ರಾಜ್ಯಾದ್ಯಂತ ಸೆ.144; ಶಾಲೆ-ಕಾಲೇಜು, ಚಿತ್ರಮಂದಿರ, ಬಾರ್- ಪಬ್ ಬಂದ್?

April 16, 2021

 


ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕು ತಡೆಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ರಾಜ್ಯಾದ್ಯಂತ 144 ಸೆಕ್ಷನ್ ಜಾರಿ, ರಾತ್ರಿ ಕಠಿಣ ಕರ್ಫ್ಯೂ, ಶಾಲೆ ಕಾಲೇಜು ಬಂದ್ ಸೇರಿದಂತೆ ಹಲವು ವಿಚಾರಗಳನ್ನು ಈ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ರಾಜ್ಯದ ಏಳು ನಗರಗಳಲ್ಲಿ ಸದ್ಯ ಜಾರಿಯಿರುವ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರಿಗಿನ ಕರ್ಫ್ಯೂವನ್ನು ರಾತ್ರಿ 8 ರಿಂದ ಬೆಳಿಗ್ಗೆ 6ರ ವರೆಗೆ ಕಠಿಣ ನೈಟ್ ಕರ್ಫ್ಯೂ ಮಾಡುವಂತೆ ಸಲಹೆ ನೀಡಲಾಗಿದೆ ಎಂದು ವರದಿಯಾಗಿದೆ.

ಸೋಂಕು ತಡೆಗೆ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಬೇಕು, ಜನ ಜಂಗುಳಿ ಸೇರುವ ಕಾರ್ಯಕ್ರಮಗಳು ಬಂದ್ ಮಾಡಬೇಕು, ಶಾಲಾ – ಕಾಲೇಜು ಹಾಗೂ ಚಿತ್ರಮಂದಿರ ಬಂದ್ ಮಾಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

ಬೆಂಗಳೂರಲ್ಲಿನ ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧ ವಿಧಿಸಬೇಕು, ಸೋಂಕು ಹೆಚ್ಚಿರುವ ಇತರ ಜಿಲ್ಲೆಗಳಲ್ಲೂ ಕಠಿಣ ಕ್ರಮ ಜಾರಿ ಮಾಡಬೇಕು, ಬಾರ್- ಪಬ್ ಬಂದ್ ಮಾಡಬೇಕು ಎಂದು ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.

ಸಿಎಂ ತುರ್ತು ಸಭೆ: ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ತುರ್ತು ಸಭೆ ನಡೆಸಿದರು. ಆರೋಗ್ಯ ಸಚಿವ ಡಾ| ಕೆ.ಸುಧಾಕರ್, ಸಿಎಸ್ ರವಿ ಕುಮಾರ್ ಮುಂತಾದವರು ಭಾಗವಹಿಸಿದ್ದಾರೆ.


Related Articles

Advertisement
Previous
Next Post »