ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: DA ಹೆಚ್ಚಳ, DR ಮತ್ತೆ ಜಾರಿಗೆ

March 08, 2021
Monday, March 8, 2021

 


ನವದೆಹಲಿ: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಈ ಹೋಳಿ ಹಬ್ಬದ ಶುಭಾಶಯವನ್ನು ದ್ವಿಗುಣಗೊಳಿಸುವ ಘೋಷಣೆ ಯನ್ನು ಘೋಷಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಹೌದು, ಕೇಂದ್ರ ಸರ್ಕಾರ ವು ತುಟ್ಟಿಭತ್ಯೆ (ಡಿಆರ್) ಅನ್ನು ಪುನಃ ಸ್ಥಾಪಿಸಬಹುದು ಎನ್ನಲಾಗಿದ್ದು, ಕೇಂದ್ರ ಸರ್ಕಾರವು ಒಂದು ವೇಳೆ ಈ ಕ್ರಮವನ್ನು ಜಾರಿಗೆ ತರಲು ಮುಂದಾದ್ರೆ, ಈ ಕ್ರಮದಿಂದ 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.

ಇದೇ ವೇಳೆ ಡಿಎ ಹೆಚ್ಚಳ ಮತ್ತು ಡಿಆರ್ ಮರುಸ್ಥಾಪನೆಯ ಘೋಷಣೆಯು ಜನವರಿ ಮತ್ತು ನಂತರ ಕೇಂದ್ರ ಬಜೆಟ್ 2021ರಲ್ಲಿ ನಿರೀಕ್ಷಿಸಲಾಗಿತ್ತು.

ಆದರೆ ಕೊರೊನಾವೈರಸ್ ಸಾಂಕ್ರಾಮಿಕ ರೋಗಬಂದ ಹಿನ್ನೆಲೆಯಲ್ಲಿ ಅದನ್ನು ಪ್ರಕಟಿಸಿರಲಿಲ್ಲ. ಇದೀಗ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಹೋಳಿ ಹಬ್ಬದ ಮುನ್ನಾ ದಿನ ಶುಭ ಸುದ್ದಿ ಯ ಡಬಲ್ ಧಮಾಕನ್ನು ಮಾರ್ಚ್ 29ರಂದು ಘೋಷಿಸುವ ನಿರೀಕ್ಷೆ ಇದೆ. ಅಂದ ಹಾಗೇ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಕಂತು ಮತ್ತು ಡಿಯರ್ ನೆಸ್ ರಿಲೀಫ್ (ಡಿಆರ್) ಹೆಚ್ಚುವರಿ ಕಂತು ಗಳನ್ನು 2020ರ ಜನವರಿ 1ರಿಂದ ಅನ್ವಯವಾಗುವಂತೆ ಪಿಂಚಣಿದಾರರಿಗೆ ನೀಡಲು ಕೇಂದ್ರ ಸಚಿವ ಸಂಪುಟ ವು 2020ರ ಮಾರ್ಚ್ ನಲ್ಲಿ ಅನುಮೋದನೆ ನೀಡಿತ್ತು ಕೂಡ. ಸರಕಾರ ಇತ್ತೀಚೆಗೆ ಜಾರಿಗೆ ಬಂದ ದರವು ಡಿಎಯನ್ನು ಈಗಿರುವ ಶೇ.17ರಿಂದ ಶೇ.21ಕ್ಕೆ ಏರಿಕೆ ಮಾಡಲಿದೆ ಎನ್ನಲಾಗಿದ್ದು ಆದರೆ, ಯಾವಾಗ ದರ ಏರಿಕೆ ಜಾರಿಗೆ ಬರಲಿದೆ ಎಂಬ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಂದಿಲ್ಲ.

Thanks for reading ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: DA ಹೆಚ್ಚಳ, DR ಮತ್ತೆ ಜಾರಿಗೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: DA ಹೆಚ್ಚಳ, DR ಮತ್ತೆ ಜಾರಿಗೆ

Post a Comment