ಬಾಯ್​ಫ್ರೆಂಡ್​ ಭೇಟಿಗಾಗಿ ಈಕೆ ಸೃಷ್ಟಿಸಿದ್ದು ಅಂತಿಂಥ ಕತೆಯಲ್ಲ: ಈಕೆಯ ಡ್ರಾಮಾ ನೋಡಿ ಪೊಲೀಸರೇ ಕಂಗಾಲು!

March 05, 2021
Friday, March 5, 2021

 


ವಿಜಯವಾಡ: ಕಳೆದ ಸೋಮವಾರ ಬೆಳಗ್ಗೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಥೇರ್ಲಂ ಪೊಲೀಸ್​ ಠಾಣೆಯ ಸಮೀಪದ ಗಿಡ ಗಂಟಿಗಳ ನಡುವೆ ಯುವತಿಯೊಬ್ಬಳು ಕೈ-ಕಾಲು ಕಟ್ಟಿದ್ದ ಹಾಗೂ ಪ್ರಜ್ಞೆಯಿಲ್ಲದೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

ಯುವತಿಯನ್ನು ರಕ್ಷಣೆ ಮಾಡಿದ ಪೊಲೀಸರಿಗೆ ಈ ಪ್ರಕರಣ ಗೊಂದಲಮಯವಾಗಿತ್ತು. ದುಷ್ಕರ್ಮಿಗಳು ಅಪಹರಿಸಿ ಎಸೆದು ಹೋಗಿದ್ದಾರೆಂದು ಶಂಕಿಸಲಾಗಿತ್ತು. ಆದರೆ, ಪ್ರಕರಣವೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಸ್ವತಃ ಯುವತಿಯೇ ತಮ್ಮ ಪಾಲಕರು ಮತ್ತು ಹಾಸ್ಟೆಲ್​​ ಅಧಿಕಾರಿಗಳ ದಿಕ್ಕುತಪ್ಪಿಸಲು ಅಪಹರಣದ ನಾಟವಾಡಿದ್ದಾಳೆಂಬುದು ಬೆಳಕಿಗೆ ಬಂದಿದೆ.

ಪ್ರಕರಣ ಬಗ್ಗೆ ಮಾತನಾಡಿರುವ ವಿಜಯನಗರಂ ಪೊಲೀಸ್​ ಮುಖ್ಯಸ್ಥ ಬಿ.

ರಾಜಾ ಕುಮಾರಿ, ಯುವತಿಯ ದೇಹದ ಮೇಲೆ ದೈಹಿಕ ಹಲ್ಲೆ ಗಾಯಗಳಾಗಿಲ್ಲ. ಆಕೆ ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಗಾಗಿಲ್ಲ. ಥೇರ್ಲಂ ಮಂಡಲದ ಗ್ರಾಮವೊಂದರ ನಿವಾಸಿಯಾದ ಯುವತಿ ವಿಜಯನಗರಂ ಜಿಲ್ಲೆ ಡಿಗ್ರಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಳು ಮತ್ತು ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದಳು.

ಪ್ರಾಥಮಿಕ ತನಿಖೆಯ ಪ್ರಕಾರ ಅಂಕಲ್​ ಮನೆಗೆ ಹೋಗಿ ಎರಡು ದಿನಗಳ ಬಳಿಕ ಹಿಂದಿರುಗುತ್ತೇನೆಂದು ವಾರ್ಡನ್​​ಗೆ ಹೇಳಿ ಫೆಬ್ರವರಿ 27ರಂದು ಯುವತಿ ಹಾಸ್ಟೆಲ್​ನಿಂದ ಹೊರಟ್ಟಿದ್ದಾಳೆ. ಆದರೆ, ಅಂಕಲ್​ ಮನೆ ಬದಲು ಪಶ್ಚಿಮ ಗೋದಾವರಿ ಜಿಲ್ಲೆಯ ನರ್ಸಾಪುರ್​ಗೆ ತನ್ನ ಬಾಯ್​ಫ್ರೆಂಡ್​ ಭೇಟಿಯಾಗಲು ತೆರಳಿದ್ದಾಳೆ.

ಇತ್ತ ತನ್ನ ಸಹೋದರ ಹಾಸ್ಟೆಲ್​ನಲ್ಲಿ ಆಕೆಯ ಬಗ್ಗೆ ವಿಚಾರಿಸಿದ್ದಾನೆಂದು ಗೊತ್ತಾದ ಬೆನ್ನಲ್ಲೇ ಹೆದರಿದ ಆಕೆ ಅದೇ ದಿನ ಪಲಕೊಲ್ಲು ಪಲಕೊಂಡಾ ಬಸ್​ ಏರಿ ಫೆ.28 ರಾತ್ರಿ ಗುರ್ಲಾ ಏರಿಯಾಗೆ ಆಗಮಿಸಿದ್ದಾಳೆ. ಬಳಿಕ ಅಲ್ಲಿಂದ ಪೊಲೀಸ್​ ಠಾಣೆ ಸಮೀಪದ ಗಿಡ ಗಂಟಿಯ ಬಳಿ ತೆರಳಿದ್ದಾಳೆ. ದುಪ್ಪಟ್ಟದಿಂದ ತನ್ನ ಕೈಕಾಲುಗಳನ್ನು ಕಟ್ಟಿಕೊಂಡು ಅಲ್ಲಿಯೇ ಮಲಗಿದ್ದಾಳೆ ಮತ್ತು ರಕ್ಷಣೆಗಾಗಿ ಯಾರಾದರೂ ಬರುತ್ತಾರೋ ಎಂದು ಕಾದಿದ್ದಾಳೆ.

ತನ್ನ ಕುಟುಂಬದ ಸದಸ್ಯರು ಮತ್ತು ಹಾಸ್ಟೆಲ್​ ಅಧಿಕಾರಿಗಳು ದಿಕ್ಕತಪ್ಪಿಸಲು ಅಪಹರಣದ ನಾಟಕವನ್ನು ಯುವತಿ ಸೃಷ್ಟಿಸಿದ್ದಾಳೆ. ಈ ಬಗ್ಗೆ ತನಿಖಾಧಿಕಾರಿಗಳ ಮುಂದೆಯೇ ಯುವತಿ ಬಾಯ್ಬಿಟ್ಟಿದ್ದಾಳೆಂದು ರಾಜಾ ಕುಮಾರಿ ಮಾಹಿತಿ ನೀಡಿದರು.

ಘಟನೆಯ ಹಿನ್ನೆಲೆ
ಯುವತಿ ರಮಾ, ವಿಜಯನಗರ ಕಾಲೇಜಿನ ಪದವಿ ವಿದ್ಯಾರ್ಥಿನಿ. ಥೇರ್ಲಂ ವಲಯದ ಚಾರ್ಲಾ ಗ್ರಾಮದ ನಿವಾಸಿಯಾದ ರಮಾ, ಕೈಕಾಲುಗಳು ಕಟ್ಟಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ಸ್ಥಿತಿಯಲ್ಲಿ ಸೋಮವಾರ ಬೆಳಗ್ಗೆ ಗುರ್ಲಾ ಹೊರವಲಯದಲ್ಲಿ ಪತ್ತೆಯಾಗಿದ್ದಳು. ವಿದ್ಯಾರ್ಥಿನಿಯನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. (ಏಜೆನ್ಸೀಸ್​)


Thanks for reading ಬಾಯ್​ಫ್ರೆಂಡ್​ ಭೇಟಿಗಾಗಿ ಈಕೆ ಸೃಷ್ಟಿಸಿದ್ದು ಅಂತಿಂಥ ಕತೆಯಲ್ಲ: ಈಕೆಯ ಡ್ರಾಮಾ ನೋಡಿ ಪೊಲೀಸರೇ ಕಂಗಾಲು! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಬಾಯ್​ಫ್ರೆಂಡ್​ ಭೇಟಿಗಾಗಿ ಈಕೆ ಸೃಷ್ಟಿಸಿದ್ದು ಅಂತಿಂಥ ಕತೆಯಲ್ಲ: ಈಕೆಯ ಡ್ರಾಮಾ ನೋಡಿ ಪೊಲೀಸರೇ ಕಂಗಾಲು!

Post a Comment