BIG BREAKING NEWS : 'ಕೋವಿಶೀಲ್ಡ್ ಲಸಿಕೆ' ಮುಕ್ತ ಮಾರುಕಟ್ಟೆಗೆ : ಇನ್ಮುಂದೆ 'ಖಾಸಗಿ ಆಸ್ಪತ್ರೆ'ಗಳಲ್ಲಿ ರೂ.600ಕ್ಕೆ ಲಸಿಕೆ ಲಭ್ಯ

April 22, 2021

 


ನವದೆಹಲಿ : ಇದುವರೆಗೆ ಕೊರೋನಾ ಸೋಂಕಿತರ ಲಸಿಕೆಗಾಗಿ ನೀಡಲಾಗುತ್ತಿದ್ದಂತ ಕೋವಿಶೀಲ್ಡ್ ಲಸಿಕೆ, ಇನ್ಮುಂದೆ ಮುಕ್ತ ಮಾರುಕಟ್ಟೆಯಲ್ಲೂ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ರೂ.600ಕ್ಕೆ ಒಂದು ಡೋಸ್, ಸರ್ಕಾರಿ ಆಸ್ಪತ್ರೆಗಳಲ್ಲಿ ರೂ.400ಕ್ಕೆ ಒಂದು ಡೋಸ್ ನೀಡಲು ದರವನ್ನು ಸೀರಂ ಇನ್ಟಿಟ್ಯೂಟ್ ಆಫ್ ಇಂಡಿಯಾ ದರವನ್ನು ನಿಗದಿ ಪಡಿಸಿದೆ.

ಭಾರತದ ಸೀರಮ್ ಇನ್ ಸ್ಟಿಟ್ಯೂ ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆಯ ಬೆಲೆಯನ್ನು ₹600 ಮತ್ತು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ ಗೆ ₹400 ಕ್ಕೆ ನಿಗದಿಪಡಿಸಿದೆ ಎಂದು ಕಂಪನಿಯು ಬುಧವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದ್ರೇ.. ಸೀರಂ ಇನ್ ಸ್ಟಿಟ್ಯೂ ನಿಗದಿ ಪಡಿಸಿರುವಂತ ದರವನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ಫೈನಲ್ ಮಾಡಿ, ಆದೇಶ ಹೊರಡಿಸಲಿದೆ ಎನ್ನಲಾಗುತ್ತಿದೆ.

ಆ ಬಗ್ಗೆ ಕಾದು ನೋಡಬೇಕಿದೆ.

ಅಂದಹಾಗೇ, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಮೇ 1 ರಿಂದ ಕೋವಿಡ್-19 ವಿರುದ್ಧ ಲಸಿಕೆ ನೀಡಲಾಗುತ್ತದೆ ಎಂಬುದಾಗಿ ನಿನ್ನೆ ಕೇಂದ್ರ ಸರ್ಕಾರ ಘೋಷಿಸಿತ್ತು.

Related Articles

Advertisement
Previous
Next Post »