ಅಕ್ರಮ ಸಂಬಂಧಕ್ಕಾಗಿ ಸ್ವಂತ ಮಕ್ಕಳನ್ನ ಹತ್ಯೆಗೈದಿದ್ದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ..!

April 02, 2021
Friday, April 2, 2021

 


ಅಕ್ರಮ ಸಂಬಂಧಕ್ಕಾಗಿ ಸ್ವಂತ ಮಕ್ಕಳನ್ನ ಹತ್ಯೆಗೈದಿದ್ದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ..!

ಹುಬ್ಬಳ್ಳಿ: ಅಕ್ರಮ ಸಂಬಂಧಕ್ಕಾಗಿ ಹೆತ್ತ ಮಕ್ಕಳನ್ನು ಕೊಲೆಗೈದಿದ್ದ ತಾಯಿಗೆ ಹುಬ್ಬಳ್ಳಿಯ 5ನೇ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 5 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ
ಹುಬ್ಬಳ್ಳಿಯ ನವ ಅಯೋಧ್ಯಾನಗರದಲ್ಲಿ ಮಹಿಳೆ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ್ದಳು. ಈ ಘಟನೆ 2018ರಲ್ಲಿ ನಡೆದಿತ್ತು. ಇದೀಗ ಪ್ರಕರಣದ ತೀರ್ಪು ಹೊರಬಂದಿದ್ದು, ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪ್ರೇಮಾ ಅಲಿಯಾಸ್ ಚೈತ್ರಾ ಹುಲಕೋಟಿ 2018ರ ಡಿ.11ರಂದು 4 ವರ್ಷದ ಹೆಣ್ಣು ಮಗು ರೋಹಿಣಿ ಮತ್ತು 5 ವರ್ಷದ ಮಗ ರೋಹಿತ್ ನನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.

ಈ ಸಂಬಂಧ ಆರೋಪಿ ಮಹಿಳೆಯ ಪತಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಆಕೆಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

Thanks for reading ಅಕ್ರಮ ಸಂಬಂಧಕ್ಕಾಗಿ ಸ್ವಂತ ಮಕ್ಕಳನ್ನ ಹತ್ಯೆಗೈದಿದ್ದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ..! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಅಕ್ರಮ ಸಂಬಂಧಕ್ಕಾಗಿ ಸ್ವಂತ ಮಕ್ಕಳನ್ನ ಹತ್ಯೆಗೈದಿದ್ದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ..!

Post a Comment