ಒಂದೇ ಹುಡುಗಿಯನ್ನ ಪ್ರೀತಿಸಿದ ಅಣ್ಣ-ತಮ್ಮ: ಮುಂದೆ ನಡೆದದ್ದು ಘನಘೋರ ದುರಂತ..!

March 09, 2021
Tuesday, March 9, 2021

 


ಒಂದೇ ಹುಡುಗಿಯನ್ನ ಇಬ್ಬರು ಪ್ರೀತಿಸಿದ ಅನೇಕ ಪ್ರಕರಣಗಳು ಕೊಲೆಯಲ್ಲಿ ಅಂತ್ಯವಾಗಿದನ್ನ ಕೇಳಿರ್ತೀರಾ. ನೋಡಿಯೂ ಇರ್ತಿರಾ..! ಆದರೆ ರಾಜಸ್ಥಾನದಲ್ಲಿ ಮಾತ್ರ ಒಂದೇ ಹುಡುಗಿಯನ್ನ ಪ್ರೀತಿಸಿದ್ದ ಇಬ್ಬರು ಯುವಕರು ಬುಂಧಿ ಜಿಲ್ಲೆಯಲ್ಲಿ ಚಲಿಸುತ್ತಿರುವ ರೈಲಿನಿಂದ ಹಾರಿ ಪ್ರಾಣಬಿಟ್ಟ ವಿಚಿತ್ರ ಘಟನೆ ವರದಿಯಾಗಿದೆ. ಅಣ್ಣ - ತಮ್ಮಂದಿರಿಬ್ಬರೂ ಒಂದೇ ಹುಡುಗಿಯನ್ನೇ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಮೃತ ಯುವಕರನ್ನ 23 ವರ್ಷದ ದೇವರಾಜ್​ ಗುರ್ಜರ್ ಹಾಗೂ ಮಹೇಂದ್ರ ಗುರ್ಜರ್​ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೇಶವಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಇವರಿಬ್ಬರೂ ಆಶಾ ಎಂಬ ಹೆಸರಿನ ಯುವತಿಯನ್ನ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರ ಮೃತದೇಹವನ್ನ ಪೊಲೀಸರು ವಶಪಡಿಸಿಕೊಂಡಿದ್ದು ಇಬ್ಬರ ಕೈ ಮೇಲೂ ಆಶಾ ಎಂಬ ಹೆಸರಿನ ಟ್ಯಾಟೂ ಇದೆ ಎಂದು ಹೇಳಿದ್ದಾರೆ.
ರೈಲಿನಿಂದ ಹಾರೋಕೂ ಮುನ್ನ ಇಬ್ಬರೂ ಸಹೋದರರು ವಿಡಿಯೋ ಮಾಡಿದ್ದರು ಎನ್ನಲಾಗಿದೆ. ಇದರಲ್ಲಿ ಒಬ್ಬ ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿದ್ರೆ ಇನ್ನೊಬ್ಬ ಸಹೋದರ ನಾವಿಬ್ಬರು ಸ್ವಂತ ನಿರ್ಧಾರದಿಂದ ಈ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಯಾರನ್ನೂ ದೂಷಿಸಬೇಡಿ ಎಂದು ಹೇಳಿದ್ದಾನೆ. ಅಲ್ಲದೇ ಯುವತಿಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಮಾಡಿ ಎಂದೂ ಹೇಳಿದ್ದಾರೆ.

Thanks for reading ಒಂದೇ ಹುಡುಗಿಯನ್ನ ಪ್ರೀತಿಸಿದ ಅಣ್ಣ-ತಮ್ಮ: ಮುಂದೆ ನಡೆದದ್ದು ಘನಘೋರ ದುರಂತ..! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಒಂದೇ ಹುಡುಗಿಯನ್ನ ಪ್ರೀತಿಸಿದ ಅಣ್ಣ-ತಮ್ಮ: ಮುಂದೆ ನಡೆದದ್ದು ಘನಘೋರ ದುರಂತ..!

Post a Comment