ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

April 28, 2021

 


ಡಿಜಿಟಲ್ ಡೆಸ್ಕ್ : ಉದ್ಯೊಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 28,2021 ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಆನ್ ಲೈನ್ https://www.dkmul.com/index.html ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅಲ್ಲಿ ಕೋರಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಮೇ 28,2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ಅರ್ಜಿ ಪ್ರಾರಂಭ: 28-04-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-05-2021

ವಿದ್ಯಾರ್ಹತೆ

ಬಿವಿಎಸ್ಸಿ, ಎಎಚ್, ಬಿಎಸ್ಸಿ, B.Tech, ಎಂಎಸ್ಸಿ,ಬಿ.ಇ, ಪದವಿ, ಎಂಜಿನಿಯರಿಂಗ್ ಡಿಪ್ಲೊಮಾ, ಬಿಕಾಂ, ಬಿಬಿಎಂ, ಎಂಬಿಎ, ಎಸ್ ಎಸ್ ಎಲ್ ಸಿ ಮತ್ತು ಐಟಿಐ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ

ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 5 ವರ್ಷಗಳ ವಯಸ್ಸಿನ ಮಿತಿಯನ್ನು ಎಸ್ಸಿ / ಎಸ್ಟಿ / ಪ್ರವರ್ಗ - 1 ರ ಅಭ್ಯರ್ಥಿಗಳಿಗೆ, 2ಎ, 2ಬಿ, 3ಎ, 3ಬಿ ವರ್ಗಕ್ಕೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ

ಅರ್ಜಿದಾರರು ಅರ್ಜಿ ಶುಲ್ಕವನ್ನು ರೂ.800 / -, ಎಸ್ಸಿ / ಎಸ್ಟಿ / ವರ್ಗ - 1 ಅಭ್ಯರ್ಥಿಗಳು ರೂ.500 / -ಮೇ 29, 2021 ರಂದು ಸಂಜೆ 5:30 ರೊಳಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹುದ್ದೆಗಳ ವಿವರಗಳು

ಸಹಾಯಕ ವ್ಯವಸ್ಥಾಪಕರು- 07

ತಾಂತ್ರಿಕ ಅಧಿಕಾರಿ - 04

ತಾಂತ್ರಿಕ ಅಧಿಕಾರಿ - 01

ತಾಂತ್ರಿಕ ಅಧಿಕಾರಿ (ಎಂಜಿನಿಯರಿಂಗ್) - 01

ವಿಸ್ತರಣಾಧಿಕಾರಿ ಗ್ರೇಡ್ -3- 4 + 4 (ಇತರ ಅಭ್ಯರ್ಥಿಗಳು)

ಡೈರಿ ಸೂಪರ್ ವೈಸರ್ ಗ್ರೇಡ್-2 - 05 ಪೋಸ್ಟ್ಗಳು

ಆಡಳಿತ ಸಹಾಯಕರು ಗ್ರೇಡ್-2 - 10 ಹುದ್ದೆಗಳು

ಕೆಮಿಸ್ಟ್ ಗ್ರೇಡ್ -2 - 12 ಹುದ್ದೆಗಳ

ಲೆಕ್ಕಾಚಾರ ಸಹಾಯಕರು ಗ್ರೇಡ್-2- 02 ಹುದ್ದೆಗಳು

ಕಿರಿಯ ತಂತ್ರಜ್ಞರು - 30 ಹುದ್ದೆಗಳು

ಒಟ್ಟು 80 ಹುದ್ದೆಗಳು

ವೇತನ: ತಿಂಗಳಿಗೆ ರೂ.21,400/- ರಿಂದ ರೂ.97,100 /-

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕರೂ.800 / -, ಎಸ್ಸಿ / ಎಸ್ಟಿ / ವರ್ಗ- 1 ಅಭ್ಯರ್ಥಿಗಳು ರೂ.500 / -ಮೇ 29, 2021 ರಂದು ಸಂಜೆ 5:30 ರೊಳಗೆ ಪಾವತಿಸಬೇಕು.

ಟಿಎ - ಡಿಎ ಏರಿಕೆ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೊಂದು ಮುಖ್ಯ ಮಾಹಿತಿ

April 28, 2021

 


ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಏಳನೇ ವೇತನ ಆಯೋಗದ ವಿಷಯದಲ್ಲಿ ನಿರೀಕ್ಷೆಯ ಬಗ್ಗೆ ಒಂದಷ್ಟು ಮಾಹಿತಿ ಹೊರಬಿದ್ದಿದೆ.

7ನೇ ವೇತನ ಆಯೋಗದ ಲೆಕ್ಕಾಚಾರದ ಮ್ಯಾಟ್ರಿಕ್ಸ್‌ನ ಪ್ರಕಾರ ಜುಲೈ 2021ರಿಂದ ಟಿಎ ಹೆಚ್ಚಳವಾಗಬಹುದೆಂಬ ಊಹಿಸಲಾಗಿತ್ತು. ಆದರೆ ಅದು ಅನ್ವಯವಾಗಲ್ಲ ಎಂಬ‌ ಮಾಹಿತಿ ಬಂದಿದೆ.

ಸಾಮಾನ್ಯವಾಗಿ ಡಿಎಯೊಂದಿಗೆ ಟಿಎ ನೇರ ಸಂಪರ್ಕ ಹೊಂದಿರುತ್ತದೆ ಮತ್ತು ಅದೂ ಏರಿಕೆಯಾಗುತ್ತದೆ ಎಂಬುದು ಸಾಮಾನ್ಯವಾಗಿ ಲೆಕ್ಕಾಚಾರ ಹಾಕಲಾಗುತ್ತದೆ. ಡಿಎ ಶೇ.24‌ ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದಾಗ ಮಾತ್ರ ಈ ರೀತಿ ಮಾಡಲಾಗುತ್ತದೆ.

ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ ಶೇ.17ರಷ್ಟು ಡಿಎ ಪಡೆದಿದ್ದು, ಈ ಕಾರಣಕ್ಕೆ ಟಿಎ- ಡಿಎ ಒಟ್ಟಿಗೆ ಹೆಚ್ಚಾಗುತ್ತಿಲ್ಲ ಎಂಬ ವಿಶ್ಲೇಷಣೆ ಇದೆ.

ಪ್ರಸ್ತುತ 2021ರ ಜನವರಿಯಿಂದ ಜೂನ್‌ವರೆಗಿನ‌ ಭತ್ಯೆ ಪ್ರಕಟಣೆ ಸಹ ಬಾಕಿ ಇದೆ. ಆದ್ದರಿಂದ, ಕೇಂದ್ರ ಸರ್ಕಾರಿ ನೌಕರರು ದಸರಾ ದೀಪಾವಳಿಗೆ ಡಿಎ ಹೆಚ್ಚಳ ಘೋಷಣೆಯನ್ನು ನಿರೀಕ್ಷಿಸಬಹುದು.

ರಾಜ್ಯ ಸರ್ಕಾರಿ ನೌಕರರಿಗೆ ಬಯೋಮೆಟ್ಟಿಕ್ ಬದಲು ಸಹಿ ಮಾಡುವಂತೆ ಆದೇಶ

April 28, 2021

 


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಜೋರಾಗಿದ್ದರಿಂದ, ರಾಜ್ಯ 14 ದಿನಗಳ ಕಾಲ ಲಾಕ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆಗೆ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ನಿಷೇಧ ಮಾಡಿ, ಕೇವಲ ಸಹಿ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಬಯೋಮೆಟ್ರಿಕ್ ಬದಲಿಗೆ ಸಹಿ ಮಾಡುವಂತೆ ಸರ್ಕಾರದ ಉಪಕಾರ್ಯದರ್ಶಿ ಎಸ್. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ತಜ್ಞರ ಪ್ರಕಾರ ಕೊರೊನಾ ಆರ್ಭಟಕ್ಕೆ ಬ್ರೇಕ್ ಬೀಳುವುದು ಯಾವಾಗ ಗೊತ್ತಾ..?

April 27, 2021

 


ನವದೆಹಲಿ: ದೇಶದಲ್ಲಿ ದಿನನಿತ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಇದು ಮುಂದಿನ ತಿಂಗಳದವರೆಗೂ ಹೀಗೆ ಏರುಗತಿಯಲ್ಲೇ ಸಾಗುತ್ತದೆ. ಮುಂದೆ ಮೇ ತಿಂಗಳ ಅಂತ್ಯಕ್ಕೆ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಕಾಣಲಿದೆ ಎಂದು ಐಐಟಿ-ಕಾನ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮಣಿಂದರ್ ಅಗರವಾಲ್ ಅವರು ಭವಿಷ್ಯ ನುಡಿದಿದ್ದಾರೆ.

ಭಾರತದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸಕ್ರಿಯ ಪ್ರಕರಣಗಳು ಮೇ 14-18 ರ ನಡುವೆ 38-48 ಲಕ್ಷದ ವರೆಗೂ ಏರಿಕೆ ಕಾಣಬಹುದು ಮತ್ತು ದೈನಂದಿನ ಹೊಸ ಸೋಂಕುಗಳು ಮೇ 4 ರಿಂದ 8 ನೇ ತಾರೀಖಿನವರೆಗೆ 4.4 ಲಕ್ಷ ಕ್ಕೆ ತಲುಪಬಹುದು ಎಂದು ಐಐಟಿ ವಿಜ್ಞಾನಿಗಳು ಹೇಳಿದ್ದಾರೆ. ಕಾನ್ಪುರ ಮತ್ತು ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು, ಮೇ ಮಧ್ಯಭಾಗದಲ್ಲಿ ಸಕ್ರಿಯ ಪ್ರಕರಣಗಳು ಇನ್ನೂ 10 ಲಕ್ಷಕ್ಕೂ ಹೆಚ್ಚು ಹೆಚ್ಚಾಗುತ್ತವೆ ಎಂದು ಅಂದಾಜಿಸಿದ್ದಾರೆ.

ಈ ಸಾಂಕ್ರಾಮಿಕ ರೋಗವು ಮೇ 11-15 ರ ನಡುವೆ 33-35 ಲಕ್ಷ ಒಟ್ಟು ಸಕ್ರಿಯ ಪ್ರಕರಣಗಳೊಂದಿಗೆ ಉತ್ತುಂಗಕ್ಕೇರಿ, ಮೇ ಅಂತ್ಯದ ವೇಳೆಗೆ ತೀವ್ರವಾಗಿ ಕುಸಿಯಬಹುದು ಎಂದು ಕಳೆದ ವಾರ ಸಂಶೋಧಕರು ಭವಿಷ್ಯ ನುಡಿದಿದ್ದರು. ಏಪ್ರಿಲ್ 15 ರ ವೇಳೆಗೆ ದೇಶದಲ್ಲಿ ಸಕ್ರಿಯ ಸೋಂಕುಗಳು ಗರಿಷ್ಠವಾಗಿರುತ್ತವೆ ಎಂದು ಅಂದಾಜಿಸಲಾಗಿತ್ತು ಆದರೆ ಅದು ನಿಜವಾಗಲಿಲ್ಲ.

'ಈ ಬಾರಿ, ನಾನು ಊಹಿಸಿದ ಮೌಲ್ಯಗಳಿಗೆ ಕನಿಷ್ಠ ಮತ್ತು ಗರಿಷ್ಠ ಲೆಕ್ಕವನ್ನು ಸಹ ಲೆಕ್ಕ ಮಾಡಿದ್ದೇನೆ ಮತ್ತು ಅದನ್ನು ಪೋಸ್ಟ್ ಮಾಡಿದ್ದೇನೆ. ನಿಜವಾದ ಮೌಲ್ಯಗಳು ಉಲ್ಲೇಖಿಸಲಾದ ಕನಿಷ್ಠ ಮತ್ತು ಗರಿಷ್ಠ ಮೌಲ್ಯಗಳನ್ನು ಹೊಂದಿರುತ್ತವೆ ಎಂದು ನನಗೆ ವಿಶ್ವಾಸವಿದೆ' ಎಂದು ಐಐಟಿ-ಕಾನ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮಣಿಂದರ್ ಅಗರವಾಲ್ ಅವರು ಹೇಳಿದ್ದಾರೆ.

BIGG BREAKING NEWS : ರಾಜ್ಯದ ಕೆಲ ಇಲಾಖೆಯ 'ಸರ್ಕಾರಿ ನೌಕರ'ರಿಗೆ ಕಚೇರಿ 'ಹಾಜರಾತಿ'ಯಿಂದ ವಿನಾಯ್ತಿ ನೀಡಿ 'ಸರ್ಕಾರ' ಆದೇಶ

April 27, 2021

 


ಬೆಂಗಳೂರು : ಕೊರೋನಾ ಸೋಂಕಿನ ಭೀಕರತೆಯಿಂದಾಗಿ ರಾಜ್ಯದಲ್ಲಿ 14 ದಿನ ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿದೆ. ಮೇ.12ರವರೆಗೆ ಸಂಪೂರ್ಣ ಕರ್ಪ್ಯೂ ರಾಜ್ಯಾಧ್ಯಂತ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ಅಗತ್ಯ ಸೇವೆ ಇಲಾಖೆಯ ಹೊರತಾಗಿ, ಕೆಲ ಇಲಾಖೆಗಳಲ್ಲಿ ಶೇ.50ರಷ್ಟು ಸಿಬ್ಬಂದಿಗಳು ಕೆಲಸಕ್ಕೆ ರಾಜ್ಯ ಸರ್ಕಾರ ಸೂಚಿಸಿದ್ದರೇ, ಇನ್ನುಳಿತ ಇಲಾಖೆಯ ಸಿಬ್ಬಂದಿಗಳಿಗೆ ಹಾಜರಾತಿಯಿಂದ ವಿನಾಯ್ತಿ ನೀಡಿ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಚಿವಾಲಯದಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ ಮತ್ತು ಕಂದಾಯ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

ಇನ್ನುಳಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಇಂಧನ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಆರ್ಥಿಕ ಇಲಾಖೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ವಾಣಿಜ್ಯ, ಕೈಗಾರಿಕಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಶೇ.50ರಂತೆ ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

ಉಳಿದ ಎಲ್ಲಾ ಇತರೇ ಇಲಾಖೆಗಳ ಅಧಿಕಾರಿ, ನೌಕರರುಗಳಿಗೆ, ಕಚೇರಿ ಹಾಜರಾತಿಯಿಂದ ವಿನಾಯಿತಿ ನೀಡಲಾಗಿರುತ್ತದೆ. ಹೀಗೆ ಹಾಜರಾತಿಯಿಂದ ವಿನಾಯಿತಿ ನೀಡಲ್ಪಟ್ಟ ಇಲಾಖೆಯ ಕಾರ್ಯದರ್ಶಿಯವರು, ಇಲಾಖಾ ಮುಖ್ಯಸ್ಥರು ಇಚ್ಛಿಸಿದಲ್ಲಿ, ಅವರು ಬಯಸುವಂತಹ ಅಧಿಕಾರಿ, ನೌಕರರುಗಳು ಯಾವುದೇ ಕಾರಣ ನೀಡದೇ ಕಚೇರಿಗೆ ಹಾಜರಾಗುವುದು ಎಂಬುದಾಗಿ ತಿಳಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತದ ಬಗ್ಗೆ ನೌಕರರ ಸಂಘದ ಅಧ್ಯಕ್ಷರು ಹೇಳಿದ್ದೇನು..?

April 27, 2021

 


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿಯಿಂದ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹಾಗಾಗಿ ರಾಜ್ಯದ ಎಲ್ಲ ಸರ್ಕಾರಿ ನೌಕರರ ಒಂದು ತಿಂಗಳ ಸಂಬಳವನ್ನು ಕಡಿತ ಮಾಡುವ ಸುದ್ದಿ ಮಾಧ್ಯಮಗಳಲ್ಲಿ ಜೋರಾಗಿ ಕೇಳಿಬಂದಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತ ಮಾಡುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕಡಿತ ಮಾಡುವ ತೀರ್ಮಾನವನ್ನು ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಂಡಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ರಾಜ್ಯದ ಸರ್ಕಾರಿ ನೌಕರರಲ್ಲಿ ಗೊಂದಲ ಉಂಟುಮಾಡಿರುವುದನ್ನು ಗಮನಿಸಲಾಗಿದೆ ಎಂದಿದ್ದಾರೆ.

ಯಾವುದೇ ಸರ್ಕಾರಗಳು ಈ ರೀತಿಯ ತೀರ್ಮಾನಗಳನ್ನು ತಗೆದುಕೊಳ್ಳುವ ಮುನ್ನ ಸಂಪ್ರದಾಯದಂತೆ, ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನಗಳನ್ನು ತಗೆದುಕೊಳ್ಳಬೇಕು. ಆದರೆ, ಈ ವರೆಗೂ ಆ ರೀತಿಯ ಯಾವುದೇ ಚರ್ಚೆಗಳನ್ನು ಸರ್ಕಾರ ನಮ್ಮ ಜೊತೆಗೆ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ.

ಇಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕಡಿತ ಮಾಡುತ್ತೇವೆ ಎಂಬ ಅಂಶ ಸತ್ಯಕ್ಕೆ ದೂರವಾದದ್ದು ಹಾಗೂ ಗಾಳಿ ಸುದ್ದಿ ಎಂಬ ವಿಚಾರವನ್ನು ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಸಂಘವು ತಿಳಿಸುತ್ತದೆ ಹಾಗೂ ಗೊಂದಲಕ್ಕಿಡಾಗಬಾರದೆಂದು ವಿನಂತಿಸಿಕೊಂಡಿದ್ದಾರೆ.

ರಾತ್ರಿ ಕಂಡ ಕನಸಿಗೆ ಒಂದಷ್ಟು ಕಲ್ಪನೆಗಳನ್ನು ತುಂಬಿ ಬರೆದ ಸಣ್ಣ ಕತೆ...

April 25, 2021

 


ರಾತ್ರಿ ಕಂಡ ಕನಸಿಗೆ ಒಂದಷ್ಟು ಕಲ್ಪನೆಗಳನ್ನು ತುಂಬಿ ಬರೆದ ಸಣ್ಣ ಕತೆ...

    
     ನಾ ಕಲಿತ ಶಾಲೆಗೆ ನಾ ಟೀಚರ್ ಆಗಿ ಕೆಲಸಕ್ಕೆ ಸೇರಿ ಕೇವಲ ಹದಿನೈದು ದಿನಗಳಾಗಿತ್ತಷ್ಟೇ..ಅದೇನೋ ವಿಚಿತ್ರ ಖುಷಿಯಲ್ಲಿದ್ದೆ....ಮನೆಯಿಂದ ಶಾಲೆಗೆ ಸುಮಾರು ನಲವತ್ತೈದು ನಿಮಿಷಗಳ ಕಾಲ್ನಡಿಗೆ..ಇಪ್ಪತ್ತು ನಿಮಿಷ ರಸ್ತೆಯಲ್ಲಾದರೆ ಇನ್ನುಳಿದ ಇಪ್ಪತೈದು ನಿಮಿಷ ಒಂದು ದೊಡ್ಡ ಗದ್ದೆ,ಅದರ ಪಕ್ಕ ಹರಿವ ಸಣ್ಣ ತೊರೆ ಅದನ್ನು ದಾಟಿ ಕೊಂಚ ಮೇಲೆ ಹತ್ತಿ ಹೋದರೆ ಸಣ್ಣ ಗುಡ್ಡದಂತಿದ್ದ ಕಾಡು ಅದರಲ್ಲೊಂದು ಕಾಲು ದಾರಿ ಅದನ್ನು ದಾಟಿ ನೂರೆಜ್ಜೆ ಹಾಕಿದರೆ ಮನೆ ಮುಟ್ಟಲು ಕೇವಲ ಮೂರೇ ನಿಮಿಷ...
 
   ಈ ಗುಡ್ಡದಂತಿದ್ದ ಕಾಡಿನ ಕಾಲು ದಾರಿಯನ್ನು ದಾಟಿಬಿಟ್ಟರೆ ನನಗೆ ಯುದ್ಧ ಗೆದ್ದಷ್ಟೇ ಖುಷಿ..ಇವತ್ತೂ ಶಾಲೆ ಮುಗಿದ ನಂತರ ಬಿರಬಿರ ಹೆಜ್ಜೆ ಹಾಕತೊಡಗಿದೆ..ಅಷ್ಟರಲ್ಲೇ ಮಳೆ ಹನಿಯಲು ಶುರು ಆಯಿತು..ನೋಡನೋಡುತ್ತಿದ್ದಂತೆ ಮಳೆ ತನ್ನ ವೇಗವನ್ನು ಹೆಚ್ವಿಸಿಕೊಂಡು ರಭಸದಿಂದ ಸುರಿಯಲು ಶುರುಮಾಡಿತು..

ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಸೀರೆಯ ಸೆರಗಿಡಿದು ನಡೆದರೂ ನೆನೆದಾಗಿತ್ತು..ಗದ್ದೆ ದಾಟಿ ತೊರೆಯ ಹತ್ತಿರ ಬಂದವಳಿಗೆ ತೊರೆ ದಾಟಲು ಹಾಕಿದ್ದ ಪಾಲ (ಮರದ ದಿಮ್ಮಿ) ನೀರಿನಲ್ಲಿ ಕೊಚ್ವಿಹೋಗಿದ್ದು ನೋಡಿ ಜೀವ ಜಗ್ಗಿತು...ನಿಧಾನವಾಗಿ ತೊರೆಯಲ್ಲಿ ಇಳಿದು ಹೇಗೋ ದಾಟಿದಾಯ್ತ. ಈಗ ಕಾಡಿನ ಕಾಲುದಾರಿಯಲ್ಲಿ ಹೋಗುವ ಸಾಹಸ..ಹೋಗಲೇ ಬೇಕಿತ್ತು..ಯಾರಾದರೂ ಬರುತ್ತಾರೋ ನೋಡೋಣ ಎಂದು ಒಂದಷ್ಟು ಹೊತ್ತು ಅಲ್ಲಿಯೇ ಕಾದರೂ ಯಾರೂ ಬರದಿದ್ದಾಗ ನಿಧಾನವಾಗಿ ಹನುಮಂತನನ್ನು ಮನದಲ್ಲೇ ನೆನೆದು ನಡೆಯಲಾರಂಭಿಸಿದೆ....
   
ಒಂದು ಹತ್ತು‌ ಹತ್ತು ಹೆಜ್ಜೆ ಹಾಕಿದ್ನೊ ಇಲ್ವೋ ಏನೋ ಚರಪರ ಸದ್ದು ಗಾಳಿಗೆ ಇರಬೇಕು ಅಂದುಕೊಂಡೆ...
ಮನೆಯ ಹತ್ತಿರದ ಈ ಸಣ್ಣ ಗುಡ್ಡದ ಕಾಡು ನನಗೆ ಒಂಥರ ವಿಸ್ಮಯ ತರಿಸುವ ಜಾಗ ನಾಲ್ಕಾರು ವಿಧದ ನೇರಳೆ ಹಣ್ಣಿನ ಮರ,ಕಾಡು ಮಲ್ಲಿಗೆಯ ಗಾಢ ಪರಿಮಳ,ಸಣ್ಣ ಸಣ್ಣಕಾಯಿಆಗಿ ಹಣ್ಣೇ ಆಗದೇ ಉದುರಿ ಹೋಗುವ ಸೀಬೆಯ ಗಿಡ..ಕಾಡು ಮಾವಿನ ಹಣ್ಣಿನ ಮರ,ಮಳೆಗಾಲದಲ್ಲಷ್ಟೇ ಸಿಗುವ ಕಳಿಲೆ..(bamboo shoot) ಅಪರೂಪಕ್ಕೆ ಕಾಣಿಸುವ ಚಂದದ ಹೂವುಗಳು ಇವೆಲ್ಲ ಇದ್ದರೂ ಒಂಟಿಯಾಗಿ ಓಡಾಡುವಾಗ ಭಯ ಬಿಟ್ಟು ಬೇರೇನು ಕಾಣಿಸದು..ಮತ್ತೇ ಹಿಂದಿನಿಂದ ಚರಪರ ಸದ್ದು ಯಾರೋ ನಡೆದು ಬರುತ್ತಿರುವ ಹಾಗೇ..ಸಧ್ಯ ಯಾರೋ ಜೊತೆ ಸಿಗುತ್ತಾರೆ ಅಂದಾಗ ಸಮಧಾನವಾಯ್ತು..ಹೆಜ್ಜೆಯ ಸದ್ದು ಹತ್ತಿರವಾಗುತ್ತಿದಂತೆ ಹಿಂದೆ ತಿರುಗಿ ನೋಡಿದೆ ನಮ್ಮ ಮನೆಗೆ ಕೊಂಚ ದೂರ ಇದ್ದ ಲಲಿತಮ್ಮ..ನನ್ನ ನೋಡಿ ಅವರಿಗೂ ಖುಷಿ ಆಯ್ತು..ಮಾತನಾಡುತ್ತ ಆಡುತ್ತ ಲಲಿತ್ತಮ್ಮನ ಸ್ವರ ಕೇಳಿಸದೇ ಹೋದಾಗ ಮೆಲ್ಲಗೆ ಹಿಂದೆ ತಿರುಗಿ ನೋಡಿದೆ ಅಲ್ಲಿ ಯಾರೂ ಇಲ್ಲ..ನಾ ಲಲಿತಮ್ಮನ ನೋಡಿದ್ದು ನಿಜ ಮಾತನಾಡಿದ್ದು ನಿಜ ಇದ್ದಕಿದ್ದಂತೆ ಮಾಯ ಆದ್ರೆ ನನ್ನ ಸ್ಥಿತಿ ಏನಾಗಬೇಡ..ಒಂದೇ ಓಟ ಓಡಿದ್ದೆ ನಾನು ಮನೆ ತಲುಪುವವರೆಗೂ ಹಿಂದೆ ತಿರುಗಿ ನೋಡಲೇ ಇಲ್ಲ...

ಇನ್ನೊಮ್ಮೆ ಲಲಿತಮ್ಮನ ನೋಡೋದಕ್ಕೂ ಧೈರ್ಯ ಇಲ್ಲ..ಎಲ್ಲಾ ಕನಸು ಅಂತ ಗೊತ್ತಾದ ಮೇಲೆ ಆದ‌ ಖುಷಿ ಅಷ್ಟಿಷ್ಟಲ್ಲ ಬಿಡಿ...

ರಮ್ಯಾ ಮನ್ವಿತಾ...ದೇಹದಲ್ಲಿ ಉತ್ತಮ ಆಮ್ಲಜನಕ ಮಟ್ಟವನ್ನ ಕಾಪಾಡಿಕೊಳ್ಳಲು ಈ ಪದಾರ್ಥಗಳನ್ನ ಸೇವಿಸಿ

April 24, 2021

 


ಸದ್ಯದ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯವನ್ನ ಎಷ್ಟೊಂದು ಕಾಳಜಿಯಿಂದ ನೋಡಿಕೊಂಡರೂ ಸಹ ಅದು ಕಡಿಮೆಯೇ. ಸಣ್ಣ ಅಜಾಗರೂಕತೆಯೂ ನಮ್ಮ ಜೀವವನ್ನೇ ಕಿತ್ತುಕೊಂಡುಬಿಡಬಹುದು. ಹೀಗಾಗಿ ಕಾಯಿಲೆ ಬಂದ ಮೇಲೆ ಪರಿತಪಿಸೋದಕ್ಕಿಂತ ಮುಂಜಾಗ್ರತಾ ಕ್ರಮ ಹೆಚ್ಚು ಸೂಕ್ತ.

ಪ್ರಸ್ತುತ ದೇಹದಲ್ಲಿ ಆಮ್ಲಜನಕ ಮಟ್ಟ ಸರಿಯಾಗಿ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ನೀವು ಈ ಕೆಳಗಿನ ಆಹಾರ ಪದಾರ್ಥಗಳನ್ನ ಹೆಚ್ಚಾಗಿ ಸೇವಿಸಿ.

ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಅಂಶಗಳು ಅಡಗಿವೆ. ಇದನ್ನ ಅಡುಗೆಯಲ್ಲಿ ಬಳಕೆ ಮಾಡೋದ್ರಿಂದ ಅಡುಗೆ ರುಚಿ ಹೆಚ್ಚೋದ್ರ ಜೊತೆಗೆ ನಿಮ್ಮ ದೇಹದ ಆಮ್ಲಜನಕ ಮಟ್ಟವೂ ಸುಧಾರಿಸಲಿದೆ. ಬೆಳ್ಳುಳ್ಳಿ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತೆ.

ನಿಂಬೆ ಹಣ್ಣು : ನಿಂಬೆ ಹಣ್ಣಿನ ವಿಶೇಷತೆ ಅಂದರೆ ಅದರಲ್ಲಿ ಅಡಗಿರುವ ಅಪಾರ ಪ್ರಮಾಣದ ವಿಟಮಿನ್​ ಸಿ ಅಂಶ.

ವಿಟಮಿನ್ ಸಿ ಅಂಶ ಹೇರಳವಿರುವ ಯಾವುದೇ ಹಣ್ಣು / ತರಕಾರಿ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಸುಧಾರಿಸುವ ಕೆಲಸ ಮಾಡುತ್ತೆ.

ಕಿವಿ ಹಣ್ಣು : ಕಿವಿ ಕೂಡ ಇದೇ ವಿಟಮಿನ್​ ಸಿ ಕಾರಣದಿಂದಲೇ ಹೆಚ್ಚು ಉಪಯೋಗಕಾರಿ ಎನಿಸಿದೆ. ಹೀಗಾಗಿ ಈ ಹಣ್ಣಿನ ಸೇವನೆ ಈ ಪರಿಸ್ಥಿತಿಯಲ್ಲಿ ತುಂಬಾನೇ ಮುಖ್ಯವಾಗಿದೆ.

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಅಲ್ಕಲಿನ್ ಅಂಶ ಅತಿಯಾಗಿ ಇರೋದ್ರಿಂದ ದೇಹದಲ್ಲಿ ಆಮ್ಲಜನಕ ಮಟ್ಟ ಹೆಚ್ಚಲಿದೆ.

ಮೊಸರು : ಮೊಸರಿನಲ್ಲಿ ವಿಟಾಮಿನ್​, ಪ್ರೋಟಿನ್​ ಹಾಗೂ ಕ್ಯಾಲ್ಶಿಯಂ ಅಗಾಧ ಪ್ರಮಾಣದಲ್ಲಿದೆ. ಈ ಮೊಸರಿನ ಸೇವನೆ ಕೂಡ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಸುಧಾರಿಸಲಿದೆ.

PM Kisan : ರೈತರ ಖಾತೆಗೆ ₹ 2000 ಜಮಾ! ನಿಮಗೂ ಬರುತ್ತಾ ಇಲ್ಲವೋ ಇಲ್ಲಿ ಪರಿಶೀಲಿಸಿ

April 24, 2021

 


ನವದೆಹಲಿ: ನೀವು ಸಹ ಕೃಷಿಕರಾಗಿದ್ದರೆ ಮತ್ತು ಈ ಪಿಎಂ ರೈತ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ, ನಿಮಗೆ ಈ ಯೋಜನೆಯ 2021 ಮೊದಲ ಕಂತು 2000 ರೂ. ಸಹ ಸಿಗುತ್ತದೆ. ಈ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ರೈತರಿಗೆ ಈ ಕಂತಿನ ಹಣ ಖಾತೆಗೆ ಜಮಾ ಆಗಲಿದೆ ನೀಡಲಾಗುತ್ತದೆ. ಈ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ

ಶೀಘ್ರದಲ್ಲೇ ನಿಮ್ಮ ಹಣ ಖಾತೆಗೆ ಜಮಾ!

ಈವರೆಗೆ 11.74 ಕೋಟಿ ರೈತರನ್ನು ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜ(PM Kisan Samman Scheme)ನೆಗೆ ನೊಂದಾಯಿಸಿಕೊಂಡಿದ್ದಾರೆ.

ಅವರು ನಿಯಮಿತವಾಗಿ ಈ ಮೊತ್ತವನ್ನು ಪಡೆಯಲ್ಲಿದ್ದಾರೆ. ನೀವೂ ಸಹ ಏಪ್ರಿಲ್-ಜುಲೈಗೆ 2000 ರೂಪಾಯಿಗಾಗಿ ಕಾಯುತ್ತಿದ್ದರೆ, ಈ ತಿಂಗಳ ಕೊನೆಯಲ್ಲಿ ಅಥವಾ ಮೇ 2 ರ ನಂತರ ಯಾವುದೇ ಸಮಯದಲ್ಲಿ ರೈತರ ಖಾತೆಗೆ ಹಣ ಬರಬಹುದು. ನಿಮ್ಮ ಹಳ್ಳಿಯಲ್ಲಿ ಯಾರಿಗೆ ಹಣ ಬರುತ್ತದೆ, ನೀವು ಅದನ್ನು ಬಹಳ ಸುಲಭವಾಗಿ ನೋಡಬಹುದು. ಅದಕ್ಕಾಗಿ ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ.

ಈ ರೀತಿ ಪರಿಶೀಲಿಸಿ:

ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು, ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಬೇಕು. ಇಲ್ಲಿ ನೀವು ಫಾರ್ಮರ್ಸ್ ಕಾರ್ನರ್(Farmers Corner) ಆಯ್ಕೆಯನ್ನು ನೋಡುತ್ತೀರಿ. ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ, ಫಲಾನುಭವಿಗಳ ಪಟ್ಟಿ(Beneficiaries List)ಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಪಟ್ಟಿಯಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಆರಿಸಬೇಕಾಗುತ್ತದೆ. ಗೆಟ್ ರಿಪೋರ್ಟ್ ಕ್ಲಿಕ್ ಮಾಡಬೇಕು. ಇದರ ನಂತರ, ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ತೆರೆದುಕೊಳ್ಳುತ್ತದೆ.

ನಿಮ್ಮ ಖಾತೆಗೆ ಹಣ ಬರುತ್ತದೆಯೇ ಎಂಬಹುದನ್ನು ಪರಿಶೀಲಿಸಲು:

ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಪೋರ್ಟಲ್‌ಗೆ https://pmkisan.gov.in/ ಹೋಗಿ ಅಲ್ಲಿ Payment Success ಕೆಳಗೆ ಭಾರತದ ನಕ್ಷೆ(India Map)ಯ ಟ್ಯಾಬ್ ಅಡಿಯಲ್ಲಿ ಕಾಣಿಸುತ್ತದೆ, ಡ್ಯಾಶ್‌ಬೋರ್ಡ್ ಸಿಗುತ್ತೆ ಅದರ ಕ್ಲಿಕ್ ಮಾಡಿ ಹೊಸ ಪುಟ ಒಂದು ತೆರೆದು ಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಆಗ Village Dashboard ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ನಿಮ್ಮ ಹಳ್ಳಿಯ ಸಂಪೂರ್ಣ ವಿವರಗಳನ್ನು ತೆಗೆದುಕೊಳ್ಳಬಹುದು, ಮೊದಲು ರಾಜ್ಯವನ್ನು ಆಯ್ಕೆ ಮಾಡಿ, ನಂತರ ನಿಮ್ಮ ಜಿಲ್ಲೆ, ನಂತರ ತಾಲೂಕು, ಹೋಬಳಿ ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಿ. ನಂತರ ಪ್ರದರ್ಶನ ಬಟನ್ ಕ್ಲಿಕ್ ಮಾಡಿ ಮತ್ತು ನೀವು ತಿಳಿದುಕೊಳ್ಳಲು ಬಯಸುವ ವ್ಯಕ್ತಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ, ಸಂಪೂರ್ಣ ವಿವರವು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ, ವಿಲೇಜ್ ಡ್ಯಾಶ್‌ಬೋರ್ಡ್ ಅಡಿಯಲ್ಲಿ ನಾಲ್ಕು ಗುಂಡಿಗಳು ಇರುತ್ತವೆ, ಎಷ್ಟು ರೈತರ ಡೇಟಾವನ್ನು ನೀವು ತಿಳಿಯಬೇಕಾದರೆ ತಲುಪಿದೆ, ನಂತರ ಸ್ವೀಕರಿಸಿದ ಡೇಟಾ ಬಾಕಿ ಇರುವವರ ಮೇಲೆ ಕ್ಲಿಕ್ ಮಾಡಿ, ಎರಡನೇ ಬಟನ್ ಕ್ಲಿಕ್ ಮಾಡಿ, ನೀವು ಯೋಜನೆಯಡಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರೆ ಅಲ್ಲಿ ನಿಮ್ಮ ಹೆಸರು ಕಂಡು ಬರುತ್ತದೆ. ಹೀಗೆ ನೀವು ಮನೆಯಲ್ಲಿ ಕುಳಿತು ಪಿಎಂ ಕಿಸಾನ್ ಸಮ್ಮನ್ ನಿಧಿಯ ಇತ್ತೀಚಿನ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಈಕೆಯ ಬರ್ತ್​ಡೇಯನ್ನು ಪೊಲೀಸರೂ ಸೆಲೆಬ್ರೇಟ್​ ಮಾಡಿದರು!; ಅಷ್ಟಕ್ಕೂ ಈ ಯುವತಿ ಮಾಡಿದ್ದಾದರೂ ಏನು?

April 24, 2021

 


ಮುಂಬೈ: ಈ ಯುವತಿಯ ಜನ್ಮದಿನಾಚರಣೆಗೆ ಈ ಸಲ ಖಾಕಿ ಖದರ್​ ಬಂದಿತ್ತು. ಕಾರಣ, ಈಕೆಯ ಬರ್ತ್​ಡೇಯನ್ನು ಪೊಲೀಸರೂ ಸೆಲೆಬ್ರೇಟ್​ ಮಾಡಿದ್ದಾರೆ. ಅಲ್ಲದೆ ಇವರ ಮನೆಗೇ ಕೇಕ್​ ಕೂಡ ಕಳುಹಿಸಿಕೊಟ್ಟಿರುವ ಪೊಲೀಸರು ಜನ್ಮದಿನದ ಶುಭಾಶಯ ಕೋರಿದ್ದಾರೆ. ಮಾತ್ರವಲ್ಲ ಈಕೆಗೆ 'ಜವಾಬ್ದಾರಿಯುತ ನಾಗರಿಕ' ಎಂಬ ಬಿರುದನ್ನೂ ನೀಡಿದ್ದಾರೆ.

ಹೀಗೆ ಪೊಲೀಸರಿಂದಲೂ ಬರ್ತ್​ಡೇ ಶುಭಾಶಯ ಪಡೆದುಕೊಂಡು ಕೇಕ್​ ಕೂಡ ಪಡೆದ ಯುವತಿಯ ಹೆಸರು ಸಮತಾ ಪಾಟೀಲ್​. ಈಕೆಯನ್ನು ಟ್ವಿಟರ್​​ನಲ್ಲಿ ಡಿಎಂ ಮಾಡಿ ಸಂಪರ್ಕಿಸಿದ ಪೊಲೀಸರು, ಮೊಬೈಲ್​ಫೋನ್​ ನಂಬರ್ ಪಡೆದು, ಅದನ್ನು ಸ್ಥಳೀಯ ಪೊಲೀಸರಿಗೆ ರವಾನಿಸಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರು ಈಕೆಯ ಮನೆಗೆ ಕೇಕ್​ ತಲುಪಿಸಿ, ಜನ್ಮದಿನದ ಶುಭಾಶಯ ಕೋರಿದ್ದಾರೆ.

ಅಷ್ಟಕ್ಕೂ ಈಕೆ ಗೆಳೆಯರಿಗೆ ಬರ್ತ್​ಡೇ ಟ್ರೀಟ್​ ನೀಡಲು ನಿರಾಕರಿಸಿದ್ದಕ್ಕೆ ಈಕೆಗೆ ಪೊಲೀಸರಿಂದ ಟ್ರೀಟ್​ ಸಿಕ್ಕಿದೆ.

ಹೊರಗೆ ಬಾ, ಬರ್ತ್​ಡೇ ಟ್ರೀಟ್​ ಕೊಡು ಎಂದು ಫ್ರೆಂಡ್ಸ್​ ಕೇಳಿದ್ದಕ್ಕೆ, ಈಕೆ ಲಾಕ್​ಡೌನ್​ ಇದೆ, ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಪ್ರತಿಕ್ರಿಯಿಸಿದ್ದಾರೆ. 'ಯಾರು ತಮ್ಮ ಸ್ನೇಹಿತರನ್ನು ಮನೆಯಲ್ಲೇ ಇರಲು ಬಯಸಿದ್ದೀರಿ' ಎಂದು ಟ್ವೀಟ್​ ಮಾಡಿ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಮತಾ, ಗೆಳೆಯರು ಟ್ರೀಟ್​ ಕೇಳಿದರೂ ನಾನು ಮನೆಯಿಂದ ಹೊರಗೆ ಹೋಗಿಲ್ಲ. ಅವರನ್ನು ಮನೆಯಲ್ಲೇ ಸುರಕ್ಷಿತವಾಗಿ ಇರಲು ಹೇಳಿದ್ದೆ ಎಂದಿದ್ದರು. ಈ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿದಕ್ಕೆ ಖುಷಿಯಾದ ಮುಂಬೈ ಪೊಲೀಸರು, 'ರೆಸ್ಪಾನ್ಸಿಬಲ್​ ಸಿಟಿಜನ್' ಎಂದು ಬರೆಸಿದ್ದ ಕೇಕ್​ ಸಮತಾಗೆ ಕಳುಹಿಸಿ ಜನ್ಮದಿನದ ಶುಭಾಶಯ ಕೋರಿದ್ದಾರೆ. (ಏಜೆನ್ಸೀಸ್​)


ಕರೋನಾ ಕಾಲದಲ್ಲಿ ಬಿಸಿನೀರಿನ ಸ್ಟೀಮ್ ಗಿಂತ ಮೊದಲು ಈ 5 ವಿಚಾರ ತಿಳಿದಿರಲಿ

April 24, 2021

 


ನವದೆಹಲಿ: ಎಲ್ಲರೂ ಹೆದರಿದ್ದಾರೆ. ಕರೋನಾ (Coronavirus) ರಕ್ಕಸ ಬಾಹು ವಿಸ್ತಾರಗೊಳ್ಳುತ್ತಿರುವಂತೆಯೇ ಎಲ್ಲರೂ ಗಡಗಡ ನಡುಗುತ್ತಿದ್ದಾರೆ. ಕರೋನಾದಿಂದ ಬಚಾವ್ ಆಗುನ ನಿಟ್ಟಿನಲ್ಲಿ ಒಂದಲ್ಲ ಒಂದು ಮನೆ ಮದ್ದು ಹುಡುಕುತಿದ್ದಾರೆ. ಆಮ್ಲಜನಕ ಮಟ್ಟ ಏರಿಸಲು ಒಂದು ಮನೆ ಮದ್ದು, ಇಮ್ಯೂನಿಟಿಗೊಂದು (immunity) ಮನೆ ಮದ್ದು, ಗಂಟಲಿನ ಕಿರಿಕಿರಿ ತಡೆಯಲು ಇನ್ನೊಂದು ಮನೆ ಮದ್ದು..ಹೀಗೆ ಒಂದಲ್ಲ ಒಂದು ಮನೆ ಮದ್ದನ್ನು ಹುಡುಕಿ ಅದನ್ನು ಫಾಲೊ ಮಾಡುತ್ತಿದ್ದಾರೆ. ಕರೋನಾ ವಿರುದ್ಧ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವುದು ಅವರಿಗೆ ಖಂಡಿತಾ ಗೊತ್ತಿಲ್ಲ. ಆದರೂ, ಕರೋನಾ ಸೃಷ್ಟಿಸಿರುವ ಭೀತಿಯ ಚಿತ್ರ ನೋಡಿ ಬಿಟ್ಟು, ಕಣ್ಣು ಮುಚ್ಚಿ ಎಲ್ಲಾ ರೀತಿಯ ಮನೆ ಮದ್ದು ಫಾಲೋ ಮಾಡುತ್ತಿದ್ದಾರೆ.

ಬಿಸಿ ನೀರಿನ ಸ್ಟೀಮ್ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸೇಫ್..?

ಕರೋನಾ ಶ್ವಾಸ ಸಂಬಂಧಿ ಕಾಯಿಲೆಯಾಗಿರುವುದರಿಂದ ಮೂಗು, ಗಂಟಲು ಹಾಗೂ ಶ್ವಾಸಕೋಶಗಳನ್ನು (Lungs) ಸ್ವಚ್ಛವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಬಿಸಿ ನೀರಿನ ಸ್ಟೀಮ್ (Hot water steam) ತೆಗೆದುಕೊಳ್ಳುವ ಅಭ್ಯಾಸ ಇದೀಗ ಹೆಚ್ಚಾಗಿದೆ. ಇದರಿಂದ ಎಷ್ಟರ ಮಟ್ಟಿಗೆ ಕರೋನಾ ವೈರಸ್ (Coronavirus) ಹತವಾಗುತ್ತದೆ ಅನ್ನೋದು ಇಲ್ಲಿಯವರೆಗೆ ರುಜುವಾತಾಗಿಲ್ಲ. ಆದರೂ, ಕರೋನಾ ಎಲ್ಲಾದರೂ ಮೂಗಿನ ಹೊಳ್ಳೆ ಹೊಕ್ಕಿದ್ದರೆ ಸತ್ತೇ ಹೋಗಿರಬೇಕು ಎಂಬ ಧನ್ಯತಾ ಭಾವ ಮಾತ್ರ ಸ್ಟೀಮ್ ಪಡೆದ ಮೇಲೆ ಮೂಡುತ್ತದೆ. ಆದರೆ ಸ್ಟೀಮ್ ಪಡೆಯುವ ಮೊದಲು ಈ ಕೆಲವು ಮಾಹಿತಿಗಳು ನಿಮಗೆ ತಿಳಿದಿರಲೇ ಬೇಕು.

ಸ್ಟೀಮ್ ತೆಗೆದುಕೊಳ್ಳುವವರಿಗೆ ಕಿವಿಮಾತು
1. ಸ್ಟೀಮ್ ತೆಗೆದುಕೊಳ್ಳುವಾಗ ತೀರಾ ಎಚ್ಚರಿಕೆಯಿಂದಿರಿ. ಸ್ಟೀಮ್ ತೆಗೆದುಕೊಳ್ಳುವ ಭರದಲ್ಲಿ ಚರ್ಮ ಸುಟ್ಟು ಹೋದೀತು.
2. ಸ್ಟೀಮ್ ತೆಗೆದಕೊಳ್ಳುವಾಗ ಪಾತ್ರೆಯಲ್ಲಿ ಎಷ್ಟು ಬೇಕೋ ಅಷ್ಟೇ ಬಿಸಿನೀರಿಡಿ. ಮಕ್ಕಳನ್ನು (Kids) ಮಾತ್ರ ಸ್ಟೀಮ್ ಪಾತ್ರೆಯ ಬಳಿ ಸುಳಿಯಲೂ ಬಿಡಬೇಡಿ
3. ಸ್ಟೀಮ್ ತೆಗೆದುಕೊಳ್ಳುವಾಗ ಕಣ್ಣು (Eyes) ಮುಚ್ಚಿಕೊಳ್ಳಿ
4. ದಿನಕ್ಕೆ ಎರಡು ಸಲಕ್ಕಿಂತ ಹೆಚ್ಚಿಗೆ ಸ್ಟೀಮ್ ತೆಗೆದುಕೊಳ್ಳಬೇಡಿ
5. ಜಾಸ್ತಿ ಸ್ಟೀಮ್ ತೆಗೆದು ಕೊಂಡರೆ ಮುಖ ಗಂಟಲು ಡ್ರೈ ಆಗಿಬಿಡಬಹುದು. ಇದರಿಂದ ಫಂಗಲ್ ಅಥವಾ ಬ್ಯಾಕ್ಟೀರಿಯಾ ಸೋಂಕು ಉಂಟಾಗಬಹುದು

ಕೇಂದ್ರದಿಂದ ಗ್ರಾಮೀಣಾ ಜನತೆಗೆ ಗುಡ್ ನ್ಯೂಸ್ : ಇಂದು ಆಸ್ತಿ ಮಾಲೀಕತ್ವದ `ಇ-ಪ್ರಾಪರ್ಟಿ ಕಾರ್ಡ್' ಯೋಜನೆಗೆ ಪ್ರಧಾನಿ ಮೋದಿ ಚಾಲನೆ

April 24, 2021

 


ನವದೆಹಲಿ : ಗ್ರಾಮೀಣಾ ಜನತೆಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿತ್ವ ಯೋಜನೆ ಇ-ಪ್ರಾಪರ್ಟಿ ಕಾರ್ಡ್ ವಿತರಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ.

ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚಾರಣೆ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ಅವರು 4.09 ಲಕ್ಷ ಮಂದಿಗೆ ಸಂಬಂಧಿಸಿದ ಆಸ್ತಿ ಮಾಲೀಕತ್ವದ ಇ-ಪ್ರಾಪರ್ಟಿ ಕಾರ್ಡುಗಳನ್ನು ನೀಡುವ ಯೋಜನೆಗೆ ಚಾಲನೆ ನೀಡಲಿದ್ದಾರೆ.

ದೇಶದ ಆಸ್ತಿದಾರರು ತಮ್ಮ ಪ್ರಾಪರ್ಟಿ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು. ತದನಂತರ, ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಆಸ್ತಿ ಕಾರ್ಡ್ ಗಳನ್ನು ಭೌತಿಕವಾಗಿ ವಿತರಿಸುತ್ತವೆ. ಈ ಯೋಜನೆಯ ಮೂಲಕ ಬ್ಯಾಂಕಿನಿಂದ ಸಾಲ ಪಡೆಯುವುದು ಗ್ರಾಮಸ್ಥರಿಗೆ ಈಗ ಸುಲಭವಾಗುತ್ತದೆ.

ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಆಯ್ದ ಹಳ್ಳಿಗಳಲ್ಲಿ 2020-21ನೇ ಅವಧಿಯಲ್ಲಿ ಈ ಯೋಜನೆಯ ಪ್ರಾಯೋಗಿಕ ಹಂತವನ್ನು ಜಾರಿಗೆ ತರಲಾಯಿತು.

ಸ್ವಾಮಿತ್ವ ಇ-ಪ್ರಾಪರ್ಟಿ ಕಾರ್ಡ್ ಯೋಜನೆ ಎಂದರೇನು?

ಮಾಲೀಕತ್ವ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಹಳ್ಳಿಗಳ ಜನರ ವಸತಿ ಆಸ್ತಿಯ ದಾಖಲೆಗಳಲ್ಲಿ ಸಂಪೂರ್ಣ ವಿವರಗಳನ್ನು ದಾಖಲಿಸಲಾಗುತ್ತಿದೆ. ಯೋಜನೆಯಡಿ, ಗ್ರಾಮೀಣ ಪ್ರದೇಶಗಳಲ್ಲಿನ ಆಸ್ತಿಗಳ ಭೌತಿಕ ಪ್ರತಿಗಳನ್ನು ಆಸ್ತಿ ಮಾಲೀಕರಿಗೆ ನೀಡಲಾಗುವುದು. ವಾಸ್ತವವಾಗಿ, ಮಾಲೀಕತ್ವದ ಯೋಜನೆಯು ಗ್ರಾಮೀಣ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ತುಂಬಾ ಪರಿಣಾಮಕಾರಿ ಮತ್ತು ಸಹಾಯಕವಾಗಬಹುದು.

ಮಾಲೀಕತ್ವ ಯೋಜನೆಯು ಹಳ್ಳಿಯ ಆಸ್ತಿಗಳನ್ನು ನಿಖರವಾಗಿ ಮೌಲ್ಯಮಾಪನ ಮಾಡುವ ಪ್ರಯತ್ನವಾಗಿದೆ, ಇದರ ಅಡಿಯಲ್ಲಿ ದೇಶದ ಎಲ್ಲಾ ಹಳ್ಳಿಗಳ ಆಸ್ತಿಯನ್ನು ಡ್ರೋನ್ ಗಳೊಂದಿಗೆ ಮ್ಯಾಪ್ ಮಾಡಲಾಗುತ್ತದೆ ಮತ್ತು ಗ್ರಾಮಸ್ಥರಿಗೆ ಸ್ವಾಮ್ಯದ ಪ್ರಮಾಣಪತ್ರವನ್ನು ನೀಡಲಾಗುವುದು. ಇದರಿಂದ ಆಸ್ತಿಯ ಬಗೆಗಿನ ಗೊಂದಲ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ. ಇದರಿಂದ ಗ್ರಾಮದಲ್ಲಿ ಅಭಿವೃದ್ಧಿ ಯೋಜನೆಗಳ ಸಮರ್ಪಕ ಯೋಜನೆ ರೂಪಿಸುವ ಕಾರ್ಯ ನಡೆಯಲಿದೆ.

‌ʼಕೊರೊನಾʼ ಸೋಂಕಿತರು ಏನು ಮಾಡಬೇಕು.? ಏನು ಮಾಡಬಾರದು.? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

April 24, 2021

 


ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿದ್ದು ಸೋಂಕಿನ ವಿರುದ್ಧ ಸಂಪೂರ್ಣ ವೈದ್ಯಕೀಯ ಲೋಕ ಹಗಲಿರುಳು ಶ್ರಮಿಸುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ ಉಂಟಾಗಿರೋದ್ರಿಂದ ರೋಗಿಗಳು ಪಡಬಾರದ ಕಷ್ಟ ಪಡ್ತಿದ್ದಾರೆ.

ನಿಮಗೂ ಕೂಡ ಕೊರೊನಾ ಲಕ್ಷಣಗಳು ಕಾಣಲಾರಂಭಿಸಿದ್ರೆ ಈ ಕೆಳಗಿನ ಮಾರ್ಗಗಳನ್ನ ಅನುಸರಿಸಿ :

ಪ್ರತ್ಯೇಕ ವಾಶ್​ರೂಮ್​ ಹೊಂದಿರುವ ಕೊಠಡಿಯಲ್ಲಿ ಐಸೋಲೇಟ್​ ಆಗಿ. ಆದಷ್ಟು ಬೇಗ ಆರ್​ಟಿ - ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಿ.

ಮನೆಯಲ್ಲೇ ಇರಿ. ಸೌಮ್ಯ ಲಕ್ಷಣ ಹೊಂದಿರುವ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳಬಹುದು. ವೈದ್ಯರ ಜೊತೆ ನಿಕಟ ಸಂಪರ್ಕದಲ್ಲಿರಿ.

ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಗಮನವಿರಲಿ. ಉಸಿರಾಟದ ಸಮಸ್ಯೆ ಉಲ್ಬಣವಾಗ್ತಾ ಇರೋದು ಗಮನಕ್ಕೆ ಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ.

ಉತ್ತಮ ಗುಣಮಟ್ಟದ ಮಾಸ್ಕ್​ಗಳನ್ನ ಧರಿಸಿ. ಸರ್ಜಿಕಲ್​ ಇಲ್ಲವೇ ಎನ್​ 95 ಮಾಸ್ಕ್​ಗಳಲ್ಲಿ ನಿಮ್ಮ ಮೂಗು, ಬಾಯಿ ಸಂಪೂರ್ಣ ಮುಚ್ಚುವಂತಿರಲಿ.

ಪದೇ ಪದೇ ಕೈಗಳನ್ನ ತೊಳೆಯುತ್ತಲೇ ಇರಿ.

ಆದಷ್ಟು ಸಮಯ ನೀರು ಕುಡಿಯುತ್ತಲೇ ಇರಿ. ತೀರಾ ಮಸಾಲೆಯಲ್ಲದ, ಎಣ್ಣೆಯಲ್ಲಿ ಕರಿಯದ ಆಹಾರಗಳನ್ನ ಸೇವಿಸಿ.

ಈ ಕೆಲಸಗಳನ್ನ ಮಾಡಲೇಬೇಡಿ :

ನೀವು ಬಳಸುವ ಶೌಚಾಲಯ, ಆಹಾರಗಳನ್ನ ಇತರರೊಂದಿಗೆ ಹಂಚಿಕೊಳ್ಳಬೇಡಿ.

ಸಾರ್ವಜನಿಕ ಸಾರಿಗೆ ಬಳಕೆ ಮಾಡಬೇಡಿ.

ಮನೆ ಬಿಟ್ಟು ಎಲ್ಲಿಗೂ ಹೋಗಬೇಡಿ. ವೈದ್ಯಕೀಯ ಕಾರ್ಯಕ್ಕಾಗಿ ಮಾತ್ರ ಹೊರ ಹೋಗಿ.

ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲೇಬೇಡಿ.

ಮನೆಯಲ್ಲೇ ಇರುವಾಗ ರೆಮಿಡಿಸಿವರ್​, ಸ್ಟೆರಾಯ್ಡ್ಸ್​ ತೆಗೆದುಕೊಳ್ಳಲೇಬೇಡಿ.

ಕೊರೊನಾ ಪಾಸಿಟಿವ್​ ವರದಿ ಬಳಿಕ ಈ ಕೆಲಸ ಮಾಡಿ :

ಆರ್​ಟಿ - ಪಿಸಿಆರ್​ ವರದಿ ಬಂದ ಬಳಿಕ ಆದಷ್ಟು ಬೇಗ ವೈದ್ಯರ ಅಪಾಯಿಂಟ್​ಮೆಂಟ್​ ಪಡೆಯಿರಿ. ಅಲ್ಲಿಯವರೆಗೂ ಮನೆಯಲ್ಲೇ ಇರಿ.

ನಿಮ್ಮ ಲಕ್ಷಣಗಳ ಮೇಲೆ ಗಮನವಿರಲಿ. ರೋಗದ ಲಕ್ಷಣಗಳು ಹೆಚ್ಚಾಗುತ್ತಿರೋದು ಗಮನಕ್ಕೆ ಬಂದಲ್ಲಿ ವೈದ್ಯರನ್ನ ಸಂಪರ್ಕಿಸಿ.

ನಿಮ್ಮ ಪ್ರಾಥಮಿಕ ಸಂಪರ್ಕಿತರಿಗೆ ನಿಮ್ಮ ಪಾಸಿಟಿವ್​ ವರದಿ ಬಗ್ಗೆ ಮಾಹಿತಿ ನೀಡಿ.

ಪ್ರತ್ಯೇಕ ಶೌಚಾಲಯವಿರುವ ಪ್ರತ್ಯೇಕ ಕೋಣೆಯಲ್ಲಿ ಐಸೋಲೇಟ್​ ಆಗಿರಿ.

ಆದಷ್ಟು ವಿಶ್ರಾಂತಿ ಪಡೆಯಿರಿ, ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಿ, ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.

ಆಕ್ಸಿಮೀಟರ್​ನಲ್ಲಿ ಪದೇ ಪದೇ ಆಮ್ಲಜನಕ ಪ್ರಮಾಣವನ್ನ ಪರೀಕ್ಷೆ ಮಾಡಿಕೊಳ್ಳುತ್ತಲೇ ಇರಿ. ಆಮ್ಲಜನಕ ಮಟ್ಟ ಕ್ಷೀಣಿಸುತ್ತಿರೋದು ಗಮನಕ್ಕೆ ಬಂದಲ್ಲಿ ವೈದ್ಯರನ್ನ ಭೇಟಿಯಾಗಿ.

ಪ್ರೋನಿಂಗ್​ ಮಾದರಿಯಲ್ಲಿ ಮಲಗಿಕೊಳ್ಳಿ. ಈ ರೀತಿ ಮಾಡೋದ್ರಿಂದ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟ ಸುಧಾರಿಸಲಿದೆ.

ಕೆಮ್ಮುವಾಗ ಹಾಗೂ ಸೀನುವಾಗ ಮುಖಕ್ಕೆ ಕರವಸ್ತ್ರ ಹಾಗೂ ಟಿಶ್ಯೂ ಪೇಪರ್​ ಹಿಡಿಯಿರಿ.

ಬಳಸಿದ ಟಿಶ್ಯೂ ಪೇಪರ್​ಗಳನ್ನ ಸರಿಯಾಗಿ ಡಂಪ್​ ಮಾಡಿ.

20 ಸೆಕೆಂಡ್​ಗಳ ಕಾಲ ನಿಮ್ಮ ಕೈಯನ್ನ ಸೋಪು ಹಾಗೂ ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

ಸೋಂಕಿಗೆ ಒಳಗಾದ ಮೇಲೆ ಈ ಕಾರ್ಯ ಮಾಡಲೇಬೇಡಿ :

ನೀವು ಬಳಸಿದ ಪಾತ್ರೆಗಳನ್ನ, ಟವೆಲ್​, ಹಾಸಿಗೆ, ಆಹಾರ , ಶೌಚಾಲಯಗಳನ್ನ ಇತರರೊಂದಿಗೆ ಹಂಚಿಕೊಳ್ಳಬೇಡಿ.

ನೀವಾಗಿಯೇ ಸ್ಟೆರಾಯ್ಡ್ಸ್ ಹಾಗೂ ರೆಮಿಡಿಸಿವರ್ ಪಡೆಯುವ ಸಾಹಸ ಬೇಡ.

ಸಾರ್ವಜನಿಕ ಸ್ಥಳಗಳಾದ ಕಚೇರಿ, ಸಿನಿಮಾ ಮಂದಿರ, ಹೋಟೆಲ್​ ಸೇರಿದಂತೆ ಜನನಿಬಿಡ ಸ್ಥಳಕ್ಕೆ ಭೇಟಿ ನೀಡುವುದನ್ನ ನಿಲ್ಲಿಸಿ.

ವೈದ್ಯಕೀಯ ಕಾರ್ಯಕ್ಕೆ ಹೊರತುಪಡಿಸಿ ಇನ್ಯಾವ ಕಾರ್ಯಕ್ಕೂ ಮನೆಬಿಟ್ಟು ಹೊರಬರಬೇಡಿ.

BPL ಕಾರ್ಡ್ ದಾರರಿಗೆ ಮತ್ತೊಂದು ಗುಡ್ ನ್ಯೂಸ್: ಪ್ರತಿ ವ್ಯಕ್ತಿಗೆ ಉಚಿತವಾಗಿ ಸಿಗಲಿದೆ 5 ಕೆಜಿ ರೇಷನ್

April 23, 2021

 


ನವದೆಹಲಿ: 80 ಕೋಟಿ ಬಡವರಿಗೆ ಎರಡು ತಿಂಗಳು ಉಚಿತವಾಗಿ ರೇಷನ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯ ನೀಡಲಿದ್ದು, ಇದಕ್ಕಾಗಿ 26,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು.

ಕಳೆದ ವರ್ಷದಂತೆ ಈ ವರ್ಷವೂ ಬಡವರಿಗೆ ಎರಡು ತಿಂಗಳು ಉಚಿತ ಪಡಿತರ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಉಚಿತವಾಗಿ ಪಡಿತರ ನೀಡಲಾಗುವುದು.

ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ಎರಡು ತಿಂಗಳು ತಲಾ 5 ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ. ಕಳೆದ ವರ್ಷ 5 ಕೆಜಿ ಆಹಾರ ಧಾನ್ಯದಲ್ಲಿ ಅಕ್ಕಿ, ಗೋಧಿ ಮತ್ತು ಬೇಳೆ ನೀಡಲಾಗಿತ್ತು. ಕೊರೋನಾ ಎರಡನೇ ಅಲೆಯಿಂದ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗುವಂತೆ ಆಹಾರಧಾನ್ಯ ನೀಡಲಾಗುವುದು ಎನ್ನಲಾಗಿದೆ.


ಎಲೆಕೋಸನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆ ಗೊತ್ತಾ..?

April 23, 2021

 


ಈ ಎಲೆಕೋಸಿನಿಂದ ಜ್ಯುಸ್ ಅನ್ನು ಕೂಡ ಮಾಡಿಕೊಂಡು ಕುಡಿಯಬಹುದು ಇದು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಜ್ಯುಸ್ ಮಾಡುವುದು ಹೇಗೆಂದರೆ ಮೊದಲು ಎಲೆಕೋಸನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಕತ್ತರಿಸಿಕೊಳ್ಳಬೇಕು ಅದಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಸಣ್ಣದಾಗಿ ಜಜ್ಜಿದ ಶುಂಠಿ ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಂಡು ಪ್ರತೀ ದಿನ ಬೆಳಿಗ್ಗೆ ಕುಡಿಯುತ್ತಾ ಬಂದರೆ ಆರೋಗ್ಯ ಉತ್ತಮವಾಗಿ ಇರುತ್ತದೆ.

ಎಲೆಕೋಸಿನಲ್ಲಿ ಬೀಟಾ-ಕ್ಯಾರೋಟಿನ್ ಎಂಬ ಅಂಶ ಇದ್ದು ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹಾಗೂ ಕಣ್ಣಿನ ಪೊರೆಯ ಸಮಸ್ಯೆ ದೂರ ಆಗುತ್ತದೆ. ನಿತ್ಯ ಒಂದು ಗ್ಲಾಸ್ ಎಲೆಕೋಸಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ಎಲೆಕೋಸಿನ ನೀರನ್ನು ನಿತ್ಯ ಸೇವಿಸುವುದರಿಂದ ಚರ್ಮದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಎಲೆಕೋಸು ಫೈಟೊನ್ಯೂಟ್ರಿಯಂಟ್ ಗಳಲ್ಲಿ ಸಮೃದ್ಧವಾಗಿದೆ.ಹಾಗಾಗಿ ನಿತ್ಯ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿಯುತ್ತ ಬಂದರೆ ನಮ್ಮ ದೇಹದಲ್ಲಿ ಇರುವ ರಕ್ತ ಶುದ್ಧಿಯಾಗುತ್ತದೆ. ಕೆಂಪು ಎಲೆಕೋಸನ್ನು ಸೇವನೆ ಮಾಡುವುದರಿಂದ ಕಿಡ್ನಿ ಸಮಸ್ಯೆ ದೂರ ಆಗುತ್ತಾದೆ. ವಾರದಲ್ಲಿ ಎರಡು ಬಾರಿ ಎಲೆಕೋಸಿನ ಸೂಪ್ ಮಾಡಿಕೊಂಡು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಎಲೆಕೋಸಿನಲ್ಲಿರುವ ಟಾರ್‌ಟ್ರೋನಿಕ್‌ ಆಸಿಡ್‌ ಎಂಬ ಅಂಶವು ಆಹಾರದ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್‌ ಅಂಶವನ್ನು ಕೊಬ್ಬಾಗಿ ಪರಿವರ್ತನೆಗೊಳ್ಳುವುದನ್ನು ತಡೆಯುತ್ತದೆ. ಈ ಅಂಶವು ತೂಕ ಇಳಿಸಿಕೊಳ್ಳುವವರಿಗೆ ಉತ್ತಮ.

ಇದರಲ್ಲಿರುವ ಸಮೃದ್ಧ ವಿಟಮಿನ್ ಸಿಯು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಫ್ರೀ ರಾಡಿಕಲ್ ಗಳನ್ನು ಸಹ ಇದು ಹದ್ದು ಬಸ್ತಿನಲ್ಲಿಟ್ಟಿರುತ್ತದೆ.ಎಲೆಕೋಸಿನಲ್ಲಿರುವ ಬೀಟಾ ಕೆರೊಟಿನ್ ಕಣ್ಣಿನ ರಕ್ಷಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಇದು ಮ್ಯಾಕುಲರ್ ಡಿಜನರೇಷನ್ ಉಂಟಾಗದಂತೆ ಕಾಪಾಡುತ್ತದೆ. ಆಗಾಗಿ ಕಣ್ಣಿನ ಪೊರೆ ಉಂಟಾಗುವುದಿಲ್ಲ. ಮಲಬದ್ಧತೆ. ಹೊಟ್ಟೆಯುಬ್ಬರದ ಸಮಸ್ಯೆಯನ್ನು ಈ ಎಲೆಕೋಸಿನ ಸಮಸ್ಯೆಯಿಂದ ದೂರ ಮಾಡಿಕೊಳ್ಳಬಹುದು.

ಎಲೆಕೋಸಿನಲ್ಲಿ ಇರುವ ಕಬ್ಬಿಣಾಂಶದಿಂದ ದೇಹಕ್ಕೆ ಶಕ್ತಿ ಬರುತ್ತದೆ ಮೂಳೆಗಳು ಗಟ್ಟಿ ಆಗುತ್ತವೆ. ನರಗಳ ಸಮಸ್ಯೆ ದೂರ ಆಗುತ್ತದೆ. ಎಲೆಕೋಸಿನ್ನು ಸೇವಿಸುವುದರಿಂದ ದೇಹಕ್ಕೆ ರಕ್ತ ಸಂಚಾರ ಸುಗಮವಾಗಿ ಹರಿಯುತ್ತದೆ. ಎಲೆಕೋಸಿನಲ್ಲಿ ವಿಟಮಿನ್ ಸಿ ಅಂಶವು ಹೇರಳವಾಗಿದ್ದು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲೆಕೋಸಿನಲ್ಲಿ ವಿಟಮಿನ್ ಕೆ ಅಂಶ ಇದ್ದು ಇದು ನಮ್ಮ ಮರೆವಿನ ಸಮಸ್ಯೆಯನ್ನು ದೂರ ಮಾಡುತ್ತದೆ.

ಸಾಮಾನ್ಯವಾಗಿ ಎಲೆಕೋಸುಗಳಿಂದ ಪಲ್ಯ, ಪಕೋಡಾ ಮಾಡುತ್ತಾರೆ. ಅದು ಕೂಡ ಅಪರೂಪವಾಗಿ. ಇನ್ನು ದೊಡ್ಡ ರೆಸ್ಟೊರೇಂಟ್​ಗಳಲ್ಲಿ ಸಲಾಡ್​ಗಳ ರೂಪದಲ್ಲಿ ಕ್ಯಾಬೇಜ್​ನ್ನು ನೀಡಲಾಗುತ್ತದೆ. ಇದರ ಹೊರತಾಗಿ ಪ್ರತಿನಿತ್ಯ ಎಲೆಕೋಸು ತಿನ್ನುವವರು ತುಂಬಾ ವಿರಳ.ಆದರೆ ಪ್ರತಿನಿತ್ಯ ಅಥವಾ ವಾರಕ್ಕೆ ಎರಡು ಮೂರು ಬಾರಿ ಎಲೆಕೋಸು ಆಹಾರಗಳನ್ನು ಸೇವಿಸುವುದರಿಂದ ನಾನಾ ರೀತಿಯ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹದು. ಏಕೆಂದರೆ ಈ ತರಕಾರಿಯಲ್ಲಿ ನಾರಿನಾಂಶ ಹೇರಳವಾಗಿರುತ್ತದೆ.

ಕೆಲಸ ಖಾಲಿ ಇದೆ: ರಾಜ್ಯಾದ್ಯಂತ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

April 23, 2021

 


ಬೆಂಗಳೂರು: ಮಿತಿಮೀರಿರುವ ಕರೊನಾ ಹಾವಳಿಯ ಈ ಸಂದರ್ಭದಲ್ಲಿ ಹಲವರು ಕೆಲಸ ಕಳೆದುಕೊಳ್ಳುತ್ತಿದ್ದು, ಇನ್ನು ಕೆಲವರು ನಿರುದ್ಯೋಗಿಗಳಾಗುವ ಆತಂಕ ಎದುರಿಸುತ್ತಿದ್ದಾರೆ. ಅದಾಗ್ಯೂ ಈ ನಡುವೆ ರಾಜ್ಯಾದ್ಯಂತ ಉದ್ಯೋಗಾವಕಾಶಗಳಿವೆ. ಯುನೈಟೆಡ್​ ನೇಷನ್ಸ್ ಡೆವಲಪ್​ಮೆಂಟ್​ ಪ್ರೋಗ್ರಾಮ್​ (ಯುಎನ್​ಡಿಪಿ) ಇಂಥದ್ದೊಂದು ಅವಕಾಶವನ್ನು ಮುಂದಿಟ್ಟಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ತುಮಕೂರು, ಗದಗ, ಉತ್ತರಕನ್ನಡ, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ವಿಜಯಪುರಗಳಲ್ಲಿ ಐವತ್ತಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಅರ್ಹರಿಂದ ಯುಎನ್​ಡಿಪಿ ಅರ್ಜಿ ಆಹ್ವಾನಿಸಿದೆ. ಗ್ರಾಮೀಣಾಭಿವೃದ್ಧಿ, ಜೀವನೋಪಾಯ ಸಂವರ್ಧನೆ, ಉದ್ಯಮಶೀಲತೆ ಅಭಿವೃದ್ಧಿ, ಕೃಷಿಯೇತರ ಕ್ಷೇತ್ರ, ಕೃಷಿ ಕ್ಷೇತ್ರದಲ್ಲಿ ಅನುಭವ ಉಳ್ಳವರು ಅರ್ಜಿ ಸಲ್ಲಿಸಬಹುದು.

ಉದ್ಯೋಗಾಕಾಂಕ್ಷಿಗಳು ಮೇ 3ರ ಒಳಗೆ ಅರ್ಜಿ ಸಲ್ಲಿಸಬೇಕು. ಖಾಲಿ ಇರುವ ಹುದ್ದೆ, ಸ್ಥಳ ಹಾಗೂ ಅರ್ಜಿ ನಮೂನೆ ಇತ್ಯಾದಿ ವಿವರಗಳನ್ನು ಯುಎನ್​ಡಿಪಿ ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್​ ಕ್ಲಿಕ್ಕಿಸಿದರೆ ವಿವರ ಲಭ್ಯ ಇರುತ್ತದೆ.

https://www.in.undp.org/content/india/en/home/jobs.html

'ದ್ವಿತೀಯ PUC' ಪ್ರಾಯೋಗಿಕ ಪರೀಕ್ಷೆ : ಪದವಿ ಪೂರ್ವ ಶಿಕ್ಷಣ ಇಲಾಖೆ ಯಿಂದ ಮಾರ್ಗಸೂಚಿ ಪ್ರಕಟ : ಇಲ್ಲಿದೆ ಮಾಹಿತಿ

April 23, 2021

 


ರಂಜಿತ್ ಶೃಂಗೇರಿ

ಬೆಂಗಳೂರು : ಏ.28 ರಿಂದ ' ದ್ವಿತೀಯ ಪಿಯುಸಿ' ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ಸೂಚಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕೆಲವು ಮಾರ್ಗಸೂಚಿ ಪ್ರಕಟ ಮಾಡಿದೆ.

ಏಪ್ರಿಲ್ 28 ರಿಂದ ಮೇ 18 ರವರೆಗೆ ನಡೆಯಬೇಕಿರುವ 2021 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಉಪ ನಿರ್ದೇಶಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಪ್ರಾಯೋಗಿಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕಾಲೇಜುಗಳಲ್ಲಿಯೇ ನಡೆಸಲು ತೀರ್ಮಾನಿಸಿರುವುದರಿಂದ , ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ತಲುಪಿಸಲು ಕ್ರಮ ಕೈಗೊಳ್ಳುವುದು, ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತರಾದರೆ ಇದಕ್ಕೆ ಪ್ರಾಂಶುಪಾಲರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾಳೆ ಕರ್ನಾಟಕ ಸೇರಿ 10 ರಾಜ್ಯಗಳ ಸಿಎಂಗಳ ಜೊತೆ ಪಿಎಂ ಸಭೆ

April 23, 2021

 


ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು 10 ರಾಜ್ಯಗಳ ಸಿಎಂಗಳ ಜೊತೆ ಸಭೆ ಕರೆದಿದ್ದಾರೆ.

ನಾಳೆ ( ಏಪ್ರಿಲ್ 23, ಶುಕ್ರವಾರ) ಬೆಳಿಗ್ಗೆ 10 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.

ಕಳೆದರೆಡು ದಿನಗಳ ಹಿಂದೆಯಷ್ಟೇ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ವಿರುದ್ಧ ಹೋರಾಟಕ್ಕೆ ಸಹಕರಿಸುವಂತೆ ದೇಶದ ಜನತೆಯನ್ನು ಕೇಳಿಕೊಂಡಿದ್ದರು. ಹಾಗೂ ಲಾಕ್ ಡೌನ್ ಕೊನೆಯ ಅಸ್ತ್ರವಾಗಬೇಕೆಂದು ರಾಜ್ಯ ಸರ್ಕಾರಗಳಿಗೆ ತಿಳಿಸಿದ್ದರು.

ಇನ್ನು ದೇಶದಲ್ಲಿ ಕೋವಿಡ್ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

ಊಟ ಆದ ನಂತರ ಒಂದು ಸಣ್ಣ ತುಂಡು ಬೆಲ್ಲ ತಿನ್ನೋದ್ರಿಂದ ಎಷ್ಟೊಂದು ಲಾಭವಿದೆ ಗೊತ್ತಾ..?

April 22, 2021

 


ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಿಹಿ ತಿಂಡಿಗಳಲ್ಲಿಯೂ ಸಕ್ಕರೆ ಬಳಕೆ ಹೆಚ್ಚಾಗಿದೇ ಅದರಲ್ಲೂ ಕಾಫಿ ಟೀ ಗಳಲ್ಲೂ ಸಹ ಸಕ್ಕರೆಯ ಬಳಕೆ ಹೆಚ್ಚಾಗಿದೆ. ಆದರೆ ಸಕ್ಕರೆಯ ಮೂಲವಾಗಿ ನಮ್ಮ ಆರೋಗ್ಯಕ್ಕೆ ಸಿಗುವ ಲಾಭ ನಮಗೆ ಏನೂ ಇಲ್ಲ. ಸಕ್ಕರೆಯನ್ನು ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ, ಸಕ್ಕರೆಯನ್ನ ಬಿಳಿಯ ದೆವ್ವ ಅಂತ ಹೇಳ್ತಾರೆ.

ಹಾಗಾಗಿ ನಮ್ಮ ಆರೋಗ್ಯದ ದೃಷ್ಟಿಯಿಂದ ಸಕ್ಕರೆಗಿಂತಲೂ ಬೆಲ್ಲ ಉತ್ತಮ ಹಾಗೂ ಒಳ್ಳೆಯದು ಎನ್ನಬಹುದು. ದಿನ ನಿತ್ಯಕ್ಕಿಂತಲೂ ಯಾವುದೋ ಹಬ್ಬ ಹರಿದಿನಗಳಲ್ಲಿ ಬೆಲ್ಲವನ್ನು ಬಳಕೆ ಮಾಡ್ತೀವಿ ಆದರೆ ದಿನದಿಂದ ದಿನಕ್ಕೆ ಇದರ ಬಳಕೆ ಕಡಿಮೆ ಆಗುತ್ತಲೇ ಬರುತ್ತಿದೆ. ಏನಿದು ಬರೀ ಬೆಲ್ಲ ಅಂತ ಇದನ್ನ ಅಲ್ಲಗಳೆಯುವಂತಿಲ್ಲ. ಬೆಲ್ಲದಿಂದಲೂ ಕೂಡಾ ನಮ್ಮ ದೇಹಕ್ಕೆ ಹಲವಾರು ಅರೋಗ್ಯಕಾರಿ ಅಂಶಗಳು ಇವೆ.

ಊಟ ಆದ ನಂತರ ನೀವು ಇದನ್ನು ತಿಂದರೆ ನಿಮಗೆ ಆರೋಗ್ಯ ಸುಪರ್ ಆಗಿರುತ್ತೆ ಅಂತೆ.

ಸಾಕಷ್ಟು ವೈಜ್ಞಾನಿಕ ಸಂಶೋಧನೆಯಿಂದ ಈ ಮಾಹಿತಿ ಹೊರ ಬಿದಿದ್ದೆ. ನಮ್ಮಲ್ಲಿ ಈಗಲೂ ಸಾಕಷ್ಟು ಜನಕ್ಕೆ ಯಾವ ಸಮಯಕ್ಕೆ ಯಾವ ಆಹಾರ ತಿನ್ನಬೇಕು ಮತ್ತು ಏನು ತಿನ್ನಬೇಕು ಎಂಬುದು ಗೊತ್ತಿಲ್ಲ. ನಮ್ಮ ದೈನಂದಿನ ಉಟ ಉಪಚಾರ ಎಲ್ಲವು ಸಹ ನಿಯಮಿತವಾಗಿ ಮಾಡಿದ್ರೆ ಮತ್ತು ಯಾವ ಖಾಯಿಲೆಗೆ ಯಾವ ಆಹಾರ ತಿನ್ನಬೇಕು ಎಂದು ನಾವು ತಿಳಿದಿದ್ದರೆ ಮನುಷ್ಯ ಯಾವುದೇ ಸಮಸ್ಯೆಗೆ ಒಳಗಾಗುವುದಿಲ್ಲ.

ನಾವು ಪ್ರತಿ ನಿತ್ಯ ಊಟದ ನಂತರ ಒಂದು ಸಣ್ಣ ತುಂಡು ಬೆಲ್ಲ ತಿಂದರೆ ನಮಗೆ ಸಾಕಷ್ಟು ರೀತಿಯ ಅರೋಗ್ಯ ಲಾಭ ಸಿಗಲಿದೆ. ಈ ಬೆಲ್ಲದ ತುಂಡಿನ ಸೇವನೆ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಮಾಡಿಸುತ್ತದೆ. ಶೀತ ಕೆಮ್ಮು ನೆಗಡಿ ಅಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ಬರದಂತೆ ತಡೆಯುತ್ತದೆ. ಒಂದು ಸಣ್ಣ ಬೆಲ್ಲದ ಪೀಸ್ ನಲ್ಲಿ ಹೇರಳವಾದ ಕಬ್ಬಿಣ ಕ್ಯಾಲ್ಸಿಯಂ ಪೊಟಾಷಿಯಂ ಅಂಶ ಹೆಚ್ಚಿದೆ. ಇದು ನಮ್ಮ ದೇಹಕ್ಕೆ ಬೇಕಾದ ಎಲ್ಲ ರೀತಿಯ ಶಕ್ತಿ ನೀಡುತ್ತದೆ. ಅದರಲ್ಲೂ ಊಟದ ನಂತರ ಬೆಲ್ಲ ತಿನ್ನುವುದು ತುಂಬಾ ಒಳ್ಳೆಯದು ಆದರೆ ಯಾವುದೇ ಕಾರಣಕ್ಕೂ ಅದು ಅತೀ ಆಗಬಾರದು ಅಷ್ಟೇ.

ಹೀಗೆ ಬೆಲ್ಲದಿಂದ ಇನ್ನು ಅನೇಕ ರೀತಿಯ ಪ್ರಯೋಜನ ನಾವು ಪಡೆಯಬಹುದು. ನಮ್ಮಲ್ಲಿ ಸಾಕಷ್ಟು ಜನರು ಕೆಮ್ಮು ಬಂತು ಅಂದ್ರೆ ಸಾಕು ಮೆಡಿಕಲ್ ನಿಂದ ಯಾವುದೇ ಕೆಮ್ಮಿನ ಮಾತ್ರೆ ತಂದು ನುಂಗಿ ವಾಸಿ ಆದರೆ ಸಾಕಪ್ಪ ಅನ್ನುತ್ತಾರೆ. ಆದರೆ ನೀವು ಹೀಗೆ ಮಾಡಿದ್ರೆ ನಿಮ್ಮ ಜೀವಕ್ಕೂ ಅಪಾಯ ಆಗಬಹುದು. ವೈದ್ಯರ ಸೂಚನೆ ಇಲ್ಲದೆ ನೀವು ಮಾಡುವ ಇಂದಿನ ತಪ್ಪುಗಳು ನಾಳೆ ದಿನ ದೊಡ್ಡ ಮಟ್ಟದಲ್ಲಿ ಕಾಡಿಸುತ್ತದೆ. ಆದರೆ ನಿಮಗೆ ಚಿಂತೆ ಬೇಡ. ಮನೆ ಮದ್ದು ಮಾಡಿದ್ರೆ ಯಾವುದೇ ರೀತಿಯ ಅರೋಗ್ಯಕ್ಕೆ ತೊಂದ್ರೆ ಆಗುವುದಿಲ್ಲ.

ಮನೆ ಮದ್ದು ಸ್ವಲ್ಪ ನಿಧಾನವಾಗಿ ಕೆಲಸ ಮಾಡಿದ್ರು ಅದರಿಂದ ಸಮಸ್ಯೆಗಳು ಬರೋದಿಲ್ಲ. ಕೆಮ್ಮು ಬಂತು ಅಂದ್ರೆ ಬೆಲ್ಲದ ಪಾನಕಕ್ಕೆ ತುಳಸಿ ಎಲೆ ಹಾಕಿ ಕುಡಿಯಿರಿ. ಇದನ್ನು ಬೆಳ್ಳಗೆ ಮದ್ಯಾನ ಎರಡು ಸಮಯ ತೆಗೆದುಕೊಂಡರು ಸಾಕು ನಿಮ್ಮ ಕೆಮ್ಮಿಗೆ ಶಾಶ್ವತ ಪರಿಹಾರ ಮಾಡಬಹುದು. ತಪ್ಪದೇ ಈ ಮಾಹಿತಿ ಎಲ್ಲರೊಂದಿಗೆ ಶೇರ್ ಮಾಡಿರಿ ನಮ್ಮ ಬಳಿ ಇರುವ ಮನೆಮದ್ದಾಗಿ ಪರಿವರ್ತನೆ ಮಾಡಿಕೊಂಡರೆ ಖಂಡಿತ ಹಾಲು ರೀತಿಯ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ಹೇಳಬಹುದು.

ಬೆಲ್ಲದಲ್ಲಿರುವ ಮ್ಯಾಗ್ನಿಶಿಯಂ ಅಂಶವು ದೇಹದಲ್ಲಿ ಕ್ಯಾನ್ಸರ್ ಬರದಂತೆ ಆ ಅಂಶವನ್ನು ತಡೆಯುತ್ತದೆ. ಇದರಿಂದಾಗಿ ಕ್ಯಾನ್ಸರ್ ಬರದಂತೆಯೇ ತಡೆಯುತ್ತದೆ. ಆದರೆ, ಡಯಾಬಿಟಿಸ್ ಇರುವವರು ನಿಯಮಿತ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸಿದರೆ ಒಳ್ಳೆಯದು. ಹೀಗೆಲ್ಲ ಮಾಡುವುದರಿಂದ ಬೆಲ್ಲವನ್ನು ಸೇವಿಸುವ ಮೂಲಕ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ, ದಿನನಿತ್ಯದ ಅಡುಗೆಯಲ್ಲಿ ಆಹಾರದಲ್ಲಿ ಬೆಲ್ಲವನ್ನೇ ಬಳಸಿ.

ರಾಜ್ಯದ 72 ಸಾವಿರ ಶಿಕ್ಷಕರಿಗೆ ಇದೊಂದು ಸಿಹಿ ಸುದ್ದಿ.....

April 22, 2021

 


ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ಸಿಹಿ ಸುದ್ದಿ ಇಲ್ಲಿದೆ. ಶಿಕ್ಷಕರ ವರ್ಗಾವಣೆಗೆ ಸುಗ್ರೀವಾಜ್ಞೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಕಡತ ಮಂಡನೆಯಾಗುವ ಸಾಧ್ಯತೆ ಇದೆ. ರಾಜ್ಯ ಸಿವಿಲ್ ಸೇವೆಗಳ ಶಿಕ್ಷಕರ ವರ್ಗಾವಣೆ ಅಧಿನಿಯಮ -2020 ಮೂಲಕ ಸುಗ್ರೀವಾಜ್ಞೆ ಜಾರಿಗೆ ತರುವ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಕಚೇರಿಯಿಂದ ಸಚಿವ ಸಂಪುಟ ವಿಭಾಗಕ್ಕೆ ಫೈಲ್ ಸಲ್ಲಿಕೆಯಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ವರ್ಗಾವಣೆ ಸುಗ್ರೀವಾಜ್ಞೆ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ಪಡೆದು ರಾಜ್ಯಪಾಲರ ಅಂಕಿತ ಪಡೆಯಲಾಗುವುದು. ಬಳಿಕ ಶಿಕ್ಷಕರ ವರ್ಗಾವಣೆ ಕಾಯ್ದೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.'ಕೆಟ್ಟ ದೃಷ್ಟಿ' ಎಂಬುದೊಂದು ನಿಜವಾಗಿಯೂ ಇದೆಯಾ..?

April 22, 2021

 


ನೀವೆಲ್ಲಾದರೂ ಹೊರಗೆ ಹೋಗಿ ಬಂದಾಗ ನಿಮ್ಮ ಮನೆಯಲ್ಲಿ ಅಜ್ಜಿ ಅಥವಾ ತಾಯಿ ದೃಷ್ಟಿ ತೆಗೆಯುತ್ತಾರೆ. ನಿಮ್ಮ ಜೀವನದ ಶುಭ ಸುದ್ದಿಗಳನ್ನು ನಿರ್ದಿಷ್ಟ ಜನರ ಬಳಿ ಹೇಳಬಾರದು.

ಅವರ ಅಸೂಯೆಯು ನಿಮ್ಮ ಬೆಳವಣಿಗೆಗೆ ತೊಡಕಾಗಬಹುದು ಎಂದು ಹಿರಿಯರು ಹೇಳುವುದು ಕೇಳಿರುತ್ತೀರಿ. ಜನರು ಯಾವಾಗಲೂ ಕೆಟ್ಟ ದೃಷ್ಟಿಯ ಬಗ್ಗೆ ಭಯ ಹೊಂದಿರುತ್ತಾರೆ. ಹಾಗಾದರೆ, ಕೆಟ್ಟ ದೃಷ್ಟಿ ಎಂದರೇನು? ಅದನ್ನು ನಿವಾರಿಸಬೇಕಾದ ಅಗತ್ಯವಿದೆಯೇ?

ಈ ಕೆಟ್ಟ ದೃಷ್ಟಿ ಎಂಬುದು ಮಾನವ ಕಾಂತಿಗೆ ಸಂಬಂಧಿಸಿದ್ದಾಗಿದೆ. ಈ ಕಾಂತಿಯನ್ನು ಪ್ರತಿಯೊಬ್ಬ ಮನುಷ್ಯನ ಸುತ್ತ ಇರುವ ಶಕ್ತಿಯ ರಕ್ಷಾಕವಚ ಎಂದು ಪರಿಗಣಿಸಲಾಗುತ್ತದೆ. ಈ ಕಾಂತಿಯೇ ವ್ಯಕ್ತಿ ಅಥವಾ ಸ್ಥಳದ ಶಕ್ತಿಯನ್ನು ಮೊದಲು ಗ್ರಹಿಸುವ ಸಂಗತಿಯಾಗಿದೆ.

ನಿರ್ದಿಷ್ಟ ವ್ಯಕ್ತಿಗಳು ಹಾಗೂ ನಿರ್ದಿಷ್ಟ ಸ್ಥಳಗಳಲ್ಲಿ ಖುಷಿ ಹಾಗೂ ಶಕ್ತಿ ತುಂಬಿರುವುದನ್ನು ನೀವು ಗಮನಿಸಿದ್ದೀರಾ?

ಹಾಗೆಯೇ ಕೆಲವರ ಬಳಿ ಶಕ್ತಿ ಪೂರ್ತಿ ಖಾಲಿಯಾದ ಹಾಗೂ ಋಣಾತ್ಮಕ ಕಾಂತಿಯೂ ಇರುತ್ತದೆ. ಈ ಋಣಾತ್ಮಕ ಪರಿಣಾಮ ನಿಮ್ಮ ಮೇಲೂ ಬೀರುತ್ತದೆ.

ಧನಾತ್ಮಕ ಕಾಂತಿಯುತ ವ್ಯಕ್ತಿಗಳ ಬಳಿ ಹೋದರೆ ಅವರಿಂದ ಧನಾತ್ಮಕ ಕಾಂತಿಯು ನಮ್ಮತ್ತ ಸೆಳೆಯಲ್ಪಡುತ್ತದೆ. ಹಾಗೆಯೇ ಋಣಾತ್ಮಕ ಕಾಂತಿಯ ವ್ಯಕ್ತಿಗಳ ಬಳಿ ಹೋದರೆ ಋಣಾತ್ಮಕ ಕಾಂತಿ ನಮ್ಮನ್ನೂ ಆವರಿಸುತ್ತದೆ. ಇದನ್ನೇ ಗ್ರಾಮ್ಯ ಭಾಷೆಯಲ್ಲಿ 'ಕೆಟ್ಟ ದೃಷ್ಟಿ' ಎಂದು ಕರೆಯುತ್ತಾರೆ.


ʼಜು.1ʼರಿಂದ ಕೇಂದ್ರ ನೌಕರರಿಗೆ ಸಿಗಲಿದೆ ʼಶೇ.28ರಷ್ಟು ಡಿಎʼ: ಸಂಬಳವೆಷ್ಟು ಹೆಚ್ಚಾಗುತ್ತೆ? ಇಲ್ಲಿದೆ ಮಾಹಿತಿ..!

April 22, 2021

 


ನವದೆಹಲಿ: ದೇಶದ 52 ಲಕ್ಷ ಉದ್ಯೋಗಿಗಳಿಗೆ ಡಿಎ ಮರುಸ್ಥಾಪನೆ ಮಾಡಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಈ ಹಂತದ ನಂತ್ರ ದೇಶದ ಕೇಂದ್ರ ನೌಕರರ ವೇತನದಲ್ಲಿ ದೊಡ್ಡ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ, 2021 ರ ಜುಲೈ 1 ರಿಂದ ಕೇಂದ್ರ ಸರ್ಕಾರಿ ನೌಕರರ ಡಿಎ ಪ್ರಯೋಜನವನ್ನ ಪುನಃಸ್ಥಾಪಿಸಲಾಗುವುದು. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ದತ್ತಾಂಶ ಪ್ರಕಟಣೆಯ ಪ್ರಕಾರ, ಜನವರಿ ಮತ್ತು ಜೂನ್ 2021 ರ ನಡುವೆ ಕನಿಷ್ಠ 4 ಪ್ರತಿಶತದಷ್ಟು ಡಿಎ ಹೆಚ್ಚಿಸಬಹುದು.

ಡಿಎ ನಂತರ ಕೇಂದ್ರ ನೌಕರರ ಡಿಎ ಪುನಃಸ್ಥಾಪನೆಯಾಗುತ್ತದೆ. ಇದು ಶೇಕಡಾ 17 ರಿಂದ 28 ಕ್ಕೆ ಹೆಚ್ಚಾಗುತ್ತದೆ. ಇದು 2020ರ ಜನವರಿಯಿಂದ ಜೂನ್ʼವರೆಗೆ ಡಿಎಯಲ್ಲಿ 3 ಪ್ರತಿಶತದಷ್ಟು ಹೆಚ್ಚಳ, 2020ರ ಜುಲೈನಿಂದ ಡಿಸೆಂಬರ್ʼವರೆಗೆ 4 ಶೇಕಡಾ ಹೆಚ್ಚಳ ಮತ್ತು 2021 ರ ಜನವರಿಯಿಂದ ಜೂನ್ʼವರೆಗೆ 4 ಪ್ರತಿಶತದಷ್ಟು ಹೆಚ್ಚಳವನ್ನು ಒಳಗೊಂಡಿದೆ.

ನಿಮ್ಮ ಸಂಬಳ ಎಷ್ಟು ಹೆಚ್ಚಾಗುತ್ತದೆ?
1 ಜುಲೈ 2021 ರಿಂದ ಬಾಕಿ ಇರುವ ಎಲ್ಲಾ ಮೂರು ಡಿಎ ಕಂತುಗಳನ್ನ ನೀಡಲು ಕೇಂದ್ರ ಘೋಷಿಸಿದೆ. ಆದ್ರೆ, ಕಳೆದ ವರ್ಷ ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ, ಸರ್ಕಾರವು ಡಿಎಯನ್ನ ನಿಷೇಧಿಸಿತ್ತು. ಡಿಎ ಹೆಚ್ಚಿಸುವುದರಿಂದ ಡಿಆರ್ ಕೂಡ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಆತ್ಮೀಯ ಭತ್ಯೆ ಹೆಚ್ಚಳದಿಂದಾಗಿ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ಆತ್ಮೀಯ ಪರಿಹಾರ (ಡಿಆರ್) ಅನ್ನು ಸಹ ಪುನಃಸ್ಥಾಪಿಸಲಾಗುತ್ತದೆ.

ಪಿಎಫ್‌ʼನಲ್ಲಿ ಬದಲಾವಣೆ ಮತ್ತು ಗ್ರ್ಯಾಚುಟಿ..!
ಸಂಭಾವ್ಯ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರ ಮಾಸಿಕ ಪಿಎಫ್, ಗ್ರ್ಯಾಚುಟಿ ಕೊಡುಗೆಯ ಮೇಲೂ ಪರಿಣಾಮ ಬೀರುತ್ತದೆ. ಸಿಜಿಎಫ್‌ನ ಪಿಎಫ್ ಮತ್ತು ಗ್ರಾಚ್ಯುಟಿಯ ಕೊಡುಗೆಯನ್ನು ಮೂಲ ವೇತನ ಮತ್ತು ಡಿಎ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಡಿಎ 1 ಜುಲೈ 2021 ರಿಂದ ಹೆಚ್ಚಾಗಲಿದ್ದು, ನೌಕರರ ಮಾಸಿಕ ಪಿಎಫ್ ಮತ್ತು ಗ್ರಾಚ್ಯುಟಿಯ ಕೊಡುಗೆ ಕೂಡ ಪರಿಣಾಮ ಬೀರುತ್ತದೆ. ಇದರರ್ಥ ಪಿಎಫ್ ಮತ್ತು ಗ್ರಾಚ್ಯುಟಿಯಂತಹ ನಿವೃತ್ತಿ ಆಧಾರಿತ ನಿಧಿಗಳಲ್ಲಿ ಹೆಚ್ಚಿನ ಹಣ ಸಂಗ್ರಹವಾಗುತ್ತದೆ.

ರಾಜ್ಯ ಸರ್ಕಾರದಿಂದ `ಖಾಸಗಿ ಶಾಲಾ ಶಿಕ್ಷಕರಿಗೆ' ಭರ್ಜರಿ ಗುಡ್ ನ್ಯೂಸ್

April 22, 2021

 


ಬೆಂಗಳೂರು : ರಾಜ್ಯ ಸರ್ಕಾರವು ಖಾಸಗಿ ಶಾಲಾ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಶಿಕ್ಷಣ ನಿಧಿ ಸೌಲಭ್ಯ ನೀಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಖಾಸಗಿ ಶಾಲಾ-ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಎಲ್ಲ ಶಿಕ್ಷಕರಂತೆ ಕಷ್ಟಕಾಲದ ತತ್ ಕ್ಷಣದ ನೆರವಿಗೆ ಶಿಕ್ಷಣ ನಿಧಿಯ ಸದಸ್ಯತ್ವ ನೀಡಿ ಆ ಮೂಲಕ ನಿಧಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರಿಗೆ ದೊರೆಯುವ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕರಂತೆಯೇ ಖಾಸಗಿ ಶಾಲಾ ಶಿಕ್ಷಕರಿಗೂ ಅಪಘಾತ ಮತ್ತು ಮರಣ ಪರಿಹಾರ, ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ, ಶಿಕ್ಷಕರು ಮತ್ತು ಅವರ ಅವಲಂಬಿತರಿಗೆ ವೈದ್ಯಕೀಯ ಧನಸಹಾಯ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ALEART: ರಾಜ್ಯದಲ್ಲಿ ಇಂದಿನಿಂದ ಮೇ.4ರವರೆಗೆ 14 ದಿನ 'ವೀಕೆಂಡ್ ಕರ್ಪ್ಯೂ', 'ನೈಟ್ ಕರ್ಪ್ಯೂ' ಜಾರಿ: ಏನುಂಟು, ಏನಿರಲ್ಲ..? ಇಲ್ಲಿದೆ ಮಾಹಿತಿ

April 22, 2021

 


*ಅವಿನಾಶ್‌ ಆರ್ ಭೀಮಸಂದ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸ್ಪೋಟವಾಗುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ 'ವೀಕೆಂಡ್ ಕರ್ಪ್ಯೂ', ನೈಟ್ ಕರ್ಪ್ಯೂ' ಜಾರಿಗೊಳಿಸಿ ರಾಜ್ಯ ಸರ್ಕಾರ ಮಹತ್ತರದ ಆದೇಶ ಹೊರಡಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ರಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಿದೆ. ಈ ಮೂಲಕ ಹೊಸ ಮಾರ್ಗಸೂಚಿಯಲ್ಲಿ 14 ದಿನಗಳ ವರೆಗೆ ರಾಜ್ಯಾಧ್ಯಂತ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಇಂದು ಇಂದಿನಿಂದ ಜಾರಿಗೆ ಬರಲಿದೆ. ಇಂದಿನಿಂದ ಸೆ 144 ಸಿ ಕಾಯಿದೆಯನ್ನು ಜಾರಿಗೆ ಮಾಡಲಾಗಿದೆ. ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗಿದ್ದು, ಅನಗತ್ಯವಾಗಿ ಯಾರೂ ಹೊರಗೆ ಬರುವಂತಿಲ್ಲ.

ಇದಲ್ಲದೇ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಸಲ್ಟ್ ಕಡ್ಡಾಯ.

.ಮದುವೆಗೆ 50 ಜನರಿಗೆ, ಅಂತ್ಯಕ್ರಿಯೆಗೆ 20 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಇ ಕಾಮರ್ಸ್ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್, ಸ್ವಿಮ್ಮಿಂಗ್ ಫೂಲ್, ಮಾರ್ಕೆಟ್ ಬಂದ್ ಮಾಡಲಾಗುತ್ತಿದೆ. ಶಾಲಾ-ಕಾಲೇಜು ಮುಚ್ಚಲಾಗುತ್ತಿದೆ. ರಾತ್ರಿ ಪಾಳಿಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಸ್ ನಲ್ಲಿ ತೆರಳೋರು ಟಿಕೆಟ್ ತೋರಿಸಿ ಸಾಗಬೇಕು. ರಾಜ್ಯಾಧ್ಯಂತ ಧಾರ್ಮಿಕ ಕ್ಷೇತ್ರಗಳು ಬಂದ್ ಮಾಡಲಾಗುತ್ತಿದೆ. ಭಕ್ತರಿಗೆ ಅವಕಾಶವಿಲ್ಲ. ಸಲೂನ್, ಬ್ಯೂಟಿ ಪಾರ್ಲರ್ ಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಜನರಿಗೆ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.

ಏನಿರಲ್ಲ : ಚಿತ್ರಮಂದಿರ​, ಶಾಪಿಂಗ್ ಮಾಲ್​, ಜಿಮ್​, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಮನೋರಂಜನಾ ಸ್ಥಳ, ಸ್ವಿಮ್ಮಿಂಗ್ ಪೂಲ್​, ಬಾರ್ & ಆಡಿಟೋರಿಯಂ, ಮಸೀದಿ, ಮಂದಿರ, ಚರ್ಚ್​ಗಳನ್ನು ಬಂದ್ ಮಾಡಲಾಗಿದೆ, ಮಸೀದಿ, ಮಂದಿರ, ಚರ್ಚ್​ಗಳಲ್ಲಿ ಪೂಜೆ ಮಾಡುವವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಬೇರೆಯವರಿಗೆ ಅವಕಾಶ ಇರೋದಿಲ್ಲ. ಕಟಿಂಗ್ ಶಾಪ್​, ಬ್ಯೂಟಿ ಪಾರ್ಲರ್​ಗಳು ಕೂಡ ಓಪನ್‌ ಇರಲಿದ್ದು, ಈ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಸೂಚನೆ ನೀಡಲಾಗಿದೆ ಇದಲ್ಲದೇ ಬಸ್​​ಗಳಲ್ಲಿ ಶೇ.50ರಷ್ಟು ಮಾತ್ರ ಅವಕಾಶ ನೀಡಲಾಗಿದ್ದು, ಊರಿನಿಂದ ಊರಿಗೆ ರಾತ್ರಿ ಸಮಯದಲ್ಲಿ ತೆರಳುವವರು ತಪ್ಪದೇ ತಮ್ಮ ಬಳಿ ಪ್ರಯಾಣದ ಟಿಕೇಟ್‌ ಅನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದ್ದು, ತಪಾಸಣೆ ವೇಳೆಯಲ್ಲಿ ತೋರಿಸಬೇಕಾಗಿದೆ. ಸದ್ಯದದ ಮಟ್ಟಿಗೆ ಶಾಲಾ ಕಾಲೇಜುಗಳನ್ನು ಏಳು ದಿನಗಳ ಮಟ್ಟಿಗೆ ಬಂದ್ ಮಾಡಲಾಗಿದ್ದು, ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ಅಂತಿಮ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಹೋಟೆಲ್‌, ಬಾರ್‌, ಫುಡ್‌ ಸ್ಟ್ರೀಟ್‌, ದರ್ಶಿನಿ, ರೆಸ್ಟೋರೆಂಟ್‌ ಗಳಲ್ಲಿ ಊಟ ಮಾಡಲು ಅವಕಾಶ ಇರೋದಿಲ್ಲ, ಪಾರ್ಸಲ್‌ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅವಕಾಶ. ರಾಜಕೀಯ ಚಟುವಟಿಕೆಗಳಿಗೆ ನಿರ್ಬಂದ, ಶಾಪಿಂಗ್ ಮಾಲ್​​ ಬಂದ್‌.

ಏನುಂಟು : ಆಸ್ಪತ್ರೆ, ಕ್ಲಿನಿಕ್‌, ತುರ್ತು ವಾಹನಗಳ ಸಂಚಾರ, ಮಾರುಕಟ್ಟೆ, ಮೆಡಿಸನ್‌ ಶಾಪ್‌ಗಳು, ಎಟಿಎಂ, ಬ್ಯಾಂಕ್‌ಗಳು, ಅಗತ್ಯವಾಗಿರುವ ಸಂಚಾರ ವಾಹನಕ್ಕೆ ಅವಕಾಶ, ಅಂತರ್ ಜಿಲ್ಲಾ ಓಡಾಡಕ್ಕೆ ಅವಕಾಶ, ಸರ್ಕಾರಿ ಕಚೇರಿಗಳು, ಬಸ್‌ ಸಂಚಾರ ಇರುತ್ತವೆ. ಇ ಕಾಮರ್ಸ್, ಕೋಲ್ಡ್ ಸ್ಟೋರೇಜ್, ವೇರ್ ಹೌಸಿಂಗ್ ಕಟ್ಟಡ ಕಾಮಗಾರಿಗಳಿಗೆ ಅನುಮತಿ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ಇಲ್ಲ ವಿಮೆ ಸಂಸ್ಥೆಗಳು, ತರಕಾರಿ, ಹಣ್ಣುಗಳ ಮಾರುಕಟ್ಟೆಗಳು, ಕೃಷಿ ಮಂಡಿಗಳು, ಇ-ಮಾರ್ಕೆಟ್ ಗಳು, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮಳಿಗೆಗಳಿಗೆ ಅವಕಾಶ ತರಕಾರಿ, ಹಣ್ಣು, ದಿನಸಿ, ಹಾಲಿನ ಕೇಂದ್ರಗಳು ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ಮಾತ್ರ ತೆರೆಯಲು ಅವಕಾಶ.

ಈ ನಡುವೆ ರಾಜ್ಯದಲ್ಲಿ ಕೊರೊನಾ ರಣ ಕೇಕೆ ಮುಂದುವರಿದ್ದು , ಮಂಗಳವಾರಕ್ಕೆ ಅನ್ವಯವಾಗುವಂತೆ ಕಳೆದ 24 ಗಂಟೆಯಲ್ಲಿ 21,794 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ ರಾಜ್ಯದಲ್ಲಿ ಬರೋಬ್ಬರಿ 149 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ.BIG NEWS : ರಾಜ್ಯದ 'ಪ್ರಾಥಮಿಕ ಹಾಗೂ ಪ್ರೌಢ ಶಾಲಾ' ಮಕ್ಕಳಿಗೆ ಬೇಸಿಗೆ ರಜೆ ಎಷ್ಟು ದಿನ? ಶಾಲೆ ಶುರು ಯಾವಾಗ? ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ

April 22, 2021

 


ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಕಾರಣದಿಂದಾಗಿ ಈವರೆಗೆ 1 ರಿಂದ 9ನೇ ತರಗತಿ ಆರಂಭಗೊಂಡಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿತಗೊಳ್ಳುವುದು ಬೇಡ ಎಂಬ ಕಾರಣದಿಂದಾಗಿ ಆರಂಭಗೊಂಡ ವಿದ್ಯಾಗಮ ಕಾರ್ಯಕ್ರಮದಿಂದಾಗಿಯೂ ಕೊರೋನಾ ಸೋಂಕು ವಿದ್ಯಾರ್ಥಿಗಳಿಗೆ ತಗುಲಿತ್ತು. ಹೀಗಾಗಿ ಅದು ಕೂಡ ನಿಲುಗಡೆಯಾಗಿದೆ. ಈ ಎಲ್ಲಾ ಕಾರಣದಿಂದಾಗಿ ಇದೀಗ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ, ಹಿಂದಿನ ಶೈಕ್ಷಣಿಕ ದಾಖಲೆಗಳ ಆಧಾರದಲ್ಲಿ ಮುಂದಿನ ತರಗತಿಗೆ ಪಾಸ್ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಇದರ ಜೊತೆಗೆ ಮುಂದಿನ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು(ಪ್ರೌಢ ಶಿಕ್ಷಣ) ಸುತ್ತೋಲೆ ಹೊರಡಿಸಿದ್ದು, ಕೊರೋನಾ ಸೋಂಕಿನ ಹಿನ್ನಲೆಯಲ್ಲಿ, ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಈ ಕೆಳಕಂಡಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿ ಹಾಗೂ ಶಿಕ್ಷಕರಿಗೆ ಬೇಸಿಗೆ ರಜೆಯ ಪಟ್ಟಿಯನ್ನು ಪ್ರಕಟಿಸಿದ್ದಾರೆ.

2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ವೇಳಾಪಟ್ಟಿ

ಪ್ರಾಥಮಿಕ ಶಾಲೆಗಳಿಗೆ

  • 1 ರಿಂದ 7/8ನೇ ತರಗತಿಗಳು ಇರುವ ಪ್ರಾಥಮಿಕ ಶಾಲೆಗಳಿಗೆ ದಿನಾಂಕ 01-05-2021 ರಿಂದ 14-06-2021ರವರೆಗೆ ಬೇಸಿಗೆ ರಜೆ
  • ದಿನಾಂಕ 15-06-2021 ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭ

ಪ್ರೌಢ ಶಾಲೆಗಳಿಗೆ

  • ಪ್ರೌಢ ಶಾಲೆಗಳಲ್ಲಿನ 8 ಹಾಗೂ 9ನೇ ತರಗತಿಗಳಲ್ಲಿನ ವಿದ್ಯಾರ್ಥಿಗಳಿಗೆ ದಿನಾಂಕ 01-05-2021 ರಿಂದ 14-07-2021ರವರೆಗೆ ಬೇಸಿಗೆ ರಜೆ.
  • ಪ್ರೌಢ ಶಾಲೆಗಳಲ್ಲಿನ ಶಿಕ್ಷಕರುಗಳಿಗೆ ದಿನಾಂಕ 15-06-2021 ರಿಂದ ದಿನಾಂಕ 14-07-2021ರವರೆಗೆ ಬೇಸಿಗೆ ರಜೆ
  • ದಿನಾಂಕ 21-06-2021 ರಿಂದ 05-07-2021ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತದೆ.
  • ದಿನಾಂಕ 15-07-2021 ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭ

ಮೇಲ್ಕಂಡ ವೇಳಾ ಪಟ್ಟಿಯು ತಾತ್ಕಾಲಿಕವಾಗಿದ್ದು, ಕೋವಿಡ್-19ರ ಹಿನ್ನಲೆಯಲ್ಲಿ ಕಾಲಕಾಲಕ್ಕೆ ಸರ್ಕಾರ, ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆಯನ್ನು ಮತ್ತು ನಿರ್ದೇಶನಗಳನ್ನು ಪಾಲಿಸಿವುದು ಕಡ್ಡಾಯವಾಗಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆBIG BREAKING NEWS : 'ಕೋವಿಶೀಲ್ಡ್ ಲಸಿಕೆ' ಮುಕ್ತ ಮಾರುಕಟ್ಟೆಗೆ : ಇನ್ಮುಂದೆ 'ಖಾಸಗಿ ಆಸ್ಪತ್ರೆ'ಗಳಲ್ಲಿ ರೂ.600ಕ್ಕೆ ಲಸಿಕೆ ಲಭ್ಯ

April 22, 2021

 


ನವದೆಹಲಿ : ಇದುವರೆಗೆ ಕೊರೋನಾ ಸೋಂಕಿತರ ಲಸಿಕೆಗಾಗಿ ನೀಡಲಾಗುತ್ತಿದ್ದಂತ ಕೋವಿಶೀಲ್ಡ್ ಲಸಿಕೆ, ಇನ್ಮುಂದೆ ಮುಕ್ತ ಮಾರುಕಟ್ಟೆಯಲ್ಲೂ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ರೂ.600ಕ್ಕೆ ಒಂದು ಡೋಸ್, ಸರ್ಕಾರಿ ಆಸ್ಪತ್ರೆಗಳಲ್ಲಿ ರೂ.400ಕ್ಕೆ ಒಂದು ಡೋಸ್ ನೀಡಲು ದರವನ್ನು ಸೀರಂ ಇನ್ಟಿಟ್ಯೂಟ್ ಆಫ್ ಇಂಡಿಯಾ ದರವನ್ನು ನಿಗದಿ ಪಡಿಸಿದೆ.

ಭಾರತದ ಸೀರಮ್ ಇನ್ ಸ್ಟಿಟ್ಯೂ ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆಯ ಬೆಲೆಯನ್ನು ₹600 ಮತ್ತು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ ಗೆ ₹400 ಕ್ಕೆ ನಿಗದಿಪಡಿಸಿದೆ ಎಂದು ಕಂಪನಿಯು ಬುಧವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದ್ರೇ.. ಸೀರಂ ಇನ್ ಸ್ಟಿಟ್ಯೂ ನಿಗದಿ ಪಡಿಸಿರುವಂತ ದರವನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ಫೈನಲ್ ಮಾಡಿ, ಆದೇಶ ಹೊರಡಿಸಲಿದೆ ಎನ್ನಲಾಗುತ್ತಿದೆ.

ಆ ಬಗ್ಗೆ ಕಾದು ನೋಡಬೇಕಿದೆ.

ಅಂದಹಾಗೇ, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಮೇ 1 ರಿಂದ ಕೋವಿಡ್-19 ವಿರುದ್ಧ ಲಸಿಕೆ ನೀಡಲಾಗುತ್ತದೆ ಎಂಬುದಾಗಿ ನಿನ್ನೆ ಕೇಂದ್ರ ಸರ್ಕಾರ ಘೋಷಿಸಿತ್ತು.

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಚಿಕಿತ್ಸಾ ವೆಚ್ಚ ಮರುಪಾವತಿಗೆ ಸರ್ಕಾರ ನಿರ್ಧಾರ

April 22, 2021


 ಬೆಂಗಳೂರು : ರಾಜ್ಯ ಸರ್ಕಾರಿ ನೌಖರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಕೋವಿಡ್ ಸೋಂಕಿತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಕೋವಿಡ್ ಚಿಕಿತ್ಸಾ ವೆಚ್ಚ ಮರುಪಾವತಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಪ್ಯಾಕೇಜ್ ದರ ಪ್ರಕಟಿಸಿ ಆದೇಶ ಮಾಡಿದೆ.

ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಸಾಮಾನ್ಯ ವಾರ್ಡ್ ಗೆ ದಿನಕ್ಕೆ 10 ಸಾವಿರ ರೂ. ಹೆಚ್ಚು ಅವಲಂಬಿತ ಘಟಕಕ್ಕೆ 12 ಸಾವಿರ ರೂ. ವೆಂಟಿಲೇಟರ್ ರಹಿತ ಐಸಿಯು ವಾರ್ಡ್ ಗೆ 15 ಸಾವಿರ ರೂ. ವೆಂಟಿಲೇಟರ್ ಸಹಿತ ಐಸಿಯು ವಾರ್ಡ್ ಗೆ 25 ಸಾವಿರ ರೂ. ನಿಗದಿ ಮಾಡಿದೆ.

ಇನ್ನು ಪ್ಯಾಕೇಜ್ ದರದಲ್ಲಿ ಸರ್ಕಾರಿ ನೌಕರರು, ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚಚ್ಚ ಮರುಪಾವತಿಸಲು ಸೂಚಿಸಿದೆ.

ಚಿಕಿತ್ಸೆ ದರ ಸರ್ಕಾರ ನಿಗದಿಪಡಿಸಿದ ಪ್ಯಾಕೆಜ್ ದರಕ್ಕಿಂತ ಕಡಿಮೆ ಇದ್ದರೆ ಯಾವುದು ಕಡಿಮೆಯೋ ಅದರ ಆಧಾರದಲ್ಲಿ ಚಿಕಿತ್ಸೆ ವೆಚ್ಚ ಮರುಪಾತಿಸುವಂತೆ ರಾಜ್ಯ ಸರ್ಕಾರ ತಿಳಿಸಿದೆ.

ಈ ಐದು ನಗರಗಳಲ್ಲಿ ಲಾಕ್​ಡೌನ್​ ಮಾಡುವಂತೆ ಹೈ ಕೋರ್ಟ್​ ಆದೇಶ! ಇಂದಿನಿಂದಲೇ ಎಲ್ಲ ಬಂದ್​!

April 20, 2021


ಲಖನೌ: ದೇಶದ ಹಲವು ರಾಜ್ಯಗಳಲ್ಲಿ ಕರೊನಾ ಸೋಂಕು ಏರಿಕೆ ಕಾಣಲಾರಂಭಿಸಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲಾಕ್​ಡೌನ್​ ಘೋಷಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರು ಆದೇಶ ಹೊರಡಿಸಿದ್ದರು. ಇದೀಗ ಯೋಗಿ ಆದಿತ್ಯಾನಾಥ ಅವರ ಉತ್ತರ ಪ್ರದೇಶಕ್ಕೂ ಲಾಕ್​ಡೌನ್​ ಬಿಸಿ ತಟ್ಟಿದೆ. ಐದು ಪ್ರಮುಖ ನಗರಗಳಲ್ಲಿ ಇಂದಿನಿಂದಲೇ ಲಾಕ್​ಡೌನ್​ ಮಾಡುವಂತೆ ಅಲಹಾಬಾದ್​ ಹೈ ಕೋರ್ಟ್​ ಆದೇಶ ಹೊರಡಿಸಿದೆ.

ವಾರಣಾಸಿ, ಕಾನ್ಪುರ ನಗರ, ಪ್ರಯಾಗ್​ರಾಜ್​, ಲಖನೌ ಮತ್ತು ಗೋರಕ್​ಪುರದಲ್ಲಿ ಇಂದಿನಿಂದ ಏಪ್ರಿಲ್​ 26ರವರೆಗೆ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಲಾಕ್​ಡೌನ್​ ಸಮಯದಲ್ಲಿ ಯಾವುದೇ ಶಾಪಿಂಗ್​ ಮಾಲ್​, ರೆಸ್ಟೋರೆಂಟ್​, ಹೋಟೆಲ್​, ಸ್ಪಾ, ಸೆಲೂನ್​, ಸಿನಿಮಾ ಹಾಲ್​ಗಳನ್ನು ತೆರೆಯುವಂತಿಲ್ಲ. ಕೇವಲ ಅಗತ್ಯ ವಸ್ತುಗಳ ಅಂಗಡಿಗಳನ್ನು ಮಾತ್ರವೇ ತೆರೆಯಲು ಅನುಮತಿ ನೀಡಲಾಗಿದೆ.

ಖಾಸಗಿ ಕಚೇರಿಗಳನ್ನೂ ತೆರೆಯದಿರುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಅಗತ್ಯ ಸೇವೆಗೆ ಸಂಬಂಧಿಸಿದ ಕಚೇರಿಗಳಿಗೆ ಕೆಲಸ ನಿರ್ವಹಿಸಲು ಅನುಮತಿ ನೀಡಲಾಗಿದೆ.

COVID-19 alert : ಕೊರೋನಾ ಪಾಸಿಟಿವ್ ವರದಿ ಬಂದರೆ ನೀವು ಏನು ಮಾಡಬೇಕು?

April 16, 2021


 ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ದೇಶದೆಲ್ಲೆಡೆ ವೇಗವಾಗಿ ಹರಡುತ್ತಿರುವ ನಡುವೆ ನಡುವೆ ಕೋವಿಡ್-19 ಪಾಸಿಟಿವ್ ಪರೀಕ್ಷೆ ಪಡೆಯುವುದು ಉತ್ತಮ ಸುದ್ದಿಯಲ್ಲ. ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯು ಆಮ್ಲಜನಕ ಮತ್ತು ಹಾಸಿಗೆ ಕೊರತೆಯಿಂದ ಬಳಲುವಂತೆ ಮಾಡುತ್ತದೆ.

ಕೇವಲ 24 ಗಂಟೆಗಳಲ್ಲಿ, ಭಾರತವು 2 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿದೆ. ಆಸ್ಪತ್ರೆಗಳು ಕೊರೊನಾ ವೈರಸ್ ರೋಗಿಗಳಿಂದ ತುಂಬಿಹೋಗುತ್ತಿರುವುದರಿಂದ ಮತ್ತು ಇನ್ನೂ ಅನೇಕ ಜನರು ಹಾಸಿಗೆ ಮತ್ತು ಆಮ್ಲಜನಕವನ್ನು ಹುಡುಕುತ್ತಾ ಆಸ್ಪತ್ರೆಗಳನ್ನು ಸುತ್ತುತ್ತಿರುವುದರಿಂದ, ಕೋವಿಡ್ ಪಾಸಿಟಿವ್ ವರದಿ ಬಂದರೆ ಭಯ ಕಾಡುತ್ತದೆ.

ಆದಾಗ್ಯೂ, ಒಮ್ಮೆ ನಿಮಗೆ ಕೊರೋನಾ ಪಾಸಿಟಿವ್ ಬಂದರೆ ಭಯಪಡುವ ಅಗತ್ಯವಿಲ್ಲ ಆದರೆ ಮುಂದಿನ ಕ್ರಮವನ್ನು ನಿರ್ಧರಿಸಬೇಕು.

ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಿನವು ಸೌಮ್ಯ ಅಥವಾ ಮಧ್ಯಮ ಸ್ವರೂಪದ್ದಾಗಿದ್ದರೂ, ಪ್ರತಿಯೊಬ್ಬ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯವಿಲ್ಲ. ಸರಿಯಾದ ಸಮಯದಲ್ಲಿ ಏನು ಮಾಡಬೇಕು ಎಂಬುದು ಉತ್ತಮವಾಗಿ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಕೋವಿಡ್ ಪಾಸಿಟಿವ್ ಪರೀಕ್ಷೆ ಮಾಡಿದ ನಂತರ ನೀವು ಅನುಸರಿಸಬಹುದಾದ ಕೆಲವು ಕ್ರಮಗಳು ಇಲ್ಲಿವೆ :

ಪ್ರತ್ಯೇಕತೆ: ಒಮ್ಮೆ ನೀವು ಪಾಸಿಟಿವ್ ಎಂದು ಪರೀಕ್ಷಿಸಿದರೆ, ಇತರ ಜನರಿಗೆ ರೋಗ ಹರಡುವ ಸಾಧ್ಯತೆ ಇರುವುದರಿಂದ ನೀವು ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕು. ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಹೆಚ್ಚಿನ ಜನರು ಮನೆಯಲ್ಲಿ ರೋಗದಿಂದ ಚೇತರಿಸಿಕೊಳ್ಳಬಹುದು. ಕೋವಿಡ್-19 ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ, ನೀವು ಸಾಕಷ್ಟು ದ್ರವಗಳನ್ನು ಕುಡಿಯಬೇಕು, ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಅಗತ್ಯವಿದ್ದರೆ ಜ್ವರ ಕಡಿಮೆ ಮಾಡುವ ಔಷಧಿಗಳನ್ನು ತೆಗೆದುಕೊಳ್ಳಬೇಕು.

ಮನೆಯಲ್ಲೇ ಇರಿ: ನಿಮಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿಲ್ಲದಿದ್ದರೆ ಅಥವಾ ಮನೆಯಲ್ಲಿ ಸುರಕ್ಷಿತವೆಂದು ನಿಮಗೆ ಅನಿಸಿದರೆ ಮನೆಯಲ್ಲಿರಿ. ನೀವು ಮನೆಯಿಂದ ಹೊರಗೆ ಹೋಗುವುದಾದರೆ ಯಾವಾಗಲೂ ಫೇಸ್ ಮಾಸ್ಕ್ ಧರಿಸಿ.

ಮುಂಗಡ ಮಾಹಿತಿ: ಆಸ್ಪತ್ರೆ ಅಥವಾ ತುರ್ತು ಆರೈಕೆಗೆ ಭೇಟಿ ನೀಡುವ ಮೊದಲು ಮುಂಚಿತವಾಗಿ ಮಾಹಿತಿ ನೀಡಿ. ಕೋವಿಡ್-19 ಕಾರಣದಿಂದಾಗಿ ನೀವು ಪ್ರತ್ಯೇಕಿಸುತ್ತಿರುವಿರಿ ಎಂದು ಆರೋಗ್ಯ ಸಿಬ್ಬಂದಿಗೆ ತಿಳಿಸಿ.

ಪ್ರತ್ಯೇಕ ವಾಸ್ತವ್ಯ: ನಿಮ್ಮ ಮನೆಯ ನಿರ್ದಿಷ್ಟ ಕೋಣೆಯಲ್ಲಿ ಉಳಿಯಿರಿ ಮತ್ತು ಸಾಧ್ಯವಾದಷ್ಟು ಪ್ರತ್ಯೇಕ ಸ್ನಾನಗೃಹವನ್ನು ಬಳಸಿ. ಎಲ್ಲಾ ಸಮಯದಲ್ಲೂ ನಿಮ್ಮ ಮನೆಯಲ್ಲಿ ಇತರರಿಂದ ಕನಿಷ್ಠ ಎರಡು ಮೀಟರ್ ದೂರದಲ್ಲಿರಿ.

ಮಾಸ್ಕ್ ಧರಿಸಿ: ನೀವು ಇತರ ಜನರೊಂದಿಗೆ ಕೋಣೆಯಲ್ಲಿದ್ದರೆ ಯಾವಾಗಲೂ ಮಾಸ್ಕ್ ಧರಿಸಿ. ನಿಮಗೆ ಉಸಿರಾಡಲು ತೊಂದರೆಯಾಗಿದ್ದರೆ, ಮಾಸ್ಕ್ ಧರಿಸುವುದನ್ನು ತಪ್ಪಿಸಿ ಆದರೆ ಜನರಿಂದ ದೂರವಿರಿ.

ಈ 9 ಬಣ್ಣಗಳಿಂದ ಒಂದನ್ನು ಆಯ್ಕೆ ಮಾಡಿ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ವ್ಯಕ್ತಿತ್ವವನ್ನು ತಿಳಿಯಿರಿ

April 16, 2021

 


ನಮ್ಮ ಜೀವನದಲ್ಲಿ ಬಣ್ಣಗಳು ಬಹಳ ಮುಖ್ಯ ಮತ್ತು ಈ ಬಣ್ಣಗಳ ಮೂಲಕ ವ್ಯಕ್ತಿಯ ಸ್ವಭಾವ, ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳನ್ನು ಸಹ ಕಂಡು ಹಿಡಿಯಬಹುದು ಮತ್ತು ನಿಮ್ಮ ನೆಚ್ಚಿನ ಬಣ್ಣವನ್ನು ಆರಿಸುವ ಮೂಲಕ ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯಬಹುದು.ನೀವು ನಿಮ್ಮ ನೆಚ್ಚಿನ ಬಣ್ಣವನ್ನು ಸಹ ಆರಿಸಿಕೊಳ್ಳಬಹುದು ಈ ಬಣ್ಣಗಳನ್ನು ನೀಡಲಾಗಿದೆ ಮತ್ತು ನಿಮಗೆ ಸಂಬಂಧಿಸಿದ ಯಾವುದೇ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಮತ್ತು ಯಾವುದೇ ವಿಶೇಷ ವ್ಯಕ್ತಿಯ ಸ್ವರೂಪವನ್ನು ತಿಳಿದುಕೊಳ್ಳಿ.

ಗುಲಾಬಿ/ಪಿಂಕ್: ನೀವು ಗುಲಾಬಿ ಬಣ್ಣವನ್ನು ಆರಿಸಿದ್ದರೆ, ಇದರರ್ಥ ನೀವು ತುಂಬಾ ಭಾ'ವೋದ್ರಿಕ್ತ ವ್ಯಕ್ತಿ ಮತ್ತು ನಿಮ್ಮ ಸಂಗಾತಿಯನ್ನು ನೀವು ಪ್ರಾಮಾಣಿಕ ಹೃದಯದಿಂದ ಪ್ರೀತಿಸುತ್ತೀರಿ ಮತ್ತು ಅವರ ನೆಚ್ಚಿನ ಬಣ್ಣ ಗುಲಾಬಿ ಬಣ್ಣದ್ದಾಗಿದೆ, ಅವರು ತುಂಬಾ ಹರ್ಷಚಿತ್ತದಿಂದ ಕೂಡಿರುತ್ತಾರೆ ಮತ್ತು ಅಂತಹ ಜನರು ಹೃದಯಗಳು ತುಂಬಾ ಸ್ವಚ್ಛ ಮತ್ತು ಬುದ್ಧಿವಂತರು.

ಹಸಿರು ಬಣ್ಣ- ನೀವು ಹಸಿರು ಬಣ್ಣವನ್ನು ಆರಿಸಿದ್ದರೆ, ಇದರರ್ಥ ನೀವು ಭೂಮಿಗೆ ಸಂಬಂಧಿಸಿರುವ ವ್ಯಕ್ತಿಯಾಗಿದ್ದೀರಿ ಮತ್ತು ಅಂತಹ ಜನರು ಪ್ರತಿಯೊಂದು ಪರಿಸ್ಥಿತಿಯನ್ನು ದೃಢವಾಗಿ ಎದುರಿಸಲು ಚೆನ್ನಾಗಿ ತಿಳಿದಿರುತ್ತಾರೆ ಮತ್ತು ಅಂತಹ ಜನರಲ್ಲಿ ಪ್ರಮುಖ ವಿಷಯವೆಂದರೆ ಈ ಜನರು ಜೀವನದಲ್ಲಿ ಎಷ್ಟು ಯಶಸ್ವಿಯಾಗುತ್ತಾರೆ ಎಂಬುದು. ಆದರೆ ಅವನು ಎಂದಿಗೂ ಯಾರನ್ನೂ ಸಣ್ಣದಾಗಿ ಪರಿಗಣಿಸುವುದಿಲ್ಲ ಮತ್ತು ಎಲ್ಲರನ್ನೂ ಒಬ್ಬರಂತೆ ಪರಿಗಣಿಸುತ್ತಾರೆ ಮತ್ತು ಪ್ರೀತಿಸುತ್ತಾರೆ

ಕಪ್ಪು ಬಣ್ಣ- ನೀವು ಕಪ್ಪು ಬಣ್ಣವನ್ನು ಆರಿಸಿದ್ದರೆ, ನೀವು ಸಂಪ್ರದಾಯವಾದಿ ಸ್ವಭಾವದ ವ್ಯಕ್ತಿ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಯಾವುದನ್ನೂ ತ್ವರಿತವಾಗಿ ಬದಲಾಯಿಸಲು ಇಷ್ಟಪಡುವುದಿಲ್ಲ ಮತ್ತು ಅಂತಹ ಜನರು ಬೇಗನೆ ಕೋಪಗೊಳ್ಳುತ್ತಾರೆ.

ಬಿಳಿ ಬಣ್ಣ: ನೀವು ಬಿಳಿ ಬಣ್ಣವನ್ನು ಆರಿಸಿದ್ದರೆ, ಇದರರ್ಥ ನೀವು ದೂರದೃಷ್ಟಿಯ ಮತ್ತು ಆಶಾವಾದಿ ಸ್ವಭಾವದ ವ್ಯಕ್ತಿ ಮತ್ತು ಅಂತಹ ಯಾವುದೇ ಕೆಲಸವನ್ನು ಮಾಡುವ ಮೊದಲು ನೀವು ಯೋಜಿಸುತ್ತೀರಿ ಮತ್ತು ಈ ಕಾರಣದಿಂದಾಗಿ, ಹೆಚ್ಚಿನ ಜನರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ಅದು ಒಂದೇ ಆಗಿರುತ್ತದೆ. ಬಿಳಿ ಬಣ್ಣ ಇದನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಕಾರಣದಿಂದಾಗಿ ಜನರು ಈ ರೀತಿ ಬಹಳ ಶಾಂತವಾಗಿದ್ದಾರೆ.

ಕೆಂಪು ಬಣ್ಣ: ನೀವು ಕೆಂಪು ಬಣ್ಣವನ್ನು ಆರಿಸಿದ್ದರೆ, ನೀವು ತುಂಬಾ ಆಕರ್ಷಕ ವ್ಯಕ್ತಿತ್ವದ ವ್ಯಕ್ತಿ ಎಂದರ್ಥ ಮತ್ತು ನೀವು ಯಾವಾಗಲೂ ಜನಸಂದಣಿಯಿಂದ ಹೊರಗುಳಿಯುತ್ತೀರಿ ಮತ್ತು ಅಂತಹ ಜನರು ತಮ್ಮ ಜೀವನವನ್ನು ಬಹಳ ಉತ್ಸಾಹದಿಂದ ಬದುಕಲು ಇಷ್ಟಪಡುತ್ತಾರೆ ಮತ್ತು ಇದರೊಂದಿಗೆ ಅವರು ಇತರರ ಮನೋಧರ್ಮವನ್ನು ಹೊಂದಿರುತ್ತಾರೆ. ಮಾಹಿತಿ ತ್ವರಿತವಾಗಿ ತಯಾರಿಸಲಾಗುತ್ತದೆ ಮತ್ತು ಅಂತಹ ಜನರು ಸ್ನೇಹ ಮತ್ತು ಪ್ರೀತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಕಂದು ಬಣ್ಣ: ನೀವು ಕಂದು ಬಣ್ಣವನ್ನು ಆರಿಸಿದ್ದರೆ ನೀವು ಭೂಮಿಯ ಸ್ವಭಾವದ ವ್ಯಕ್ತಿಯಾಗಿದ್ದೀರಿ ಮತ್ತು ಅಂತಹ ಜನರು ತುಂಬಾ ಶ್ರಮಶೀಲರಾಗಿದ್ದಾರೆ ಮತ್ತು ಇದರಿಂದಾಗಿ ಅವರು ತಮ್ಮ ಕೆಲಸದಿಂದ ಬೇಗನೆ ಯಶಸ್ಸನ್ನು ಪಡೆಯುತ್ತಾರೆ ಮತ್ತು ಈ ಜನರು ತುಂಬಾ ಸ್ನೇಹಪರ ಮತ್ತು ವಿನಮ್ರ ಸ್ವಭಾವದ ಜನರು

ನೀಲಿ ಬಣ್ಣ: ನೀವು ನೀಲಿ ಬಣ್ಣವನ್ನು ಆರಿಸಿದ್ದರೆ, ಇದರರ್ಥ ನೀವು ತುಂಬಾ ಐಷಾರಾಮಿ ವಸ್ತುಗಳನ್ನು ಇಷ್ಟಪಡುತ್ತೀರಿ ಮತ್ತು ಸರಳವಾದ ವಸ್ತುಗಳಿಗಿಂತ ಆಕರ್ಷಕವಾದ ವಿಷಯಗಳನ್ನು ನೀವು ಇಷ್ಟಪಡುತ್ತೀರಿ ಮತ್ತು ಈ ಸಂದರ್ಭದಲ್ಲಿ ಅವು ತುಂಬಾ ಸ್ವಾಭಿಮಾನಿಗಳಾಗಿವೆ.

ನೇರಳೆ ಬಣ್ಣ: ನೀವು ನೇರಳೆ ಬಣ್ಣವನ್ನು ಆರಿಸಿದ್ದರೆ, ನೀವು ದೂರದೃಷ್ಟಿಯ ಸ್ವಭಾವದ ವ್ಯಕ್ತಿ ಎಂದರ್ಥ ಮತ್ತು ಅಂತಹ ಜನರು ಭವಿಷ್ಯದ ಅನಾನುಕೂಲಗಳನ್ನು ಮತ್ತು ಪ್ರಯೋಜನಗಳನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರ ಇಂದಿನ ದಿನವನ್ನು ಹೇಗೆ ಉತ್ತಮವಾಗಿ ನಿಯಂತ್ರಿಸಬೇಕೆಂದು ಅವರಿಗೆ ತಿಳಿದಿದೆ.

ಹಳದಿ ಬಣ್ಣ: ನೀವು ಹಳದಿ ಬಣ್ಣವನ್ನು ಆರಿಸಿದ್ದರೆ ನೀವು ತುಂಬಾ ಹರ್ಷಚಿತ್ತದಿಂದ ವರ್ತಿಸುವ ವ್ಯಕ್ತಿ ಮತ್ತು ಅಂತಹ ಜನರು ಯಾವಾಗಲೂ ತಮ್ಮೊಂದಿಗೆ ಮತ್ತು ಇತರರೊಂದಿಗೆ ಸಂತೋಷವಾಗಿರುತ್ತಾರೆ ಮತ್ತು ಅಂತಹ ಜನರು ಯಾವಾಗಲೂ ಜೀವನವನ್ನು ಸಕಾರಾತ್ಮಕವಾಗಿ ಬದುಕಲು ಇಷ್ಟಪಡುತ್ತಾರೆ

'ಬಸವಕಲ್ಯಾಣ'ದ ಉಪ ಚುನಾವಣೆಯಲ್ಲಿ 'ಹಣ ಹಂಚಲು' ಬಂದ ವ್ಯಕ್ತಿಗೆ 'ಚಪ್ಪಲಿ ಏಟು'

April 16, 2021


 ಬೀದರ್ : ಇಂದು ರಾಜ್ಯದ ಎರಡು ವಿಧಾನಸಭಾ ಕ್ಷೇತ್ರ, ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆಗೆ ಮತದಾನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಿನ್ನೆಯ ರಾತ್ರಿ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಬಂದಂತ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪುರಾಂತ ಗ್ರಾಮದಲ್ಲಿ ಶುಕ್ರವಾರದಂದು ವ್ಯಕ್ತಿಯೊಬ್ಬ ಗ್ರಾಮಸ್ಥರಿಗೆ ಹಣ ಹಂಚಲು ಮುಂದಾಗಿದ್ದಾನೆ. ಇದನ್ನು ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದ್ದಲ್ಲದೇ, ಅಡ್ಡಿಯ ನಡುವೆಯೂ ಹಣ ಹಂಚೋದಕ್ಕೆ ಹೊರಟ ವ್ಯಕ್ತಿಯೊಬ್ಬನನ್ನು ಚಪ್ಪಲಿಯಿಂದ ಹೊಡೆದು, ತಳಿಸಿದ್ದಾರೆ.

ಚುನಾವಣಾ ವೀಕ್ಷಕರು ಹಾಗೂ ಪ್ಲೈಯಿಂಗ್ ಸ್ಕ್ವಾಡ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು, ವ್ಯಕ್ತಿಯನ್ನು ಅವರ ವಶಕ್ಕೆ ನೀಡಿದ್ದಾರೆ.

ಈ ಬಳಿಕ ರಾಜಕೀಯ ಪಕ್ಷಗಳೇ ಮತದಾರರನನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ. ನಮ್ಮಲ್ಲಿ ಹಣ ಇಲ್ಲವೇ.? ನಿಮ್ಮ ಹಣ ನಮಗೆ ಏಕೆ ಕೊಡ್ತೀರಿ ಎಂಬುದಾಗಿ ಕಿಡಿಕಾರಿದ್ದಾರೆ.

ಏ.20ರಂದು 'ರೈಲು ಗಾರಿ ಕಾರ್ಖಾನೆ'ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ 'ವಾಕ್ ಇನ್ ಸಂದರ್ಶನ'

April 16, 2021

 


ಬೆಂಗಳೂರು : ಯಲಹಂಕದ ರೈಲು ಗಾಲಿ ಕಾರ್ಖಾನೆಯಲ್ಲಿ ಖಾಲಿ ಇರುವಂತ ಸ್ಟಾಫ್ ನರ್ಸ್, ರೇಡಿಯೋಗ್ರಾಫರ್, ಎಕ್ಸ್ ರೇ ತಂತ್ರಜ್ಞರು, ಲ್ಯಾಬ್ ತಂತ್ರಜ್ಞ ಹಾಗೂ ಆಸ್ಪತ್ರೆ ಪರಿಚಾರಕರ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 20, 2021ರಂದು ಬೆಳಿಗ್ಗೆ 11 ಗಂಟೆಗೆ ವಾಕ್ ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ.

ಈ ಕುರಿತಂತೆ ರೈಲು ಗಾಲಿ ಕಾರ್ಖಾನೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು-560064 ಈ ಕೆಳಗಿನ ಪ್ಯಾರಾಮೆಡಿಕಲ್ ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ತೊಡಗಿಸಿಕೊಳ್ಳಲು ವಾಕ್ ಇನ್ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

  • ಸ್ಟಾಫ್ ನರ್ಸ್ - 13
  • ರೇಡಿಯೋಗ್ರಾಫರ್, ಎಕ್ಸ್ ರೇ ತಂತ್ರಜ್ಞ - 01
  • ಲ್ಯಾಬ್ ತಂತ್ರಜ್ಞ -01
  • ಆಸ್ಪತ್ರೆ ಪರಿಚಾರಕರು - 10

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು www.rwf.indianrailways.gov.in ಜಾಲತಾಣದಲ್ಲಿ ನೋಡಬಹುದಾಗಿದೆ.

ಈ ವೆಬ್ ಸೈಟ್ ನಲ್ಲಿ ವಿವರವಾದ ಮಾಹಿತಿಯನ್ನು ಓದಿಕೊಂಡು, ನಿಗದಿಪಡಿಸಿದ ಅರ್ಹತಾ ಷರತ್ತುಗಳನ್ನು ಪೂರೈಸಬಲ್ಲ ಅಭ್ಯರ್ಥಿಗಳು ದಿನಾಂಕ 20-04-2021ರಂದು ಬೆಳಿಗ್ಗೆ 11 ಗಂಟೆಗೆ ತಾಂತ್ರಿಕ ತರಬೇತಿ ಕೇಂದ್ರ, ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು-560064ರಲ್ಲಿ ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಆಧಾರ್‌ಕಾರ್ಡ್‌ನಲ್ಲಿರೋ ಫೋಟೋ ಚೆನ್ನಾಗಿಲ್ವಾ ? ಚೇಂಜ್ ಮಾಡ್ಬೋದು

April 16, 2021


 ದೆಹಲಿ(ಎ.16): ಆಧಾರ್‌ಕಾರ್ಡ್ ಹೊಂದಿರುವವರದ್ದು ಒಂದೇ ಗೋಳು, ನನ್ನ ಫೋಟೋ ಚೆನ್ನಾಗಿಲ್ಲ ಎಂಬುದು. ಲ್ಯಾಪ್‌ಟಾಪ್ ವೆಬ್ ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಮುದ್ರಿಸಿಕೊಂಡು ಬರೋ ಆಧಾರ್‌ ಕಾರ್ಡನ್ನು ಹೊರಗೆ ತೋರೀಸೋಕೆ ಹಿಂಜರಿಕೆ. ಯಾಕಂದ್ರೆ ನಾವು ಹೇಗಿರುತ್ತೇವೆ, ಅದಕ್ಕಿಂತ ಕಂಪ್ಲೀಟ್ ಚೇಂಜ್ ಲುಕ್‌ನಲ್ಲಿದೆ ಆಧಾರ್ ಫೋಟೋ.

ಇದೀಗ ಆಧಾರ್ ಕಾರ್ಡ್‌ನಲ್ಲಿರೋ ನಿಮ್ಮ ಹಳೆಯ ಫೋಟೋ ಬದಲಾಯಿಸಿ ಲೇಟೆಸ್ಟ್ ಫೋಟೋ ಅಪ್ ಮಾಡುವ ಅವಕಾಶ ನೀಡಲಾಗಿದೆ. ಇದಕ್ಕೆ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋದರೆ ಸಾಕು.

ಜಮೀನಿಗೂ ಆಧಾರ್‌ ರೀತಿಯ ಐಡಿ!

ನೀವು ಮಾಡಬೇಕಾದಿಷ್ಟು. ನಿಮ್ಮ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ ನಿಮ್ಮ ಹಳೆಯ ಫೋಟೋ ಬದಲಾಯಿಸಿ ಹೊಸ ಫೋಟೋ ಹಾಕಬೇಕು ಅನ್ನಿ. ಅಲ್ಲಿರುವ ಆಧಾರ್‌ಕಾರ್ಡ್‌ ಎಕ್ಸಿಕ್ಯೂಟಿವ್ 25 ರೂಪಾಯಿ ಫೋಟೋ ಚೇಂಜ್ ಫೀಸ್ ಮತ್ತು ಜಿಎಸ್‌ಟಿ ದರ ಸೇರಿಸಿ ಮೊತ್ತವನ್ನು ಹೇಳುತ್ತಾರೆ.

ಫೋಟೋ ಚೇಂಜ್ ಮಾಡುವ ಹಣವನ್ನು ನೀಡಿದ ನಂತರ ಎಕ್ಸಿಕ್ಯೂಟಿವ್ ನಿಮ್ಮ ಫೋಟೋ ಬದಲಾಯಿಸುತ್ತಾರೆ. ಹಾಗೆಯೇ ಅವರು ನಿಮಗೊಂದು ಸ್ವೀಕೃತಿ ರಸೀದಿಯನ್ನೂ ನೀಡುತ್ತಾರೆ. ಇದರಲ್ಲಿ ಒಂದು ಅಪ್ಡೇಟ್ ರಿಕ್ವೆಸ್ಟ್ ನಂಬರ್ ಇರುತ್ತದೆ.

ಆಧಾರ್ ಕಾರ್ಡ್ ಫೋಟೋ ಬದಲಾಯಿಸುವ ಸ್ಟೆಪ್ ಬೈ ಸ್ಟೆಪ್ ಮಾಹಿತಿ ಹೀಗಿದೆ :

1] UIDAI ವೆಬ್‌ಸೈಟ್ - uidai.gov.in ನಲ್ಲಿ ಲಾಗ್ ಇನ್ ಮಾಡಿ ಮತ್ತು ಆಧಾರ್ ದಾಖಲಾತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.

2] ಆಧಾರ್ ದಾಖಲಾತಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಹತ್ತಿರದ ಸ್ಥಳೀಯ ಆಧಾರ್ ದಾಖಲಾತಿ ಕೇಂದ್ರದಲ್ಲಿ ಕೆಲಸ ಮಾಡುವ ಆಧಾರ್ ಕಾರ್ಯನಿರ್ವಾಹಕರಿಗೆ ಸಲ್ಲಿಸಿ;

3] ಆಧಾರ್ ಎಕ್ಸಿಕ್ಯೂಟಿವ್ ನಿಮ್ಮ ಬಯೋ ಮೆಟ್ರಿಕ್ ವಿವರವನ್ನು ಪಡೆಯುತ್ತಾನೆ.

4] ಆಧಾರ್ ದಾಖಲಾತಿ ಕೇಂದ್ರದ ಕಾರ್ಯನಿರ್ವಾಹಕ ನಿಮ್ಮ ಫೋಟೋ ತೆಗೆದುಕೊಳ್ಳುತ್ತಾನೆ

5] ಕಾರ್ಯನಿರ್ವಾಹಕ ನಿಮ್ಮ ಆಧಾರ್ ಕಾರ್ಡ್ ಫೋಟೋ ಜೊತೆಗೆ ₹ 25 ಮತ್ತು ಜಿಎಸ್‌ಟಿ ಚಾರ್ಜ್ ಮಾಡಿ ನವೀಕರಿಸುತ್ತಾರೆ.