ಈ ಐದು ನಗರಗಳಲ್ಲಿ ಲಾಕ್​ಡೌನ್​ ಮಾಡುವಂತೆ ಹೈ ಕೋರ್ಟ್​ ಆದೇಶ! ಇಂದಿನಿಂದಲೇ ಎಲ್ಲ ಬಂದ್​!

April 20, 2021
Tuesday, April 20, 2021


ಲಖನೌ: ದೇಶದ ಹಲವು ರಾಜ್ಯಗಳಲ್ಲಿ ಕರೊನಾ ಸೋಂಕು ಏರಿಕೆ ಕಾಣಲಾರಂಭಿಸಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲಾಕ್​ಡೌನ್​ ಘೋಷಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರು ಆದೇಶ ಹೊರಡಿಸಿದ್ದರು. ಇದೀಗ ಯೋಗಿ ಆದಿತ್ಯಾನಾಥ ಅವರ ಉತ್ತರ ಪ್ರದೇಶಕ್ಕೂ ಲಾಕ್​ಡೌನ್​ ಬಿಸಿ ತಟ್ಟಿದೆ. ಐದು ಪ್ರಮುಖ ನಗರಗಳಲ್ಲಿ ಇಂದಿನಿಂದಲೇ ಲಾಕ್​ಡೌನ್​ ಮಾಡುವಂತೆ ಅಲಹಾಬಾದ್​ ಹೈ ಕೋರ್ಟ್​ ಆದೇಶ ಹೊರಡಿಸಿದೆ.

ವಾರಣಾಸಿ, ಕಾನ್ಪುರ ನಗರ, ಪ್ರಯಾಗ್​ರಾಜ್​, ಲಖನೌ ಮತ್ತು ಗೋರಕ್​ಪುರದಲ್ಲಿ ಇಂದಿನಿಂದ ಏಪ್ರಿಲ್​ 26ರವರೆಗೆ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಲಾಕ್​ಡೌನ್​ ಸಮಯದಲ್ಲಿ ಯಾವುದೇ ಶಾಪಿಂಗ್​ ಮಾಲ್​, ರೆಸ್ಟೋರೆಂಟ್​, ಹೋಟೆಲ್​, ಸ್ಪಾ, ಸೆಲೂನ್​, ಸಿನಿಮಾ ಹಾಲ್​ಗಳನ್ನು ತೆರೆಯುವಂತಿಲ್ಲ. ಕೇವಲ ಅಗತ್ಯ ವಸ್ತುಗಳ ಅಂಗಡಿಗಳನ್ನು ಮಾತ್ರವೇ ತೆರೆಯಲು ಅನುಮತಿ ನೀಡಲಾಗಿದೆ.

ಖಾಸಗಿ ಕಚೇರಿಗಳನ್ನೂ ತೆರೆಯದಿರುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಅಗತ್ಯ ಸೇವೆಗೆ ಸಂಬಂಧಿಸಿದ ಕಚೇರಿಗಳಿಗೆ ಕೆಲಸ ನಿರ್ವಹಿಸಲು ಅನುಮತಿ ನೀಡಲಾಗಿದೆ.

Thanks for reading ಈ ಐದು ನಗರಗಳಲ್ಲಿ ಲಾಕ್​ಡೌನ್​ ಮಾಡುವಂತೆ ಹೈ ಕೋರ್ಟ್​ ಆದೇಶ! ಇಂದಿನಿಂದಲೇ ಎಲ್ಲ ಬಂದ್​! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಈ ಐದು ನಗರಗಳಲ್ಲಿ ಲಾಕ್​ಡೌನ್​ ಮಾಡುವಂತೆ ಹೈ ಕೋರ್ಟ್​ ಆದೇಶ! ಇಂದಿನಿಂದಲೇ ಎಲ್ಲ ಬಂದ್​!

Post a Comment