ನಿಮ್ಮ ಹೊಲ ಗದ್ದೆಗಳ ಸರ್ವೇ ಸ್ಕೆಚ್ ಮೊಬೈಲ್ ನಲ್ಲಿ ಪಡೆಯಿರಿ

March 03, 2021

 


ಇವತ್ತು ಈ ಲೇಖನದ ಮೂಲಕ ನಮ್ಮ ನಮ್ಮ ಮೊಬೈಲ್ ನಲ್ಲಿ ನಮ್ಮ ಜಮೀನಿನ ಜಾಗದ ಸರ್ವೇ ಸ್ಕೆಚ್ ಹೇಗೆ ನೋಡೋದು? ನಾವಿರುವಂತಹ ಜಾಗ ಯಾರ ಮಾಲೀಕತ್ವದಲ್ಲಿ ಇದೆ? ಮೊಬೈಲ್ ನಲ್ಲಿ ಇದನ್ನ ಹೇಗೆ ನೋಡೋದು ಅನ್ನೋದರ ಕುರಿತಾಗಿ ತಿಳಿದುಕೊಳ್ಳೋಣ.

ಈಗ ಕೈಯ್ಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ರೆ ಸಾಕು ಇಡೀ ಜಗತ್ತನ್ನೇ ನಾವು ನೋಡಬಹುದು. ಹಾಗೆಯೇ ನಮ್ಮ ಮೊಬೈಲ್ ನಲ್ಲಿ ನಮ್ಮ ಜಮೀನಿನ ಸರ್ವೇ ಸ್ಕೆಚ್ ಕೂಡಾ ನೋಡಬಹುದು. ಇದಕ್ಕಾಗಿ ನಾವು ನಮ್ಮ ಮೊಬೈಲ್ ನಲ್ಲಿ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ 'ದಿಶಾಂಕ್' ಅಂತ ಟೈಪ್ ಮಾಡಿ ಈ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಇದು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಅಪ್ಲಿಕೇಶನ್ ಆಗಿರುತ್ತದೆ. ಇದನ್ನ ಒಪನ್ ಮಾಡಿ ನಂತರ ಭಾಷೆಯನ್ನ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ನಂತರ ಹೋಮ್ ಪೇಜ್ ನಲ್ಲಿ ನಿಮ್ಮ ಅಥವಾ ನೀವು ಇರುವಂತಹ ಜಾಗವನ್ನು ತೋರಿಸುತ್ತದೆ.

ಒಂದುವೇಳೆ ನೀವು ಏನಾದರೂ ನಿಮ್ಮ ಹೊಲ ಗದ್ದೆಗಳಿಗೆ ಹೋಗಿ ನಿಂತುಕೊಂಡು ಈ ಅಪ್ಲಿಕೇಶನ್ ಆನ್ ಮಾಡಿದರೆ ನೀವು ಯಾವ ಸರ್ವೇ ನಂಬರ್ ನಲ್ಲಿ ಇದ್ದೀರಾ ಎನ್ನುವುದನ್ನು ತೋರಿಸುತ್ತದೆ. ಆ ಜಾಗದ ಮಾಲೀಕರು ಯಾರು ಎಂಬುದನ್ನು ತೋರಿಸುತ್ತದೆ. ನಿಮ್ಮ ಮೊಬೈಲ್ ನಲ್ಲಿಯೇ ಸಹ ಸರ್ವೇ ನಂಬರ್ ನೋಡಿಕೊಂಡು ಅದು ವಿಸ್ತೀರ್ಣತೆ ಎಷ್ಟು ಇದೆ ಎಂಬುದನ್ನೂ ಸಹ ತೋರಿಸುತ್ತದೆ.

ಈಗ ಸರ್ಕಾರಿ ಅಧಿಕಾರಿಗಳೂ ಸಹ ಇದೆ ಅಪ್ಲಿಕೇಶನ್ ಮೂಲಕ ನಮಗೆ ಸರ್ವೇ ಮಾಡಿಕೊಡುತ್ತಾರೆ. ಇದರಲ್ಲಿ ಬಲಗಡೆ ಭಾಗದಲ್ಲಿ ಬಹಳಷ್ಟು ಆಯ್ಕೆಗಳು ಕಾಣಿಸುತ್ತದೆ. ಇದರಲ್ಲಿ ರಾಜ್ಯದ ಗಡಿ, ಜಿಲ್ಲೆಯ ಗಡಿ, ಹೋಬಳಿ ಇವುಗಳ ಗಡಿ ಯಾವ ರೀತಿ ಇದೆ ಎನ್ನುವುದನ್ನು ತೋರಿಸುತ್ತದೆ ಹಾಗೂ ನಿಮ್ಮ ಅಕ್ಕ ಪಕ್ಕದಲ್ಲಿ ಬೇರೆ ಯಾವುದೇ ಮನೆ ಇದೆಯಾ ಅನ್ನುವುದನ್ನು ಸಹ ಪ್ರತಿಯೊಂದನ್ನು ಡೀಟೈಲ್ ಆಗಿ ತೋರಿಸುತ್ತದೆ. ಇನ್ನು ಕೆಳಗಡೆ ಮಾಪನ ಸಾಧನಗಳು, ಸರ್ವೇ ನಂಬರ್ ಹುಡುಕಿ, ಸ್ಥಳದ ಮಾಹಿತಿ ಹಾಗೂ ಮ್ಯಾಪ್ ನಲ್ಲಿ ಹುಡುಕಿ ಎಂಬ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಸರ್ವೇ ನಂಬರ್ ಹುಡುಕಿ ಎಂದಿದ್ದಲ್ಲಿ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಎಲ್ಲವನ್ನೂ ಆಯ್ಕೆ ಮಾಡಿ ನಂತರ ನಿಮ್ಮ ಸರ್ವೇ ನಂಬರ್ ಅನ್ನು ಸಹ ನಮೂದಿಸಬೇಕು. ಹೀಗೆ ಮಾಡಿದಾಗ ನಾವು ಇರುವ ಜಾಗದಿಂದ ನಾವು ಕೊಟ್ಟಂತಹ ಸರ್ವೇ ನಂಬರ್ ಎಷ್ಟು ದೂರದಲ್ಲಿ ಇದೆ ಎನ್ನುವುದನ್ನು ಸಹ ತೋರಿಸುತ್ತದೆ. ನಂತರ ಸ್ಥಳದ ವರದಿ ಎಂಬಲ್ಲಿ ಕ್ಲಿಕ್ ಮಾಡಿದಾಗ ನೀವು ಇರುವ ಸ್ಥಳದ ಬಗ್ಗೆ ಮಾಹಿತಿ ಹಾಗೂ ಅಲ್ಲಿರುವ ಸ್ಥಳದ ಮಾಲೀಕರು ಯಾರು ಎಂಬುದನ್ನು ಸಹ ಇದರ ಮೂಲಕ ತಿಳಿದುಕೊಳ್ಳಬಹುದು. ನಂತರ ಮ್ಯಾಪ್ ನಲ್ಲಿ ಸಹ ನಿಮ್ಮ ಜಾಗವನ್ನು ನೋಡಿಕೊಳ್ಳಬಹುದು. ಈ ಅಪ್ಲಿಕೇಶನ್ ನ ಮೂಲಕ ನಿಮ್ಮ ಜಾಗದ ಬಗ್ಗೆ ನೀವೇ ನಿಮ್ಮ ಮೊಬೈಲ್ ನಲ್ಲಿ ನೋಡಿಕೊಳ್ಳಬಹುದು.


Related Articles

Advertisement
Previous
Next Post »