ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: 26,000 ಹುದ್ದೆಗಳ ನೇಮಕಾತಿಗೆ ಮುಂದಾದ ʼಇನ್ಪೋಸಿಸ್ʼ

April 15, 2021
Thursday, April 15, 2021

 


ಭಾರತದ ಎರಡನೇ ಅತಿದೊಡ್ಡ ಸಾಫ್ಟ್​ವೇರ್​ ಕಂಪನಿ ಇನ್ಪೋಸಿಸ್ ಭಾರತ ಹಾಗೂ ವಿದೇಶದ ಕಾಲೇಜುಗಳ​​ 26 ಸಾವಿರ ಫ್ರೆಶರ್​ಗಳಿಗೆ ಉದ್ಯೋಗ ನೀಡಲು ನಿರ್ಧರಿಸಿದೆ. 2021ರ ಮೊದಲ ತ್ರೈಮಾಸಿಕ (ಜನವರಿ - ಮಾರ್ಚ್​)ದಲ್ಲಿ 15 ಪ್ರತಿಶತ ಲಾಭವನ್ನ ಗಳಿಸಿರುವ ಈ ಸಂಸ್ಥೆ ಇದೀಗ ಉದ್ಯೋಗಾಕಾಂಕ್ಷಿಗಳಿಗೆ ಈ ಗುಡ್​ ನ್ಯೂಸ್​ ನೀಡಿದೆ.

ಈ ವಿಚಾರವಾಗಿ ಮಾತನಾಡಿದ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್​ ಕುಮಾರ್​ ರಾವ್, ಕಂಪನಿಯು ಕಾಂಪನ್ಸೇಷನ್​ ಸೈಕಲ್​​ನ್ನು ಮುಂದುವರಿಸಲಿದೆ ಎಂದು ಹೇಳಿದ್ರು.

ಕಳೆದ ವರ್ಷ ಕೋವಿಡ್​​ ಸಂಕಷ್ಟದಿಂದಾಗಿ ಇನ್ಫೋಸಿಸ್​ ಕಂಪನಿಯು ತನ್ನ ಸಿಬ್ಬಂದಿಗೆ ಕೆಲಸದಲ್ಲಿ ಬಡ್ತಿ ಹಾಗೂ ಸಂಬಳ ಏರಿಕೆಗಳನ್ನ ನೀಡಿರಲಿಲ್ಲ. ಆದರೆ ಈ ವರ್ಷ ಬಡ್ತಿ, ಸಂಬಳ ಏರಿಕೆಯ ಲಾಭ ಸಿಬ್ಬಂದಿಗೆ ಸಿಗಲಿದೆ.

ಡಿಜಿಟಲ್​ ವ್ಯವಹಾರದಲ್ಲಿ 50 ಪ್ರತಿಶತಕ್ಕಿಂತ ಹೆಚ್ಚಿನ ಪಾಲನ್ನ ಹೊಂದಿರುವ ಸಂದರ್ಭದಲ್ಲಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಡಿಜಿಟಲೀಕರಣ ತರಬೇತಿಯನ್ನ ನೀಡುವಂತ ಕಾರ್ಯಕ್ರಮಗಳನ್ನ ಕಳೆದ ವರ್ಷ ರೂಪಿಸಿತ್ತು ಎಂದು ಇನ್ಫೋಸಿಸ್​ ಸಿಇಓ ಸಲೀಲ್​ ಪರೇಖ್​ ಹೇಳಿದ್ದಾರೆ.

5 ಪ್ರತಿಶತ ಆರ್ಥಿಕ ಪ್ರಗತಿಯೊಂದಿಗೆ ಕಂಪನಿಯು 2021ರ ಮೊದಲ ತ್ರೈಮಾಸಿಕದಲ್ಲಿ 10000 ಕೋಟಿ ಆದಾಯದ ಮೈಲಿಗಲ್ಲನ್ನ ತಲುಪಿದೆ. ಕೇವಲ ಡಿಜಿಟಲ್​ ಮೂಲದಿಂದಲೂ ಕಂಪನಿ 29.4 ಪ್ರತಿಶತ ಬೆಳವಣಿಗೆ ಕಂಡಿದೆ. ಹೂಡಿಕೆದಾರರಿಗೆ 9200 ಕೋಟಿ ರೂಪಾಯಿ ಮೌಲ್ಯದ ಶೇರ್​ ಬುಕ್​​ ಪ್ಲಾನ್​​ನ್ನೂ ಕಂಪನಿ ಬೋರ್ಡ್ ಅಂಗೀಕರಿಸಿದೆ.

ಅಮೆರಿಕದಲ್ಲಿ ಹೆಚ್​ 1 ಬಿ ವೀಸಾ ಪ್ರಕ್ರಿಯೆಯಲ್ಲಿ ಬಿಡೆನ್​ ಸರ್ಕಾರ ತರುತ್ತಿರುವ ಬದಲಾವಣೆಗಳನ್ನ ಗಮನದಲ್ಲಿರಿಸಿಕೊಂಡು ಮಾತನಾಡಿದ ಇನ್ಫೋಸಿಸ್​ ಸಿಒಒ , ಆದಷ್ಟು ಸ್ಥಳೀಯರನ್ನ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತೆ ಎಂದು ಹೇಳಿದ್ರು.


Thanks for reading ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: 26,000 ಹುದ್ದೆಗಳ ನೇಮಕಾತಿಗೆ ಮುಂದಾದ ʼಇನ್ಪೋಸಿಸ್ʼ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: 26,000 ಹುದ್ದೆಗಳ ನೇಮಕಾತಿಗೆ ಮುಂದಾದ ʼಇನ್ಪೋಸಿಸ್ʼ

Post a Comment