ವಿಮೆ ಹಣಕ್ಕಾಗಿ ಪತಿಯನ್ನೇ ಜೀವಂತವಾಗಿ ಸುಟ್ಟು ಹಾಕಿದ ಪತ್ನಿ

April 09, 2021
Friday, April 9, 2021

 ಕೊಯಮತ್ತೂರು: 3.5 ಕೋಟಿ ರೂಪಾಯಿ ವಿಮೆ ಹಣ ಪಡೆಯಲು ಮಹಿಳೆಯೊಬ್ಬಳು ತನ್ನ ಪತಿಯನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ಕೊಯಮತ್ತೂರು ಸಮೀಪದ ಪೇರಿಮನಲ್ಲೂರು ಪೊಲೀಸರು ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಈರೋಡ್ ಜಿಲ್ಲೆಯ ತುಡುಪತಿ ನಿವಾಸಿ ಕೆ. ರಂಗರಾಜ್(62) ಎಂದು ಗುರುತಿಸಲಾಗಿದೆ.ವಿದ್ಯುತ್ ಮಗ್ಗದ ಘಟಕವನ್ನು ಹೊಂದಿದ್ದ ರಂಗರಾಜ್ ಮಾರ್ಚ್ 15 ರಂದು ಅಪಘಾತದಲ್ಲಿ ಗಾಯಗೊಂಡಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಗುರುವಾರ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅವರ ಪತ್ನಿ ಜ್ಯೋತಿಮಣಿ ಮತ್ತು ಸಂಬಂಧಿಕ ರಾಜ ವ್ಯಾನ್ ನಲ್ಲಿ ಕರೆದುಕೊಂಡು ತುಡುಪತಿಗೆ ಪ್ರಯಾಣ ಆರಂಭಿಸಿ, ರಾತ್ರಿ 11.30 ರ ಸುಮಾರಿಗೆ ಪೆರುಮನಲ್ಲೂರ್ ಬಳಿಯ ವಲಸುಪಾಲಯಂಗೆ ತಲುಪಿದಾಗ ರಾಜ ಮತ್ತು ಜ್ಯೋತಿಮಣಿ ವಾಹನದಿಂದ ಇಳಿದು ಬೆಂಕಿಹಚ್ಚಿ ಸುಟ್ಟು ಹಾಕಿದ್ದು, ವಾಹನ ಮತ್ತು ರಂಗರಾಜ್ ಜೀವಂತವಾಗಿ ಸುಟ್ಟುಹೋಗಿದ್ದಾರೆ.

ಇನ್ನು ತಿರುಪುರ್ ಗ್ರಾಮೀಣ ಪೊಲೀಸರಿಗೆ ಅಪಘಾತದಿಂದ ಬೆಂಕಿ ತಗುಲಿ ರಂಗರಾಜ್ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಅನುಮಾನಾಸ್ಪದ ವರ್ತನೆ ತೋರಿದ ರಾಜನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತ ಕ್ಯಾನ್ ನಲ್ಲಿ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ಖರೀದಿಸಿರುವುದು ಗೊತ್ತಾಗಿದ್ದು, ಪೆಟ್ರೋಲ್ ಬಂಕ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸಿದಾಗ ರಂಗರಾಜ್ ಅವರನ್ನು ಜೀವಂತವಾಗಿ ಸುಟ್ಟು ಹಾಕಿರುವುದನ್ನು ತಿಳಿಸಿದ್ದಾರೆ.

ರಂಗರಾಜ್ ಹೆಸರಲ್ಲಿ 3.5 ಕೋಟಿ ರೂಪಾಯಿಯ ಮೂರು ವಿಮೆ ಪಾಲಿಸಿ ಮಾಡಿಸಿದ್ದು, ಆಕೆಯೇ ನಾಮಿನಿಯಾಗಿದ್ದಳು. ವಿಮೆ ಹಣ ಪಡೆಯುವ ಉದ್ದೇಶದಿಂದ ಅಪಘಾತದಲ್ಲಿ ಗಂಡ ಮೃತಪಟ್ಟ ರೀತಿ ಬಿಂಬಿಸಿದ್ದು, ಸಂಬಂಧಿ ರಾಜನೊಂದಿಗೆ ಸೇರಿ ಬೆಂಕಿಹಚ್ಚಿ ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

Thanks for reading ವಿಮೆ ಹಣಕ್ಕಾಗಿ ಪತಿಯನ್ನೇ ಜೀವಂತವಾಗಿ ಸುಟ್ಟು ಹಾಕಿದ ಪತ್ನಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ವಿಮೆ ಹಣಕ್ಕಾಗಿ ಪತಿಯನ್ನೇ ಜೀವಂತವಾಗಿ ಸುಟ್ಟು ಹಾಕಿದ ಪತ್ನಿ

Post a Comment