ಷ ನಿಡಲಾಗಿದ್ದ ಎಸ್‌ಒಪಿಯನ್ನೇ ಅಳವಡಿಕಾ ಕ್ರಮವಾಗಿ ಅನುಸರಿಸಲಾಗುವುದು ಎಂದರು.

ಪರೀಕ್ಷೆ ನಡೆಸಬೇಕು ಎಂಬುದು ಹಲವರ ಒತ್ತಾಯ. ಈ ಬಗ್ಗೆ ಸಭಾಪತಿ ಬಸವರಾಜ್ ಹೊರಟ್ಟಿ ಕೂಡ ಪತ್ರ ಬರೆದಿದ್ದಾರೆ. ಪರೀಕ್ಷಾ ದಿನಾಂಕಕ್ಕೆ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ. ಹಾಗಾಗಿ ಆಗಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನು 1-9ನೇ ತರಗತಿ ಪರೀಕ್ಷೆಗಳ ಬಗ್ಗೆ ಒಂದೆರಡು ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಗುತ್ತದೆ ಎಂದು ಹೇಳಿದರು.

Thanks for reading ಎಸ್.ಎಸ್.ಎಲ್.ಸಿ. - ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಎಸ್.ಎಸ್.ಎಲ್.ಸಿ. - ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

Post a Comment