BIG NEWS : ರಾಜ್ಯದ 'ಪ್ರಾಥಮಿಕ ಹಾಗೂ ಪ್ರೌಢ ಶಾಲಾ' ಮಕ್ಕಳಿಗೆ ಬೇಸಿಗೆ ರಜೆ ಎಷ್ಟು ದಿನ? ಶಾಲೆ ಶುರು ಯಾವಾಗ? ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ

April 22, 2021
Thursday, April 22, 2021

 


ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಕಾರಣದಿಂದಾಗಿ ಈವರೆಗೆ 1 ರಿಂದ 9ನೇ ತರಗತಿ ಆರಂಭಗೊಂಡಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿತಗೊಳ್ಳುವುದು ಬೇಡ ಎಂಬ ಕಾರಣದಿಂದಾಗಿ ಆರಂಭಗೊಂಡ ವಿದ್ಯಾಗಮ ಕಾರ್ಯಕ್ರಮದಿಂದಾಗಿಯೂ ಕೊರೋನಾ ಸೋಂಕು ವಿದ್ಯಾರ್ಥಿಗಳಿಗೆ ತಗುಲಿತ್ತು. ಹೀಗಾಗಿ ಅದು ಕೂಡ ನಿಲುಗಡೆಯಾಗಿದೆ. ಈ ಎಲ್ಲಾ ಕಾರಣದಿಂದಾಗಿ ಇದೀಗ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ, ಹಿಂದಿನ ಶೈಕ್ಷಣಿಕ ದಾಖಲೆಗಳ ಆಧಾರದಲ್ಲಿ ಮುಂದಿನ ತರಗತಿಗೆ ಪಾಸ್ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಇದರ ಜೊತೆಗೆ ಮುಂದಿನ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು(ಪ್ರೌಢ ಶಿಕ್ಷಣ) ಸುತ್ತೋಲೆ ಹೊರಡಿಸಿದ್ದು, ಕೊರೋನಾ ಸೋಂಕಿನ ಹಿನ್ನಲೆಯಲ್ಲಿ, ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಈ ಕೆಳಕಂಡಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿ ಹಾಗೂ ಶಿಕ್ಷಕರಿಗೆ ಬೇಸಿಗೆ ರಜೆಯ ಪಟ್ಟಿಯನ್ನು ಪ್ರಕಟಿಸಿದ್ದಾರೆ.

2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿ

ಪ್ರಾಥಮಿಕ ಶಾಲೆಗಳಿಗೆ

  • 1 ರಿಂದ 7/8ನೇ ತರಗತಿಗಳು ಇರುವ ಪ್ರಾಥಮಿಕ ಶಾಲೆಗಳಿಗೆ ದಿನಾಂಕ 01-05-2021 ರಿಂದ 14-06-2021ರವರೆಗೆ ಬೇಸಿಗೆ ರಜೆ
  • ದಿನಾಂಕ 15-06-2021 ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭ

ಪ್ರೌಢ ಶಾಲೆಗಳಿಗೆ

  • ಪ್ರೌಢ ಶಾಲೆಗಳಲ್ಲಿನ 8 ಹಾಗೂ 9ನೇ ತರಗತಿಗಳಲ್ಲಿನ ವಿದ್ಯಾರ್ಥಿಗಳಿಗೆ ದಿನಾಂಕ 01-05-2021 ರಿಂದ 14-07-2021ರವರೆಗೆ ಬೇಸಿಗೆ ರಜೆ.
  • ಪ್ರೌಢ ಶಾಲೆಗಳಲ್ಲಿನ ಶಿಕ್ಷಕರುಗಳಿಗೆ ದಿನಾಂಕ 15-06-2021 ರಿಂದ ದಿನಾಂಕ 14-07-2021ರವರೆಗೆ ಬೇಸಿಗೆ ರಜೆ
  • ದಿನಾಂಕ 21-06-2021 ರಿಂದ 05-07-2021ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತದೆ.
  • ದಿನಾಂಕ 15-07-2021 ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭ

ಮೇಲ್ಕಂಡ ವೇಳಾ ಪಟ್ಟಿಯು ತಾತ್ಕಾಲಿಕವಾಗಿದ್ದು, ಕೋವಿಡ್-19ರ ಹಿನ್ನಲೆಯಲ್ಲಿ ಕಾಲಕಾಲಕ್ಕೆ ಸರ್ಕಾರ, ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆಯನ್ನು ಮತ್ತು ನಿರ್ದೇಶನಗಳನ್ನು ಪಾಲಿಸಿವುದು ಕಡ್ಡಾಯವಾಗಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆThanks for reading BIG NEWS : ರಾಜ್ಯದ 'ಪ್ರಾಥಮಿಕ ಹಾಗೂ ಪ್ರೌಢ ಶಾಲಾ' ಮಕ್ಕಳಿಗೆ ಬೇಸಿಗೆ ರಜೆ ಎಷ್ಟು ದಿನ? ಶಾಲೆ ಶುರು ಯಾವಾಗ? ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BIG NEWS : ರಾಜ್ಯದ 'ಪ್ರಾಥಮಿಕ ಹಾಗೂ ಪ್ರೌಢ ಶಾಲಾ' ಮಕ್ಕಳಿಗೆ ಬೇಸಿಗೆ ರಜೆ ಎಷ್ಟು ದಿನ? ಶಾಲೆ ಶುರು ಯಾವಾಗ? ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ

Post a Comment