ಹೆಬ್ಬಾವು ಅಂತ ಕೊಳಕುಮಂಡಲ ಹಾವು ಹಿಡಿಯಲು ಹೋಗಿ ದುರಂತ ಅಂತ್ಯ ಕಂಡ ಯುವಕ

April 12, 2021
Monday, April 12, 2021

 


ಮೈಸೂರು: ಹೆಬ್ಬಾವು ಅಂತ ವಿಷಪೂರಿತ ಹಾವನ್ನು ಹಿಡಿಯಲು ಹೋಗಿ ಯುವಕನೊಬ್ಬ ತನ್ನ ಜೀವವನ್ನೆ ಕಳೆದುಕೊಂಡಿದ್ದಾನೆ. ಈ ಘಟನೆ ಮೈಸೂರಿನಲ್ಲಿ ನಡೆದಿದ್ದು ಸದ್ಯ ಈತ ಹಾವು ಹಿಡಿಯುತ್ತಿರುವ ಮತ್ತು ಹಾವು ಕಚ್ಚಿದ ದೃಶ್ಯ ವೈರಲ್​ ಆಗಿದೆ.

ನಗರದ ವಿದ್ಯಾರಣ್ಯಪುರಂ ನಿವಾಸಿ ಮಧು(24) ಮೃತ. ಮೈಸೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಎಲೆಕ್ಟ್ರಿಕ್ ಕೆಲಸ ನಿಮಿತ್ತ ಸ್ನೇಹಿತರೊಂದಿಗೆ ಮಧು ಹೋಗಿದ್ದ. ಅಲ್ಲಿ ಹಾವು ಬಂದಿದ್ದು, ಅದನ್ನು ಹೆಬ್ಬಾವು ಅಂತ ಹಿಡಿದಿದ್ದಾನೆ. ಹಾವಿನ ಬಾಲವನ್ನ ಎಡಗೈನಲ್ಲಿ ಹಿಡಿದುಕೊಂಡಿದ್ದ ಮಧು, ಅದರ ಕತ್ತನ್ನ ಬಲಗೈಯಲ್ಲಿ ಹಿಡಿಯಲು ಯತ್ನಿಸುತ್ತಿರುವಾಗಲೇ ಕೈಗೆ ಹಾವು ಕಚ್ಚಿದೆ. ಆಸ್ಪತ್ರೆಗೆ ದಾಖಲಿಸಿದರೂ ಮಧು ಬದುಕಲಿಲ್ಲ.


ವಿಷದ ಹಾವು ಎಂದು ತಿಳಿಯದನ್ನು ಹೆಬ್ಬಾವು ಅಂತ ಬೇಜವಾಬ್ದಾರಿಯಾಗಿ ಹಾವು ಹಿಡಿಯಲು ಹೋದ ಮಧು ಪ್ರಾಣ ಬಿಟ್ಟಿದ್ದಾನೆ.

ಯುವಕನ ಪ್ರಾಣ ತೆಗೆದ ಹಾವನ್ನು ಕೊಳಕುಮಂಡಲ ಎನ್ನಲಾಗಿದೆ. ಇನ್ನು ಈತನಿಗೆ ಹಾವು ಕಚ್ಚುವ ವಿಡಿಯೋ ವೈರಲ್ ಆಗಿದೆ.

Thanks for reading ಹೆಬ್ಬಾವು ಅಂತ ಕೊಳಕುಮಂಡಲ ಹಾವು ಹಿಡಿಯಲು ಹೋಗಿ ದುರಂತ ಅಂತ್ಯ ಕಂಡ ಯುವಕ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹೆಬ್ಬಾವು ಅಂತ ಕೊಳಕುಮಂಡಲ ಹಾವು ಹಿಡಿಯಲು ಹೋಗಿ ದುರಂತ ಅಂತ್ಯ ಕಂಡ ಯುವಕ

Post a Comment