ಡಿಜಿಟಲ್ ಡೆಸ್ಕ್: ಗರ್ಲ್ ಫ್ರೆಂಡ್ ಜೊತೆ ಶಾಪಿಂಗ್ ಮಾಡುತ್ತಾ ಜಾಲಿ ಮೂಡ್ʼನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಏಕಾಏಕಿ ಸುನಾಮಿಯೇ ಅಪ್ಪಳಿಸಿದಂತಾಗಿದೆ. ಹೌದು, ಮದುವೆಯಾಗಿದ್ರು ಮತ್ತೊಬ್ಬಳ ಸಂಗ ಬಯಸಿ, ಆಕೆಯೊಂದಿಗೆ ಶಾಪಿಂಗ್ ಮಾಡುವಾಗ ಏಕಾಏಕಿಯಾಗಿ ತಾಳಿ ಕಟ್ಟಿಸಿಕೊಂಡ ಪತ್ನಿ ಎದುರಾದ್ರೆ ಏನ್ ಆಗ್ಬೇಡ ಹೇಳಿ..? ಸುನಾಮಿನೇ ಅಲ್ವಾ..!
ಹೌದು, ಮೀರತ್ʼನ ನಿವಾಸಿಯೊಬ್ಬ ಇಂದು ತನ್ನ ಗೆಳತಿಯೊಟ್ಟಿಗೆ ಮುಂದೆನಾಗುತ್ತೋ ಅನ್ನೋ ಪರಿವೆ ಇಲ್ಲದೇ ಖುಷಿ ಖುಷಿಯಾಗಿ ಶಾಪಿಂಗ್ ಮಾಡ್ತಿದ್ದ.. ಆದ್ರೆ, ಆತನ ಏಕಾಏಕಿಯಾಗಿ ಹೆಂಡತಿ ಪ್ರತ್ಯಕ್ಷ್ಯವಾಗಿದ್ದಾಳೆ. ಪಾಪ ಪತಿರಾತಿ ಗೆಳತಿಯ ಜೊತೆಗೆ ರೆಡ್ ಹ್ಯಾಂಡಾಗಿ ಹೆಂಡತಿಗೆ ಸಿಕ್ಕಿಬಿದ್ದಿದ್ದಾನೆ. ಸಧ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪರಸ್ಪರ ಆರೋಪ ಮಾಡಿ ದಂಪತಿ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ.
ಅಂದ್ಹಾಗೆ, ಮೀರತ್ʼನ ಗರ್ರೋಡ್ʼನ ನಂದಿನಿ ಪ್ಲಾಜಾದಲ್ಲಿ ವ್ಯಕ್ತಿನೊಬ್ಬ ಬಂದಿಳಿದ. ಆತ ಮುಜಾಫರ್ ನಗರದ ನಿವಾಸಿಯಾಗಿದ್ದು, ಮೀರತ್ʼನಲ್ಲಿ ಖಾಸಗಿ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದಾನೆ. ಸ್ವಲ್ಪ ಸಮಯದಲ್ಲೇ ಆತನ ಪತ್ನಿ ನಂದಿನಿ ಪ್ಲಾಜಾಕ್ಕೆ ಬಂದಿಳಿದ್ದಿದ್ದಾರೆ.ಗಂಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕಿತ್ತಾಟ ಶುರುವಚ್ಚುಕೊಂಡಿದ್ದಾಳೆ. ಈ ಜಗಳ ಸದ್ದು ಮಾಡುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಎಂಟ್ರಿ ಕೊಟ್ಟಿದ್ದು, ಠಾಣೆಗೆ ಕರೆದೊಯ್ದಿದ್ದಾರೆ.
ಕಾನ್ಶಿರಾಮ್ ಕಾಲೋನಿ ನಿವಾಸಿಯಾಗಿರೊ ಪತ್ನಿ, ತನ್ನ ಗಂಡ ಎರಡು ತಿಂಗಳಿನಿಂದ ಬೇರೆ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ವಿವರಿಸಿದ್ದಾಳೆ. ಮದುವೆಯಾದ ನಂತರ ತನ್ನ ಪತಿ ಝಡಿ ಸೊಸೈಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸುಮಾರು ಒಂದೂವರೆ ತಿಂಗಳ ಹಿಂದೆ ಕಾನ್ಶಿರಾಮ್ ಕಾಲೋನಿಯಿಂದ ಹೊರಟ ನಂತ್ರ ಪತಿ ಬೇರೆ ಮಹಿಳೆಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ಮಹಿಳೆ ತಿಳಿಸಿದ್ದಾಳೆ.
ಇನ್ನು ಠಾಣೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರು ಪರಸ್ಪರ ಆರೋಪದ ದೂರು ದಾಖಲು ಮಾಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಎರಡೂ ಕಡೆಯವರು ಪರಸ್ಪರ ಆರೋಪ ಮಾಡುತ್ತಿದ್ದಾರೆ ಎಂದು ಸಹ-ಸಿವಿಲ್ ಲೈನ್ ದೇವೇಶ್ ಸಿಂಗ್ ಹೇಳಿದ್ದು, ತನಿಖೆಯ ನಂತರ ಸತ್ಯಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
EmoticonEmoticon