50 ವರ್ಷ ಕಾದ ಪ್ರೇಮಿಗೆ ಕೊನೆಗೂ ಸಿಕ್ಕಳು ಪ್ರಿಯತಮೆ!

April 02, 2021

 


ಹೊಸದಿಲ್ಲಿ: ಅದು 70ರ ದಶಕ. ಭಾರತ ಪ್ರವಾಸಕ್ಕಾಗಿ ಆಸ್ಟ್ರೇಲಿಯಾದಿಂದ ಮರೀನಾ ಎಂಬ ಹುಡುಗಿಯೊಬ್ಬಳು ಬಂದಿದ್ದಳು. ರಾಜಸ್ಥಾನಕ್ಕೆ ಆಕೆ ಬಂದಾಗ ಜೈಸಲ್ಮೇರ್‌ ಜಿಲ್ಲೆಯ ಕುಲ್ದಾರಾ ಎಂಬ ಹಳ್ಳಿಯ ಯುವಕ ಆಕೆಗೆ ಸುತ್ತಲಿನ ಪ್ರಸಿದ್ಧ ಕ್ಷೇತ್ರಗಳನ್ನು ತೋರಿಸಿದ. ಹಾಗೆ ಸುತ್ತಾಡುವಾಗ ಅವರಿಬ್ಬರಲ್ಲಿ ಪ್ರೇಮ ಉದಯವಾಗಿ, ಆಕೆ ವಾಪಸ್‌ ಹೋಗುವಾಗ ಕಿವಿಯಲ್ಲಿ ಉಸುರಿದ್ದು ಒಂದೇ ಮಾತು… “ಐ ಲವ್‌ ಯೂ’.

ಆ ಒಂದು ಮಾತಿಗೆ ತನ್ನ ಜೀವನ ವನ್ನು ಅವತ್ತೇ ಆಕೆಯ ಹೆಸರಿಗೆ ಬರೆದುಬಿಟ್ಟ ಆ ಯುವಕ. ಆಕೆ ಒಂದಲ್ಲಾ ಒಂದು ದಿನ ಬರ್ತಾಳೆ ಅಂತ ಕಾದು ಕುಳಿತ. ಬರಗಾಲದಿಂದ ಇಡೀ ಹಳ್ಳಿಯೇ ಖಾಲಿಯಾದರೂ ತಾನೊಬ್ಬನು ಮಾತ್ರ ಕದಲದೆ ಅಲ್ಲೇ ಉಳಿದ.

ಇದಾಗಿ, 50 ವರ್ಷಗಳೇ ಉರುಳಿದವು. ಈತನ ಪ್ರೇಮ ಕಥೆ ಕೇಳಿದ ಪ್ರವಾಸಿಯೊಬ್ಬರು ಅದನ್ನು ತಮ್ಮ ಫೇಸ್‌ಬುಕ್‌ ಪುಟ ದಲ್ಲಿ ಅವರ ಫೋಟೋ ಸಹಿತ ಪ್ರಕಟಿಸಿದರು.

ಅದು ಮರೀನಾ ರನ್ನೂ ತಲುಪಿದೆ! ವಿವರ ಕಣ್ಣಿಗೆ ಬಿದ್ದಕೂಡಲೇ ಫೇಸ್‌ಬುಕ್‌ ಪುಟದ ಪ್ರವಾಸಿಯನ್ನು ಸಂಪರ್ಕಿಸಿ, ಅಜ್ಜನ ವಿಳಾಸ ಪಡೆದ ಮರೀನಾ, ತಾನೂ ವಿವಾಹವಾಗದೇ ಉಳಿದಿದ್ದು, ಸದ್ಯದಲ್ಲೇ ಭಾರತಕ್ಕೆ ಬರುವುದಾಗಿ ಪತ್ರ ಬರೆದಿದ್ದಾರೆ!


Related Articles

Advertisement
Previous
Next Post »