ಡಿಜಿಟಲ್ ಡೆಸ್ಕ್: ಅತ್ಯಂತ ರುಚಿಕರ ಸೀಬೆ ಹಣ್ಣಷ್ಟೇ ಅಲ್ಲ, ಸೀಬೆ ಎಲೆಗಳು ಕೂಡ ಚರ್ಮಕ್ಕೆ ಪ್ರಯೋಜನಕಾರಿ. ವಿಶೇಷವಾಗಿ ನೀವು ಮೊಡವೆ, ಕಲೆಗಳು ಮತ್ತು ಪಿಗ್ಮೆಂಟೇಶನ್ʼನಂತಹ ಸಮಸ್ಯೆಗಳಿಂದ ಬಳಲುತ್ತಿದ್ರೆ ಇದು ನಿಮಗೆ ವರದಾನವೇ ಸರಿ.
ಸೀಬೆ ಎಲೆಯ ಪೇಸ್ಟ್ʼನಿಂದ ಸುಲಭವಾಗಿ ಮನೆಮದ್ದನ್ನ ತಯಾರಿಸಬಹುದು. ಇನ್ನು ಹಣ್ಣಿನಂತೆಯೇ ಈ ಎಲೆಗಳಲ್ಲಿ ಪೊಟ್ಯಾಶಿಯಂ ಮತ್ತು ಫೋಲಿಕ್ ಆಮ್ಲಇದ್ದು, ಇದು ನಿಮ್ಮ ಚರ್ಮಕ್ಕೆ ಸೂಪರ್ ಫುಡ್ ಆಗಿ ಕೆಲ್ಸ ಮಾಡುತ್ತದೆ.
'ಸೀಬೆ ಎಲೆಗಳಲ್ಲಿ ಐಸೋಫ್ಲ್ಯಾವೊನಾಯ್ಡ್ಗಳು, ಗ್ಯಾಲಿಕ್ ಆಮ್ಲ, ಆಸ್ಕಾರ್ಬಿಕ್ ಆಮ್ಲ, ಕ್ಯಾರೋಟಿನಾಯ್ಡ್ ಗಳಂತಹ ಸಕ್ರಿಯ ಘಟಕಾಂಶಗಳಿಂದಾಗಿ ಸೂಕ್ಷ್ಮಾಣು ವಿರೋಧಿ ಕ್ರಿಯೆಯನ್ನ ಹೊಂದಿದೆ. ಇದು ಚರ್ಮದ ಸೋಂಕುಗಳು ಮತ್ತು ಉರಿಯೂತಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ.
ಸೀಬೆ ಎಲೆಗಳ ಪೇಸ್ಟ್ ತಯಾರಿಸುವ ವಿಧಾನ ಇಲ್ಲಿದೆ..!
ಬೇಕಾಗುವ ಸಾಮಗ್ರಿಗಳು
*ಸೀಬೆ ಎಲೆಗಳ ಮೇಲೆ ಮೃದುವಾದ ಸೀಬೆ ಎಲೆಗಳು
* ಸ್ಪಲ್ಪ ನೀರು
ತಯಾರಿಸುವ ವಿಧಾನ..!
* ಸೌಮ್ಯ ಕ್ಲೆನ್ಸರ್ʼನಿಂದ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಅಥ್ವಾ ಐದು ನಿಮಿಷಗಳ ಕಾಲ ಮುಖವನ್ನು ಹಬೆಯಲ್ಲಿಟ್ಟು ರಂಧ್ರಗಳನ್ನ ತೆರೆಯಿರಿ.
* ತಾಜಾ ಪೇಸ್ಟ್ʼನ್ನ ನಿಮ್ಮ ಮುಖಕ್ಕೆ ಸಮನಾಗಿ ಹಚ್ಚಿ.
* ಇದು ಸಂಪೂರ್ಣವಾಗಿ ಒಣಗುವ ಮೊದಲು ಸಾದಾ ತಣ್ಣೀರಿನಿಂದ ತೊಳೆಯಿರಿ.
ನಿರ್ಬಂಧನೆಗಳು
*ಚರ್ಮದ ಮೇಲೆ ಸೌಮ್ಯವಾದ ಕಿರಿಕಿರಿ ಸಾಮಾನ್ಯವಾಗಿರುತ್ತದೆ. ಆದ್ರೆ, ಸೂಕ್ಷ್ಮ ಚರ್ಮವಿದ್ದರೆ ಪೇಸ್ಟ್ʼಗೆ ಸ್ವಲ್ಪ ಮೊಸರು ಕೂಡ ಹಾಕಬಹುದು.
ಮತ್ತೇನು?
ವಾರದಲ್ಲಿ 2-3 ಬಾರಿ ಹೀಗೆ ಮಾಡಿ ಒಂದು ತಿಂಗಳ ಕಾಲ ಮಾಡಿದ್ರೆ, ಹೆಚ್ಚು ಕಾಂತಿಯುತ ತ್ವಚೆ ನಿಮ್ಮದಾಗುತ್ತೆ.
EmoticonEmoticon