ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಚಿಕಿತ್ಸಾ ವೆಚ್ಚ ಮರುಪಾವತಿಗೆ ಸರ್ಕಾರ ನಿರ್ಧಾರ

April 22, 2021


 ಬೆಂಗಳೂರು : ರಾಜ್ಯ ಸರ್ಕಾರಿ ನೌಖರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಕೋವಿಡ್ ಸೋಂಕಿತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಕೋವಿಡ್ ಚಿಕಿತ್ಸಾ ವೆಚ್ಚ ಮರುಪಾವತಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಪ್ಯಾಕೇಜ್ ದರ ಪ್ರಕಟಿಸಿ ಆದೇಶ ಮಾಡಿದೆ.

ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಸಾಮಾನ್ಯ ವಾರ್ಡ್ ಗೆ ದಿನಕ್ಕೆ 10 ಸಾವಿರ ರೂ. ಹೆಚ್ಚು ಅವಲಂಬಿತ ಘಟಕಕ್ಕೆ 12 ಸಾವಿರ ರೂ. ವೆಂಟಿಲೇಟರ್ ರಹಿತ ಐಸಿಯು ವಾರ್ಡ್ ಗೆ 15 ಸಾವಿರ ರೂ. ವೆಂಟಿಲೇಟರ್ ಸಹಿತ ಐಸಿಯು ವಾರ್ಡ್ ಗೆ 25 ಸಾವಿರ ರೂ. ನಿಗದಿ ಮಾಡಿದೆ.

ಇನ್ನು ಪ್ಯಾಕೇಜ್ ದರದಲ್ಲಿ ಸರ್ಕಾರಿ ನೌಕರರು, ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚಚ್ಚ ಮರುಪಾವತಿಸಲು ಸೂಚಿಸಿದೆ.

ಚಿಕಿತ್ಸೆ ದರ ಸರ್ಕಾರ ನಿಗದಿಪಡಿಸಿದ ಪ್ಯಾಕೆಜ್ ದರಕ್ಕಿಂತ ಕಡಿಮೆ ಇದ್ದರೆ ಯಾವುದು ಕಡಿಮೆಯೋ ಅದರ ಆಧಾರದಲ್ಲಿ ಚಿಕಿತ್ಸೆ ವೆಚ್ಚ ಮರುಪಾತಿಸುವಂತೆ ರಾಜ್ಯ ಸರ್ಕಾರ ತಿಳಿಸಿದೆ.

Related Articles

Advertisement
Previous
Next Post »