ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೂ ಕೋವಿಡ್‌ ಲಸಿಕೆ ಕೊಡಿ

March 24, 2021

 


ಬೆಂಗಳೂರು: ಕೋವಿಡ್‌ ಸೋಂಕಿನ ಎರಡನೇ ಅಲೆ ಶುರುವಾಗಿದೆ. ಈಗಾಗಲೇ ನೆರೆಯ ಮಹಾರಾಷ್ಟ್ರ ಸೇರಿ ಇನ್ನಿತರ ಕೆಲ ರಾಜ್ಯಗಳಲ್ಲಿ ಸೋಂಕಿನ ಹೆಚ್ಚಳ ಕಂಡು ಬಂದಿದೆ. ಹಲವು ನಗರಗಳು ಮತ್ತೆ ಲೌಕ್‌ಡೌನ್‌ ಆಗಿವೆ. ರಾಜ್ಯದಲ್ಲೂ ಸೋಂಕಿನ ಸಂಖ್ಯೆಯಲ್ಲಿ ದ್ವಿಗುಣತೆ ಕಂಡು ಬಂದಿದ್ದು ಆಹಿನ್ನೆಲೆ ಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೂ ಕೋವಿಡ್‌ ಲಸಿಕೆ ನೀಡಬೇಕೆಂಬ ಮಾತು ಕೇಳಿ ಬಂದಿದೆ.

ಎಲ್ಲರಿಗೂ ಲಸಿಕೆ ನೀಡುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಸರ್ಕಾರ ಹಿರಿಯ ನಾಗರಿಕರಿಗೆ ಕೋವಿಡ್‌ ಲಸಿಕೆನೀಡುವ ಕಾರ್ಯದಲ್ಲಿ ಮಗ್ನವಾಗಿದೆ. ಅದೇ ರೀತಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕೋವಿಡ್‌ ಲಸಿಕೆ ಉಚಿತವಾಗಿ ನೀಡಬೇಕೆಂದು ಹಿರಿಯಶಿಕ್ಷಣ ತಜ್ಞ ನಿರಂಜನಾರಾಧ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಈ ಹಿಂದೆ ಸರ್ಕಾರ ಶಿಕ್ಷಕರನ್ನು ಕೋವಿಡ್‌ ಕಾರ್ಯಕ್ಕೆ ಬಳಕೆಮಾಡಿಕೊಂಡಿದೆ.

ಹೀಗಾಗಿ ಅವರೂ ಸುರಕ್ಷಿತವಾಗಿರುವುದು ಮುಖ್ಯ. ಅವರು ಸುರಕ್ಷಿತವಾಗಿದ್ದಾರೆ ‌ ಮಕ್ಕಳು ಸುರಕ್ಷಿತರಾಗಿರುತ್ತಾರೆ.ಆ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ಲಸಿಕೆ ನೀಡುವುದು ಅಗತ್ಯ ಎಂದು ತಿಳಿಸಿದ್ದಾರೆ.

ಪರೀಕ್ಷೆ ಎದುರಿಸಲು ಧೈರ್ಯ ಬರುತ್ತದೆ: ಶೀಘ್ರದಲ್ಲೇಮಕ್ಕಳಿಗೆ ಪರೀಕ್ಷೆಗಳು ಆರಂಭವಾಗುವುದರಿಂದ ಅವರಿಗೆಲಸಿಕೆ ನೀಡುವ ಕಾರ್ಯ ಕೂಡ ಆಗಬೇಕು. ಹೀಗೆಮಾಡಿದಾಗ ಮಾತ್ರ ಮಕ್ಕಳು ಧೈರ್ಯದಿಂದ ಪರೀಕ್ಷೆಬರೆಯಲು ಸಾಧ್ಯವಾಗುತ್ತದೆ ಎಂದು ಚೈಲ್ಡ್‌ ರೈಟ್‌ ಟ್ರಸ್ಟ್‌ನ ನಿರ್ದೇಶಕರಾದ ನಾಗಸಿಂಹ ಜಿ.ರಾವ್‌ ಹೇಳಿದ್ದಾರೆ.ಸರ್ಕಾರ ಕೇವಲ ಪರೀಕ್ಷೆ ಮಾಡಬೇಕೋ, ಬೇಡವೋ ಎಂಬ ಬಗ್ಗೆ ಮಾತ್ರ ಗಮನ ಹರಿಸುತ್ತಿದೆ. ಆದರೆ ನಮ್ಮ ಸಂರಕ್ಷಣೆ ದೃಷ್ಟಿಯಿಂದ ಆ‌ಲೋಚಿಸುತ್ತಿಲ್ಲ ಎಂಬ ಮಾತುಗಳನ್ನು ವಿದ್ಯಾರ್ಥಿಗಳು ಆಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸರ್ಕಾರಕಾಲೇಜು ಮಕ್ಕಳಿಗೂ ಕೂಡ ಲಸಿಕ ನೀಡುವಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ

ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ: ವಿದಾರ್ಥಿಗಳು ಭಿನ್ನ ಭಿನ್ನ ಪ್ರದೇಶಗಳಿಂದ ಶಾಲೆ ಮತ್ತು ಕಾಲೇಜುಗಳಿಗೆ ತೆರಳುತ್ತಾರೆ. ಮಕ್ಕಳ ಉಷ್ಣಾಂಶವನ್ನು ಪರೀಕ್ಷೆಮಾಡುವುದರಿಂದ ಪ್ರಯೋಜನವಿಲ್ಲ. ಆ ಹಿನ್ನೆಲೆ ಯಲ್ಲಿವಿದ್ಯಾರ್ಥಿಗಳಿಗೂ ಲಸಿಕೆ ನೀಡುವತ್ತ ಆಲೋಚಿಸಬೇಕೆಂದು ಬೆಂಗಳೂರಿನ ಆಚಾರ್ಯ ಎಜುಕೇಶನ್‌ ಟ್ರಸ್ಟ್‌ನ ಉಪಾಧ್ಯಕ್ಡಾ.ವಿಷ್ಣಭರತ್‌ ಹೇಳಿದ್ದಾರೆ. ಲಾಕ್‌ಡೌನ್‌ ಮಾಡಿರುವ ಮೂಲ ಉದ್ದೇಶ ಹಿರಿಯರನ್ನು ಮತ್ತು ಮಕ್ಕಳನ್ನು ರಕ್ಷಿಸುವುದ್ದಾಗಿದೆ. ಈಗಾಗಲೇ ಸರ್ಕಾರ ಲಸಿಕೆ ನೀಡುವಿಕೆಯಲ್ಲಿ ಹಿರಿಯ ನಾಗರಿಕರಿಗೆ ಮೊದಲ ಆದ್ಯತೆನೀಡಿದೆ. ಮುಂದಿನ ಹಂತವಾಗಿ ಶಿಕ್ಷಕರಿಗೆ ಮತ್ತುಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕುಎಂದು ಸಂದೀಪನಿ ಗ್ರೂಫ್ ಆಫ್ ಇನ್ಸ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶಿಕ್ಷಕರು, ಪತ್ರಕರ್ತರಿಗೂ ಲಸಿಕೆಗೆ ಒತ್ತಾಯ :

ವಿಧಾನ ಪರಿಷತ್ತು: ಕೋವಿಡ್ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸಿದ ಶಿಕ್ಷಕರು, ಉಪನ್ಯಾಸಕರು ಹಾಗೂ ಪತ್ರಕರ್ತರಿಗೂ ಸರ್ಕಾರ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯ ಅರುಣ ಶಹಾಪೂರ ಒತ್ತಾಯಿಸಿದರು. ಮಂಗಳವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯದ ಶಿಕ್ಷಕರು, ಉಪನ್ಯಾಸಕರು ಜೀವ ಪಣಕ್ಕಿಟ್ಟು ಕೋವಿಡ್ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಕೋವಿಡ್ ಎರಡನೇ ಅಲೆ ಪ್ರಾರಂಭವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಮುಂಬರುವ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನೂ ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೂ ಲಸಿಕೆ ನೀಡುವುದು ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಲಾಕ್‌ಡೌನ್‌ ಅವಧಿಯಲ್ಲಿ ಪತ್ರಕರ್ತರು, ಮಾಧ್ಯಮ ವಿಭಾಗದ ಎಲ್ಲ ಸಿಬ್ಬಂದಿ ಸಹ ಕಾರ್ಯನಿರ್ವಹಿಸಿದ್ದಾರೆ. ಅವರಿಗೂ ಲಸಿಕೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಧೈರ್ಯದಿಂದ ಪರೀಕ್ಷೆ ಎದುರಿಸುವ ದೃಷ್ಟಿಯಿಂದ ಸರ್ಕಾರ ಲಸಿಕೆ ಯನ್ನು ವಿದ್ಯಾರ್ಥಿ ಸಮೂಹಕ್ಕೂ ನೀಡುವ ನಿಟ್ಟಿನಲ್ಲಿ ಹೆಜ್ಜೆಯಿರಿ ಸಬೇಕು. ಕೊಠಡಿಯಲ್ಲಿ ಭಯಬಿಟ್ಟು ಮಕ್ಕಳುಪಾಠ ಕೇಳುವ ವಾತಾವರಣ ಸೃಷ್ಠಿಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. – ಚಂದ್ರಕಾಂತ್‌ ಭಂಡಾರಿ, ಶ್ರೀಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ, ರುಕ್ಮಾಪುರ ಯಾದಗಿರಿ

ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾರ್ಥಿ ಗಳಿಗೆ ಕೋವಿಡ್ ಲಸಿಕೆಯನ್ನುಆದ್ಯತೆ ಮೇರೆಗೆ ನೀಡಬೇಕು. ಪಿಯುಸಿ,ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌, ಡಿಪ್ಲೊಮಾ ಸೇರಿ ಎಲ್ಲ ರೀತಿಯ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಸರ್ಕಾರ ನೀಡಬೇಕು. ಡಾ.ಬಿ.ಆರ್‌. ಸುಪ್ರಿತ್‌, ಪ್ರಾಂಶುಪಾಲರುಹಾಗೂ ಕಾರ್ಯದರ್ಶಿ, ಆಕ್ಸ್‌ಫ‌ರ್ಡ್‌ ಕಾಲೇಜು, ಉಲ್ಲಾಳ ಉಪನಗರ

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂಕೋವಿಡ್‌ ಲಸಿಕೆ ನೀಡಿದರೆ ಉತ್ತಮ.ಆನ್‌ಲೈನ್‌ ಕ್ಲಾಸ್‌ಗಳು, ಆಫ್ಲೈನ್‌ ಕ್ಲಾಸ್‌ಗಳಂತೆ ಅಲ್ಲ. ಲಸಿಕೆ ನೀಡುವುದರಿಂದ ಕೋವಿಡ್ ಎದುರಿಸುವ ಧೈರ್ಯ ಮಕ್ಕಳಿಗೆಬರಲಿದೆ. ಭಯ ಬಿಟ್ಟು ಕಲಿಯಲು ಸಾಧ್ಯವಾಗುತ್ತದೆ. ಡಾ.ಬಿ.ವಸಂತಶೆಟ್ಟಿ, ಉಪಕುಲ ಸಚಿವ ರಾಜೀವ್‌ ಗಾಂಧಿ ಆರೋಗ್ಯ ವಿವಿ,ಬೆಂಗಳೂರು.

ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸರ್ಕಾರವೂ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಪ್ರಕ್ರಿಯೆಆರಂಭಿಸಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಸಂಘಟನಾತ್ಮಕವಾದ ಚರ್ಚೆ ನಡೆಸುತ್ತಿದ್ದೇವೆ. ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಹರ್ಷ ನಾರಾಯಣ, ರಾಷ್ಟ್ರೀಯ ಕಾರ್ಯದರ್ಶಿ, ಎಬಿವಿಪಿ


Related Articles

Advertisement
Previous
Next Post »