ಆಕಾಶದಲ್ಲಿ ತೇಲುತ್ತಿದೆಯಾ ಹಡಗು.? ದಂಗಾಗಿಸುವಂತಿದೆ ಈ ವಿಡಿಯೋ

March 04, 2021

 ಹಡಗು ಸಮುದ್ರದಲ್ಲಿ ಸಂಚರಿಸೋದನ್ನ ನೀವು ನೋಡೇ ಇರ್ತೀರಾ. ಆದರೆ ಎಂದಾದರೂ ಹಡಗು ಆಕಾಶದಲ್ಲಿ ಹಾರುತ್ತಿರೋದನ್ನ ಕಂಡಿದ್ದೀರಾ..?

ಈ ಮಾತನ್ನ ನಂಬೋಕೆ ಅಸಾಧ್ಯ ಎನಿಸುತ್ತೆ ಅಲ್ಲವಾ..? ಆದರೆ ಕೆನಡಾದ ಬ್ಯಾನ್ಫ್​​ನ 23 ವರ್ಷದ ಯುವಕ ಇಂತದ್ದೊಂದು ಘಟನೆಗೆ ಸಾಕ್ಷಿಯಾಗಿದ್ದಾರೆ.

ಕಾಲಿನ್​ ಮ್ಯಾಕಲಮ್​ ಎಂಬವರು ಬ್ಯಾನ್ಫ್​​ನಲ್ಲಿ ಫೆಬ್ರವರಿ 26ರಂದು ಪ್ರಯಾಣಿಸುತ್ತಿದ್ದ ವೇಳೆ ಆಕಾಶದಲ್ಲಿ ತೇಲುತ್ತಿರುವ ಹಡಗೊಂದನ್ನ ಕಂಡಿದ್ದಾರೆ.

ಈ ವಿಚಿತ್ರ ದೃಶ್ಯವನ್ನ ಅನೇಕರು ಭ್ರಮೆ ಎಂದು ಬಣ್ಣಿಸಿದ್ದಾರೆ. ನಾನು ಮೊದಲು ಈ ಹಡಗನ್ನ ಕಂಡಾಗ ಅದು ನೀರಿನ ಮೇಲೆ ತೇಲುತ್ತಿದೆ ಎಂದೇ ಭಾವಿಸಿದ್ದೆ. ಆದರೆ ತುಂಬಾ ಸೂಕ್ಷ್ಮವಾಗಿ ಗಮನಿಸಿದ ಬಳಿಕ ನನಗದು ಹಾರುತ್ತಿರುವಂತೆ ಕಂಡಿತು ಎಂದು ಕಾಲಿನ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿರೋದು ಮಾತ್ರವಲ್ಲದೇ ನೆಟ್ಟಿಗರ ತಲೆಕೆಡಿಸಿದೆ.
Related Articles

Advertisement
Previous
Next Post »