ನೀವು ಡಯಟ್ ಮಾಡುತ್ತಿದ್ದೀರಾ..?ಹಾಗಿದ್ರೆ ಈ ಹಣ್ಣುಗಳನ್ನು ಸೇವಿಸುವ ಮೊದಲು ಇಲ್ಲೊಮ್ಮೆ ನೋಡಿ

March 05, 2021
Friday, March 5, 2021


 ದೇಹದ ತೂಕವನ್ನು ಇಳಿಸಿಕೊಳ್ಳಲು ಯೋಜನೆ ರೂಪಿಸಿದರೆ ಮೊದಲು ತಮ್ಮ ಆಹಾರದ ಪಟ್ಟಿಯಲ್ಲಿ ಹಣ್ಣುಗಳನ್ನು ಸೇರಿಸಿಕೊಳ್ಳುತ್ತಾರೆ. ಹಣ್ಣುಗಳು ಆರೋಗ್ಯಕರವಾದ ಆಹಾರವಾಗಿದ್ದು, ನಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತವೆ. ಆದರೆ ಎಲ್ಲಾ ಹಣ್ಣುಗಳು ದೇಹದ ತೂಕ ಕಡಿಮೆ ಮಾಡುವಲ್ಲಿ ನೆರವಾಗುವುದಿಲ್ಲ.

ಕೆಲವು ಹಣ್ಣುಗಳು ಹೆಚ್ಚಿನ ಕ್ಯಾಲೊರಿ ಮತ್ತು ಸಕ್ಕರೆ ಅಂಶವನ್ನು ಹೊಂದಿರುತ್ತವೆ. ಇವು ತೂಕವನ್ನು ಕಡಿಮೆ ಮಾಡುವ ಬದಲು ತೂಕವನ್ನು ಹೆಚ್ಚಿಸುತ್ತವೆ. ಹಾಗಾಗಿ ಯಾವ್ಯಾವ ಹಣ್ಣುಗಳು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ, ಯಾವ ಹಣ್ಣುಗಳು ತೂಕ ಹೆಚ್ಚಾಗಲು ಕಾರಣಾವಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಬಾಳೆಹಣ್ಣು

ಬಾಳೆಹಣ್ಣು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ.

ಅದಕ್ಕಾಗಿಯೇ ಕೆಲವು ಕ್ರೀಡಾಪಟುಗಳು ತಮ್ಮ ಪಂದ್ಯಗಳ ನಡುವೆ ಹಣ್ಣನ್ನು ತಿನ್ನುತ್ತಾರೆ. ಬಾಳೆಹಣ್ಣಿನಲ್ಲಿ ಕ್ಯಾಲೊರಿ ಮತ್ತು ನೈಸರ್ಗಿಕ ಸಕ್ಕರೆ ಸಮೃದ್ಧವಾಗಿದ್ದು, ಬೆಳಗ್ಗೆ ಉಪಾಹಾರದಲ್ಲಿ ಬಾಳೆಹಣ್ಣಿನೊಂದಿಗೆ ಒಂದು ಲೋಟ ಹಾಲು ಸೇವಿಸುವುದರಿಂದ ಶಕ್ತಿ ಬರುತ್ತದೆ. ಬಾಳೆಹಣ್ಣಿನಲ್ಲಿ ಸುಮಾರು 150 ಕ್ಯಾಲೊರಿ ಹಾಗೂ 37.5 ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತದೆ. ದಿನದಲ್ಲಿ ಎರಡು ಅಥವಾ ಹೆಚ್ಚಿನ ಬಾಳೆಹಣ್ಣುಗಳನ್ನು ಸೇವಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕೊಬ್ಬು ಇರುತ್ತದೆ. ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ. 100 ಗ್ರಾಂ ದ್ರಾಕ್ಷಿಯಲ್ಲಿ 67 ಕ್ಯಾಲೊರಿ ಮತ್ತು 16 ಗ್ರಾಂ ಸಕ್ಕರೆ ಅಂಶವಿರುತ್ತದೆ. ಆದ್ದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಹೆಚ್ಚಾಗಿ ದ್ರಾಕ್ಷಿ ಹಣ್ಣನ್ನು ಸೇವಿಸಬಾರದು.

ಮಾವಿನ ಹಣ್ಣು

ಮಾವಿನಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೊರಿ ಇರುತ್ತದೆ. ಒಂದು ಹಣ್ಣು ಸುಮಾರು 25 ಗ್ರಾಂ ಕಾರ್ಬ್ಸ್, 23 ಗ್ರಾಂ ಸಕ್ಕರೆ ಮತ್ತು 3 ಗ್ರಾಂ ಫೈಬರ್ ಹೊಂದಿರುತ್ತದೆ. ಆದ್ದರಿಂದ ನಿಯಮಿತ ಪ್ರಮಾಣದಲ್ಲಿ ಈ ಹಣ್ಣನ್ನು ಸೇವಿಸಬೇಕು.

ಬಟರ್ ​ ಫ್ರೂಟ್ ​​

ಬಟರ್​ ಫ್ರೂಟ್​​ ಹೆಚ್ಚಿನ ಕ್ಯಾಲೊರಿ ಹೊಂದಿರುವ ಹಣ್ಣು. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವ ಜನರು ಇದರ ಬಳಕೆಯನ್ನು ಕಡಿಮೆ ಮಾಡಬೇಕು. ತಜ್ಞರ ಪ್ರಕಾರ, 100 ಗ್ರಾಂ ಬಟರ್​ ಫ್ರೂಟ್​​ ಸುಮಾರು 160 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಈ ಹಣ್ಣನ್ನು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವೆಂದು ಪರಿಗಣಿಸಲಾಗಿದ್ದರೂ ಇದರ ಸೇವನೆಯಿಂದ ದೇಹದ ತೂಕ ಹೆಚ್ಚಾಗುತ್ತದೆ.

ಸಪೋಟ ಹಣ್ಣು ( ಚಿಕ್ಕು ಹಣ್ಣು )

ಚಿಕ್ಕು ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಅಂಶವನ್ನು ಹೊಂದಿದೆ. ಈ ಹಣ್ಣಿನ ಅಧಿಕ ಸೇವನೆಯಿಂದ ತೂಕ ಹೆಚ್ಚಾಗುವ ಸಾಧ್ಯತೆಯಿದೆ.

ಅನಾನಸ್

ಅನಾನಸ್​​ ಹಣ್ಣಿನಲ್ಲಿ ಸಾಕಷ್ಟು ಆಂಟಿ-ಆಕ್ಸಿಡೆಂಟ್‌ಗಳು ಇರುತ್ತವೆ. ಆದರೆ ಇದರಲ್ಲಿ ಸಾಕಷ್ಟು ಕ್ಯಾಲೊರಿಗಳಿದ್ದು, ಅನಾನಸ್ ಅಧಿಕವಾಗಿ ಸೇವಿಸುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಒಣ ಹಣ್ಣುಗಳು

ಒಣದ್ರಾಕ್ಷಿ ( ಕಿಸ್ಮಿಸ್ ​​)

ಒಣದ್ರಾಕ್ಷಿ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇವು ಗಾತ್ರದಲ್ಲಿ ಚಿಕ್ಕದಾಗಿದ್ದು, ನೀರನ್ನು ಹೊಂದಿರುವುದಿಲ್ಲ. 1 ಗ್ರಾಂ ಒಣದ್ರಾಕ್ಷಿ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಒಂದು ಕಪ್ ಒಣದ್ರಾಕ್ಷಿ 500 ಕ್ಯಾಲೊರಿಗಳನ್ನು ಹೊಂದಿದೆ. ಇದು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಈ ಎರಡೂ ರೀತಿಯ ಒಣ ಹಣ್ಣುಗಳನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.

ಅಂಜೂರ

ಅಂಜೂರವು ಪ್ರಯೋಜನಕಾರಿ. ಆದರೆ ಇದು ಅತ್ಯಂತ ಸಿಹಿ ಹಣ್ಣಾಗಿದ್ದು, ಇದು ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಅನೇಕ ಜನರು ತೂಕವನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ ಅಂಜೂರ ಹಣ್ಣುಗಳನ್ನು ತಿನ್ನುತ್ತಾರೆ. ನೈಸರ್ಗಿಕವಾಗಿ ಸಿಗುವ ತಾಜಾ ಹಣ್ಣುಗಳು ಮತ್ತು ತರಕಾರಿಗಳು ಅತ್ಯಂತ ಆರೋಗ್ಯಕರ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ.

ಆದರೆ ಅವುಗಳ ಅತಿಯಾದ ಸೇವನೆಯು ನಮ್ಮ ದೇಹದ ಮೇಲೆ ಕೆಲವು ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈ ಕಾರಣದಿದಂದ ಯಾವುದೇ ಆಹಾರವನ್ನಾಗಲಿ ಮಿತವಾಗಿ ಸೇವಿಸಬೇಕು. ಒಂದು ವೇಳೆ ನೀವು ಸೇವಿಸುತ್ತಿರುವ ಆಹಾರದಿಂದ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತಿದ್ದರೆ ಅಥವಾ ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮೊದಲು ತಜ್ಞರನ್ನು ಭೇಟಿ ಮಾಡಿ ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಕೊಳ್ಳಬೇಕು.

Thanks for reading ನೀವು ಡಯಟ್ ಮಾಡುತ್ತಿದ್ದೀರಾ..?ಹಾಗಿದ್ರೆ ಈ ಹಣ್ಣುಗಳನ್ನು ಸೇವಿಸುವ ಮೊದಲು ಇಲ್ಲೊಮ್ಮೆ ನೋಡಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ನೀವು ಡಯಟ್ ಮಾಡುತ್ತಿದ್ದೀರಾ..?ಹಾಗಿದ್ರೆ ಈ ಹಣ್ಣುಗಳನ್ನು ಸೇವಿಸುವ ಮೊದಲು ಇಲ್ಲೊಮ್ಮೆ ನೋಡಿ

Post a Comment