ಹೃದಯ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿತ ಹಲವಾರು ಆರೋಗ್ಯ ಸಮಸ್ಯೆಗಳು ಜನರನ್ನು ಮುತ್ತಿಕೊಳ್ಳುತ್ತಿವೆ. ಆದರೆ ನೀವು ದಿನವೂ ಮೊಸರು ತಿನ್ನುವವರಾಗಿದ್ದರೆ ಸ್ವಲ್ಪ ಮಟ್ಟಿಗೆ ಈ ಹೃದಯ ಖಾಯಿಲೆಯಿಂದ ದೂರವಿರಬಹುದು.
ಹೌದು..ಅಮೆರಿಕದ ಜರ್ನಲ್ ಒಂದರಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ ಡೈರಿ ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪ ಇವೆಲ್ಲ ಹೃದಯಕ್ಕೆ ಒಳ್ಳೆಯದು. ಆದರೆ ಮೊಸರು ಹೃದಯದ ಖಾಯಿಲೆ ಬರದಂತೆ ತಡೆಯುವಲ್ಲಿ ಬಹುತೇಕ ಯಶಸ್ವಿಯಾಗುತ್ತದೆ. ದಿನವೂ ಮೊಸರನ್ನು ತಿನ್ನುವುದರಿಂದ ಹೃದಯ ಸಂಬಂಧಿ ಖಾಯಿಲೆಗಳು ಬರದಂತೆಯೇ ತಡೆಯಬಹುದು.
ಈ ಸಂಶೋಧನೆಗೆ 30-55 ವರ್ಷ ವಯಸ್ಸಿನ 55 ಸಾವಿರ ಮಹಿಳೆಯರನ್ನು ಹಾಗೂ 40 ರಿಂದ 75 ವರ್ಷ ವಯಸ್ಸಿನ 18 ಸಾವಿರ ಮಂದಿ ಪುರುಷರನ್ನು ಬಳಸಿಕೊಳ್ಳಲಾಗಿದೆ.
ದಿನವೂ ಹೆಚ್ಚಾಗಿ ಮೊಸರನ್ನು ತಿನ್ನುವ ಮಹಿಳೆಯರಲ್ಲಿ ಹೃದಯ ಸಂಬಂಧಿ ಖಾಯಿಲೆ ಪ್ರಮಾಣ ಶೇ.30 ರಷ್ಟು ಹಾಗೂ ಪುರುಷರಲ್ಲಿ ಶೇ.19 ರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ.
EmoticonEmoticon