ಏ.20ರಂದು 'ರೈಲು ಗಾರಿ ಕಾರ್ಖಾನೆ'ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ 'ವಾಕ್ ಇನ್ ಸಂದರ್ಶನ'

April 16, 2021
Friday, April 16, 2021

 


ಬೆಂಗಳೂರು : ಯಲಹಂಕದ ರೈಲು ಗಾಲಿ ಕಾರ್ಖಾನೆಯಲ್ಲಿ ಖಾಲಿ ಇರುವಂತ ಸ್ಟಾಫ್ ನರ್ಸ್, ರೇಡಿಯೋಗ್ರಾಫರ್, ಎಕ್ಸ್ ರೇ ತಂತ್ರಜ್ಞರು, ಲ್ಯಾಬ್ ತಂತ್ರಜ್ಞ ಹಾಗೂ ಆಸ್ಪತ್ರೆ ಪರಿಚಾರಕರ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 20, 2021ರಂದು ಬೆಳಿಗ್ಗೆ 11 ಗಂಟೆಗೆ ವಾಕ್ ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ.

ಈ ಕುರಿತಂತೆ ರೈಲು ಗಾಲಿ ಕಾರ್ಖಾನೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು-560064 ಈ ಕೆಳಗಿನ ಪ್ಯಾರಾಮೆಡಿಕಲ್ ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ತೊಡಗಿಸಿಕೊಳ್ಳಲು ವಾಕ್ ಇನ್ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

  • ಸ್ಟಾಫ್ ನರ್ಸ್ - 13
  • ರೇಡಿಯೋಗ್ರಾಫರ್, ಎಕ್ಸ್ ರೇ ತಂತ್ರಜ್ಞ - 01
  • ಲ್ಯಾಬ್ ತಂತ್ರಜ್ಞ -01
  • ಆಸ್ಪತ್ರೆ ಪರಿಚಾರಕರು - 10

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು www.rwf.indianrailways.gov.in ಜಾಲತಾಣದಲ್ಲಿ ನೋಡಬಹುದಾಗಿದೆ.

ಈ ವೆಬ್ ಸೈಟ್ ನಲ್ಲಿ ವಿವರವಾದ ಮಾಹಿತಿಯನ್ನು ಓದಿಕೊಂಡು, ನಿಗದಿಪಡಿಸಿದ ಅರ್ಹತಾ ಷರತ್ತುಗಳನ್ನು ಪೂರೈಸಬಲ್ಲ ಅಭ್ಯರ್ಥಿಗಳು ದಿನಾಂಕ 20-04-2021ರಂದು ಬೆಳಿಗ್ಗೆ 11 ಗಂಟೆಗೆ ತಾಂತ್ರಿಕ ತರಬೇತಿ ಕೇಂದ್ರ, ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು-560064ರಲ್ಲಿ ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

Thanks for reading ಏ.20ರಂದು 'ರೈಲು ಗಾರಿ ಕಾರ್ಖಾನೆ'ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ 'ವಾಕ್ ಇನ್ ಸಂದರ್ಶನ' | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಏ.20ರಂದು 'ರೈಲು ಗಾರಿ ಕಾರ್ಖಾನೆ'ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ 'ವಾಕ್ ಇನ್ ಸಂದರ್ಶನ'

Post a Comment