ಅತ್ತೆ ಮನೆಯಲ್ಲಿ ಮಹಿಳೆಗೆ ನೀಡಲಾಗುವ ಕಿರುಕುಳಕ್ಕೆ ಗಂಡನೇ ಕಾರಣಕರ್ತ ! - ಸರ್ವೋಚ್ಚ ನ್ಯಾಯಾಲಯ

March 09, 2021


 ಹೆಂಡತಿಯ ಎಲ್ಲಾ ಜವಾಬ್ದಾರಿಗಳು ಗಂಡನ ಮೇಲೆ ಇರುತ್ತದೆ. ಅವಳನ್ನು ಎಲ್ಲ ವಿಷಯಗಳಿಂದ ರಕ್ಷಿಸುವುದು ಆತನ ಕರ್ತವ್ಯವಾಗಿದೆ. ಇದನ್ನು ಈಗ ನ್ಯಾಯಾಲಯಕ್ಕೆ ಹೇಳಬೇಕಾಗುತ್ತಿದೆ ಎಂದರೆ, ಭಾರತದಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ಎಷ್ಟು ಅನಾಚಾರ ನಡೆಯುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !

ನವದೆಹಲಿ - ಭಾರತದಲ್ಲಿ ಚಾಲತಿಯಲ್ಲಿರುವ ಪದ್ಧತಿಯ ಪ್ರಕಾರ, ಮದುವೆಯ ನಂತರ ಹೆಂಡತಿ ತನ್ನ ಗಂಡನ ಮನೆಯಲ್ಲಿ ಉಳಿಯಲು ಹೋಗುತ್ತಾಳೆ; ಆದರೆ ಮಹಿಳೆಗೆ ಅತ್ತೆಯ ಕುಟುಂಬದವರು ಕಿರುಕುಳ ನೀಡುತ್ತಿದ್ದಲ್ಲಿ, ಆಕೆಗೆ ಆದ ವೇದನೆಗೆ ಪತಿಯೇ ಕಾರಣಕರ್ತ ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ವಿಚಾರಣೆಯಲ್ಲಿ ತಿಳಿಸಿದೆ. ಈ ಸಮಯದಲ್ಲಿ, ಪತ್ನಿಯನ್ನು ಹೊಡೆದ ಆರೋಪವಿರುವ ವ್ಯಕ್ತಿಗೆ ಬಂಧನ ಪೂರ್ವ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತು.

ಇದು ಆ ವ್ಯಕ್ತಿಯ ಮೂರನೇ ಮದುವೆಯಾಗಿತ್ತು ಹಾಗೂ ಸಂಬಂಧಪಟ್ಟ ಮಹಿಳೆಯ ಎರಡನೇ ವಿವಾಹವಾಗಿತ್ತು. ಆಕೆಯನ್ನು ಗಂಡನಿಂದ ಅಲ್ಲ, ಅತ್ತೆಯಿಂದ ಕಿರುಕುಳ ನೀಡಲಾಗಿದೆ ಎಂದು ಪತಿಯ ವಕೀಲರು ಮಂಡಿಸಿದ್ದರು. ಅದಕ್ಕೆ ನ್ಯಾಯಾಲಯವು ಮೇಲಿನ ಅಭಿಪ್ರಾಯವನ್ನು ನೀಡಿದೆ.


Related Articles

Advertisement
Previous
Next Post »