ಲಸಿಕೆ ಪಡೆಯಲು ಬಂದ ಪೊಲೀಸಪ್ಪ, ನರ್ಸ್‌ ಕೈ ತಾಗುತ್ತಿದ್ದಂತೆಯೇ ನಾಚಿ ನೀರಾದ!

March 09, 2021
Tuesday, March 9, 2021

 


ನಾಗಾಲ್ಯಾಂಡ್(ಮಾ.09) ಕೊರೋನಾ ವೈರಸ್ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಭಾರತದಲ್ಲಿ ಈಗಾಗಲೇ ಲಸಿಕೆ ಅಭಿಯಾನ ಆರಂಭವಾಗಿದೆ. ಹೀಗಿರುವಾಗಲೇ ಲಸಿಕೆ ಕೇಂದ್ರಗಳಲ್ಲಿ ಸಂಭವಿಸುತ್ತಿರುವ ಕೆಲ ಘಟನೆಗಳ ವಿಡಿಯೋಗಳೂ ವೈರಲ್ ಆಗುತ್ತಿವೆ. ಹೀಗಿರುವಾಗ ಸದ್ಯ ಲಸಿಕಾ ಕೇಂದ್ರವೊಂದರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ನೋಡುಗರನ್ನು ನಗೆಗಡಲಲ್ಲಿ ತೇಲಿಸಿದೆ.

ರಾಸಲೀಲೆ ಸಿಡಿ- ಮಾಜಿ ಸಿಎಂ ವೈನಾಡ್ ಕಥೆ : ಯೂ ಟರ್ನ್

ಹೌದು ಲಸಿಕೆ ಹಾಕುವಾಗ ಕೆಲವರು ನೋವಿನಿಂದ ಅಳುತ್ತಿದ್ದರೆ, ಇನ್ನು ಕೆಲವರು ಭಯ ಪಡುತ್ತಿರುವ ದೃಶ್ಯಗಳನ್ನು ನೊಡಿದ್ದೇವೆ. ಆದರೆ ವೈರಲ್ ಆದ ವಿಡಿಯೋದಲ್ಲಿ ಪೊಲೀಸಪ್ಪನೊಬ್ಬ ಬಿದ್ದು ಬಿದ್ದು ನಗುತ್ತಿರುವ ದೃಶ್ಯಗಳಿವೆ. ಹೌದು ಐಪಿಎಸ್‌ ಆಫೀಸರ್‌ ಒಬ್ಬರು ಈ ವಿಡಿಯೋವನ್ನು ಸೇರ್ ಮಾಡಿಕೊಂಡಿದ್ದಾರೆ.

ನಾಗಾಲ್ಯಾಂಡನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಪೊಲೀಸಪ್ಪನಿಗೆ ಲಸಿಕೆ ನೀಡಲು ನರ್ಸ್‌ ಒಬ್ಬಾಕೆ ಹತ್ತಿರ ಬಂದು ಕೈ ಹಿಡಿಯುತ್ತಾರೆ, ಅಷ್ಟರಲ್ಲಿ ಪೊಲೀಸಪ್ಪ ನಾಚಿಕೊಂಡೋ ಅಥವಾ ಕಚಗುಳಿಯಾಗುತ್ತಿದೆ ಎಂದೋ ತಿಳಿಯದು, ಆದರೆ ಜೋರಾಗಿ ನಗಲಾರಂಭಿಸುತ್ತಾರೆ. ಅವರ ಈ ನಗು ಕಂಡು ಅಲ್ಲಿದ್ದವರೂ ನಗಲಾರಂಭಿಸುತ್ತಾರೆ.

ಇನ್ನು ವಿಡಿಯೋ ಶೇರ್ ಮಾಡಿಕೊಂಡಿರುವ ಐಪಿಎಸ್‌ ಆಫೀಸರ್ 'ನಾಗಾಲ್ಯಾಂಡ್‌ನಲ್ಲಿ ಕೊರೋನಾ ಲಸಿಕೆ ಹಾಕುತ್ತಿರುವ ದೃಶ್ಯವಿದು. ಅವರು ಕೊನೆಗೂ ಲಸಿಕೆ ಹಾಕಿಕೊಂಡರಾ? ಇಲ್ಲವಾ ಎಂಬುವುದು ತಿಳಿದಿಲ್ಲ. ಆದರೆ ಅವರು ಕಚಗುಳಿಯಾಗುತ್ತದೆ ಎಂದು ನಗುತ್ತಿರಬೇಕು. ಬಹುಶಃ ಸೂಜಿಯಲ್ಲ, ಕೈ ಸ್ಪರ್ಶದಿಂದ ನಗುತ್ತಿರಬೇಕು' ಎಂದಿದ್ದಾರೆ.

ಕ್ಲಿಕ್ ಮಾಡಿ ಸಂಪೂರ್ಣವಾಗಿ ವೀಡಿಯೋ ನೋಡಿ

Thanks for reading ಲಸಿಕೆ ಪಡೆಯಲು ಬಂದ ಪೊಲೀಸಪ್ಪ, ನರ್ಸ್‌ ಕೈ ತಾಗುತ್ತಿದ್ದಂತೆಯೇ ನಾಚಿ ನೀರಾದ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಲಸಿಕೆ ಪಡೆಯಲು ಬಂದ ಪೊಲೀಸಪ್ಪ, ನರ್ಸ್‌ ಕೈ ತಾಗುತ್ತಿದ್ದಂತೆಯೇ ನಾಚಿ ನೀರಾದ!

Post a Comment