ಸರ್ಕಾರಿ ಶಾಲಾ ಶಿಕ್ಷಕನಿಂದ ವಿದ್ಯಾರ್ಥಿನಿ ಕಿಡ್ನ್ಯಾಪ್​: ಆರೋಪಿ ಕೊಟ್ಟ ಕಾರಣ ಕೇಳಿ ದಂಗಾದ ಪೊಲೀಸರು!

April 16, 2021

 


ಕೃಷ್ಣಗಿರಿ: ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ತಮಿಳುನಾಡು ಪೊಲೀಸರು ಬಂಧಿಸಿರುವ ಘಟನೆ ಕೃಷ್ಣಗಿರಿ ಜಿಲ್ಲೆಯ ಮಾಥೂರಿನಲ್ಲಿ ನಡೆದಿದೆ.

ಮೂರ್ತಿ ಮತ್ತು ಕಾವ್ಯ ದಂಪತಿ ಕೃಷ್ಣಗಿರಿ ಜಿಲ್ಲೆಯ ಮಾಥೂರಿನ ಬಳಿಯಿರುವ ಜಿಂಜಂಪತಿಯ ನಿವಾಸಿಗಳು. ದಂಪತಿಗೆ 16 ವರ್ಷದ ಮಗಳಿದ್ದಾಳೆ. ಕೂಲಿಯನ್ನೇ ನಂಬಿರುವ ದಂಪತಿ ತಮ್ಮ ಮಗಳೊಂದಿಗೆ ತಿರುವಣ್ಣಮಲೈ ಜಿಲ್ಲೆಯ ಮೇಲ್ಸೆಂಗಮ್​ನಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದರು. ದಂಪತಿಯ ಮಗಳು ತಿರುವಣಮಲೈನ ಡ್ಯಾನಿಯಲ್​ ಮಿಷನ್​ ಸ್ಕೂಲ್​ನಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿ.

ಹೀಗಿರುವಾಗ ಏಪ್ರಿಲ್​ 6ರಂದು ದಂಪತಿ ತನ್ನ ಮಗಳೊಂದಿಗೆ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ತವರಿಗೆ ತೆರಳುತ್ತಾರೆ.

ಅದೇ ದಿನ ಇದ್ದಕ್ಕಿದ್ದಂತೆ ಮಗಳು ಕಾಣೆಯಾಗುತ್ತಾಳೆ. ಸಾಕಷ್ಟು ಹುಡುಕಾಟ ನಡೆಸಿದರೂ ಮಗಳು ಸಿಗದಿದ್ದಾಗ ಗಾಬರಿಗೊಂಡ ದಂಪತಿ ಮಾಥೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

ತನಿಖೆ ನಡೆಸುವ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಸಿಗುತ್ತದೆ. ವಿದ್ಯಾರ್ಥಿನಿಯನ್ನು ತಿರುವಣ್ಣಾಮಲೈ ಜಿಲ್ಲೆಯ ನಾಗನೂರು ಗ್ರಾಮದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಚರಣ್​ರಾಜ್​ (31) ಆಕೆಯನ್ನು ಅಪಹರಿಸಿರುವುದು ತಿಳಿಯುತ್ತದೆ. ಬಲವಂತವಾಗಿ ಮದುವೆ ಆಗುವ ಉದ್ದೇಶದಿಂದ ಕಿಡ್ನಾಪ್​ ಮಾಡಿ ತನ್ನ ಮನೆಯಲ್ಲಿ ಇಟ್ಟಿಕೊಂಡಿರುತ್ತಾನೆ. ಆತನ ಸುಳಿವು ಪಡೆದು ಕಾರ್ಯಾಚರಣೆಗೆ ಇಳಿಯುವ ಪೊಲೀಸರು ಆತನನ್ನು ಬಂಧಿಸಿ ವಿದ್ಯಾರ್ಥಿನಿಯನ್ನು ರಕ್ಷಿಸುತ್ತಾರೆ.

ಅನೇಕ ದಿನಗಳಿಂದ ಮದುವೆ ಆಗದೇ ಉಳಿದಿದ್ದಕ್ಕೆ ವಿದ್ಯಾರ್ಥಿನಿಯ ಮೇಲೆ ಆಸೆಯಾಗಿ ಆಕೆಯನ್ನು ಕಿಡ್ನಾಪ್​ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

Related Articles

Advertisement
Previous
Next Post »