'ಶಿಕ್ಷಕರ ಹುದ್ದೆ'ಯ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : '3,479 ಶಿಕ್ಷಕರ ಹುದ್ದೆ'ಯ ಭರ್ತಿಗೆ ಅರ್ಜಿ ಆಹ್ವಾನ

April 01, 2021

 ನವದೆಹಲಿ : ಮಿಲಿಟರಿ ಆಫ್ ಟ್ರೈಬಲ್ ಅಪೈರ್ ಅಡಿಯಲ್ಲಿ ಬರುವಂತ ಏಕಲವ್ಯ ಮಾಡೆಲ್ ರೆಸಿಡೆನ್ಸಿ ಶಾಲೆಗಳಲ್ಲಿ ಖಾಲಿ ಇರುವಂತ 3,479 ಶಿಕ್ಷಕರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-04-2021 ಆಗಿದೆ.ಏಕಲವ್ಯ ಮಾಡೆಲ್ ರೆಸಿಡೆನ್ಸಿ ಶಾಲೆಯಲ್ಲಿ 17 ರಾಜ್ಯಗಳಲ್ಲಿ ಖಾಲಿ ಇರುವಂತ 3,479 ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಪ್ರಿನ್ಸಿಪಾಲ್, ವೈಸ್ ಪ್ರಿನ್ಸಿಪಾಲ್, ಪಿಜಿಟಿ ಮತ್ತು ಟಿಜಿಟಿ ಶಿಕ್ಷಕರನ್ನು ಕಂಪ್ಯೂಟರ್ ಬೇಸ್ ಟೆಸ್ಟ್ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ.

ಇಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ 01-04-2021ರ ಇಂದಿನಿಂದ ಆರಂಭಗೊಳ್ಳಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-04-2021 ಆಗಿರುತ್ತದೆ. ಈ ಹುದ್ದೆಗಳ ಸಂಬಂಧ ಹೆಚ್ಚಿನ ಮಾಹಿತಿಗಾಗಿ https://tribal.nic.in ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

Related Articles

Advertisement
Previous
Next Post »