BREAKING: ಬೆಂಗಳೂರು ವಸತಿ ಕಾಲೇಜಿನ 15 ವಿದ್ಯಾರ್ಥಿಗಳು, ಮಂಗಳೂರು ಮೆಡಿಕಲ್​ ಕಾಲೇಜಿನ 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು!

March 16, 2021
Tuesday, March 16, 2021

 ಡಿಜಿಟಲ್‌ ಡೆಸ್ಕ್ : ರಾಜ್ಯದಲ್ಲಿ ಮತ್ತೆ ಕೊರೊನಾ ಹವಾಳಿ ಶುರುವಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ. ಅದ್ರಂತೆ, ಬೆಂಗಳೂರಿನ ವಸತಿ ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಸೇರಿ 15 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.



ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸರ್ಜಾಪುರದ ಶ್ರೀ ಚೈತನ್ಯ ವಸತಿ ಕಾಲೇಜಿನ ಪ್ರಥಮ ಪಿಯುಸಿಯ 8 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿಯ ಮೂವರು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾರು ಮತ್ತು ಸಿಬ್ಬಂದಿ ಸೇರಿ ಒಟ್ಟು 15 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಇನ್ನು ಮಂಗಳೂರಿನಲ್ಲಿಯೂ ಕೊರೊನಾ ಅಟ್ಟಹಾಸ ಜೋರಾಗಿದ್ದು, ಇಲ್ಲಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ 30 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಮಂಗಳೂರು ಹೊರವಲಯದ ಯೇನಪೋಯ ಮೆಡಿಕಲ್ ಕಾಲೇಜಿನ ಹಾಸ್ಟೆಲ್​​ನಲ್ಲಿದ್ದ 30 ವಿದ್ಯಾರ್ಥಿಗಳ ಆರ್​ಟಿಪಿಸಿಆರ್ ಟೆಸ್ಟ್ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ನಗರದಲ್ಲಿ ಆತಂಕ ಹೆಚ್ಚಾಗಿದ್ದು, ಹಾಸ್ಟೇಲ್ ಸೇರಿದಂತೆ ಅಲ್ಲಿನ ಸುತ್ತಮುತ್ತ ಪ್ರದೇಶವನ್ನ ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತನೆ ಮಾಡಲಾಗಿದೆ. ಅದ್ರಂತೆ, ಇನ್ನು 10 ದಿನಗಳ ಕಾಲ ಕಾಲೇಜು ಹಾಗೂ ಹಾಸ್ಟೆಲ್ ಸಿಲ್​ಡೌನ್ ಮಾಡಲಾಗಿದೆ.


Thanks for reading BREAKING: ಬೆಂಗಳೂರು ವಸತಿ ಕಾಲೇಜಿನ 15 ವಿದ್ಯಾರ್ಥಿಗಳು, ಮಂಗಳೂರು ಮೆಡಿಕಲ್​ ಕಾಲೇಜಿನ 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BREAKING: ಬೆಂಗಳೂರು ವಸತಿ ಕಾಲೇಜಿನ 15 ವಿದ್ಯಾರ್ಥಿಗಳು, ಮಂಗಳೂರು ಮೆಡಿಕಲ್​ ಕಾಲೇಜಿನ 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು!

Post a Comment