ಬೆಂಗಳೂರು : ಏಪ್ರಿಲ್ ತಿಂಗಳಿಂದ ಶಾಲಾ ಅವಧಿಯನ್ನು ಬದಲಾವಣೆ ಮಾಡಿ ಹಾಗೂ ಪರೀಕ್ಷೆ ಮುಗಿದ ತಕ್ಷಣ ಬೇಸಿಗೆ ರಜೆ ಘೋಷಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತಂತೆ ಪತ್ರ ಬರೆದಿರುವಂತ ಅವರು, ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆ ನಡೆಸಿ, ಏಪ್ರಿಲ್ 11ರಿಂದ ಶಾಲೆಗಳಿಗೆ ಬೇಸಿಗೆ ರಜೆ ನೀಡುತ್ತಿದ್ದ ಕಾರಣ ಮಕ್ಕಳ ಮೇಲೆ ಬಿಸಿಲಿನ ಪರಿಣಾಮ ಬೀರುತ್ತಿರಲಿಲ್ಲ. ಆದ್ರೇ ಕೊರೋನಾ ವೈರಸ್ ನಿಂದ ಶಾಲಾ ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯತ್ಯಾಸವಾದ ಕಾರಣ ಏಪ್ರಿಲ್ ತಿಂಗಳಿನಲ್ಲಿ ಪರೀಕ್ಷೆಗಳು ನಡೆಯುವ ಸಾಧ್ಯತೆ ಇದ್ದು, ಈ ಬಳಿಕ ಶಾಲಾ ಅವಧಿಯನ್ನು ಬದಲಾವಣೆ ಮಾಡುವಂತೆ ವಿನಂತಿಸಿಕೊಂಡಿದೆ.
ಇನ್ನೂ ಮುಂದುವರೆದು, ಬೇಸಿಗೆ ಕಾಲದಲ್ಲಿ ತಾಪಮಾನ ಕೂಡ ಅತ್ಯಂತ ಹೆಚ್ಚಾಗಿ ಇರುವುದರಿಂದ ಪರೀಕ್ಷೆ ಮುಗಿದ ತಕ್ಷಣ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ ಮಾಡಬೇಕೆಂದು ಸಹ ಪತ್ರದಲ್ಲಿ ಶಿಕ್ಷಣ ಸಚಿವರಿಗೆ ಮನವಿ ಮಾಡಿದೆ.
EmoticonEmoticon