ಕರೋನಾ ಕಾಲದಲ್ಲಿ ಬಿಸಿನೀರಿನ ಸ್ಟೀಮ್ ಗಿಂತ ಮೊದಲು ಈ 5 ವಿಚಾರ ತಿಳಿದಿರಲಿ

April 24, 2021
Saturday, April 24, 2021

 


ನವದೆಹಲಿ: ಎಲ್ಲರೂ ಹೆದರಿದ್ದಾರೆ. ಕರೋನಾ (Coronavirus) ರಕ್ಕಸ ಬಾಹು ವಿಸ್ತಾರಗೊಳ್ಳುತ್ತಿರುವಂತೆಯೇ ಎಲ್ಲರೂ ಗಡಗಡ ನಡುಗುತ್ತಿದ್ದಾರೆ. ಕರೋನಾದಿಂದ ಬಚಾವ್ ಆಗುನ ನಿಟ್ಟಿನಲ್ಲಿ ಒಂದಲ್ಲ ಒಂದು ಮನೆ ಮದ್ದು ಹುಡುಕುತಿದ್ದಾರೆ. ಆಮ್ಲಜನಕ ಮಟ್ಟ ಏರಿಸಲು ಒಂದು ಮನೆ ಮದ್ದು, ಇಮ್ಯೂನಿಟಿಗೊಂದು (immunity) ಮನೆ ಮದ್ದು, ಗಂಟಲಿನ ಕಿರಿಕಿರಿ ತಡೆಯಲು ಇನ್ನೊಂದು ಮನೆ ಮದ್ದು..ಹೀಗೆ ಒಂದಲ್ಲ ಒಂದು ಮನೆ ಮದ್ದನ್ನು ಹುಡುಕಿ ಅದನ್ನು ಫಾಲೊ ಮಾಡುತ್ತಿದ್ದಾರೆ. ಕರೋನಾ ವಿರುದ್ಧ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವುದು ಅವರಿಗೆ ಖಂಡಿತಾ ಗೊತ್ತಿಲ್ಲ. ಆದರೂ, ಕರೋನಾ ಸೃಷ್ಟಿಸಿರುವ ಭೀತಿಯ ಚಿತ್ರ ನೋಡಿ ಬಿಟ್ಟು, ಕಣ್ಣು ಮುಚ್ಚಿ ಎಲ್ಲಾ ರೀತಿಯ ಮನೆ ಮದ್ದು ಫಾಲೋ ಮಾಡುತ್ತಿದ್ದಾರೆ.

ಬಿಸಿ ನೀರಿನ ಸ್ಟೀಮ್ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸೇಫ್..?

ಕರೋನಾ ಶ್ವಾಸ ಸಂಬಂಧಿ ಕಾಯಿಲೆಯಾಗಿರುವುದರಿಂದ ಮೂಗು, ಗಂಟಲು ಹಾಗೂ ಶ್ವಾಸಕೋಶಗಳನ್ನು (Lungs) ಸ್ವಚ್ಛವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಬಿಸಿ ನೀರಿನ ಸ್ಟೀಮ್ (Hot water steam) ತೆಗೆದುಕೊಳ್ಳುವ ಅಭ್ಯಾಸ ಇದೀಗ ಹೆಚ್ಚಾಗಿದೆ. ಇದರಿಂದ ಎಷ್ಟರ ಮಟ್ಟಿಗೆ ಕರೋನಾ ವೈರಸ್ (Coronavirus) ಹತವಾಗುತ್ತದೆ ಅನ್ನೋದು ಇಲ್ಲಿಯವರೆಗೆ ರುಜುವಾತಾಗಿಲ್ಲ. ಆದರೂ, ಕರೋನಾ ಎಲ್ಲಾದರೂ ಮೂಗಿನ ಹೊಳ್ಳೆ ಹೊಕ್ಕಿದ್ದರೆ ಸತ್ತೇ ಹೋಗಿರಬೇಕು ಎಂಬ ಧನ್ಯತಾ ಭಾವ ಮಾತ್ರ ಸ್ಟೀಮ್ ಪಡೆದ ಮೇಲೆ ಮೂಡುತ್ತದೆ. ಆದರೆ ಸ್ಟೀಮ್ ಪಡೆಯುವ ಮೊದಲು ಈ ಕೆಲವು ಮಾಹಿತಿಗಳು ನಿಮಗೆ ತಿಳಿದಿರಲೇ ಬೇಕು.

ಸ್ಟೀಮ್ ತೆಗೆದುಕೊಳ್ಳುವವರಿಗೆ ಕಿವಿಮಾತು
1. ಸ್ಟೀಮ್ ತೆಗೆದುಕೊಳ್ಳುವಾಗ ತೀರಾ ಎಚ್ಚರಿಕೆಯಿಂದಿರಿ. ಸ್ಟೀಮ್ ತೆಗೆದುಕೊಳ್ಳುವ ಭರದಲ್ಲಿ ಚರ್ಮ ಸುಟ್ಟು ಹೋದೀತು.
2. ಸ್ಟೀಮ್ ತೆಗೆದಕೊಳ್ಳುವಾಗ ಪಾತ್ರೆಯಲ್ಲಿ ಎಷ್ಟು ಬೇಕೋ ಅಷ್ಟೇ ಬಿಸಿನೀರಿಡಿ. ಮಕ್ಕಳನ್ನು (Kids) ಮಾತ್ರ ಸ್ಟೀಮ್ ಪಾತ್ರೆಯ ಬಳಿ ಸುಳಿಯಲೂ ಬಿಡಬೇಡಿ
3. ಸ್ಟೀಮ್ ತೆಗೆದುಕೊಳ್ಳುವಾಗ ಕಣ್ಣು (Eyes) ಮುಚ್ಚಿಕೊಳ್ಳಿ
4. ದಿನಕ್ಕೆ ಎರಡು ಸಲಕ್ಕಿಂತ ಹೆಚ್ಚಿಗೆ ಸ್ಟೀಮ್ ತೆಗೆದುಕೊಳ್ಳಬೇಡಿ
5. ಜಾಸ್ತಿ ಸ್ಟೀಮ್ ತೆಗೆದು ಕೊಂಡರೆ ಮುಖ ಗಂಟಲು ಡ್ರೈ ಆಗಿಬಿಡಬಹುದು. ಇದರಿಂದ ಫಂಗಲ್ ಅಥವಾ ಬ್ಯಾಕ್ಟೀರಿಯಾ ಸೋಂಕು ಉಂಟಾಗಬಹುದು

Thanks for reading ಕರೋನಾ ಕಾಲದಲ್ಲಿ ಬಿಸಿನೀರಿನ ಸ್ಟೀಮ್ ಗಿಂತ ಮೊದಲು ಈ 5 ವಿಚಾರ ತಿಳಿದಿರಲಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕರೋನಾ ಕಾಲದಲ್ಲಿ ಬಿಸಿನೀರಿನ ಸ್ಟೀಮ್ ಗಿಂತ ಮೊದಲು ಈ 5 ವಿಚಾರ ತಿಳಿದಿರಲಿ

Post a Comment